Connect with us
Loading...
Loading...

ಅಂಕಣ

ಈ ಸೇನಾ ಜನರಲ್ ಅಂದು ಇಡೀ ಕಾಂಗ್ರೆಸ್ಸನ್ನೇ ಕಟಕಟೆಗೆಳೆದು ತಂದು ನಿಲ್ಲಿಸಿದ್ಯಾಕೆ ಗೊತ್ತಾ?

Published

on

  • 1.5K
  •  
  •  
  •  
  •  
  •  
  •  
  •  
    1.5K
    Shares

ಆ ಸೇನಾ ಜನರಲ್ ಯಾವಾಗ ಮೋದಿಯವರೊಂದಿಗೆ ಗುತುತಿಸಿಕೊಂಡರೊ ಆಗಲೇ ಕಾಂಗ್ರೆಸ್ಸಿಗರಲ್ಲಿ ತಳಮಳ ಶುರುವಾಯ್ತು. ಆ ಸೇನಾ ಜನರಲ್ ಹೆಸರು ವಿ.ಕೆ. ಸಿಂಗ್. ನಿವೃತ್ತರಾದ ಬಳಿಕೆ ವಿ.ಕೆ. ಸಿಂಗರು ಅಣ್ಣಾ ಹಜಾರೆಯವರೊಂದಿಗೆ ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಜೊತೆಯಾದರು. ಅರವಿಂದ ಕೇಜ್ರಿವಾಲನ ಹೋರಾಟಕ್ಕೆ ಬೆಂಬಲ ಕೊಟ್ಟರು. ಬಾಬಾ ರಾಮದೇವರೊಂದಿಗೆ ಕೈ ಜೋಡಿಸಿದರು. ಅಲ್ಲಿಯವರೆಗೂ ಕಾಂಗ್ರೆಸ್ ಅಳುಕದೆ ಸುಮ್ಮನಿತ್ತು.

ಆದರೆ ವಿ.ಕೆ. ಸಿಂಗರು ಯಾವಾಗ ಮೋದಿಯರೊಂದಿಗೆ ಗುರುತಿಸಿಕೊಂಡರೋ ಆಗಲೇ ಕಾಂಗ್ರೆಸ್ಸಿನ ವಾರ್ ರೂಮನಲ್ಲಿ ತಳಮಳ ಶುರುವಾಯ್ತು. ತಳಮಳ ಶುರುವಾದರೆ ಆಗಲಿ ಆದರೆ ಕಾಂಗ್ರೆಸ್ ಎಂತಹ ನೀಚ ಕೆಲಸಕ್ಕೆ ಇಳಿಯಿತು ಗೊತ್ತಾ?

ವಿ.ಕೆ ಸಿಂಗರ ಹಳೆಯ ಫೈಲುಗಳನ್ನು ಕೆದಕಲಾಯ್ತು. ಅವರ ಕಾಲದಲ್ಲಿ ರೂಪುಗೊಂಡಿದ್ದ ಸೈನ್ಯ ಗುಪ್ತಚರ ದಳದ ತಾಂತ್ರಿಕ ಸಹಕಾರ ವಿಭಾಗದ (Technical Support Division-TSD) ಕುರಿತಂತೆ ವಿಚಾರಣೆ ನಡೆಸಲಾಯ್ತು. ಹಾಗೆ ನೋಡಿದರೆ ಇಂತಹ ವಿಭಾಗಗಳೆಲ್ಲ ಅತ್ಯಂತ ಗುಪ್ತವಾಗಿ ಕಾರ್ಯನಿರ್ವಹಿಸಬೇಕು.

ಅದರ ಕುರಿತಂತೆ ವಿಚಾರಣೆಗಳು ನಡೆದರೂ ಅದು ಗುಪ್ತವಾಗಿಯೇ ಹೂತುಹೋಗಬೇಕೇ ಹೊರತು ಹೊರಗೆ ಬರಲೇಬಾರದು. ಆದರೆ ವಿ.ಕೆ ಸಿಂಗರನ್ನು ಜನರೆದುರು ಖಳನಾಯಕನೆಂದು ಬಿಂಬಿಸ ಹೊರಟಿದ್ದ ಕೇಂದ್ರ ಸರ್ಕಾರ ಈ ವರದಿಯನ್ನು ಮಾಧ್ಯಮಗಳಿಗೆ ಸೋರುವಂತೆ ಮಾಡಿತು.

