Connect with us
Loading...
Loading...

ಪ್ರಚಲಿತ

ಆ ದೇಶಕ್ಕೆ ಸೆಡ್ಡು ಹೊಡೆಯಬಲ್ಲ ತಾಕತ್ತು ಇರೋ ಏಕೈಕ ವ್ಯಕ್ತಿ ನರೇಂದ್ರ ಮೋದಿ!! ಹೀಗೆ ಹೇಳಿದ್ಯಾರು ಗೊತ್ತಾ?

Published

on

  • 291
  •  
  •  
  •  
  •  
  •  
  •  
  •  
    291
    Shares

ಈ ಹೇಳಿಕೆಯನ್ನು ಕೊಟ್ಟಿರುವವರು ಬಿಜೆಪಿಗರಲ್ಲ, ರಾಷ್ಟ್ರೀಯ ಸ್ವಯಂ ಸೇವಕರೂ ಅಲ್ಲ, ಮೋದಿಯವರ ಅಭಿಮಾನಿಗಳೂ ಅಲ್ಲ. ಈ ಹೇಳಿಕೆಯನ್ನು ಕೊಟ್ಟವರು ಅಮೇರಿಕಾ ದೇಶದವರು.

ಅಮೆರಿಕಾದ ಖ್ಯಾತ ತಜ್ಞ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಎಂಬುವರಿಗೆ ನರೇಂದ್ರ ಮೋದಿಯವರ ತಾಕತ್ತಿನ ಪರಿಚಯವಾಗಿದೆ. ಅವರಿಗಷ್ಟೇ ಅಲ್ಲ, ಇಡೀ ಜಗತ್ತಿಗೆ ಮೋದಿಯವರ ತಾಕತ್ತಿನ ಬಗ್ಗೆ ಗೊತ್ತಿದೆ. ಭಾರತೀಯರಿಗೂ ಮೋದಿಯವರ ತಾಕತ್ತಿನ ಬಗ್ಗೆ ಗೊತ್ತಿದೆ. ಅಷ್ಟೇ ಏಕೆ ಹೆಮ್ಮೆಯೂ ಇದೆ.

 

ಮೋದಿಯವರ ವಿರೋಧಿಗಳಿಗೂ ಆ ವಿಷಯ ಗೊತ್ತಿದೆ ಆದರೆ ಏನ್ ಮಾಡೋದು ಅವರಿಂದ ಇದನ್ನ ಅರಗಿಸಿಕೊಳ್ಳಲಾಗುತ್ತಿಲ್ಲ ಅಷ್ಟೇ.

ಮೋದಿಯವರ ತಾಕತ್ತಿನ ಕುರಿತು ಎಲ್ಲರೂ ಹೇಳುವ ಮಾತು ಅದೊಂದೆ 56 ಇಂಚಿನ ಎದೆಯುಳ್ಳವರು ಅಂತ.

ಅಮೆರಿಕಾದ ಖ್ಯಾತ ತಜ್ಞ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಅವರು ಚೀನಾದ ಕುರಿತು ಮಾತನಾಡುತ್ತಾ, ಚೀನಾಕ್ಕೆ ಸೆಡ್ಡು ಹೊಡೆಯಬಲ್ಲ ಏಕೈಕ ವ್ಯಕ್ತಿ ನರೇಂದ್ರ ಮೋದಿ ಎಂದು ಹೇಳಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಮತ್ತು ಈಗಲೂ ಚೀನಾದ ವಿರುದ್ಧ ಎದೆ ಸೆಟೆಸಿ ನಿಲ್ಲುವ ಜಗತ್ತಿನ ಏಕೈಕ ವ್ಯಕ್ತಿಯೆಂದರೆ ಅದು ಮೋದಿಯವರು ಮಾತ್ರ.

ಅಮೆರಿಕಾದ ಖ್ಯಾತ ತಜ್ಞ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಅವರು ಅಮೇರಿಕಾದ ಪ್ರತಿಷ್ಠಿತ ಥಿಂಕ್ ಟ್ಯಾಂಕ್ ನಿರ್ದೇಶಕರು.

ಕಳೆದ ವರ್ಷ ನಡೆದ ಅಮೇರಿಕಾದ ಸಂಸದೀಯ ಸಮಾವೇಶದಲ್ಲಿ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಅವರು ಮಾತನಾಡುತ್ತಾ ಚೀನಾದ ವಿವಾದಾತ್ಮಕ ಯೋಜನೆಯಾದ ಬೆಲ್ಟ್ and ರೋಡ್ ಗೆ ಎದೆ ಸೆಟೆದು ನಿಂತ ಜಗತ್ತಿನ ಏಕೈಕ ವ್ಯಕ್ತಿ ನರೇಂದ್ರ ಮೋದಿಯವರು ಮಾತ್ರ ಅಂತ ಹೇಳಿದ್ದರು.

ಅಮೇರಿಕಾದಂತಹ ಅಮೇರಿಕಾವೇ ಚೀನಾದ ಈ ವಿವಾದಾತ್ಮಕ ಯೋಜನೆಯ ಬಗ್ಗೆ ಮೊದ ಮೊದಲು ಮೌನ ವಹಿಸಿತ್ತು. ಈಗ ಪ್ರಧಾನಿ ಮೋದಿಯವರು ಎದೆ ಸೆಟಿಸಿ ವಿರೋಧಿಸಿದ್ದರಿಂದ, ಅಮೇರಿಕಾವೂ ವಿರೋಧಿಸಲು ಶುರು ಮಾಡಿದೆ. ಇದುವೇ ಭಾರತದ ತಾಕತ್ತು.

