Connect with us
Loading...
Loading...

ಪ್ರಚಲಿತ

ಈ ಕಾರಣಗಳಿಂದಲೇ ಅನಂತ ಕುಮಾರ್ ಹೆಗ್ಡೆಯವರೆಂದರೆ ಹಿಂದುಗಳಿಗೆ ಅಚ್ಚುಮೆಚ್ಚು!!

Published

on

 • 2.1K
 •  
 •  
 •  
 •  
 •  
 •  
 •  
  2.1K
  Shares

ಕೆಲ ದಿನಗಳ ಹಿಂದೆ ಮಂಗಳೂರಿನ ಕಾಟಿಪಳ್ಳದಲ್ಲಿ ಹಾಡಹಗಲೇ ಹಿಂದೂಪರ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ನನ್ನು ದುಷ್ಕರ್ಮಿಗಳು ಬರ್ಬರವಾಗಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು.

ಕೇಸರಿ ಕನಸನ್ನು ಹೊತ್ತಿದ್ದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ನನ್ನು ಹಿಂದೂ ಎನ್ನುವ ಒಂದೇ ಕಾರಣಕ್ಕೆ ಕೆಲ ದುಷ್ಟರು ಅಮಾನುಷ ರೀತಿಯಲ್ಲಿ ಹತ್ಯೆ ಮಾಡಿ ಬಿಸಾಡಿದ್ದರು. ಆ ಹತ್ಯೆಗೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದು, ಇಡೀ ಕನ್ನಡದ ಜನತೆ ಕಣ್ಣೀರಿಟ್ಟಿತ್ತು.

ಕರಾವಳಿ ಭಾಗದಲ್ಲಿ ಪದೇ ಪದೇ ಕೋಮು ಗಲಭೆ, ಕೊಲೆಗಳು ಆಗುತ್ತಲೇ ಇವೆ. ಅದರಿಂದ ಸಾಯುತ್ತಿರುವವರು ಅಮಾಯಕರು ಮಾತ್ರ. ಸಮಸ್ಯೆಗಳು ಸಣ್ಣದಿದ್ದಾಗಲೇ ಬಗೆಹರಿಸಿದ್ದರೆ ಕರಾವಳಿ ಭಾಗದಲ್ಲಿ ಇಷ್ಟೊಂದು ನೆತ್ತರು ಹರಿಯುತ್ತಿರಲಿಲ್ಲ. ಅಮಾಯಕ ದೀಪಕ್ ರಾವ್ , ಅಮಾಯಕ ಬಷೀರ್ ನಂತವರು ಸಾಯುತ್ತಿರಲಿಲ್ಲ.

ಆದರೆ ನಡೆದಿದ್ದಾದರೂ ಏನು ಗೊತ್ತೆ? ಅದೇ ಹೊಲಸು ರಾಜಕೀಯ. ರಾಜಕೀಯದಿಂದಲೇ ಇಷ್ಟೆಲ್ಲಾ ಆಗಿದ್ದು. ಒಂದು ಪಕ್ಷ ಒಂದು ಮತದ ಕಡೆ ಬೆಂಬಲ ಸೂಚಿಸಿದಂತೆ ನಟಿಸುತ್ತದೆ. ಇನ್ನೊಂದು ಪಕ್ಷ ಇನ್ನೊಂದು ಮತದ ಕಡೆ ಬೆಂಬಲ ಸೂಚಿಸಿದಂತೆ ನಟಿಸುತ್ತದೆ. ಈ ಎರಡೂ ಪಕ್ಷಗಳಿಗೂ ಕೋಮು ಸಾಮರಸ್ಯ ಬೇಕಾಗಿಲ್ಲ. ಬದಲಿಗೆ ಕೋಮು ಸಾಮರಸ್ಯವನ್ನು ಹಾಳು ಮಾಡುವುದೇ ಇವರ ಗುರಿ. ಯಾಕಂದ್ರೆ ಇವರಿಗೆ ಓಟ್ ದಕ್ಕೋದು ಇದರಿಂದಲೇ ಅಲ್ವಾ?

