Connect with us
Loading...
Loading...

ಪ್ರಚಲಿತ

ಅಕ್ರಮ ಗೋಸಾಗಾಟ ಮಾಡುತ್ತಿದ್ದ ಖದೀಮರನ್ನ ಹಿಡಿದು ಪೋಲಿಸರಿಗೊಪ್ಪಿಸಿದ ಸಂಸದ ಪ್ರತಾಪ್ ಸಿಂಹ!!

Published

on

 • 3
 •  
 •  
 •  
 •  
 •  
 •  
 •  
  3
  Shares

ಪಕ್ಕಾ ಹಿಂದುತ್ವವಾದಿ, ಬೆತ್ತಲೆ ಜಗತ್ತಿನ ಮೂಲಕ ಕನ್ನಡನಾಡಿನ ಮನೆಮಾತಾಗಿರುವ ವ್ಯಕ್ತಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹರವರು ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಖದೀಮರನ್ನ ಹಿಡಿದಿದ್ದಾರೆ.

ಕಣಕಣದಲ್ಲೂ ಹಿಂದುತ್ವವಿರುವ ಪ್ರತಾಪ್ ಸಿಂಹ ಮುಂಚೆಯಿಂದಲೂ ಹಿಂದುತ್ವ, ಭಾರತದ ನೈಜ ಇತಿಹಾಸ, ಸಂಸ್ಕೃತಿ, ಪರಂಪರೆಯ ಬಗ್ಗೆ ಅಭಿಮಾನವುಳ್ಳ ಧರ್ಮಾಭಿಮಾನಿಯಾಗಿದ್ದಾರೆ.

ಅಂತಹ ಪ್ರತಾಪ್ ಸಿಂಹರವರು ನೆನ್ನೆ ಕಸಾಯಿಖಾನೆಗೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದವರನ್ನ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಖದೀಮರನ್ನ ಸಂಸದ ಪ್ರತಾಪ್ ಸಿಂಹ ಪೋಲಿಸರಿಗೊಪ್ಪಿಸಿ ಗೋಮಾತೆಯ ರಕ್ಷಣೆ ಮಾಡಿದ್ದಾರೆ.

ಕುಷ್ಟಗಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಮೈಸೂರಿಗೆ ವಾಪಸ್ಸಾಗುವ ಕುಷ್ಟಗಿ ಸಮೀಪದ ಢಾಬಾದ ಹತ್ತಿರ 407 ಮೂಲಕ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಖದೀಮರನ್ನ ನೋಡಿದ್ದಾರೆ.

ತಕ್ಷಣ ತಡಮಾಡದೆ ಚಳ್ಳಕೆರೆ ಡಿವೈಎಸ್ಪಿಗೆ ಫೋನಾಯಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಪೋಲಿಸರು ಸ್ಥಳಕ್ಕಾಗಿಮಿಸಿದ್ದಾರೆ. ಮೂವರು ಆರೋಪಿಗಳನ್ನ ಪ್ರತಾಪ್ ಸಿಂಹ ಪೋಲಿಸರಿಗೆ ಒಪ್ಪಿಸಿದ್ದಾರೆ.

407 ವಾಹನದಲ್ಲಿ 12 ಎತ್ತು ಹಾಗು ಮೂರು ಎಮ್ಮೆಗಳನ್ನ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲು ಖದೀಮರು ಯತ್ನಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಮೂವರೂ ಆರೋಪಿಗಳು ಈಗ ಪೋಲಿಸರ ಅತಿಥಿಯಾಗಿದ್ದಾರೆ.

ಮೂವರು ಬಂಧಿತ ಆರೋಪಿಗಳನ್ನ ನಾಗಮಂಗಲದ ಮಂಜುನಾಥ, ಕೆಂಚಪ್ಪ, ಮಂಜೇಗೌಡ ಎಂದು ಗುರುತಿಸಲಾಗಿದೆ. ಬಂಧಿತರು ಅಕ್ರಮವಾಗಿ ಗೋವುಗಳನ್ನು ಖಾನಾಹೊಸಹಳ್ಳಿಯಿಂದ ಬೆಂಗಳೂರಿನ ಕಸಾಯಿಖಾನೆಗೆ ಸಾಗಾಟ ಮಾಡಲು ಯತ್ನಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

 

ಗೋಸಾಗಾಟ ಮಾಡುತ್ತಿದ್ದ ವಾಹನವನ್ನ ಕಂಡ ತಕ್ಷಣ ಅದನ್ನ ತಡೆದಿದ್ದ ಪ್ರತಾಪ್ ಸಿಂಹ ಈ ವಿಷಯವನ್ನ ತಮ್ಮ ಫೇಸ್ಬುಕ್ ಮೂಲಕ ಲೈವ್ ಅಪಡೇಟ್ಸ್ ನೆನ್ನೆ ರಾತ್ರಿಯೇ ನೀಡಿದ್ದರು.

