Connect with us
Loading...
Loading...

ಅಂಕಣ

ಇವರು ಬುದ್ದಿ ಜೀವಿಗಳೊ ಇಲ್ಲ ಬೌದ್ಧಿಕ ಭಯೋತ್ಪಾದಕರೊ..?

Published

on

 • 157
 •  
 •  
 •  
 •  
 •  
 •  
 •  
  157
  Shares

ಎಳ್ಳಷ್ಟೂ ಒಳ್ಳೆಯದನ್ನು ಮಾಡದ ಇವರು ಹಿಮಾಲಯದಷ್ಟು ಕೆಟ್ಟದನ್ನೆ ಮಾಡುತ್ತಿದ್ದಾರೆ!!!

ಇವರು ಬುದ್ದಿ ಜೀವಿಗಳೊ ಇಲ್ಲ ಬೌದ್ಧಿಕ ಭಯೋತ್ಪಾದಕರೊ..?

ಬುದ್ದಿ ಜೀವಿ ಎನ್ನಿಸಿಕೊಂಡವರು ಯಾವಾಗಲೂ ಭಾಜಪವನ್ನು ಒಪ್ಪಿಕೊಳ್ಳುವುದಿಲ್ಲವೆಂಬುವುದು ತೆರೆದ ಸತ್ಯ. ನಿರಂತರವಾಗಿ ಅದನ್ನು ತೆಗಳುವುದರಲ್ಲಿಯೇ ಕಾಲ ಕಳೆಯುತ್ತಾರೆಂಬುವುದು ವಾಸ್ತವಿಕ ಸತ್ಯ.

ಚುನಾವಣೆಗಳಲ್ಲಿ ಭಾಜಪ ಯಾವಾಗ ಎದುರಾಳಿಗಳನ್ನು ಹೀನಾಯವಾಗಿ ಸೋಲಿಸಿ ಕೇಂದ್ರದ ಚುಕ್ಕಾಣಿ ಹಿಡಿಯಿತೋ ಅದಾಗಲೇ ವಿವಿಧ ಬಗೆಯ ಸೋಗಲಾಡಿತನದ ನಾಟಕಗಳು ಪ್ರದರ್ಶನವಾಗತೊಡಗಿದವು.

ಆರಂಭದಲ್ಲಿ ಖರೀದಿಸಿದ ಪ್ರಶಸ್ತಿ ವಾಪಸೀಕರಣದ ಜೊತೆಗೆ ಅಸಹಿಷ್ಣುತೆಯ ಆಟ ಆರಂಭಿಸಿ ಜೆ.ಎನ್.ಯು, ಹೈದರಾಬಾದ್ ವಿವಿಗಳತ್ತ ಸುತ್ತ ಹಾಯ್ದವು. Surgical strike ಬಗ್ಗೆ ಸಂಶಯ ವ್ಯಕ್ತ ಪಡಿಸಿ, Demonetisation ವಿರೋಧಿಸಿದರು.

ಆಶ್ಚರ್ಯದ ಸಂಗತಿ ಎಂದರೆ ವಿರೋಧಿಸಿ ವೀಡಿಯೊ ಹೇಳಿಕೆ ನೀಡಿರುವ ಕುಖ್ಯಾತ ವಿಚಾರವಾದಿಯೊಬ್ಬರ ಮನೆಯಲ್ಲಿ ಕೆಲವೇ ದಿನದಲ್ಲಿ ಗರಿ ಗರಿ ಹೊಸ ನೋಟಿನ ಸುರುಳಿಗಳೆ ಸಿಕ್ಕವು. ಅದು ಬೇರೆ ವಿಷಯ.

ಸಾಮಾಜಿಕ ಕಾರ್ಯಕರ್ತೆ ಮಹಿಳಾ ಬುದ್ಧಿಜೀವಿಯೊಬ್ಬರು ಉತ್ತರ ಪ್ರದೇಶದ ಚುನಾವಣಾ ಫಲಿತಾಂಶದ ನಂತರ ಕಲುಷಿತ ಮನಸ್ಸಿನಲ್ಲಿರುವ ಅಸಹಿಷ್ಣುತೆಯ ಕಫವನ್ನು ಫೇಸ್ಬುಕ್ ಮೂಲಕ ಹೊರ ಹಾಕಿ ಬಾರಿ ಚರ್ಚೆಗೆ ಗ್ರಾಸವಾಗಿದಲ್ಲದೆ ಪೋಲಿಸ್ ಕೇಸುಗಳ ಅತಿಥಿಯಾಗಿದ್ದಾಳೆ. ಇವಳ ಫೇಸ್ಬುಕ್ ಪ್ರೊಫೈಲ್ ಏನಾದರೂ ನೋಡಿದರೆ ಇವಳು ಸಾಮಾಜಿಕ ಕಾರ್ಯಕರ್ತೆಯೋ ಅಥವಾ ಬೌದ್ಧಿಕ ಭಯೋತ್ಪಾದಕಿಯೋ ಎಂದು ಅನಿಸುವುದರಲ್ಲಿ ಎರಡು ಮಾತಿಲ್ಲ.