ಅಷ್ಟೇ ಅಲ್ಲ ಜನರಲ್ ಸಾಹೇಬರು ದೆಹಲಿಯನ್ನು ವಶಪಡಿಸಿಕೊಳ್ಳುವ ಯೋಜನೆ ರೂಪಿಸಿದ್ದರೆಂಬ ಸುದ್ದಿಯನ್ನು ಹರಿದಾಡುವಂತೆ ಮಾಡಿತು! TSDಯ ಹಣವನ್ನು ದೆಹಲಿಯ ಪ್ರಮುಖರ ಟೆಲಿಫೋನ್ ಕದ್ದಾಲಿಕೆಗೆ ಬಳಸಲಾಗಿದೆ ಎನ್ನಲಾಯ್ತು. ಅದು ಸುಳ್ಳೆಂದು ಸಾಬೀತಾದ ಮೇಲೆ ’ಆಪರೇಷನ್ ಕಾಶ್ಮೀರ’ ಹೆಸರಲ್ಲಿ ಎಂಟು ಕೋಟಿ ದುರುಪಯೋಗವಾಗಿದೆ ಎಂದು ಸಿಬಿಐ ತೂಗುಕತ್ತಿ ಬಿಟ್ಟು ವಿಕೆ ಸಿಂಗರನ್ನು ಬೆದರಿಸುವ ತಂತ್ರಗಾರಿಕೆ ಶುರುವಾಯ್ತು.

ಕಾಂಗ್ರೆಸ್ಸಿನ ಈ ಚಾಳಿ ಮೊದಲನೆಯ ಬಾರಿಯೇನಲ್ಲ. ಫೀಲ್ಡ್ ಮಾರ್ಷಲ್ ಮಾಣಿಕಷಾಹರನ್ನು ಇಂದಿರಾಗಾಂಧಿ ’ದೇಶವನ್ನು ವಶಪಡಿಸಿಕೊಳ್ಳಲಿದ್ದೀರಾ, ಸ್ಯಾಮ್’ ಎಂದು ಕೇಳಿದಾಗ ಕಡಕ್ಕಾಗಿ ಉತ್ತರಿಸಿದ್ದರು, ’ನೀವು ದೇಶ ನೋಡಿಕೊಳ್ಳಿ, ನಾನು ಸೈನ್ಯ ನೋಡಿಕೊಳ್ಳುತ್ತೇನೆ’.

ಜನರಲ್ ತಿಮ್ಮಯ್ಯ ಚೀನಿ ಆಕ್ರಮಣದ ಕುರಿತು ಎಚ್ಚರಿಸಿದಾಗ ರಕ್ಷಣಾ ಸಚಿವ ಉರಿದು ಬಿದ್ದಿದ್ದರು. ತಿಮ್ಮಯ್ಯನವರ ನಿಷ್ಠೆಯನ್ನು ಪ್ರಶ್ನಿಸಿದ್ದರು. ಕುಪಿತ ಜನರಲ್ ರಾಜೀನಾಮೆ ಎಸೆದು ನಿರಾಳವಾಗಿ ಬಿಟ್ಟಿದ್ದರು. ನೆಹರೂ ಮಧ್ಯಸ್ತಿಕೆ ಮಾಡಿ ರಾಜೀನಾಮೆ ಮರಳಿ ಪಡೆಯುವಂತೆ ಮಾಡಿದ್ದಲ್ಲದೇ ಸಂಸತ್ತಿನಲ್ಲಿ ಜನರಲ್ ತಿಮ್ಮಯ್ಯನವರ ಬಗ್ಗೆ ಲಘುವಾಗಿ ಮಾತನಾಡಿ ಅವಮಾನಿತರನ್ನಾಗಿಸಿದ್ದರು.

ವಿ.ಕೆ.ಸಿಂಗ್ ಸುಲಭಕ್ಕೆ ಸೋಲೊಪ್ಪಿಕೊಳ್ಳುವವರಾಗಿರಲಿಲ್ಲ. ದುರುಪಯೋಗಪಡಿಸಿಕೊಂಡಿದ್ದಾರೆನ್ನಲಾದ 8 ಕೋಟಿಯಲ್ಲಿ ಜಮ್ಮು ಕಾಶ್ಮೀರದ ಮಂತ್ರಿಗಳಿಗೂ ಸಾಕಷ್ಟು ಹಣ ನೀಡಲಾಗಿದೆ ಎಂದು ಲೆಕ್ಕ ಕೊಟ್ಟಾಗ ಕಾಂಗ್ರೆಸ್ಸಿನ ನೀರಿಳಿದಿತ್ತು.


