Connect with us
Loading...
Loading...

ಅಂಕಣ

ಅಷ್ಟಕ್ಕೂ RSS ಸಂಘಟನೆ ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ನಿಮಗೇನು ಗೊತ್ತಿದೆ ಸಿದ್ದರಾಮಯ್ಯನವರೇ?

Published

on

 • 706
 •  
 •  
 •  
 •  
 •  
 •  
 •  
  706
  Shares

RSS( ರಾಷ್ಟ್ರೀಯ ಸ್ವಯಂ ಸೇವಕ ಸಂಘ )ನವರು ಉಗ್ರಗಾಮಿಗಳು!! ಹೌದು ಸ್ವಾಮಿ ದೇಶದ್ರೋಹಿಗಳ ಪಾಲಿಗೆ ಉಗ್ರಗಾಮಿಗಳು. ದೇಶವನ್ನು ಪ್ರೀತಿಸುವವರನ್ನು ಉಗ್ರಗಾಮಿ ಎನ್ನುವುದಾದರೆ, ಹೌದು ನಾವೆಲ್ಲಾ ಉಗ್ರಗಾಮಿಗಳೇ.

ಸಿದ್ದರಾಮಯ್ಯನವರೇ ಏನ್ ಸ್ವಾಮಿ ನಿಮ್ದು? ದೇಶವನ್ನು ಪ್ರೀತಿಸುವವರನ್ನು ಒಮ್ಮೆ ಕೋಮುವಾದಿ ಅಂತೀರಿ, ಮತ್ತೊಮ್ಮೆ ಉಗ್ರಗಾಮಿಗಳು ಅಂತೀರಿ. ಏನು ನಿಮ್ಮ ವ್ಯಥೆ? ಅಷ್ಟಕ್ಕೂ ದೇಶವನ್ನು ಪ್ರೀತಿಸುವವರನ್ನು ಕೋಮುವಾದಿ ಎನ್ನುವುದಾದರೆ ನಾವು ಹೆಮ್ಮೆಯಿಂದ ಕೋಮುವಾದಿ ಎಂದು ಹೇಳಿಕೊಳ್ಳುತ್ತೇವೆ. ಸ್ವಾಮಿ ರಾಜಕೀಯ ಮಾಡಿ ಬೇಡ ಅನ್ನೋದಿಲ್ಲ ಆದರೆ ರಾಜಕೀಯ ಮಾಡೋಕೆ ಹೋಗಿ ದೇಶಪ್ರೇಮಿಗಳನ್ನು ಹಿಯ್ಯಾಳಿಸೋದು ಎಷ್ಟು ಸರಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಅಂದ್ರೆ ಈ ದೇಶದಲ್ಲಿ ಯಾರು ಉಗ್ರಗಾಮಿಗಳು ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ನೀವು