Connect with us
Loading...
Loading...

ಅಂಕಣ

ಉಗ್ರರ ಮಕ್ಕಳು ನೆನಪಾದರು ಆದರೆ ಯೋಧರ ಮಕ್ಕಳ್ಯಾಕೆ ನೆನಪಾಗಲಿಲ್ಲ ಮಾಧ್ಯಮಗಳೇ?

Published

on

 • 664
 •  
 •  
 •  
 •  
 •  
 •  
 •  
  664
  Shares

ಮೊನ್ನೆ ಪತ್ರಿಕೆಗಳಲ್ಲಿ ಅಫ್ಜಲ್ಗುರು ಎಂಬ ಭಯೋತ್ಪಾದಕನ ಮಗ ಹನ್ನೆರಡನೆ ತರಗತಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ ಅಂತ ಸುದ್ದಿ ಬಂತು.
ವಾವ್ ಭಯೋತ್ಪಾದಕನ ಮಗ ಇಷ್ಟು ಚನ್ನಾಗಿ ಓದಿದ್ದಾನೆ ಅಂದ್ರೆ ಗ್ರೇಟ್. ಆ ಹುಡುಗ ಅಪ್ಪನಂತೆ ಭಯೋತ್ಪಾದಕ ಆಗದೆ ಒಳ್ಳೆಯ ಪ್ರಜೆಯಾಗಿ ಬದುಕಲಿ ಅಂತ ಹಾರೈಸುವ.

ಈಗಿನ ಮಾಧ್ಯಮದವರಿಗೆ ಅದೇನು TRP ಹುಚ್ಚು ಹಿಡಿದಿದೆಯೋ ನಾ ಕಾಣೆ, ಏನನ್ನು ತೋರಿಸಬೇಕು ಏನನ್ನು ತೋರಿಸಬಾರದು ಎನ್ನುವ ಸಾಮಾನ್ಯ ಜ್ಞಾನವೂ ಮಾಧ್ಯಮದವರಿಗೆ ಇಲ್ಲದಂತಾಗಿದೆ.

ಮೊನ್ನೆ ಜನವರಿ 1ರಂದು ಕುಡುಕರ, ಅರೆಬೆತ್ತಲೆ ಕುಣಿಯುವವರ, ಅಡಕಸ್ಬಿಗಳ ದಿನ ಇತ್ತಲ್ಲ, ಆದಿನ ಗಡಿಯಲ್ಲಿ ಐದು ಜನ ಸೈನಿಕರು ಬಲಿಯಾಗಿದ್ದರು. ಆದರೆ ಇಡೀ ದೇಶದ ಕೆಲವೊ‌ಂದು ಅಡಕಸ್ಬಿಳು ಮಾತ್ರ ಪಾರ್ಟಿ ಮೂಡ್ ಲ್ಲಿದ್ದರು.

ಅತ್ತ ಗಡಿಯಲ್ಲಿ ಸೈನಿಕ ಸತ್ತಿದ್ದಾನೆಂದು ಮರುಕ ವ್ಯಕ್ತಪಡಿಸದೆ ತಮಗೆ ಏನೂ ಆಗಿಲ್ಲ ಎಂಬಂತೆ ರೋಡ್ ರೋಡ್ ಲ್ಲಿ ಅರೆಬೆತ್ತಲೆಯಾಗಿ, ಕುಡಿದುಕೊಂಡು ಓಡಾಡಿದ್ದರು. ಇದೇ ಕೆಲ ಮಾಧ್ಯಮದವರಿಗೆ ಸಾಮಾಜಿಕ ಜವಾಬ್ದಾರಿ ಅನ್ನೋದೇನಾದರೂ ಇದ್ದಿದ್ದರೆ ಆದಿನ ಸೈನಿಕ ಬಲಿಯಾಗಿದ್ದರ ಬಗ್ಗೆ ಹೇಳೋದನ್ನ ಬಿಟ್ಟು ಹೊಸ ವರ್ಷ ಅಂತೆ ಅದು ಅಂತೆ ಇದು ಅಂತೆ ಬೊಬ್ಬೆ ಹೊಡೆದವು.