ಒಬ್ಬರು ಇನ್ನೊಬ್ಬರಿಗೆ ಪ್ರಚೋದನೆ ಮಾಡಿ ಗಲಭೆ ಎಬ್ಬಿಸಿ ಕೊನೆಗೆ ನೆತ್ತರು ಹರಿಯುವಂತೆ ಮಾಡುತ್ತಾರೆ. ನೆತ್ತರು ಹರಿಸಿದವರ ಕಡೆ ಒಂದು ಪಕ್ಷ. ನೆತ್ತರು ಹರಿದವನ ಶವವನ್ನಿಟ್ಟು ಇನ್ನೊಂದು ಪಕ್ಷ ರಾಜಕೀಯ ಮಾಡುತ್ತದೆ. ಒಟ್ಟಿನಲ್ಲಿ ಇವರಿಗೆ ಕೋಮು ಸಾಮರಸ್ಯ ಬೇಕಾಗಿಯೇ ಇಲ್ಲ. ಇವರಿಗೆ ಬೇಕಾಗಿರುವುದು ರಾಜಕೀಯ ರಾಜಕೀಯ ರಾಜಕೀಯ ಮಾತ್ರ‌. ರಾಜಕೀಯಕ್ಕಾಗಿ ಎಷ್ಟು ಜನರ ನೆತ್ತರು ಹರಿದರೂ ಇವರಿಗೆ ಏನೂ ಅನಿಸೋದಿಲ್ಲ. ಎಷ್ಟು ನೆತ್ತರು ಹರಿಯುತ್ತೋ ಅಷ್ಟು ಓಟ್ ಬರುತ್ತವೆ ಎನ್ನುವ ಲೆಕ್ಕಾಚಾರವಿರಬಹುದೇನೋ?

ಅಷ್ಟಕ್ಕೂ ನೆತ್ತರೂ ಹರಿಯೋದು ಯಾರದು? ಅಮಾಯಕರ ನೆತ್ತರು. ಬಡ ಕಾರ್ಯಕರ್ತನ ನೆತ್ತರು. ಅವಲೋಕನ ಮಾಡಿ ನೋಡಿ. ಇಲ್ಲಿಯವರೆಗೂ ನೆತ್ತರು ಹರಿದವರ ಬಗ್ಗೆ ಸ್ವಲ್ಪ ಹುಡುಕಿ ನೋಡಿ. ಸತ್ತವರೆಲ್ಲಾ ಬಡ ಕಾರ್ಯಕರ್ತ, ಅಮಾಯಕರೇ ಹೊರತು, ರಾಜಕೀಯ ಪುಢಾರಿಗಳಲ್ಲ. ರಾಜಕೀಯ ಪುಢಾರಿಗಳ ಹಪಹಪಿಗೆ ಬಲಿಯಾಗುತ್ತಿರೋದು ಅಮಾಯಕರು. ಅದು ಯಾವುದೇ ಕೋಮಿನವರಾಗಿರಬಹುದು.

 

ಉದಾಹರಣೆ ಇತ್ತೀಚೆಗೆ ನಡೆದ ದೀಪಕ್ ರಾವ್ ಮತ್ತು ಬಷೀರ್ ಹತ್ಯೆ. ಇಬ್ಬರೂ ಅಮಾಯಕರೇ. ಇಬ್ಬರೂ ಬಡವರೇ. ಇಬ್ಬರೂ ಯಾವುದೇ ಗಲಭೆ ಮಾಡಿದವರಲ್ಲ. ಇಬ್ಬರೂ ರಾಜಕೀಯ ಪುಢಾರಿಗಳೂ ಅಲ್ಲ. ರಾಜಕೀಯ ಪುಢಾರಿಗಳಂತು ಜಾಣರು ಯಾಕಂದ್ರೆ ಅವರು ಯಾವತ್ತೂ ಬಲಿಯಾಗಲ್ಲ ಬದಲಿಗೆ ಬಡ ಕಾರ್ಯಕರ್ತರನ್ನು ಪ್ರಚೋದಿಸಿ ನೆತ್ತರು ಹರಿಸಿಬಿಡುತ್ತಾರೆ.