ಬೇರೆಯವರಿಗೆ ಬಕೆಟ್ ಹಿಡಿಯುವುದಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಉಗ್ರಗಾಮಿಗಳು ಅನ್ನೋದಾ? ನಿಮ್ಮ ಮನಸಾಕ್ಷಿ ಒಪ್ಪುತ್ತಾ? ನಿಮ್ಮ ರಾಜಕೀಯ ಹಪಹಪಿಗೆ ಹಿಂದಿನಿಂದಲೂ ಸಂಘ ಪರಿವಾರದವರನ್ನು ಹಿಯ್ಯಾಳಿಸುತ್ತಲೇ ಬಂದಿದ್ದೀರಿ. ನೆಹರೂ ಅವರ ಕಾಲದಿಂದಲೂ ಇದೇ ಆಗೋಗಿದೆ ನಿಮ್ದು‌. ನಿಜ ಹೇಳ್ಬೇಕು ಅಂದ್ರೆ ಕೋಮು ಸಾಮರಸ್ಯವನ್ನು ಹಾಳು ಮಾಡುತ್ತಿರೋದೇ ನೀವುಗಳು. ಯಾವನೋ ಒಬ್ಬ ಅನ್ಯ ಮತೀಯ ಪುಢಾರಿ ಗಲಭೆ ಮಾಡಿದಾಗ ಆತನಿಗೆ ಬೆದರಿಸಿ ಸುಮ್ಮನೆ ಕೂರಿಸಿದ್ದರೆ, ಕೋಮು ಸಾಮರಸ್ಯ ಕದಡುತ್ತಿರಲಿಲ್ಲ. ಬದಲಿಗೆ ನೀವು ತಪ್ಪು ಮಾಡಿದವನ ಪರ ನಿಂತು ಬಿಟ್ರಿ. ಆತನಿಗೆ ತನ್ನ ತಪ್ಪು ತಪ್ಪು ಅಂತ ಅನಿಸಲೇ ಇಲ್ಲದ ಹಾಗೆ ಮಾಡ್ಬಿಟ್ರಿ. ಗಲಭೆ ಮಾಡಿದವನ ಪರ ನಿಂತ ಸಲುವಾಗಿ ಆತ ಮತ್ತೆ ಗಲಭೆ ಮಾಡಲು ಪ್ರೇರಣೆ ಪಡೆದುಬಿಟ್ಟ. ನಿಮಗೆ ಬೇಕಾಗಿದ್ದು ಇದೇ ಅಲ್ವಾ? ಸ್ವಾಮಿ ನಮಗೆ ಕೋಮು ಸಾಮರಸ್ಯ ಬೇಕು. ಅದನ್ನು ಹಾಳು ಮಾಡಬೇಡಿ. ಎಲ್ಲಿಯವರೆಗೆ ನಾವು ಹೊಡೆದಾಡುಕೊಂಡೇ ಇರೋದು ಹೇಳಿ. ನಮಗೂ ಸಾಕಾಗಿದೆ. ಈಗೇನಿದ್ದರೂ ದೇಶ ಕಟ್ಟುವ ಕೆಲಸವಷ್ಟೇ ನಮ್ಮ ಮುಂದಿದೆ. ದೇಶ ಕಟ್ಟುವುದಕ್ಕೆ ಎಲ್ಲಾ ಧರ್ಮದವರೂ ಒಂದಾಗಬೇಕಿದೆ. ಒಂದಾಗುತ್ತೇವೆ. ಆದರೆ ನೀವು ಕಡ್ಡಿ ಅಲ್ಲಾಡಿಸುವುದನ್ನು ನಿಲ್ಲಿಸಿಬಿಡಿ.