ಯಾವಾಗಲೂ ದೇಶ ಒಡಕಿನ ಪೋಸ್ಟಗಳನ್ನು ಬಿಟ್ಟರೆ ಬೇರೆ ಯಾವುದನ್ನು ಪೋಸ್ಟ್ ಮಾಡುವುದಿಲ್ಲ. ಎಲ್ಲವೂ ಕಮ್ಯೂನಿಷ್ಟ ವಿಚಾರಧಾರೆಯ ಮನಸ್ಥಿತಿಯಿಂದಲೇ ಕೂಡಿವೆ.

ಕಾಮ ಪ್ರಚೋದನೆ ವೀಡಿಯೊವೊಂದರ ಕೆಲವೊಂದು ಸ್ಕ್ರೀನ್ ಶಾರ್ಟ್ ತೆಗೆದು ಅವುಗಳ ಜೊತೆಗೆ ಉತ್ತರ ಪ್ರದೇಶದ ನೂತನ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥನರ ಫೋಟೊ ಸೇರಿಸಿ ಅದಕ್ಕೆ ”ಅಲ್ಲಾ, ಉತ್ತರ ಪ್ರದೇಶದ ಮುಖ್ಯ ಮಂತ್ರಿ ನಾಥರು ತಮ್ಮ ಆಶ್ರಮದ ಬೆಡ್ ರೂಮನ್ನು ಮುಖ್ಯ ಮಂತ್ರಿ ಕಚೇರಿಯ ಆಂಟಿ ರೂಮಿಗೆ ವರ್ಗಾಯಿಸಿಕೊಂಡರೆ ಅದನ್ನು ಬದಲಾವಣೆಯ ಗಾಳಿ ಎಂದು ಕರೆಯುವರೆ? ಆಗ ಮಾಧ್ಯಮಗಳ ಪಾತ್ರ?” ಎಂಬ ಕೆಟ್ಟ ಬರಹದೊಂದಿಗೆ ಹಾಕಿ ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದ್ದಳು.

ಆದರೆ ಪ್ರಜ್ಞಾವಂತ ಜನತೆ ಸುಮ್ಮನೆ ಇರುವುದುಂಟೆ? ಅದರ ಸತ್ಯಾಸತ್ಯತೆಯನ್ನು ಮನಗಂಡು ಆಧಾರ ಸಮೇತ ಜಾಡಿಸಲಾರಂಬಿಸಿದರು. ಮಾಡಿದ ಮೂರ್ಖತನಕ್ಕೆ ಪೋಸ್ಟ್ ಎತ್ತಿ ಹಾಕಿದ್ದಾಳೆ.

ಇದಾದ ನಂತರ ಕನ್ನಡ ಟಿವಿ ಚಾನೆಲವೊಂದು ಈ ಕೃತ್ಯದ ಹಿಂದಿನ ಸತ್ಯಾಂಶ ಬಗ್ಗೆ ಚರ್ಚಿಸತೊಡಗಿ, ನೇರವಾಗಿ ಆ ಬುದ್ಧಿಜೀವಿ ಮಹಿಳೆಯನ್ನು ಪ್ರಶ್ನಿಸಿದಾಗ ತನ್ನ ಮೂರ್ಖತನಕ್ಕೆ ಒಂದೇ ಒಂದು ಬಾರಿ ಕ್ಷಮೆಯನ್ನು ಕೂಡ ಕೇಳದೇ ಅದನ್ನೇ ಸಮರ್ಥಿಸತೊಡಗಿದಳು..

