Connect with us
Loading...
Loading...

ಅಂಕಣ

ಇಂಡೋನೇಷ್ಯಾ ಇಸ್ಲಾಂ ರಾಷ್ಟ್ರವಾಗಿದ್ದರೂ ಅಲ್ಲಿ ಭಯೋತ್ಪಾನೆಯಿಲ್ಲ, ಬಾಂಬ್ ಸ್ಪೋಟವಿಲ್ಲ, ರಕ್ತದ ಕೋಡಿ ಹರಿಯಲ್ಲ…. ಯಾಕೆ ಗೊತ್ತಾ?

Published

on

 • 2.2K
 •  
 •  
 •  
 •  
 •  
 •  
 •  
  2.2K
  Shares

ಇಂಡೋನೇಷ್ಯಾ ಒಂದು ಇಸ್ಲಾಂ ರಾಷ್ಟ್ರ ಆದರೂ ಕೂಡಾ ಅದು ತುಂಬಾ ಶಾಂತತೆಯಿಂದ ಇದೆ.‌

ಯಾಕೆಂದರೆ ಅದರ ಮೂಲ ಧರ್ಮ ಹಿಂದೂ ಧರ್ಮ. ಹೌದು ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ.

ಇಂಡೋನೇಷ್ಯದವರು ಹಿಂದೂ ಧರ್ಮವನ್ನು ತುಂಬಾ ಗೌರವಿಸುತ್ತಾರೆ ಮತ್ತು ಅನುಸರಿಸುತ್ತಾರೆ. ಇಂಡೋನಿಷ್ಯಾದಲ್ಲಿ ಬಾಲಿ ಎಂಬ ರಾಜ್ಯವಿದೆ. ದೇಶವೆಂದ ಮೇಲೆ ರಾಜ್ಯ ಇದ್ದೇ ಇರುತ್ತೆ ಅದರಲ್ಲಿ ವಿಶೇಷವೇನು ಅಂತ ನೀವು ಕೇಳ್ಬಹುದು.

ಖಂಡಿತವಾಗಿಯೂ ವಿಶೇಷವಿದೆ. ಆ ಬಾಲಿ ಎಂಬ ರಾಜ್ಯದಲ್ಲಿ ಸುಮಾರು 4.22 ಮಿಲಿಯನ್ ಹಿಂದುಗಳಿದ್ದಾರೆ. ಜಗತ್ತಿನಲ್ಲಿ ಹಿಂದುಗಳಿಗೆ ಇರುವಂತಹದ್ದು ಭಾರತ ಒಂದೇ ಅಂತ ನಾವು ನೀವು ಕೇಳಲ್ಪಟ್ಟಿದ್ದೇವು ಆದರೆ ಇದೇನು ಅಚ್ಚರಿ ಅಲ್ವಾ? ಹೌದು ಇಂಡೋನಿಷಿಯಾದ ಬಾಲಿ ಎಂಬ ರಾಜ್ಯಕ್ಕೂ ಮತ್ತು ಭಾರತಕ್ಕೂ ಒಂದೇ ತೆರನಾದ ಸಾಮ್ಯತೆಗಳಿವೆ.

ಜಗತ್ತಿನೆಲ್ಲಡೆ ಇಸ್ಲಾಂ ದಾಳಿ ನಡೆದಂತೆ ಇಂಡೋನಿಷಿಯಾದ ಮೇಲೂ ನಡೆದಿತ್ತು. ಆ ದಾಳಿಯ ನಂತರವೂ ಬಾಲಿಯಲ್ಲಿದ್ದ ಹಿಂದೂಗಳು ಹಿಂದುಗಳಾಗಿಯೇ ಉಳಿದಿದ್ದರು. ಪ್ರಾಣ ಬಿಟ್ಟರೆ ಹೊರತು ಧರ್ಮವನ್ನು ಬಿಡಲಿಲ್ಲ. ಹೀಗಾಗಿ ಬಾಲಿ ಹಿಂದೂಗಳಿಗೆ ಪ್ರಸಿದ್ಧವಾಯಿತು.

ಅಂದಿನ ರಾಜನ ಮೇಲೆ ಇಸ್ಲಾಮಿನ ಮತಾಂಧರು ದಾಳಿ ಮಾಡಿದಾಗ ರಾಜ ಸೋಲುವ ಹಂತದಲ್ಲಿದ್ದಾಗ ಸೆರೆ ಹಿಡಿದ ಮತಾಂಧರು ಮತಾಂತರ ಮಾಡಲು ಪ್ರಯತ್ನಿಸಿದರು‌. ಆದರೆ ಆ ರಾಜ ಮತಾಂತರವಾಗದೇ ತಾನೂ ಹಿಂದುವಾಗಿದ್ದೇ ಸಾಯಬೇಕೆಂದು ನಿರ್ಧರಿಸಿ ಬೆಂಕಿಗೆ ಹಾರಿ ಪ್ರಾಣ ಬಿಟ್ಟರು.