ಇವರ ರಾಜಕೀಯ ತಿಕ್ಕಾಟದಲ್ಲಿ ಬಲಿಯಾಗುತ್ತಿರೋದು ಅಮಯಾಕರು. ಕೆಲವರು ಗಲಭೆ ಎಬ್ಬಿಸಿದಾಗ ಇದೇ ರಾಜಕೀಯ ಪುಢಾರಿಗಳು ಒಂದೆರಡು ಭಾರಿಸಿ, ಬೆದರಿಸಿದ್ದರೆ ಯಾವುದೇ ಅನಾಹುತಗಳಾಗುತ್ತಿರಲಿಲ್ಲ. ಆದರೆ ರಾಜಕೀಯ ಪುಢಾರಿಗಳು ತಪ್ಪು ಮಾಡಿದವರ ಪರ ನಿಂತರು. ಆಗ ತಪ್ಪು ಮಾಡಿದವನಿಗೆ ಮತ್ತಷ್ಟು ಪ್ರೇರಣೆ ದೊರೆತಂತಾಗಿ ಆತ ಕೊಲೆ ಮಾಡುವಷ್ಟು ಧೈರ್ಯವಂತನಾಗಿ ಬೆಳೆದುಬಿಟ್ಟ. ಈ ರಾಜಕೀಯದವರಿಗೆ ಇದೇ ಬೇಕಾಗಿತ್ತು.

ಈ ಹೊಲಸು ರಾಜಕೀಯದಲ್ಲೂ ಅನಂತ ಕುಮಾರ್ ಹೆಗ್ಡೆಯಂತಹ
ಒಬ್ಬ ಹಿಂದೂವಾದಿ, ದೇಶಪ್ರೇಮಿಯೊಬ್ಬರಿದ್ದಾರೆಂಬುದು ಅಚ್ಚರಿಯ ವಿಷಯವೇ ಸರಿ. ಹಿಂದೂ ಕಾರ್ಯಕರ್ತರಿಗೆ ಏನಾದರೂ ಆಗಿದೆ ಅಂದ್ರೆ ಅಲ್ಲಿಗೆ ತಕ್ಷಣ ಧಾವಿಸೋರು ಅನಂತ ಕುಮಾರ್ ಹೆಗ್ಡೆಯವರು. ದೀಪಕ್ ರಾವ್ ಕುಟುಂಬಕ್ಕೆ ರಾಜಕೀಯದವರು ಕೊಡುವ ಬೊಗಳೆ ಆಶ್ವಾಸನೆಯಂತೆ ಯಾವುದೇ ಆಶ್ವಾಸನೆ ಕೊಡದೆ, ಆ ಕುಟುಂಬಕ್ಕೆ ಅನಂತ ಕುಮಾರ್ ಹೆಗ್ಡೆಯವರು ಸಹಾಯ ಮಾಡಿದ್ದಾರೆ.

ದೀಪಕ್ ರಾವ್ ತುಂಬಾ ಬಡ ಕುಟುಂಬದವನು. ಆದ ಕಾರಣ ಆತನ ಕುಟುಂಬಕ್ಕೆ ಅನೇಕರು ಧನಸಹಾಯ ಮಾಡಿದರು. ಆತನ ಕುಟುಂಬಕ್ಕೆ ಅವನೇ ಆಧಾರಸ್ತಂಭವಾಗಿದ್ದ. ಯಾವುದೋ ಒಂದು ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿ ಆ ಕೆಲಸದಿಂದ ಸಿಗುತ್ತಿದ್ದ 11,000 ರೂಪಾಯಿಗಳಿಂದ ತನ್ನ ಕುಟುಂಬವನ್ನು ಸಾಕುತ್ತಿದ್ದ. ತಂದೆ ಇಲ್ಲದ ಕುಟುಂಬಕ್ಕೆ ಆತನೇ ಆಸರೆಯಾಗಿದ್ದ.

ಆತನಿಗೆ ಒಬ್ಬ ತಮ್ಮ, ಆ ತಮ್ಮ ಮೂಗ ಮತ್ತು ಕಿವುಡ. ದೀಪಕ್ ನನ್ನು ಕಳೆದಕೊಂಡ ಕುಟುಂಬದ ರೋಧನೆ ಹೇಳ ತೀರದಷ್ಟಾಗಿತ್ತು. ಕುಟಂಬಕ್ಕೆ ಆಸರೆಯಿದ್ದ ಒಬ್ಬ ಮಗನನ್ನು ಕಳೆದಕೊಂಡ ತಾಯಿಗೆ ಅದೆಷ್ಟು ನೋವಾಗಿರಬೇಡ. ಇದೆಲ್ಲಾ ಅರಿತ ಕರುನಾಡಿನ ಜನ ದೀಪಕ್ ರಾವ್ ನ ಕುಟುಂಬಕ್ಕೆ ಸುಮಾರು 50 ಲಕ್ಷದಷ್ಟು ಧನಸಹಾಯ ಮಾಡಿತ್ತು.