ಟಿವಿ ನಿರೂಪಕ ಕೇಳಿದರೆ ಪೋಸ್ಟಿಗೆ ಬಂದ ವ್ಯತಿರಿಕ್ತ ಕಾಮೆಂಟಗಳ ಬಗ್ಗೆ ಹೇಳಿಕೆ ನೀಡಿ ಜಾರಿಕೊಳ್ಳುವ ಯತ್ನ ನಡೆಸಿ ವಿಫಲವಾಗಿ ಅದೇ ಸಮಯಕ್ಕೆ ಕನ್ನಡ ಹೆಸರಾಂತ ವಾಗ್ಮಿಯೊಬ್ಬರು ಅವಳ ಈ ಕೃತ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಅವರಿಗೂ ಕೂಡ ”ನಿಮ್ಮ ಬಗ್ಗೆ ಎಲ್ಲ ಗೊತ್ತು ನಿಮ್ಮ ಬಗ್ಗೆ ಹೇಳಿದರೆ ಮೀಡಿಯಾಗಳ ಮುಂದೆ ನಿಲ್ಲಲಾರೀರಿ ” ಎಂದು ಧಮಕಿ ಮಾತು ಆಡಿದಳು.

ಈಗ ಬುದ್ಧಿಜೀವಿಗಳ ಚಿತ್ತ ‘ಸನ್ಯಾಸ ಜೀವನ ಪಾಲಿಸುತ್ತ ಬಂದಿರುವ ಸಂತಜೀವಿ ಯೋಗಿ ಆದಿತ್ಯನಾಥರತ್ತ’ ಸಾಗಿದೆ. ಆದಿತ್ಯನಾಥರು ತಮ್ಮ 21 ನೇ ವಯಸ್ಸಿನಲ್ಲಿಯೆ ಸನ್ಯಾಸತ್ವ ಪಾಲಿಸುತ್ತ ಬಂದಿರುವುದು ದೇಶದ ಪ್ರಜ್ಞಾವಂತ ಜನತೆಗೆ ಗೊತ್ತಿಲ್ಲದ ಸಂಗತಿಯೇನಲ್ಲ.

ಆದರೆ ಯಾವಾಗ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಂತಾಯಿತೊ ಅದಾಗಲೇ ಎಲ್ಲರ ಫೇಸ್ಬುಕ್, ವಾಟ್ಸಪಗಳ ಡಿಪಿಯಾಗಿ ಮಿಂಚಲಾರಂಬಿಸಿದರು.

ಯೋಗಿಯವರ ಇದುವರೆಗಿನ ಎಲ್ಲ ಫೋಟೊಗಳು ಕಣ್ಣು ಕುಕ್ಕಲಾರಂಬಿಸಿದ್ದವು. ಗೋವಿಗೆ ಹಿಟ್ಟು ತಿನ್ನಿಸುವುದು, ಹುಲಿಯನ್ನು ಎತ್ತಿಕೊಂಡುಆಡಿಸುತಿರುವುದು.

ಹೀಗೆ ಒಟ್ಟಾರೆಯಾಗಿ ಉತ್ತಮ ಪ್ರತಿಕ್ರಿಯೆ ಹರಿದಾಡಲಾರಂಭಿಸಿತು. ಇದುವರೆಗೆ ಯುಪಿಗೆ ಮಾತ್ರ ಗೊತ್ತಿದ್ದ ಸನ್ಯಾಸಿ ಕೇವಲ ನಾಲ್ಕೈದು ದಿನಗಳಲ್ಲಿ ದಿಢೀರನೆ ದೇಶಾದ್ಯಂತ ಜಗಮಗಿಸಲಾರಂಭಿಸಿದರು.

ಹಿಂದೂ ಧರ್ಮದ ರಕ್ಷಣೆ, ರಾಮ ಮಂದಿರ ನಿರ್ಮಾಣ, ಕಸಾಯಿಖಾನೆಗಳ ಮುಚ್ಚುವಿಕೆಯ ಮಾತುಗಳು ಯಾವಾಗ ಸಾಮಾನ್ಯರ ಬಾಯಿಂದ ಬಾಯಿಗೆ ಹರಿಯಲಾರಂಭಿಸಿದ್ದವೊ ಆವಾಗಲೇ ಬುದ್ಧಿಜೀವಿಗಳ ಜೀವ ತೊಳಲಾಟ ನಡೆಸಿತು.