ಅಷ್ಟಕ್ಕೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ನಿಮಗೆಷ್ಟು ಗೊತ್ತಿದೆ? ದೇಶಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊಡುಗೆ ಎಷ್ಟಿದೆ ಎಂಬುದರ ಬಗ್ಗೆ ಗೊತ್ತಿದೆಯಾ?

ದೇಶದಲ್ಲಿ ಯಾವುದೇ ರೀತಿಯ ಅವಘಡವಾದರೂ ಮೊದಲು ನೆನಪಾಗೋದು ಸೇನೆ. ಎರಡನೇಯದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಈ ದೇಶದ ಎರಡನೇ ಸೇನೆಯೆಂದರೆ ತಪ್ಪಾಗಲಿಕ್ಕಿಲ್ಲ. ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ. ದೇಶದಲ್ಲಿ ಎಲ್ಲೇ ಏನೇ ಅವಘಡವಾದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಲ್ಲಿಗೆ ಧಾವಿಸಿ ನಿಸ್ವಾರ್ಥದಿಂದ ನೆರವಾಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿದ್ದು 1925ರಲ್ಲಿ. ದೇಶ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ಡಾ.ಕೇಶವ ಬಲಿರಾಮ ಹೆಡಗೆವಾರ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದರು. ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳೆದು ಹೆಮ್ಮರವಾಗಿದೆ. ಜಗತ್ತಿನಲ್ಲೇ ಅತೀ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ಸುಮ್ಮನೆ ಬೆಳೆದು ನಿಂತಿಲ್ಲ. ಸಂಘಕ್ಕೆ ಅನೇಕ ಅವಮಾನ, ಅಪಮಾನಗಳಾಗಿವೆ. ಅನೇಕ ಸಮಸ್ಯೆಗಳನ್ನು ಎದುರಿಸುತ್ತಲೇ ಬೆಳೆದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತುಳಿಯಲು ತುಂಬಾ ಜನ, ತುಂಬಾ ವರ್ಷಗಳಿಂದ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಅವುಗಳನ್ನೆಲ್ಲಾ ಮೆಟ್ಟಿ ನಿಂತು ಈಗ ಹೆಮ್ಮರವಾಗಿ ಬೆಳೆದಿದೆ. ಸಂಘದ ಕಣಕಣದಲ್ಲೂ ದೇಶಪ್ರೇಮ ಅಡಗಿದೆ. ಸಂಘದ ಕಾರ್ಯಕರ್ತರಲ್ಲಿ ಯಾವುದೇ ಸ್ವಾರ್ಥವಿಲ್ಲ. ಇಡೀ ಜಗತ್ತು ಸಂಘಟನೆ ನೋಡಿ ಬೆಕ್ಕಸ ಬೆರಗಾಗಿದೆ. ಏಕೆ ಗೊತ್ತಾ? ಈ ಸಂಘಾನೆ ಅದ್ಯಾವ base ಮೇಲೆ ನಿಂತಿದೆ? ಅದ್ಹೇಗೆ ಇಷ್ಟು ಹೆಮ್ಮರವಾಗಿದೆ ಎಂಬ ಇತ್ಯಾದಿ ಪ್ರಶ್ನೆಗಳನ್ನು ತಮ್ಮಲ್ಲಿ ತಾವೇ ಕೇಳಿಕೊಂಡು ಬೆರಗಾಗಿದ್ದಾರೆ. ಅದ್ಯಾವ base ಮೇಲೆ ಸಂಘಟನೆ ನಿಂತಿದೆ ಗೊತ್ತಾ? ದೇಶಪ್ರೇಮವೇ ಇದಕ್ಕೆ base. ಹೀಗಾಗಿಯೇ ಒಡೀ ಜಗತ್ತು ಬೆರಗಾಗಿದೆ‌.

ಕೆಲ ಅಡ್ನಾಡಿಗಳು ಸಂಘ ಪರಿವಾರ ದೇಶಕ್ಕೆ ಏನು ನೀಡಿದೆ? ದೇಶಕ್ಕೆ ಸಂಘ ಪರಿವಾರದ ಕೊಡುಗೆ ಏನು? ಎಂಬ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಸಂಘ ಪರಿವಾರದ ಕೊಡುಗೆಗಳನ್ನು ಬರೀ ಒಂದು ಲೇಖನದಲ್ಲಿ ತಿಳಿಸಲು ಸಾಧ್ಯವೇ ಇಲ್ಲ. ಯಾಕಂದ್ರೆ ಕೊಡುಗೆಗಳು ಅಷ್ಟಿಷ್ಟಲ್ಲ, ಹೇಳಿದರೆ ಜೀವನ ಪೂರ್ತಿ ಮುಗಿಯಲ್ಲ. ಆದರೂ ಆ ಅಡ್ನಾಡಿಗಳಿಗೆ ಕೆಲವೊಂದು ಕೊಡುಗೆಗಳನ್ನು ಹೇಳುತ್ತೇನೆ.

