Connect with us
Loading...
Loading...

ಅಂಕಣ

ಇಷ್ಟೆಲ್ಲಾ ವಾದ ವಿವಾದಗಳಾದರೂ ಮೋದಿಯವರಿಗೆ ಅನಂತ ಕುಮಾರ್ ಹೆಗ್ಡೆಯವರೆಂದರೆ ಅಚ್ಚುಮೆಚ್ಚು ಯಾಕೆ ಗೊತ್ತಾ?

Published

on

 • 11.9K
 •  
 •  
 •  
 •  
 •  
 •  
 •  
  11.9K
  Shares

ಇದ್ದದ್ದನ್ನ ಇದ್ದ ಹಾಗೆ ಯಾರ ಭಯವೂ ಇಲ್ಲದೆ, ಯಾರ ಮುಲಾಜು ಇಲ್ಲದೇ ಮಾತನಾಡುವವರು ಎಂದಾಕ್ಷಣ ನೆನನಪಿಗೆ ಬರುವವರು ಕರುನಾಡಿನ ಹಿಂದೂ ಫೈರ್ ಬ್ರ್ಯಾಂಡ್ ಅನಂತ ಕುಮಾರ್ ಹೆಗ್ಡೆ. ಅವರ ಈ ನೇರವಂತಿಕೆಯಿಂದಲೇ ಅವರಿಗೆ ಫೈರ್ ಬ್ರ್ಯಾಂಡ್ ಎಂದು ಹೆಸರು ಬಂದಿದ್ದು.

ಓಟಿಗಾಗಿ ಹಿಂದೂ ಫೈರ್ ಬ್ರ್ಯಾಂಡ್ ಅನಂತ ಕುಮಾರ್ ಹೆಗ್ಡೆಯವರು ಯಾವತ್ತಿಗೂ ತಮ್ಮ ಸಿದ್ಧಾಂತವನ್ನು ಬಿಟ್ಟು ಕೊಡದವರು.

ಮೊನ್ನೆ ಮೊನ್ನೆಯಷ್ಟೇ ವಾದ ವಿವಾದಗಳಾಗಿದ್ದರಿಂದ ಅನಂತ ಕುಮಾರ್ ಹೆಗ್ಡೆಯವರು Silent ಆಗಿದ್ದಾರೆಂದು ಭಾವಿಸಿದ್ದರು. ಆದರೆ ಜನವರಿ 12 ನೇ ತಾರೀಖಿನಂದು ಘರ್ಜಿಸಿದ್ದಲ್ಲದೆ, ನೆನ್ನೆ ಮತ್ತೊಮ್ಮೆ ಘರ್ಜಿಸಿ ಸ್ವಯಂ ಘೋಷಿತ ಜಾತ್ಯಾತೀತರ ನೀರಿಳಿಸಿದ್ದಾರೆ.

ಜನವರಿ 12ನೇ ತಾರೀಖಿನಂದು ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಭಾಗವಹಿಸಿದ್ದಾಗ ಅನಂತ ಕುಮಾರ್ ಹಗ್ಡೆಯವರು ಸ್ವಯಂ ಘೋಷಿತ ಜಾತ್ಯಾತೀತರಿಗೆ ಝಾಢಿಸಿದ್ದರು.

ಕೆಲ ದಿನಗಳ ಹಿಂದೆ ಜಾತ್ಯಾತೀತರು ಇವರ ತೇಜೊವಧೆ ಮಾಡಲು ಪ್ರಯತ್ನಿಸಿದ್ದರು. ಆ ಪ್ರಯತ್ನದಿಂದ ಅನಂತ ಕುಮಾರ್ ಹೆಗ್ಡೆಯವರ ಬಾಯಿಗೆ ಬೀಗ ಬೀಳುತ್ತದೆ ಎಂದೇ ಭಾವಿಸಿದ್ದರು. ಆದರೆ ಅನಂತ ಕುಮಾರ್ ಹೆಗ್ಡೆ ತಮ ಸಿದ್ಧಾಂತವನ್ನು ಯಾವತ್ತೂ, ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲವೆಂದು ಸಾಬೀತು ಮಾಡಿದ್ದರು. ಈಗ ಮತ್ತೊಮ್ಮೆ ಘರ್ಜಿಸಿದ್ದಾರೆ. ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸ್ವಯಂ ಘೋಷಿತ ಜಾತ್ಯಾತೀತರ ವಿರುದ್ಧ ಘರ್ಜಿಸಿದ್ದಾರೆ.