ವಿ.ಕೆ. ಸಿಂಗರ ಪರಿವಾರಕ್ಕೆ ಪರಿವಾರವೇ ಸೈನ್ಯದ ಸೇವೆಯಲ್ಲಿ ಜೀವ ಸವೆಸಿದ ಪರಂಪರೆಯವರು. ತಂದೆ ಭಾರತೀಯ ಸೇನೆಯಿಂದ ಕರ್ನಲ್ ಆಗಿ ನಿವೃತ್ತರಾದವರು, ತಾತ ಜೂನಿಯರ್ ಕಮಿಷ ಅಧಿಕಾರಯಾಗಿದ್ದವರು, ಮೂರ‍್ಮೂರು ಚಿಕ್ಕಪ್ಪಂದಿರು ಸೈನ್ಯದ ಸೇವೆಯಲ್ಲಿದ್ದವರು. ನಾಲ್ಕನೇ ಪೀಳಿಗೆಯವರೂ ಸೇನಾ ಸೇವೆಗೆ ಬದುಕು ಮುಡಿಪಾಗಿಟ್ಟರುವ ಅಪರೂಪದ ಪರಿವಾರ.

ಅಷ್ಟೇ ಅಲ್ಲ ಹೆಣ್ಣು ಮಕ್ಕಳಿಗೆ ವರನನ್ನು ಅರಸಬೇಕಾದರೂ ಸೇನೆಯ ಸೇವೆ ಮಾಡುವನನ್ನೆ ಹುಡುಕುವುದು ಅವರ ವಾಡಿಕೆಯಾಗಿ ಬಿಟ್ಟಿದೆ. ಈ ಪರಿವಾರದ ಮೂರನೇ ಪೀಳಿಗೆಯ ಗಟ್ಟಿ ಮನಸ್ಸಿನ ಸೈನಿಕ ವಿ.ಕೆ.ಸಿಂಗ್. ಹರ‍್ಯಾಣಾದ ಭವಾನಿ ಜಿಲ್ಲೆಯ ಬಾಪೋರಾ ಹಳ್ಳಿಯೇ ಹಾಗೇ. ಅಲ್ಲಿ ಮನೆಗೊಬ್ಬ ಸೈನಿಕ ಸಿಗುತ್ತಾನೆ. ಸೇನೆಯ ಸೇವಕನಾಗೋದು ಅಂದರೆ, ಹೆಮ್ಮೆ ಪಡುವ ಹಳ್ಳಿ ಅದು. ಲೆಕ್ಕ ಹಾಕಿದರೆ ಆ ಪುಟ್ಟ ಹಳ್ಳಿಯಲ್ಲಿ ಐದುನೂರಕ್ಕೂ ಹೆಚ್ಚು ಸೈನಿಕರಿದ್ದಾರೆ.

ಅಷ್ಟಕ್ಕೂ ಕಾಂಗ್ರೆಸ್ ಯಾಕೆ ವಿ.ಕೆ. ಸಿಂಗರನ್ನು ತುಳಿಯಲು ಪ್ರಯತ್ನಿಸಿತ್ತು ಗೊತ್ತಾ?

ದೇಶಭಕ್ತ ಕುಟುಂಬದಿಂದ ಬಂದ ಜನರಲ್ ವಿಕೆ ಸಿಂಗರು ಎ.ಕೆ.ಆಂಟನಿಯವರನ್ನು ಭೇಟಿ ಮಾಡಿ ಸೈನ್ಯಕ್ಕೆ ಟ್ರಕ್ಕುಗಳನ್ನು ಖರೀದಿಸುವಲ್ಲಿ ಹದಿನಾಲ್ಕು ಕೋಟಿಯಷ್ಟು ಲಂಚ ಕೊಡಲು ಕಂಪನಿ ಮುಂದೆ ಬಂದಿತ್ತೆಂದರು. ರಕ್ಷಣಾ ಸಚಿವರಿಗೆ ಇದೆಲ್ಲ ಗೊತ್ತಿರಲಿಲ್ಲವೆಂದಲ್ಲ.