1) 1947ರಲ್ಲಿ ಅಖಂಡ ಭಾರತ ಭಗ್ನವಾಯಿತು. ಆಗ ಪಾಪಿ‌ಪಾಕಿಸ್ತಾನ ಕಾಶ್ನೀರವನ್ನು ಕಬಳಿಸುವ ಪ್ರಯತ್ನದಲ್ಲಿತ್ತು‌. ಆಗ ಕಾಶ್ಮೀರ ಸೀಮೆಯನ್ನು ಕಾಯುತ್ತಾ, ಪಾಕಿಸ್ತಾನದ ಚಲನವಲನಗಳನ್ನು ನಿರೀಕ್ಷಿಸುತ್ತಾ, ಪಾಕಿಸ್ತಾನದ ಸೇನಾ ತುಕುಡಿಗಳು ಕಾಶ್ಮೀರವನ್ನು ಪ್ರವೇಶಿಸಿದಂತೇ ತಡೆದವರು ಇದೇ ಸ್ವಯಂ ಸೇವಕರು..!! ಅಂದು  ಮಾತೃಭೂಮಿಯ ರಕ್ಷಣೆಗಾಗಿ ಹಲವು ಸ್ವಯಂ ಸೇವಕರು ಪ್ರಾಣವನ್ನೇ ತ್ಯಜಿಸಿದರು. ಭಾರತ ವಿಭಜನೆಯ ನಂತರ ದೇಶದಲ್ಲಿ ಹಲವಾರು ದಂಗೆಗಳಾದವು. ಅವುಗಳನ್ನು ನಿಯಂತ್ರಿಸಲು ನೆಹರೂ ಸರ್ಕಾರ ಅಸಮರ್ಥವಾಗಿತ್ತು. ಪಾಕಿಸ್ತಾನದಿಂದ ಪ್ರಾಣವನ್ನು ಉಳಿಸಿಕೊಂಡು ಬಂದ ಹಲವಾರು ಜನರಿಗೆ ರಕ್ಷಣೆ ನೀಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಮಾರು 3000ಕ್ಕಿಂತಲೂ ಹೆಚ್ಚಿನ ಶಿಬಿರಗಳನ್ನು ಗಡಿಯಲ್ಲಿ ಸ್ಥಾಪಿಸಿತ್ತು. ಇದನ್ನೆಲ್ಲಾ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಉಗ್ರಗಾಮಿಯಾ? ಅದ್ಯಾವ ಲೆಕ್ಕದಲ್ಲಿ ನೀವು ಹೀಗೆ ಹೇಳಿದ್ದು? ಅಂದ್ರೆ ದೇಶವನ್ನು ಕಾಯ್ದವರಿಗೆ ಉಗ್ರಗಾಮಿ ಎನ್ನುವುದಾದರೆ, ದೇಶವನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ ಎನ್ನುವವರು ದೇಶಪ್ರೇಮಿಗಳಾ? ಯಾರು ದೇಶಪ್ರೇಮಿಗಳು, ಯಾರು ಉಗ್ರಗಾಮಿಗಳು ಅನ್ನೋದು ಸ್ವಾಮಿ ಸಿದ್ದರಾಮಯ್ಯನವರೇ ನಿಮಗೂ ಗೊತ್ತಿದೆ. ಆದರೆ ಓಟಿನ ಆಸೆಗಾಗಿ ಬಕೆಟ್ ಹಿಡಿಯುತಿದ್ದೀರಾ ಅನ್ನೋದು ಅರ್ಥವಾಗುತ್ತಿದೆ. ಸ್ವಾಮಿ ನಿಮ್ದು ಬಿಜೆಪಿ ಪಕ್ಷದ್ದು, ಜೆಡಿಎಸ್ ಪಕ್ಷದ್ದೂ ರಾಜಕೀಯ ಏನಾದರೂ ಇರಲಿ, ಆದರೆ ದೇಶಪ್ರೇಮಿಗಳನ್ನು ಹಿಯ್ಯಾಳೊಸುವುದು ಸರಿಯಲ್ಲ.

2) 1962ರ ಭಾರತ-ಚೀನಾದ ಯುದ್ಧ ನೆನಪಿದೆ ಅಲ್ವಾ? ರಾಜಕೀಯ ಹಪಹಪಿಗೆ ನಾವು ಸೋತಿದ್ದು ನೆನಪಿರಲೇಬೇಕು. ಆ ಸಂದರ್ಭದಲ್ಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಸ್ವಾರ್ಥದಿಂದ ಕೆಲಸ ಮಾಡಿದೆ. ಆಗ ದೇಶದ ಮೂಲೆ ಮೂಲೆಗಳಿಂದ  ಬಂದ ಸ್ವಯಂಸೇವಕರು ಗಡಿಯಲ್ಲಿ ಜಮಾಯಿಸಿ, ಭಾರತೀಯ ಸೈನಿಕರ ಸಹಾಯಕ್ಕೆ ನಿಂತರು.
ಈ ನಿಸ್ವಾರ್ಥ ಸೇವೆಯನ್ನು ಅರಿತ ಅಂದಿನ ಪ್ರಧಾನಿ ನೆಹರು ಅವರು 1963ರ ಜನವರಿ 26ರ ಪರೇಡಿಗೆ ಸ್ವಯಂಸೇವಕರನ್ನು ಆಹ್ವಾನಿಸಿದರು. ಪರೇಡಿನಲ್ಲಿ ಭಾಗವಹಿಸುವ ತಂಡಗಳು ಇಂದಿಗೂ ಹಲವು ದಿನಗಳ ಕಾಲ ಅಭ್ಯಾಸ ನಡೆಸಬೇಕಾಗುತ್ತದೆ. ಆದರೆ ಎರಡು ದಿನ ಮುಂಚಿತವಾಗಿ ಆಹ್ವಾನವನ್ನು ಸ್ವೀಕರಿಸಿದರೂ ಸುಮಾರು 3500 ಸ್ವಯಂಸೇವಕರು ಗಣವೇಶದಲ್ಲಿ ಪರೇಡಿನಲ್ಲಿ ಭಾಗಿಯಾಗಿ ರಾಷ್ಟ್ರೀಯ ಸ್ವಯಂ ಸೇವಕಸಂಘದ  ಶಿಸ್ತನ್ನು ಪ್ರದರ್ಶಿಸಿದರು.