ಇವರ ಮೂಲ ಅಜೆಂಡಾ ಹಿಂದೂ ಧರ್ಮ ಬೈಯ್ಯುವುದು, ಭಗವದ್ಗೀತೆ ಸುಡುವ, ಸಮಾಜದ ನೆಮ್ಮದಿ ಕೆಡಿಸುವ ಮಾತುಗಳೆ. ಹಿಂದೂ ಸಾಧು ಸಂತರನ್ನು ತಲೆ ಎತ್ತದಂತೆ ಮಾಡುವುದಕ್ಕೆ ಇವರು ಶತಸಿದ್ಧರು.

ಇಂಥವರ ಷಡ್ಯಂತ್ರಕ್ಕೆ ಬಲಿಯಾದದ್ದು ರಾಘವೇಶ್ವರ ಭಾರತೀ ಶ್ರೀಗಳು ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ.

ಈ ಕವಡೆ ಖಾಸಿನ ಬುದ್ಧಿಜೀವಿಗಳು ಹಿಂದೂ ಧರ್ಮದ ಅನುಯಾಯಿಗಳನ್ನು, ಪ್ರಖರ ರಾಷ್ಟ್ರೀಯವಾದಿಗಳನ್ನು ಕೊಮುವಾದಿಗಳೆಂದು ಕರೆಯುವುದು ಇವರ ಕೆಟ್ಟ ಚಾಳಿ. ಯೋಗಿ ಆದಿತ್ಯನಾಥರು ಯುಪಿ ಮುಖ್ಯ ಮಂತ್ರಿಯಾದ ತಕ್ಷಣ ಸ್ವತಃ ಮುಸ್ಲಿಮರೆ ಭಗವಾ ಧ್ವಜ ಹಿಡಿದು ಗೌರವಿಸಿದಲ್ಲದೆ, ಗೋರಖ್ಪುರದ ಮುಸ್ಲಿಮರು ಯೋಗಿಯವರು ಮುಖ್ಯ ಮಂತ್ರಿಯಾದದ್ದು ನಮಗೇನೂ ತೊಂದರೆ ಇಲ್ಲೆಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಆದರೆ ನಡುವೆ ನಿಂತು ಗಬ್ಬು ಎಬ್ಬಿಸಿ ವಿಕೃತ ಸಂತೋಷ ಪಡುವ ಬುದ್ಧಿಜೀವಿಗಳ ಮನಸ್ಥಿತಿ ಕಾರ್ಯಪ್ರವೃತವಾಗಿದೆ.

ಇಂಥವರು ಅತಿಯಾಗಿ ಕಾಲೇಜು, ವಿಶ್ವವಿದ್ಯಾಲಗಳ ಕ್ಯಾಂಪಸಗಳಲ್ಲಿಯೆ ಅಡಗಿದ್ದಾರೆ. ಇಂತಹ ”ವಿಚಾರವ್ಯಾಧಿಗಳು” ಮುಗ್ಧ ಮನಸ್ಸಿನ ಭಾವನಾತ್ಮಕ ಹೃದಯದ ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯ ಮೇಲೆ ಅರೆಬೆಂದ ವಿಚಾರಗಳನ್ನು ತುರುಕುತ್ತ; ವಿಶ್ವವಿದ್ಯಾಲಗಳಲ್ಲಿ ವಿದ್ಯಾರ್ಥಿಗಳ ಮನಸ್ಸು ಒಡೆದು ಪ್ರತ್ಯೇಕತೆಯ ಭಾವ ಬೆಳೆಸುತ್ತಿದ್ದಾರೆ.

ವಿದ್ಯಾರ್ಥಿಗಳ ಜ್ಞಾನದ ಮೇಲೆ ಸವಾರಿ ಮಾಡುತ್ತ ವಿಚಾರವಾದಿಗಳ ಸಾಲಿನಲ್ಲಿ ತಾವೇ ಮುಂದೆ ಎನ್ನುವ ಮಟ್ಟಿಗೆ ಪ್ರಭಾವ ಬೀರುತಿದ್ದಾರೆ. ಯಾವುದೇ ಒಂದು ಬಿಟ್ಟಿ ಪ್ರಚಾರ ಸಿಕ್ಕರು ಅದು ಒಳ್ಳೆಯದೇ ಎಂದು ಭಾವಿಸುವ ಇವರು, ತಮ್ಮ ನಾರುವ ಬಾಯಿಂದ ಎಂತಹ ಕೀಳು ಅಥವಾ ಕನಿಷ್ಠ ಮಟ್ಟದ ವಾಗ್ಝರಿಯನ್ನಾದರು ಹರಿಸಲು ಸಿದ್ಧಹಸ್ತರು.