ಇದೇ ಕಾರಣಕ್ಕಾಗಿಯೇ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಮತ್ತು ಈಗಲೂ ಚೀನಾದ ವಿರುದ್ಧ ಎದೆ ಸೆಟಿಸಿ ನಿಲ್ಲುವ ಜಗತ್ತಿನ ಏಕೈಕ ವ್ಯಕ್ತಿಯೆಂದರೆ ಅದು ಮೋದಿಯವರು ಮಾತ್ರ ಅಮೆರಿಕಾದ ಖ್ಯಾತ ತಜ್ಞ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಅವರು ಹೇಳಿದ್ದರು.

ಚೀನಾದ ಆ ಯೋಜನೆಗೆ ಪ್ರಧಾನಿ ಮೋದಿಯವರು ಯಾಕೆ ವಿರೋಧಿಸಿದ್ದು ಗೊತ್ತೆ?

ಚೀನಾದ ಯೋಜನೆಯಾದ ಬೆಲ್ಟ್ and ರೋಡ್ ಇದು ಭಾರತದ ಭೌಗೋಳಿಕ ಸಾರ್ವಭಮತೆಯ ಉಲ್ಲಂಘನೆಯಾಗಿದ್ದು ಪ್ರಾದೇಶಿಕ ಏಕಸ್ವಾಮ್ಯ ಪ್ರಾಬಲ್ಯವನ್ನು ಸ್ಥಾಪಿಸುವ ದುರುದ್ದೇಶ ಚೀನಾ ಹೊಂದಿದೆ. ಹೀಗಾಗಿಯೇ ಪ್ರಧಾನಿ ಮೋದಿಯವರು ಈ ಯೋಜನೆಗೆ ವಿರೋಧಿಸಿದ್ದರು.

ಈಗ ಭಾರತ ಅದೆಷ್ಟು ಬಲಿಷ್ಠವಾಗಿದೆ ಅಂದ್ರೆ ನಾವು ಪಾಕಿಸ್ತಾನದ ಜೊತೆ ಹೋಲಿಕೆ ಮಾಡುವಂತಿಲ್ಲ ಬದಲಿಗೆ ನಾವು ಚೀನಾಕ್ಕೆ ಸೆಡ್ಡು ಹೊಡೆಯುವ ಮಟ್ಟಿಗೆ ಬೆಳೆದಿದ್ದೇವೆ.

ಮೋದಿಯವರು ಅದೆಷ್ಟು ಪ್ರಬಲರಾಗಿದ್ದಾರೆಂದರೆ ಕಾಂಗ್ರೆಸ್ಸಿಗರೂ ಪಕ್ಷ ಬೇಧ ಮರೆತು ಮೋದಿಯವರನ್ನು ಹಾಡಿ ಹೊಗಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಕಾಂಗ್ರೆಸ್ಸಿನ ಪ್ರಮುಖ ರಾಜಕೀಯ ವ್ಯಕ್ತಿ,
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾಗಿದ್ದ ಕಟ್ಟರ್ ಕಾಂಗ್ರೆಸ್ಸಿಗ ಲೋಕೇಶ್ ಚಂದ್ರ ಅವರು ಮೋದಿಯವರನ್ನು ಕೊಂಡಾಡಿದ್ದರು.

“ಮೋದಿಯವರು ಗಾಂಧೀಜಿಗಿಂತಲೂ ಶ್ರೇಷ್ಠ” ಎಂದು ಕಟ್ಟರ್ ಕಾಂಗ್ರೆಸ್ಸಿಗ ಲೋಕೇಶ್ ಚಂದ್ರ ಅವರು ಹಾಡಿ ಹೊಗಳಿದ್ದಾರೆ.

“ನರೇಂದ್ರ ಮೋದಿಯವರು ಮಹಾತ್ಮ ಗಾಂಧೀಜಿಗಿಂತಲೂ ಶ್ರೇಷ್ಠ. ಬಡವರ ಜೀವನದಲ್ಲಿ ಕಾರ್ಲ್ ಮಾರ್ಕ್ಸ್ ಗಿಂತ ಹೆಚ್ಚು ಮೌಲ್ಯಯುತ ಪರಿಣಾಮವನ್ನು ಬೀರಿದ್ದಾರೆ ಹಾಗೂ ಅವರು ಭಗವಂತನ ಅವತಾರವಿದ್ದಂತೆ” ಹೀಗೆ ಹೇಳಿದವರು ಅದೇ ಲೋಕೇಶ್ ಚಂದ್ರರವರು.

ಅದೇನೇ ಇರಲಿ ಭಾರತವಂತೂ ಚೀನಾಕ್ಕೆ ಸೆಡ್ಡು ಹೊಡೆಯುವ ಮಟ್ಟಿಗೆ ಬೆಳೆದಿದೆ ಅನ್ನೋದಂತು ನಿಜ.‌ ಈ ಕಾರಣಕ್ಕಾಗಿ ಭಾರತೀಯರು ಖಷಿ ಪಡಬೇಕು. ಹೆಮ್ಮೆ ಪಡಬೇಕು.

– Nationalist Mahi

  •  
    291
    Shares
  • 291
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com