3) 1947 ಭಾರತ ಇಬ್ಭಾಗವೇನೋ ಆಗಿತ್ತು. ಆದರೆ ಕಾಶ್ಮೀರ ಮಾತ್ರ ಅತಂತ್ರ ಸ್ಥಿತಿಯಲ್ಲಿತ್ತು. ಕಾಶ್ಮೀರವನ್ನು ಆಗ ರಾಜಾ ಹರಿಸಿಂಗರು ಆಳುತ್ತಿದ್ದರು. ಕಾಶ್ಮೀರದ ರಾಜ ಹರಿಸಿಂಹ ಕಾಶ್ಮೀರವನ್ನು ವಿಲೀನಗೊಳಿಸುವ ಬಗ್ಗೆ ಯಾವ ನಿರ್ಧಾರವನ್ನೂ ಕೈಗೊಂಡಿರಲಿಲ್ಲ. ಅತ್ತ ಪಾಕಿಸ್ತಾನ ಗಡಿಯೊಳಗೆ ಅಧಿಪತ್ಯ ಸ್ಥಾಪಿಸುವ ಹುನ್ನಾರ ನಡೆಸುತ್ತಿತ್ತು. ನೆಹರೂ ಸರ್ಕಾರ ತಟಸ್ಥ ನೀತಿಯನ್ನು ಅನುಸರಿಸಿತ್ತು. ಆಗ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಆಗಿನ RSSನ ನೇತೃತ್ವ ವಹಿಸಿದ್ದಂತಹ ಗುರೂಜಿ ಗೊಳ್ವಲ್ಕರ್  ಬಳಿ ಈ ವಿಷಯವನ್ನು ಪ್ರಸ್ತಾಪಿಸಿದರು. ಗೊಳ್ವಲ್ಕರರು ಶ್ರೀನಗರಕ್ಕೆ ಧಾವಿಸಿ ರಾಜ ಹರಿಸಿಂಗರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆಮೇಲೆ ರಾಜ ಹರಿಸಿಂಗ ಕಾಶ್ಮೀರವನ್ನು ಭಾರತ ಗಣತಂತ್ರದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದರು. ಇದರ ಬಗ್ಗೆ ನಿಮಗೆ ಗೊತ್ತಿಲ್ಲ ಅಲ್ವಾ ಸಿದ್ದರಾಮಯ್ಯನವರೇ? ಗೊತ್ತಿಲ್ಲವೆಂದರೆ ತಿಳಿದುಕೊಳ್ಳಿ. ಹೇಯ್ ತಿಳಿದುಕೊಳ್ಳುವ ಅವಶ್ಯಕತೆ ನನಗಿಲ್ಲ ಎನ್ನುವುದಾದರೆ ಸುಖಾ ಸುಮ್ಮನೆ ದೇಶಪ್ರೇಮಿ ಸಂಘಟನೆಯನ್ನು ನಿಂದಿಸುವುದನ್ನು ನಿಲ್ಲಿಸಿ.