ಅವರು ಲಿಖಿತ ರೂಪದಲ್ಲಿ ಆರೋಪ ಮಾಡುವಂತೆ ಕೇಳಿಕೊಂಡರು. ಸೈನ್ಯದ ಜನರಲ್ ಮಾಡುತ್ತಿರುವ ಈ ಗಂಭೀರ ಆರೋಪವನ್ನು ಅಪಮಾನಿಸಿದಂತೆ ಅದು. ನಲವತ್ತು ಲಕ್ಷ ಬೆಲೆ ಬಾಳದ ಟ್ರಕ್ಕುಗಳನ್ನು ಒಂದು ಕೋಟಿಗೂ ಹೆಚ್ಚು ಬೆಲೆಗೆ ಮಾರಾಟ ಮಾಡುವುದೇಕೆಂದು ವಿಚಾರಣೆ ನಡೆಸಿದ್ದರೆ ಎಲ್ಲ ಬಂಡವಾಳ ಹೊರ ಬೀಳುತ್ತಿತ್ತು. ಹಾಗಾಗಲಿಲ್ಲ. ವಿ.ಕೆ.ಸಿಂಗರು ಪ್ರಧಾನಿಗೆ ಪತ್ರ ಬರೆದರು. ಸುದ್ದಿ ಸೋರಿತು.

ರಕ್ಷಣಾ ಸಚಿವರು ಜನರ ಆಕ್ರೋಶಕ್ಕೆ ಬರುವಂತಾಯ್ತು. ಇದೇ ರೀತಿ ಮುಂಬೈನ ಕೊಲಾಬಾ ಭಾಗದಲ್ಲಿ ಸೈನ್ಯಕ್ಕೆ ಸೇರಿದ ಜಮೀನಿನಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿ ಸೈನಿಕರಿಗೆ ಮನೆ ಕಟ್ಟಿಕೊಡುವ ಯೋಜನೆಯಲ್ಲಿ ಹೇರಾಫೇರಿಯಾಯ್ತು. ಮಹಾರಾಷ್ಟ್ರದ ಮಂತ್ರಿಗಳನೇಕರು ಮೂಗು ತೂರಿಸಿ ಸೈನಿಕರಿಗೆಂದು ಮೀಸಲಿಟ್ಟ ಮನೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಅಪದ್ಧವೆಸಗಿಬಿಟ್ಟರು. ಈ ಬಾರಿ ಗುರ್ರೆನ್ನುವ ಸರದಿ ವಿ.ಕೆ ಸಿಂಗರದಾಗಿತ್ತು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ ೬೯ ಲಕ್ಷವನ್ನು ಮರಳಿಸಿದ್ದು ಸಿಬಿಐ ವರದಿಯಲ್ಲೂ ಉಲ್ಲೇಖಗೊಂಡು ದೇಶವೇ ತಲೆತಗ್ಗಿಸುವಂತಾಗಿತ್ತು. ವಿ.ಕೆ ಸಿಂಗರು ಸರ್ಕಾರಕ್ಕಷ್ಟೇ ಅಲ್ಲ, ಸೈನ್ಯದಲ್ಲಿರುವ ಹುಳುಕನ್ನು ಸರಿಪಡಿಸುವ ಮಹಾ ಸಾಹಸಕ್ಕೆ ಕೈ ಹಾಕಿದ್ದರು ಗೊತ್ತಿರಲಿ. ರಾಷ್ಟ್ರಭ್ರಷ್ಟರು ಎಲ್ಲೆಡೆ ಇದ್ದಾರೆ.

ಇವರ ಲಾಬಿ ಹೇಗಿದೆಯೆಂದರೆ ಸಿಬಿಐ ನಿಂದ ಹಿಡಿದು ಮೀಡಿಯಾಗಳವರೆಗೆ ಎಲ್ಲರನ್ನು ಕೊಂಡುಕೊಳ್ಳಬಲ್ಲರು; ಯಾರನ್ನು ಬೇಕಿದ್ದರೂ ಬಲೆಯೊಳಗೆ ಸಿಕ್ಕಿ ಹಾಕಿಸಬಲ್ಲರು. ಹಾಗೆಯೇ ಆಯ್ತು. ಆದರ್ಶ್ ಹಗರಣದಲ್ಲಿ ಗೃಹ ಸಚಿವ ಶಿಂಧೆಯವರಿಗೆ ಕ್ಲೀನ್ ಚಿಟ್ ಸಿಕ್ಕರೆ, ಟಾಟ್ರಾ ಟ್ರಕ್ಕು ಖರೀದಿ ಅಕ್ರಮದಲ್ಲಿ ಜನರಲ್ ವಿಕೆ ಸಿಂಗರನ್ನೇ ದೋಷಿಯಾಗಿಸಿಬಿಡುವ ಪ್ರಯತ್ನವೂ ನಡೆಯಿತು.