ಬುದ್ಧಿಜೀವಿ ಸಾಹಿತಿಗಳು ಆಡಿದ್ದೇ ಮಾತು ಅಂದುಕೊಂಡಿದ್ದಾರೆ. ಅವರು ಬರೆಯುವ ಸಾಹಿತ್ಯಕ್ಕೆ ಯಾವ ಅರ್ಥನೂ ಇರೋದಿಲ್ಲ. ತಲೆ ಬುಡ ಇಲ್ಲದ ಸಾಹಿತ್ಯವನ್ನು ಗೀಚಿ ಬಿಡುತ್ತಾರೆ. ಅವರು ಬರೆದಿದ್ದೇ ಸಾಹಿತ್ಯ, ಗೀಚಿದ್ದೇ ಕವಿತೆ. ಸರ್ಕಾರದಿಂದ ಸೈಟ್ ಪಡೆದುಕೊಳ್ಳಲು ಕೆಲವರು ಸಾಹಿತಿ ಎಂಬ ಪಟ್ಟ ಕಟ್ಟಿಕೊಂಡಿದ್ದಾರೆಂದು ಅನಂತ ಕುಮಾರ್ ಹೆಗ್ಡೆಯವರು ಘರ್ಜಿಸಿದ್ದರು.

ಹಿಂದೂ ಫೈರ್ ಬ್ರ್ಯಾಂಡ್ ಅವರು ಈಗೀಗ ಈ ತರ ಮಾತನಾಡುತ್ತಿಲ್ಲ. ಅವರು ಇರೋದೆ ಹಾಗೆ. ದೇಶದ ಅಸ್ಮಿತೆಗೆ ಧಕ್ಕೆ ತರುವವರನ್ನು ಖಂಡಿಸುತ್ತಲೇ ಬೆಳೆದವರು. ಅನೇಕ ಸಲ ಅವರ ಹೇಳಿಕೆಗಳನ್ನು ವಿವಾದಾತ್ಮಕವಾಗಿ ಮಾಡಿ ಅನೇಕ ವಿರೋಧಿಗಳು ರಾಜಕೀಯ ಮಾಡಲು ಪ್ರಯತ್ನಿಸಿದ್ದಾರೆ.

ಅಷ್ಟೆಲ್ಲಾ ವಾದ ವಿವಾದಗಳಾದರೂ ಕೂಡಾ ಮೋದಿಯವರು ಇಂತಹ ನಾಯಕರನ್ನು ಕೇಂದ್ರ ಸಚಿವರನ್ನಾಗಿ ಆಯ್ಕೆ ಮಾಡಿದ್ದು ಯಾಕೆ ಗೊತ್ತೆ?

ಈ ಕಾರಣಗಳಿಂದಾಗಿಯೇ ಮೋದಿಯವರಿಗೆ ಅನಂತ ಕುಮಾರ್ ಹೆಗ್ಡೆಯವರೆಂದರೆ ಅಚ್ಚುಮೆಚ್ಚು.