ಹಿಂದುತ್ವ ಕಣಕಣದಲ್ಲಿ ಹರಿಯುತ್ತಿರುವ ಪ್ರತಾಪ್ ಸಿಂಹರು ಇದೊಂದೆ ಕೆಲಸದಿಂದ ಸುದ್ದಿಯಲ್ಲಿಲ್ಲ.

ಕೆಲ ದಿನಗಳ ಹಿಂದೆಯಷ್ಟೇ ಹುಣಸೂರಿನಲ್ಲಿ ಹನುಮ ಮಾಲಾಧಾರಿಗಳ ಮೇಲೆ ಪೋಲಿಸರಿಂದ ನಡೆದ ಲಾಠಿ ಚಾರ್ಜ್ ಖಂಡಿಸಿ ಹುಣಸೂರು ಪಟ್ಟಣಕ್ಕೆ ತೆರಳಲು ಪ್ರತಾಪ್ ಸಿಂಹ ಮುಂದಾದಾಗ ಪೋಲಿಸರು ಅವರನ್ನ ಬಂಧಿಸಿ ಊರೂರು ಅಡ್ಡಾಡಿಸಿ ಹನುಮಮಾಲಾ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಡೆಯೊಡ್ಡಿದ್ದರು.

ಆದರೆ ರಾಜ್ಯಸರ್ಕಾರ ಹಿಂದೂ ವಿರೋಧಿನೀತಿಯನ್ನ ಹಾಗು ಮುಸ್ಲಿಂ ತುಷ್ಟೀಕರಣಕ್ಕಾಗಿ ಪೋಲಿಸ್ ಇಲಾಖೆಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು.

ಟಿಪ್ಪು ಜಯಂತಿ ವಿವಾದ:

ರಾಜ್ಯ ಸರ್ಕಾರ ಮತಾಂಧ ಟಿಪ್ಪು ಜಯಂತಿಯನ್ನ ರಾಜ್ಯದ ಜನರ ವಿರೋಧದ ನಡುವೆಯೂ ನಡೆಸಿಯೇ ತೀರುತ್ತೇವೆ ಅಂತ ಅನೇಕ ಕಡೆ ಗಲಭೆಗಳಿಗೆ ಎಡೆಮಾಡಿಕೊಟ್ಟಿದ್ದು ತಮಗೆಲ್ಲಾ ನೆನೆಪಿದೆ.

ಟಿಪ್ಪು ಒಬ್ಬ ಮತಾಂಧ ಎಂದು ಈಗ ಯಾರೇ ಹೇಳಿದರೆ ಕಾಂಗ್ರೆಸ್ಸಿನವರು ನೀನು ಬಿಜೆಪಿಗ ನೀನು ಆರೆಸ್ಸೆಸ್ ನವನು ಅನ್ನೋ ಪಟ್ಟ ಕಟ್ಟಿಬಿಡುತ್ತಾರೆ. ಆದರೆ ಪ್ರತಾಪ್ ಸಿಂಹರವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಸಂಸದನಾಗುವ ಮುಂಚೆಯೇ ಅಂದರೆ ಅವರು ಪತ್ರಕರ್ತ, ಅಂಕಣಕಾರನಾಗಿದ್ದಾಗಲೇ ಟಿಪ್ಪುವಿನ ಹಿಂದೂ ವಿರೋಧಿ ಕರಾಳ ಮುಖವನ್ನ ರಾಜ್ಯದ ಜನತೆಗೆ “ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಾ?” ಎಂಬ ಪುಸ್ತಕವನ್ನ ಬರೆದು ಅದರಲ್ಲಿ ಟಿಪ್ಪು ಹಿಂದುಗಳ ಮೇಲೆ ನಡೆಸಿದ್ದ ಕ್ರೂರ ಕೃತ್ಯಗಳನ್ನ ಜನರ ಎದುರು ಇಟ್ಟಿದ್ದರು.

ಹಾಗಾದರೆ ಕಾಂಗ್ರೆಸ್ ನವರು ಈಗ ಹೇಳುವ ಹಾಗೆ ಟಿಪ್ಪುವಿನ ಬಗ್ಗೆ ಪುಸ್ತಕ ಬರೆದಿದ್ದಾಗ ಪ್ರತಾಪ್‌ ಸಿಂಹರು ಬಿಜೆಪಿಯ ಮೆಂಬರ್ ಆಗಿದ್ದರು ಅನ್ನೋ ಅರ್ಥವಾ ಹೇಗೆ?

ಅಟಲ್ ಬಿಹಾರಿ ವಾಜಪೇಯಿ ಹಾಗು ನರೇಂದ್ರ ಮೋದಿಯವರ ಕಾರ್ಯಶೈಲಿ ಹಾಗು ದೇಶ ಕಟ್ಟುವ ಕೆಲಸವನ್ನ ಮನಗಂಡ ಪ್ರತಾಪ್ ಸಿಂಹ 2014 ರಲ್ಲಿ ಬಿಜೆಪಿ ಸೇರ್ಒಡೆಗೊಂಡು ಮೈಸೂರು-ಕೊಡಗು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಬಂದಂಥವರು.