ಇಂಡೋನೇಷಿಯಾದ ಬಾಲಿಯಲ್ಲಿ ಹಿಂದೂ ಧರ್ಮಕ್ಕೆ ತುಂಬಾ ಗೌರವವಿದೆ. ಅನೇಕ ಹಿಂದುಗಳ ಆಚರಣೆಗಳನ್ನು ಬಾಲಿಯ ಜನ ಮಾಡುತ್ತಾರೆ. ಅದರಲ್ಲಿ ಕೆಲವನ್ನು ನಿಮ್ಮೆದುರಿಗೆ ಇಡುವ ಪ್ರಯತ್ನ ಮಾಡುತ್ತೇನೆ.

* ನಮ್ಮ ಹಿಂದೂ ಪರಂಪರೆಯ , ಹಿಂದುಗಳ ಪುನರುತ್ಥಾನಕ್ಕಾಗಿಯೇ ಶ್ರಮಿಸಿದ, ಇಡೀ ಜಗತ್ತಿನ ಮುಂದೆ ಹಿಂದೂ ಧರ್ಮದ ಪತಾಕೆಯನ್ನು ಹಾರಿಸಿದ ಋಷಿಮುನಿಗಳಾದ ಭಾರಧ್ವಾಜ್, ಅಗಸ್ತ್ಯ ಮುನಿಗಳ , ಮಾರ್ಕಂಡೇಯ ಮುನಿಗಳ ಕುರಿತಾದ ವಿಸ್ತಾರವಾದ ಅಧ್ಯಾಯಗಳು ಇಂಡೋನೇಷಿಯಾದ ಪಠ್ಯಪುಸ್ತಗಳಲ್ಲಿವೆ.

ಹೌದು ಅಚ್ಚರಿಯಾಗಲೇಬೇಕಾದ ವಿಷಯ. ನಮ್ಮ ಋಷಿಗಳ ಬಗ್ಗೆ ಅವರ ಪಠ್ಯದಲ್ಲಿ ಯಾಕೆ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರವೂ ಇದೆ. ಇಂಡೋನೇಷಿಯಾದ ಪರಂಪರೆ , ಸಂಸ್ಕೃತಿ ನಮ್ಮ ಋಷಿಮುನಿಗಳಿಂದಾಗಿದೆ.

ಮತ್ತೊಂದು ಅಚ್ಚರಿ ಏನಂದ್ರೆ ಋಗ್ವೇದದ ಪರಿಚಯ ನಮ್ಮಲ್ಲಿ ಬಹತೇಕರಿಗೆ ಇಲ್ಲವೇ ಇಲ್ಲ. ಹೇಳಲೇನೋ ವೇದಗಳ ನಾಡು ಆದರೆ ನಮ್ಮಲ್ಲಿ ಬಹುತೇಕರಿಗೆ ವೇದಗಳ ಪರಿಚಯವೇ ಇಲ್ಲ. ಆದರೆ ಇಂಡೋನೇಷಿಯಾ ಜನರಿಗೆ ಋಗ್ವೇದದ 402 ಋಷಿಗಳ ಪರಿಚಯ ಅವರಿಗಿದೆ.

* ಇಡೀ ಜಗತ್ತಿಗೆ ಭಾರತೀಯರೆಂದರೆ ಸೀರೆ , ಧೋತಿ, ಸನಾತನ ಸಂಸ್ಕೃತಿಯ ನೆನಪಾಗುತ್ತದೆ. ಇಡೀ ಜಗತ್ತು ನಮ್ಮನ್ನು ಅದೇ ಉದ್ದೇಶದಿಂದಲೇ ಗೌರವಿಸುತ್ತದೆ. ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ವಿದೇಶಿಯರು ಆಚರಿಸಲು ಆಸೆ ಪಡುತ್ತಾರೆ.

ಇಂಡೋನೆಷ್ಯಾದಲ್ಲಿ ಧೋತಿ ರಾಷ್ಟ್ರೀಯ ಉಡುಪು ಎಂದರೆ ನಂಬುತ್ತೀರಾ? ಹಾ ನಂಬಲೇಬೇಕು. ಧೋತಿ ಇಂಡೋನೇಷ್ಯಾದ ಬಾಲಿಯ ಸಂಕೇತ. ಧೋತಿ ಹಾಕಿಕೊಳ್ಳದೇ ದೇವಸ್ಥಾನದೊಳಕ್ಕೆ ಪ್ರವೇಶವಿಲ್ಲ. ಅಂದ್ರೆ ನಾವು ಯೋಚಿಸಲೇಬೇಕಾದ ವಿಷಯ. ನಮ್ಮನ್ನು ಅದೆಷ್ಟು ಗೌರವಿಸುತ್ತೆ ಅಂತ ವಿಚಾರ ಮಾಡಿ.