ನರೇಂದ್ರ ಮೋದಿಯವರು ಯಾವಾಗ ಭಾರತದ ಚುಕ್ಕಾಣಿ ಹಿಡಿದಾಗ ಹಿಂದುಗಳು ಮುಗುಳ್ನಗಲು ಶುರುಮಾಡಿದರು. ಅದೆಷ್ಟೋ ವರ್ಷಗಳ ಮೇಲೆ ಹಿಂದುವಿನ ಮುಖದ ಮೇಲೆ ಮಂದಹಾಸ ಬೀರಿತ್ತು. ಅಯೋಧ್ಯೆಯ ಕನಸು ಮತ್ತೆ ದೊಡ್ಡದಾಗಿ ಬೆಳೆಯಿತು. ಅದರಲ್ಲೂ ಹಿಂದೂ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಿದ ಮೇಲಂತೂ ಹಿಂದುವಿನ ಖುಷಿಗೆ ಮಿತಿಯೇ ಇರಲಿಲ್ಲ.

ಯಾಕಂದ್ರೆ ಅಯೋಧ್ಯೆ ಇರುವುದು ಉತ್ತರ ಪ್ರದೇಶದಲ್ಲಿ ಅದೂ ಅಲ್ಲದೇ ಯೋಗಿ ಆದಿತ್ಯನಾಥರು ಅಯೋಧ್ಯೆಯ ರಾಮ ಮಂದಿರ ಕುರಿತಂತೆ ಹಿಂದಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದರು. ಹಿಂದುವಿನ ಗುರಿ , ಹಿಂದುವಿನ ಧ್ಯೇಯ ಎಲ್ಲವೂ ಅದೇ ರಾಮ ಮಂದಿರ ನಿರ್ಮಾಣ.

ಹಿಂದೂ ಫೈರ್ ಬ್ರ್ಯಾಂಡ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಹೋಲುವಂತ ನಾಯಕ ಹಿಂದೂ ಫೈರ್ ಬ್ರ್ಯಾಂಡ್ ಒಬ್ಬರು ಕರ್ನಾಟಕದಲ್ಲೂ ಇದ್ದಾರೆ. ಅವರನ್ನು ಮೋದಿಯವರು ಗುರುತಿಸಿ ಇತ್ತೀಚೆಗೆ ಕೇಂದ್ರ ಸಚಿವರನ್ನಾಗಿ ಮಾಡಿದರು. ಅವರು ಬೇರಾರೂ ಅಲ್ಲ ಮಾನ್ಯನೀಯ ಅನಂತ ಕುಮಾರ್ ಹೆಗ್ಡೆ.

ಅನಂತ ಕುಮಾರ್ ಹೆಗ್ಡೆ ಅವರು ನಡೆದು ಬಂದ ಹಾದಿಯನ್ನು ಒಮ್ಮೆ ಅವಲೋಕನ ಮಾಡಿ ನೋಡಿ. ಇಂತಹ ನಾಯಕನನ್ನು ನೀವು ಬರೀ ಸಿನೆಮಾದಲ್ಲಷ್ಟೇ ನೋಡಿರುತ್ತೀರಿ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ ಎಂದು ಶ್ರೀಕೃಷ್ಣ ಹೇಳಿದ್ದು ನಿಜ.

ಅಧರ್ಮ ಯಾವಾಗ ತಾಂಡವವಾಡುತ್ತೋ ಆಗ ಶ್ರೀಕೃಷ್ಣ ಖಂಡಿತ ಅವತರಿಸುತ್ತಾನೆ. ಮೊಘಲರ ಅಟ್ಟಹಾಸವಾದಾಗ ಶಿವಾಜಿ ಮಹಾರಾಜರು ಅವತರಿಸಿದರು.

ಬ್ರಿಟಿಷರ ಅಟ್ಟಹಾಸವಾದಾಗ ಸಾವರ್ಕರ್ ಅವತರಿಸಿದರು. ಹಿಂದೂ ವಿರೋಧಿಗಳ ಅಟ್ಡಹಾಸ ಹೆಚ್ಚಾದಾಗ ನರೇಂದ್ರ ಮೋದಿ ಅವತರಿಸಿದರು. ಅಂತೆಯೇ ಹಿಂದೂ ವಿರೋಧಿಗಳ ಹುಟ್ಟಡಗಿಸಲು ಅನಂತ ಕುಮಾರ್ ಹೆಗ್ಡೆ ಅವತರಿಸಿದರೆಂದರೆ ಅತಿಶಯೋಕ್ತಿಯೆನಿಸಲಾರದೇನೋ.