4) 1965ರ ಯುದ್ಧದಲ್ಲೂ ಸಂಘ ಮಹತ್ವದ ಭೂಮಿಕೆಯನ್ನು ನಿಭಾಯಿಸಿತ್ತು. ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಕಾನೂನು ಸುವ್ಯವಸ್ಥೆಗಾಗಿ ಸ್ವಯಂ ಸೇವಕರನ್ನು ಆಹ್ವಾನಿಸಿದ್ದರು. ಕಾನೂನು ಸುವ್ಯವಸ್ಥೆಯನ್ನು ಸ್ವಯಂ ಸೇವಕರು ಪಾಲಿಸಿದರೆ ಪೋಲಿಸರು ಸೈನ್ಯದೊಂದಿಗೆ ಗಡಿಯಲ್ಲಿ ಹೊರಾಡಿದರು. ಯುದ್ಧದಲ್ಲಿ ಗಾಯಾಳುಗಳಾದ  ಸೈನಿಕರಿಗೆ ರಕ್ತದಾನ ಮಾಡಿದ್ದು ಸ್ವಯಂಸೇವಕರೇ..!!

5) ದಾದ್ರಾ, ನಗರ ಹವೇಲಿ, ಗೋವಾ ಮುಂತಾದ  ರಾಜ್ಯಗಳನ್ನು ಭಾರತ ಗಣತಂತ್ರದೊಂದಿಗೆ ವಿಲೀನಗೊಳಿಸಿದ ಕೀರ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೇ ಸಲ್ಲುತ್ತದೆ. 21 ಜುಲೈ 1954 ಪೋರ್ಚುಗೀಸರಿಂದ ದಾದ್ರಾ, 28 ಜುಲೈ 1954 ರಂದು ನರೋಲಿಗಳನ್ನು ವಿದೇಶಿಯರ  ಆಳ್ವಿಕೆಯಿಂದ ಮುಕ್ತಗೊಳಿಸಲಾಯಿತು. 2 ಅಗಸ್ಟ್ 1954ರಂದು ಪೋರ್ಚುಗಲ್ಲಿನ ಧ್ವಜವನ್ನು ಕಿತ್ತೆಸೆದು ತ್ರಿವರ್ಣಧ್ವಜವನ್ನು ಹಾರಿಸಿದ ಕೀರ್ತಿ ಸ್ವಯಂ ಸೇವಕರಿಗೆ ಸಲ್ಲುತ್ತದೆ. ಸಂಪೂರ್ಣ ದಾದ್ರಾ ನಗರ ಹವೇಲಿ ಪ್ರಾಂತ್ಯಗಳನ್ನು ಪೋರ್ಚುಗೀಸರ ಆಡಳಿತದಿಂದ ತಪ್ಪಿಸಿ ಭಾರತ ಸರ್ಕಾರಕ್ಕೊಪ್ಪಿಸಿದ ಯಶಸ್ಸು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸಲ್ಲುತ್ತದೆ.

6) ಗೋವಾ ಪ್ರಾಂತ್ಯದ ವಿಲೀನ ಸಂದರ್ಭದಲ್ಲೂ ನೆಹರೂ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಶ್ರೀ ಜಗನ್ನಾಥ ರಾವ್ ಜೋಶಿಯವರ ಮುಂದಾಳತ್ವದಲ್ಲಿ ಸ್ವಯಂಸೇವಕರು ಆಂದೋಲನವನ್ನು ಪ್ರಾರಂಭಿಸಿದರು. ಸ್ವಯಂ ಸೇವಕರು ಕಠಿಣ ಶಿಕ್ಷೆಗೊಳಗಾದರೂ ಆಂದೋಲನವನ್ನು ಕೈಬಿಡಲಿಲ್ಲ. ಸ್ವಯಂಸೇವಕರ  ಸತತ ಪರಿಶ್ರಮದಿಂದ 1961ರಲ್ಲಿ ಗೋವಾ ಭಾರತಗಣತಂತ್ರದೊಂದಿಗೆ ವಿಲೀನವಾಯಿತು.