* ಕಾಯಕವೇ ಕೈಲಾಸ, ಕರ್ತವ್ಯವೇ ದೇವರು ಹೀಗೆ ನಮ್ಮ ಋಷಿಮುನಿಗಳು ಬೋಧಿಸಿದ ಅನೇಕ ತತ್ವಗಳನ್ನು ಇಂಡೋನೇಷ್ಯಾದ ಬಾಲಿಯ ಜನ ಪಾಲಿಸುತ್ತಾರೆ‌. ಅದರಂತೆ ತಮ್ಮ ಕೆಲಸ , ಕಾರ್ಯಗಳನ್ನು ಅಷ್ಟೇ ಶ್ರದ್ಧೆಯಿಂದ ಮಾಡುತ್ತಾರೆ.

* ಇನ್ನೂ ಅಚ್ಚರಿ ಪಡುವ ವಿಷಯವೆಂದರೆ ಇಂಡೋನೆಷ್ಯಾದ ಬಾಲಿಯಲ್ಲಿ ಪ್ರತಿಯೊಂದು ಮಗು ದಿನಕ್ಕೆ 3 ಸಲ ಗಾಯಿತ್ರಿ ಮಂತ್ರವನ್ನು ಪಠಿಸುತ್ತದೆ. ಆದರೆ ಭಾರತದಲ್ಲಿ ಬಹುತೇಕರಿಗೆ ಗಾಯಿತ್ರಿ ಮಂತ್ರದ ಅರಿವೇ ಇಲ್ಲ.

* ಇಂಡೋನೆಷ್ಯಾದ ಬಾಲಿಯ ಶಿಕ್ಷಣ ವ್ಯವಸ್ಥೆ ತುಂಬಾ ಭಿನ್ನವಾಗಿದೆ. ಖಟ್ಟರ್ ಹಿಂದೂ ರಾಷ್ಟ್ರಗಳಲ್ಲಿಯೂ ಅಂತಹ ಶಿಕ್ಷಣ ವ್ಯವಸ್ಥೆ ಇಲ್ಲ.

ರಾಮಾಯಣ ,ಮಹಾಭಾರತ , ಭಗವದ್ಗೀತೆಯ ಅನೇಕ ಅಧ್ಯಾಗಳನ್ನು ಇಂಡೋನೆಷ್ಯಾದ ಶಿಕ್ಷಣ ಪದ್ದತಿಯಲ್ಲಿ ಅಳವಡಿಸಿದ್ದಾರೆ. ಭಾರತದಲ್ಲಿ ಅವುಗಳ ಬಗ್ಗೆ ಮಾತನಾಡಿದರೆ ಕೋಮುವಾದಿ ಎಂಬ ಪಟ್ಟಕಟ್ಟುತ್ತಾರೆ.

* ಜಾತ್ಯಾತೀತತೆವನ್ನು ನಾವು ಬಾಲಿಯನ್ನು ನೋಡಿ ಕಲಿಯಬೇಕು. ನಿಜವಾದ ಜಾತ್ಯಾತೀತವನ್ನು ಬಾಲಿ ಪಾಲಿಸುತ್ತದೆ‌. ಇಂಡೋನೆಷ್ಯಾದ ಬಾಲಿಯಲ್ಲಿ ಪ್ರತಿವರ್ಷ ಸರ್ವಧರ್ಮ ಸಮ್ಮೇಳನ ನಡೆಸುತ್ತಾರೆ.

ಆ ಸಮ್ಮೇಳನದಲ್ಲಿ ಎಲ್ಲಾ ಧರ್ಮದ ಗುರುಗಳು ಒಂದೆಡೆ ಸೇರಿ ತತ್ವ ಸಿದ್ಧಾಂತಗಳನ್ನು ಬೋಧಿಸುತ್ತಾರೆ. ಅಲ್ಲಿ ಯಾವುದೇ ಕೋಮುಗಲಭೆಗಳು ನಡೆಯುವುದೇ ಇಲ್ಲ.

* ಇಂಡೋನೆಷ್ಯಾದ ಬಾಲಿಯ ಸರ್ಕಾರ ಎಷ್ಟು ಜಾತ್ಯಾತೀತವೆಂದರೆ ಪ್ರತಿವರ್ಷದ ಬಜೆಟ್ ನಲ್ಲಿ ಎಲ್ಲಾ ಧರ್ಮದವರಿಗೂ ಸಮ ಪಾಲು ಹಂಚುತ್ತದೆ.