ಹೊಟ್ಟೆಯಲ್ಲಿನ ಕಿಚ್ಚು ಎಂದು ಬರೆದು, ಬಿಟ್ಟಿ ಪ್ರಚಾರಕ್ಕೆ ತಮ್ಮನ್ನು ತಾವೇ ಜಜ್ಜಿಕೊಂಡು ಬಲಪಂಥೀಯರ ಮೇಲೆ ತಮ್ಮ ವಾಕರಿಕೆಯನ್ನು ಕಾರಿಕೊಳ್ಳುತ್ತಾರೆ.

ಹಾಗೆ ಬಿಡದೆ ಕೊಮುವಾದಿಗಳು (ಅವರ ಭಾಷೆಯಲ್ಲಿ ಸಂಘ ಪರಿವಾರವನ್ನು ಜರಿಯುವ ಶಬ್ದ) ಮಾಡಿದರೆಂದು ಬಹಿರಂಗವಾಗಿಯೆ ಜರಿಯುತ್ತಾರೆ. ಇವರು ತಮ್ಮ ಹೀನ ಬೌದ್ಧಿಕ ದಿವಾಳಿತನವನ್ನು ತಾಳಲಾರದೆ ಯಾರೊ ಒಬ್ಬರೂ ಮುಖಕ್ಕೆ ಮಸಿ ಹಾಕಿದರೆ ಇನ್ನಾರೊ ಬೇರೆಯವರ ಮೇಲೆ ಕೇಸುಗಳನ್ನು ಜಡಿಸಿ ವಿಕೃತ ಸಂತೋಷ ಅನುಭವಿಸುವುದು ನಿತ್ಯ ರೂಡಿ.

ವೈಚಾರಿಕವಾಗಿ ಎದುರಿಸಲಾಗದೆ ಸೃಜನಶೀಲ ಬರಹಗಾರರ ಮೇಲೆ ಪೋಲಿಸ್ ಕೇಸುಗಳನ್ನು ಹಾಕಿ ನಿರ್ಬಂಧಿಸುವುದರಲ್ಲಿ ನಿಸ್ಸೀಮರು.

ವಿನಾಕಾರಣ ಕಾನೂನಿನ ಮೊರೆ ಹೋಗುವುದು ಇವರ ಕೆಟ್ಟ ಚಾಳಿ. ಇವರು ತಮ್ಮ ಮನಸ್ಥಿತಿಯ ಪಡೆಯನ್ನು ಬೆಳೆಸುವಲ್ಲಿ ಸಿದ್ಧ ಹಸ್ತರು. ಓದುತ್ತಿರುವ ವಿದ್ಯಾರ್ಥಿಗಳನ್ನು ಬಳಸಿಕೊಂಡು ತಮ್ಮ ಬಟ್ಟಂಗಿಯಾಗಿಸಿಕೊಳ್ಳುವುದರ ಜೊತೆಗೆ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳುತ್ತ ತಮ್ಮದೇ ಆದ ಹತ್ತು ಹಲವು ಸಂಘಟನೆಗಳನ್ನು ಕಟ್ಟಿಕೊಂಡು ರಾಜಕೀಯ ಬೆಂಬಲ ಗಳಿಸಿಕೊಂಡು ರಾಜಾರೋಷವಾಗಿ ಪ್ರತಿಭಾವಂತರನ್ನು ತುಳಿಯುತ್ತ ಗೂಂಡಾಗಿರಿ ಮಾಡುತ್ತ ಸಾಗುತಿದ್ದಾರೆ.

ಎಳ್ಳಷ್ಟೂ ಒಳ್ಳೆಯದನ್ನು ಮಾಡದ ಇವರು ಹಿಮಾಲಯದಷ್ಟು ಕೆಟ್ಟದನ್ನೆ ಮಾಡುತ್ತಿದ್ದಾರೆ!!! ಇವರು ಬುದ್ಧಿಜೀವಿಗಳೊ ಇಲ್ಲ ಬೌದ್ಧಿಕ ಭಯೋತ್ಪಾದಕರೊ? ಆ ದೇವರೇ ಬಲ್ಲ.

– ಶಿವಾನಂದ ಸೈದಾಪೂರ್

 •  
  157
  Shares
 • 157
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com