7) 1975 ರಿಂದ 1977ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಸಂಘದ ಸಾಧನೆ ಹಿರಿದು. ತುರ್ತುಪರಿಸ್ಥಿತಿಯ ವಿರುದ್ಧ ಸಂಘದ ಸತ್ಯಾಗ್ರಹ ಆರಂಭಗೊಂಡಿತ್ತು. ಹಲವಾರು ಸ್ವಯಂಸೇವಕರನ್ನು ಜೈಲಿಗೆ ತಳ್ಳಲಾಗಿತ್ತು. ಆದರೂ ತೆರೆಮರೆಯ ಹಿಂದೆಯೇ ಸಂಘದ ಕಾರ್ಯಗಳು ನಡೆಯುತ್ತಿದ್ದವು. ತುರ್ತುಪರಿಸ್ಥಿತಿಯ ವಿರುದ್ಧ ಜನರನ್ನು ಜಾಗೃತಿಗೊಳಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಜೈಲಿನಲ್ಲಿರುವ ಹಲವು ನಾಯಕರನ್ನು ಕೂಡಿಸಿ ಪರ್ಯಾಯ ಪಕ್ಷರಚನೆಗೆ ಸ್ವಯಂಸೇವಕ ಸಂಘ ಮುಂದಾಯಿತು.

8) 1971ರ ಒರಿಸ್ಸಾ ಚಂಡಮಾರುತ, ಭೋಪಾಲ್ ಗ್ಯಾಸ್ ದುರಂತ,1984ರ ಸಿಖ್ ವಿರೋಧಿ ದಂಗೆ, ಗುಜರಾತಿನಲ್ಲಿ ಸಂಭವಿಸಿದ ಭೂಕಂಪ, ಸುನಾಮಿ, ಉತ್ತರಾಖಂಡದ ಪ್ರವಾಹ, ಕಾರ್ಗಿಲ್ ಯುದ್ಧ, ಚೆನ್ನೈ ಪ್ರವಾಹ ಮುಂತಾದ ರಾಷ್ಟ್ರೀಯ ವಿಪತ್ತಿನ ಸಂದರ್ಭಗಳಲ್ಲಿ ಸಂಘ ತನ್ನ ನಿಸ್ವಾರ್ಥಸೇವೆಯನ್ನು ಸಲ್ಲಿಸಿದೆ.

9) ಕೇವಲ ಭಾರತದಲ್ಲಷ್ಟೇ ಅಲ್ಲ, ನೇಪಾಳ, ಶ್ರೀಲಂಕಾ, ಸುಮಾತ್ರಾ ಮುಂತಾದ ವಿದೇಶಗಳ ತುರ್ತುಪರಿಸ್ಥಿತಿಯಲ್ಲೂ ಸಂಘ ಪರಿಹಾರಕಾರ್ಯವನ್ನು ನಡೆಸಿದೆ. ಇಂದು ದೇಶದಲ್ಲಿ ಯಾವುದೇ ವಿಪತ್ತು ಸಂಭವಿಸಿದರೂ ಸಂಘ ಸಂತ್ರಸ್ತರ ನೆರವಿಗೆ ಧಾವಿಸುತ್ತದೆ. ಉಚಿತ ಆಹಾರ, ವಸತಿಗಳ ಸೇವೆಯನ್ನು ಆರಂಭಿಸುತ್ತದೆ. ಸ್ವಯಂಸೇವಕರು ಹಗಲಿರುಳೆನ್ನದೇ ಪ್ರಾಣವನ್ನು ಪಣಕ್ಕಿಟ್ಟು ಸಂತ್ರಸ್ತರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗುತ್ತಾರೆ.

ಇವು ಕೆಲವೇ ಕೆಲವು ಉದಾಹರಣೆಗಳು. ದೇಶಕ್ಕಾಗಿ ಸಂಘ ನೀಡಿದ ಕೊಡುಗೆಯೇನೆಂದು ಪ್ರತಿಯೊಬ್ಬ ದೇಶಪ್ರೇಮಿಗೂ ಗೊತ್ತಿರುವ ವಿಷಯ. ದೇಶದ ಇತಿಹಾಸದ ಬಗ್ಗೆ ಅರಿವಿರುವ ಯಾರೂ ಸಂಘದ ವಿರುದ್ಧ ಮಾತಾಡುವುದಿಲ್ಲ.

– Nationalist Mahi

 •  
  706
  Shares
 • 706
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com