ಕೊಡಗಿನಲ್ಲಿ ಟಿಪ್ಪು ಜಯಂತಿ ಗಲಭೆ:

ಕೊಡಗಿನ ಜನ ಟಿಪ್ಪು ಜಯಂತಿಯನ್ನ ಆಚರಿಸಬಾರದು ಆತ ನಮ್ಮ ಪೂರ್ವಜರನ್ನ ಕ್ರೂರವಾಗಿ ಕೊಂದು, ನಮ್ಮ ದೇವಸ್ಥಾನಗಳನ್ನ ಭಂಜನೆಗೊಳಿಸಿದ ಪಾಪಿ ಅಂತ ಅವಲೊತ್ತಿಕೊಂಡರೂ ರಾಜ್ಯಸರ್ಕಾರ ಟಿಪ್ಪು ಜಯಂತಿಯನ್ನ ಸರ್ಕಾರದ ವತಿಯಿಂದಲೇ ಆವರಿಸಿತ್ತು.

ಕೊಡವರ ವಿರೋಧದ ನಡುವೆಯೂ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಕೇರಳದಿಂದ ಕೊಡಗಿಗೆ ಆಗಮಿಸಿದ ಜಿಹಾದಿಗಳು ಕೊಡಗನ್ನ ಅಕ್ಷರಶಃ ರಣಾಂಗಣ ಮಾಡಿಬಿಟ್ಟರು. ಕಂಡಕಂಡಲ್ಲಿ ಕಲ್ಲು ತೂರಾಟ ನಡೆಸಿದ್ದರ ಪರಿಣಾಮ ವಿಶ್ವಹಿಂದೂ ಪರಿಷತ್ತಿನ ಕುಟ್ಟಪ್ಪನವರು ಮೃತಪಟ್ಟಿದ್ದರು.

ಈ ಘಟನೆಯನ್ನ ಖಂಡಿಸಿ ಸರ್ಕಾರಕ್ಕೆ ಚಾಟಿಯೇಟು ಬೀಸಿದ್ದರಲ್ಲಿ ಮುಂಚೂಣಿಯಲ್ಲಿದ್ದವರು ಪ್ರತಾಪ್ ಸಿಂಹ.

ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು:

ಕರಾವಳಿಯಲ್ಲಿ ಎಗ್ಗಿಲ್ಲದೆ ಹಿಂದೂ ಕಾರ್ಯಕರ್ತರ ಹತ್ಯೆಗಳು ಹಾಡುಹಗಲೇ ನಡೆಯುತ್ತಿವೆ. ಇಂಥ ಹತ್ಯೆಗಳನ್ನ ಖಂಡಿಸಿ ಸರ್ಕಾರದ ಸೆಟೆದು ನಿಂತವರೂ ಇದೇ ಪ್ರತಾಪ್ ಸಿಂಹ.

ಹುಣಸೂರಿನ ಘಟನೆ:

ಹುಣಸೂರಿನಲ್ಲಿ ಹನುಮಮಾಲಾ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹರವರನ್ನ ಪಾಲ್ಗೊಳ್ಳದಿರಲು ಪೋಲಿಸರು ನಿರ್ಬಂಧಿಸಿದ್ದರು. ಇದನ್ನ ವಿರೋಧಿಸಿದ್ದ ಪ್ರತಾಪ್ ಸಿಂಹ “ಮೊದಲು ಧರ್ಮ ಉಳಿಯಬೇಕು ಧರ್ಮ ಉಳಿದರೆ ಮಾತ್ರ ದೇಶ ಉಳಿಯುತ್ತೆ, ಅಧಿಕಾರ ಕಳೆದುಕೊಂಡರೂ ಪರವಾಗಿಲ್ಲ ನಾನು ಹಿಂದೂ ಧರ್ಮದ ರಕ್ಷಣೆಗಾಗಿ ಕೆಲಸ ಮಾಡುತ್ತೇನೆ” ಎಂಬ ಹೇಳಿಕೆಯನ್ನ ನೀಡಿದ್ದು ಹಿಂದೂ ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿತ್ತು.

ಈಗ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಖದೀಮರನ್ನ ಪೋಲಿಸರಿಗೊಪ್ಪಿಸಿದ ಸಂಸದ ಪ್ರತಾಪ್ ಸಿಂಹರವರ ಕಾರ್ಯ ಹಿಂದೂ ಕಾರ್ಯಲರ್ತರಲ್ಲಿ ಖುಷಿ ಮೂಡಿಸಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಾಪ್ ಸಿಂಹರವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

 •  
  3
  Shares
 • 3
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com