ಅದು 1992-1993 ಇಸವಿ ಭಟ್ಕಳದಲ್ಲಿ ಮತಾಂಧರ ಅಟ್ಟಹಾಸ ಎಗ್ಗಿಲ್ಲದೆ ಸಾಗಿತ್ತು. ಅಲ್ಲಿನ ಹಿಂದುಗಳು ಮತಾಂಧರ ಅಟ್ಟಹಾಸಕ್ಕೆ ನಲುಗಿ ಹೋಗಿ ಇದ್ದೂ ಸತ್ತಂತಾಗಿ ಬಿಟ್ಟಿದ್ದರು. ಆ ಕಡೆ ಯಾವ ರಾಜಕೀಯ ಪುಡಾರಿಯೂ ಕಣ್ಣು ಹಾಯಿಸಿರಲಿಲ್ಲ.

ಯಾಕಂದ್ರೆ ಓಟ್ ಬ್ಯಾಂಕ್ ಅಲ್ಲಿನ ಮತಾಂಧರನ್ನು ವಿರೋಧಿಗಳನ್ನಾಗಿ ಮಾಡಿಕೊಂಡರೆ ಮುಸಲ್ಮಾನರ ಓಟುಗಳು ಹಾಳಾಗಬಹುದೆಂಬ ದುರಾಲೋಚನೆ. ಅಲ್ಲಿನ ಹಿಂದುಗಳು ತಮ್ಮ ಕಥೆ ಮುಗಿದೇ ಹೋಗಿದೆ ಎನ್ನುವಾಗ ಅನಂತ ಕುಮಾರ್ ಹೆಗ್ಡೆ ಭಟ್ಕಳಕ್ಕೆ ಕಾಲಿಟ್ಟರು. ಅಲ್ಲಿನ ಹಿಂದುಗಳು ಜಾಗ್ರರಾದರು. ಮತ್ತೆ ಮೈಗೊಡವಿ ಏಳಬೇಕೆಂಬ ಉತ್ಸಾಹ ಅವರಲ್ಲಿ ಮೂಡಿತು.

ಅನಂತ ಕುಮಾರ್ ಭಟ್ಕಳಕ್ಕೆ ಕಾಲಿಟ್ಟು ಮತಾಂಧರ ವಿರುದ್ಧ ತೊಡೆ ತಟ್ಟಿ ನಿಂತರು. ಉತ್ಸಾಹ ಭರಿತ ಹಿಂದುಗಳು ಅಲ್ಲಿನ ಮತಾಂಧ ಜಿಹಾದಿಗಳಿಗೆ ಹಿಂದುಗಳ ಒಗ್ಗಟ್ಟನ್ನು ತೋರಿಸಿ ಬಿಸಿ ಮುಟ್ಟಿಸಿದರು. ಅಲ್ಲಿಗೆ ಮತಾಂಧರ ಹುಟ್ಟಡಗಿತ್ತು. ರಾಜ

ಕರ್ನಾಟಕದಲ್ಲಿ ಯಾವುದಾರೂ ಗಲಭೆ ಆದರೆ ಇಂಟೆಲಿಜೆನ್ಸ್ ತಂಡ ಮೊದಲು ಕಾಲಿಡೋದೇ ಭಟ್ಟಳಕ್ಕೆ ಏಕೆಂದರೆ ಭಟ್ಕಳಕ್ಕೂ ಉಗ್ರರಿಗೂ ಅಷ್ಟು ಬಾಂಧವ್ಯವಿದೆ ನೋಡಿ ಅದಕ್ಕೇ.