ಈ ಹೊಲಸು ರಾಜಕೀಯದಲ್ಲಿ ರಾಜಕೀಯ ಮಾಡದೇ ತಾನು ಹಿಂದೂವಾದಿ ಎಂದು ಮತ್ತೆ ಸಾಬೀತು ಪಡಿಸಿದವರು ಅನಂತ ಕುಮಾರ್ ಹೆಗಡೆಯವರು.

ಅಷ್ಟಕ್ಕೂ ಅನಂತ ಕುಮಾರ್ ಹೆಗಡೆಯವರು ದೀಪಕ್ ರಾವ್ ಕುಟುಂಬಕ್ಕೆ ಏನು ಸಹಾಯ ಮಾಡಿದ್ದಾರೆ ಗೊತ್ತೆ?

ಅನಂತ ಕುಮಾರ್ ಹೆಗ್ಡೆಯವರು ದೀಪಕ್ ರಾವ್ ಕುಟುಂಬಕ್ಕೆ ರಾಜಕೀಯ ಪುಢಾರಿಗಳ ರೀತಿಯಲ್ಲಿ ಯಾವುದೇ ಭರವಸೆಗಳನ್ನು ಕೊಟ್ಟಿರಲಿಲ್ಲ. ಆದರೂ ಅವರು ದೀಪಕ್ ರಾವ್ ಕುಟುಂಬಕ್ಕೆ ನೆರವಾಗಿದ್ದಾರೆ. ದೀಪಕ್ ರಾವ್ ಅವರ ತಮ್ಮನಿಗೆ ಕೆಲಸ ಕೊಟ್ಟು ಆ ಕುಟುಂಬಕ್ಕೆ ಆಸರೆಯಾಗಿದ್ದಾರೆ.

ಮಂಗಳೂರಿನಲ್ಲಿರುವ ಕೇಂದ್ರ ಸರ್ಕಾರದ KIOCL( ಕುದುರೆ ಮುಖ ಐರನ್ ಒರ್ ಕಂಪೆನಿ ಲಿಮಿಟೆಡ್) ಎಂಬ ಕಂಪನಿಯಲ್ಲಿ ಕೆಲಸ ಕೊಡಿಸಿ, ಹಿಂದೂ ಹೃದಯಿ ಅಂತ ಸಾಬೀತು ಮಾಡಿದ್ದಾರೆ. ಕೆಲಸ ಕೊಡಿಸಿ ಅದರ ಪತ್ರವನ್ನು ದೀಪಕ್ ರಾವ್ ಮನೆಗೆ ಹೋಗಿ ಸಾಂತ್ವನ ಹೇಳಿ ಆ ಪತ್ರವನ್ನು ಕೊಟ್ಟಿದ್ದಾರೆ.

ರಾಜಕೀಯ ಏನಾದರೂ ಇರಲಿ ಆದರೆ ಅಮಾಯಕರು ಬಲಿಯಾಗುತ್ತಿದ್ದಾರಲ್ಲ ಅದೇ ವಿಪರ್ಯಾಸ. ಸರಕಾರ ಆತನ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ಕೊಟ್ಟಿತು. ದೀಪಕ್ ರಾವ್ ನ ತಮ್ಮನಿಗೆ ಕೆಲಸ ಕೊಡಿಸುವ ಭರವಸೆ ಕೊಟ್ಟು ಕೈ ಚೆಲ್ಲಿಬಿಟ್ಟರು. ಇಂತಹ ರಾಜಕಾರಣಿಗಳ ನಡುವೆಯೂ ಅನಂತ ಕುಮಾರ್ ಹೆಗ್ಡೆಯವರಂತಹ ಹಿಂದೂವಾದಿ ಇದ್ದಾರೆ ಅನ್ನುವುದೇ ಖುಷಿ.

 •  
  2.1K
  Shares
 • 2.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com