ಆಸಾಮಿ ಜಗ್ಗಲಿಲ್ಲ. ಆಗ ಶುರುವಾಗಿದ್ದು, ಹುಟ್ಟಿದ ದಿನಾಂಕದ ವಿವಾದ. 2006ರ ವರೆಗೆ ಸೈನ್ಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳಲ್ಲಿ ವಿ.ಕೆ. ಸಿಂಗರ ಹುಟ್ಟಿದ ವರ್ಷ 1951ಎಂದೇ ನಮೂದಿತವಾಗಿತ್ತು. ಲೆಫ್ಟಿನೆಂಟ್ ಜನರಲ್ ಆಗಿ ವಿ.ಕೆ ಸಿಂಗರು ಅಧಿಕಾರ ವಹಿಸಿಕೊಂಡ ನಂತರ ಅದು ಹೇಗೋ ದಾಖಲೆಗಳು ತಿದ್ದಲ್ಪಟ್ಟು 1950 ಎಂದಾಯ್ತು.

ಇದನ್ನು ಪ್ರತಿಭಟಿಸಿದ ವಿ.ಕೆ ಸಿಂಗರು ಸರ್ಕಾರದ ಮೊರೆಹೋದರು. ಅದಾಗಲೇ ಸಾಕಷ್ಟು ಕಿರಿಕಿರಿಗೆ ಕಾರಣರಾಗಿದ್ದ ಈ ವ್ಯಕ್ತಿ ತೊಲಗಿದರೆ ಸಾಕೆಂದು ಭಾವಿಸಿದ್ದ ಕೇಂದ್ರ ತುಟಿ ಎರಡು ಮಾಡಲಿಲ್ಲ. ಜನರಲ್ ಸಾಹೇಬರು ಕೋರ್ಟಿಗೆ ಹೋದರು. ಸರ್ಕಾರವನ್ನು ಕಟಕಟೆಗೆಳೆದ ಮೊದಲ ಜನರಲ್ ಎಂಬ ಕೀರ್ತಿಯೂ ಅವರದಾಯ್ತು.

ಈ ಬಾರಿ ಸರ್ಕಾರ ಮತ್ತು ಮಾಧ್ಯಮಗಳು ವಿ.ಕೆ ಸಿಂಗರನ್ನು ಸುಳ್ಳ ಎಂದವು. ಭಾರತೀಯರ ಮುಂದೆ ತಲೆತಗ್ಗಿಸುವಂತೆ ಮಾಡಿದವು. ಸೈನಿಕನ ಆತ್ಮಸ್ಥೈರ್ಯ ಕುಸಿಯುವಂತಹ ಕೆಲಸವೂ ನಡೆಯಿತು. ಜನರಲ್ ವಿಕೆ ಸಿಂಗರು ನಿವೃತ್ತರಾದರು.

ತಮ್ಮ ರಾಜಕೀಯ ಹಪಹಪಿಗೆ ಸೇನೆಯನ್ನೂ ಬಿಡಲಿಲ್ಲವಲ್ಲ ಈ ರಾಜಕೀಯ ಅನ್ನೋದೆ ವಿಪರ್ಯಾಸ. ಸೈನಿಕನ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡುವ ಯಾವುದಾದರೂ ದೇಶವಿದ್ದರೆ ಅದು ಭಾರತ ಮಾತ್ರ, ಅದರಲ್ಲೂ ಕಾಂಗ್ರೆಸ್ ಪಕ್ಷ. ಇವರು ತಮ್ಮ ರಾಜಕೀಯವನ್ನು ಹೇಗೆ ಬೇಕಾದರೂ ಮಾಡಿಕೊಳ್ಳಲಿ ಆದರೆ ಅದಕ್ಕಾಗಿ ಸೇನಯನ್ನು, ಸೈನಿಕನನ್ನು ಎಳೆಯೋದು ಎಷ್ಟರ ಮಟ್ಟಿಗೆ ಸರಿ?

  •  
    1.5K
    Shares
  • 1.5K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com