ಅಂತಹ ಸಂದರ್ಭದಲ್ಲಿಯೇ ಅನಂತ ಕುಮಾರ್ ಹೆಗ್ಡೆಯವರು ಮತಾಂಧರಿಗೆ ತೊಡೆ ತಟ್ಟಿ ಹಿಂದುಗಳನ್ನು ಎಬ್ಬಿಸಿ ನಿಲ್ಲಿಸಿದರು. ಆವತ್ತೇನಾದರೂ ಅನಂತ ಕುಮಾರ್ ಹೆಗ್ಡೆಯವರು ಭಟ್ಕಳದ ಮತಾಂಧರಿಗೆ ಪೆಟ್ಟು ಕೊಡದೇ ಹೋಗಿದ್ದರೆ ಇಂದು ಕರ್ನಾಟಕ ಕರ್ನಾಟಕವಾಗಿ ಉಳಿಯುತ್ತಿರಲಿಲ್ಲವೇನೋ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದರ ಬಗ್ಗೆ ಎಷ್ಟು ಜನಕ್ಕೆ ನೆನಪಿದೆ? ಎಷ್ಟು ಜನಕ್ಕೆ ಗೊತ್ತಿದೆ?

ಅಂದು ಅಂದರೆ 1994 ಅಗಸ್ಟ್ 15 ರಂದು ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವೆವು ಅಂತ ದೇಶಭಕ್ತರು ಹೊರಟರು. ಸುಮಾರು ನೂರು ಜನ ದೇಶಭಕ್ತ ಯುವಕರು ಅನಂತ ಕುಮಾರ ಹೆಗಡೆಯವರ ನೇತೃತ್ವದಲ್ಲಿ ಭಾರತಾಂಬೆಗೆ ಜೈಕಾರ ಹಾಕುತ್ತಾ ಹುಬ್ಬಳ್ಳಿಯ ಈದ್ಗಾ ಮೈದಾನದ ಹತ್ತಿರ ಬರುತ್ತಾರೆ.

ಪ್ರಾರಂಭದಲ್ಲೇ ಉಲ್ಫತ್ ಹುಸೇನ್ ಎಂಬ ಪೋಲಿಸ್ ಅಧಿಕಾರಿ ಅಡ್ಡಿ ಮಾಡಿದ್ದರು. ನಂತರ ಬಂದ ಡಿಜಿಪಿ ಬರ್ಮನ್ ಅಲ್ಲಿ ನೆರೆದವರ ದೇಶಭಕ್ತರ ಮೇಲೆ ನೇರಾನೇರ ಗುಂಡಿನ ಮಳೆಯನ್ನೇ ಸುರಿಸಿದರು.

ಈ ಯುವಕರು ಪೋಲಿಸರನ್ನು ತಳ್ಳಿ ಒಳನುಗ್ಗುತ್ತಾರೆ. ಪೋಲಿಸರ ಗುಂಡೇಟಿಗೆ ಮಂಜುನಾಥ ಭಟ್ ಎನ್ನುವ ಹುಡುಗ ಹುತಾತ್ಮನಾಗುತ್ತಾನೆ. ತದನಂತರ ಪ್ರಮೋದ್ ಎನ್ನುವ ಯುವಕನು ಕೂಡಾ ಗುಂಡೇಟಿಗೆ ಬಲಿಯಾಗುತ್ತಾನೆ.

ಅಷ್ಟು ಗಂಡಿನ ಮಳೆಗೈದರೂ ಆ ಬರ್ಮನ್ ಎಂಬ ಅಧಿಕಾರಿಗೆ ಆವತ್ತು ಧ್ವಜ ಹಾರಿಸುವುದನ್ನು ತಡೆಯಲಾಗಲಿಲ್ಲ. ಪೋಲಿಸರ ಏಟಿಗೆ ಜಗ್ಗದೆ ಅನಂತ ಕುಮಾರ ಹೆಗಡೆಯವರು ರಾಷ್ಟ್ರ ಧ್ವಜವನ್ನು ಹಾರಿಸಿಯೇ ಬಿಡುತ್ತಾರೆ.