ಇದೇ ಅಲ್ವಾ ನಿಜವಾದ ಜಾತ್ಯಾತೀತ. ಆದರೆ ಭಾರತದಲ್ಲಿ ಬಜೆಟ್ ಮಂಡನೆಯಾದರೆ ದೇವಸ್ಥಾನಕ್ಕೆ ಒಂದೇ ಒಂದು ಪಾಲು ಇರುವುದಿಲ್ಲ, ಎಲ್ಲವೂ ಮಸೀದಿ ಮತ್ತು ಚರ್ಚಗಳಿಗೆ ಹಂಚಿಕೆಯಾಗುತ್ತದೆ.

* ಇನ್ನೂ ಮಾತೃಭೂಮಿಯ ವಿಷಯಕ್ಕೆ ಬಂದರೆ ಭಾರತದಲ್ಲಿ ಕೆಲವರು ಭೂಮಿಯನ್ನು ತಾಯಿ ಎನ್ನುವುದಿಲ್ಲ ಅದು ನಿಮ್ಮ ಕಲ್ಪನೆಯಷ್ಟೆ. ನಾವಂತೂ ಭೂಮಿಯನ್ನು ತಾಯಿ, ದೇವರು ಅಂತ ಒಪ್ಪಿಕೊಳ್ಳಲ್ಲವೆಂದು ಬೊಗಳುತ್ತಾರೆ.

ಆದರೆ ಇಂಡೋನೆಷ್ಯಾದಲ್ಲಿ ಅತೀ ಹೆಚ್ಚು ಅಕ್ಕಿಯನ್ನು ಬೆಳೆಯುತ್ತಾರೆ. ಜಗತ್ತಿನಲ್ಲಿ ಅತೀ ಹೆಚ್ಚು ಅಕ್ಕಿ ಬೆಳೆಯುವವರ ಪೈಕಿ ಇಂಡೋನೆಷ್ಯಾ ಒಂದು.

ಇಂಡೊನೇಷ್ಯಾದ ಜನರಿಗೆ ಇದರ ಬಗ್ಗೆ ಕೇಳಿದಾಗ ಅವರು ಹೇಳಿದ್ದೇನು ಗೊತ್ತಾ? ನಾವು ಇಷ್ಟು ಅಕ್ಕಿ ಬೆಳೆಯಲು ಕಾರಣ ಮಾತೃಭೂಮಿಯ ಕೃಪೆ ಎಂದು ಹೇಳುತ್ತಾರೆ. ಇನ್ನೊಂದು ವಿಷಯಬನ್ನು ಇಂಡೋನೆಷ್ಯಾದ ಜನ ಹೇಳುತ್ತಾರೆ ಅದೇನೆಂದರೆ ನಮ್ಮ ಎಲ್ಲಾ ಬೆಳವಣಿಗೆಗೆ ತಳಹದಿ ಭಾರತೀಯ ಋಷಿಮುನಿಗಳು ಎಂದು.

* ಭಾರತದಲ್ಲಿ ಆಚರಿಸುವು ಎಲ್ಲಾ ಹಿಂದೂ ಧರ್ಮದ ಹಬ್ಬಗಳನ್ನು ಇಂಡೋನೆಷ್ಯಾದ ಬಾಲಿಯ ಜನ ಅತೀ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಅವರ ಎಲ್ಲಾ ಹಬ್ಬಗಳಲ್ಲಿ ರಾಮಾಯಾಣ, ಮಹಾಭಾರತ , ಭಗವದ್ಗೀತೆಗಳನ್ನು ರಥದಲ್ಲಿ ಇಟ್ಟು ಮೆರವಣಿಗೆ ಮಾಡುತ್ತಾರೆ. ಮೆರಣವಣಿಗೆ ಮುಗಿದ ಮೇಲೆ ಗೀತೆಯ ಅಧ್ಯಾಯಗಳನ್ನು ಪಠಿಸುತ್ತಾರೆ‌.

ಇಂಡೋನೇಷ್ಯಾದ ಜನ ಹಿಂದೂ ಧರ್ಮವನ್ನು ಅನುಸರಿಸುವುದರಿಂದಲೇ ತುಂಬಾ ಶಾಂತತೆಯಿಂದ, ಸೌಹಾರ್ದತೆಯಿಂದ ಇದ್ದಾರೆ ಅಂತ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ಅರ್ಥವಾಗುತ್ತದೆ.

– Nationalist Mahi

 •  
  2.2K
  Shares
 • 2.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com