ಪೋಲಿಸರ ಏಟಿನಿಂದ ಚರ್ಮಕಿತ್ತಿ ಬಂದರೂ ಅವರ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿತ್ತು. ಅಲ್ಲಿ ಸೆಡ್ಡುಹೊಡೆದು ಧ್ವಜಾರೋಹಣ ಮಾಡುವ ಮೂಲಕ ದೇಶಭಕ್ತರ ಸ್ವಾಭಿಮಾನವನ್ನು ಅನಂತ ಕುಮಾರ್ ಹೆಗ್ಡೆಯವರು ತೋರಿಸಿಕೊಟ್ಟರು.

ಹಿಂದೆ ಮಡಿಕೇರಿಯಲ್ಲಿ ಯಹೂದಿಗಳ ಅಟ್ಟಹಾಸ ಮಿತಿ ಮೀರಿತ್ತು. ಅಲ್ಲಿನ ಹಿಂದುಗಳನ್ನು ಯಹೂದಿಗಳು ಬಲವಂತವಾಗಿ ಮತಾಂತರದ ಪ್ರಯತ್ನ ಮಾಡುತ್ತಿದ್ದರು. ಈ ವಿಷಯ ಕಿವಿಗೆ ಬಿದ್ದೊಡನೆ ಅನಂತ ಕುಮಾರ್ ಹಗ್ಡೆ ತಮ್ಮ ತಾಕತ್ತನ್ನು ಪ್ರದರ್ಶನ ಮಾಡಲು ತಯಾರಾಗಿಯೇ ಬಿಟ್ಟರು.

ತಡಮಾಡದೇ ಮಡಿಕೇರಿಗೆ ಹೋಗಿ ಅಲ್ಲಿನ ಯಹೂದಿಗಳ ವಿರುದ್ಧ ತೊಡೆ ತಟ್ಟಿ ಅಲ್ಲಿಂದ ಒದ್ದು ಓಡಿಸಿ ಮತಾಂತರವಾದ ಹಿಂದುಗಳನ್ನು ಶುದ್ಧಿಕಾರ್ಯ ಮಾಡಿ ಮರಳಿ ಮಾತೃಧರ್ಮಕ್ಕೆ ಕರೆತಂದರು.

ಹಿಂದೂ ಧರ್ಮ ನೆಲ ಕಚ್ಚುವ ಸಂದರ್ಭದಲ್ಲಿ ಶ್ರೀಕೃಷ್ಣ ಅವತರಿಸಿ ಬರುತ್ತೇನೆಂದು ಗೀತೆ ಹೇಳುತ್ತದೆ.

ಶ್ರೀಕೃಷ್ಣ ಬರದೇ ಹೋದರೂ ಒಬ್ಬ ಮಹಾಪುರುಷನನ್ನು ಧರ್ಮದಪುನರುತ್ಥಾನಕ್ಕಾಗಿ ಕಳಿಸುತ್ತಾನೆ. ಈಗ ಭಾರತದಲ್ಲಿ ಅಂತಹ ಮಹಾಪುರುಷರೆಂದರೆ ನರೇಂದ್ರ ಮೋದೀಜಿ , ಯೋಗಿ ಅದಿತ್ಯನಾಥ ಜೀ ಹೆಮ್ಮೆಯ ಕನ್ನಡಿಗ ಅನಂತ ಕುಮಾರ್ ಹೆಗ್ಡೆ ಜೀ.

ಈ ಎಲ್ಲಾ ಅಂಶಗಳನ್ನು ಗಮನಿಸಿಯೇ ಮಾನ್ಯನೀಯ ನರೇಂದ್ರ ಮೋದಿಯವರು ಅನಂತ ಕುಮಾರ್ ಹೆಗ್ಡೆಯವರನ್ನು ಕೇಂದ್ರ ಸಚಿವರನ್ನಾಗಿ ಮಾಡಿರೋದು.

– Nationalist Mahi

 •  
  11.9K
  Shares
 • 11.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com