ಹೊಸ ವರ್ಷ ಅಂತ ಮಾಡೋಕೆ ಪ್ರಚೋದಿಸುವವರು ಇದೇ ಮಾಧ್ಯಮದವರು, ಹೊಸ ವರ್ಷ ಆಚರಿಸಿ ಕುಡಿದು, ತೂರಾಡಿ, ಅರೆಬೆತ್ತಲೆಯಾಗಿ ಓಡಾಡುವ ಹಾಗೆ ಪ್ರಚೋದಿಸುವವರು ಇದೇ ಕೆಲ ಮಾಧ್ಯಮದವರು. ಮರದಿನ ಬೊಬ್ಬೆ ಹೊಡೆಯುವವರು ಇದೇ ಮಾಧ್ಯಮದವರು.

ಅದು ಬಿಡಿ ಅಫ್ಜಲ್ ಗುರು ಮಗನ ಬಗ್ಗೆ ಸುದ್ದಿ ಮಾಡುವ ಮಾಧ್ಯಮಗಳಿಗೆ ನಮ್ಮ ಸೈನಿಕರ ಮಕ್ಕಳು ಏತಕ್ಕಾಗಿ ನೆನಪಾಗಲ್ಲ?

ಭಾರತಕ್ಕಾಗಿಯೇ ತನ್ನ ಅಮೂಲ್ಯ ಜೀವ ಕಳೆದುಕೊಂಡ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಇವರ ಹೆಂಡತಿ ತನ್ನ ಪತಿ ತೀರಿದ ನಂತರ ಸಂಘ ಸಂಸ್ಥೆಗಳು ಕೊಟ್ಟ ಹಣವನ್ನು ಸೇನೆಗೆ ಸೇರುವ ಯುವಕರ ತರಬೇತಿಗೆ ಉಪಯೋಗಿಸುತ್ತೇನೆ ಅಂದಿದ್ದನ್ನ ಎಷ್ಟು ಮಾಧ್ಯಮಗಳು ಸುದ್ದಿ ಮಾಡಿವೆ???

ಮುಂಬೈನ ತಾಜ್ ಹೊಟೇಲ್ ಮೇಲೆ ಉಗ್ರರು ದಾಳಿ ಮಾಡಿದಾಗ ಆ ದಾಳಿಯಲ್ಲಿ ಹುತಾತ್ಮರಾದ ತುಕಾರಾಮ್ ಓಬ್ಳೆ ಮಕ್ಕಳ ಬಗ್ಗೆ ಎಷ್ಟು ಮಾಧ್ಯಮಗಳು ಸುದ್ದಿ ಮಾಡಿವೆ???

ಅದೇ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಸಂದೀಪ್ ಉನ್ನಿಕೃಷ್ಣನ್ ತಂದೆ ತಾಯಿ ಇವತ್ತಿನ ದಿನ ಹೇಗೆ ಜೀವಿಸುತ್ತಿದ್ದಾರೆ ಅಂತ ಎಷ್ಟು ಮಾಧ್ಯಮಗಳು ಸುದ್ದಿ ಮಾಡಿವೆ???

ಕಾಶ್ಮೀರದ ಪ್ರತ್ಯೇಕತವಾದಿಗಳ ಕಲ್ಲಿನೇಟಿಗೆ ಸತ್ತು ಹೋದ ಕಾಶ್ಮೀರದ SI ಮಹಮ್ಮದ್ ಆಯೂಬ್ ಪಂಡಿತ್ ಮಕ್ಕಳ ಬಗ್ಗೆ ಎಷ್ಟು ಮಾಧ್ಯಮಗಳು ಸುದ್ದಿ ಮಾಡಿವೆ???

Srinagar: Relatives wailing near the coffin of the slain DSP Mohammad Ayub Pandith at his residence in Srinagar on Friday. The officer was lynched to death by a mob outside historic Jamia Masjid in downtown Srinagar in the wee hours on Friday. PTI Photo by S Irfan

ಪಠಾಣ್ ಕೋಠ್ ದಾಳಿಯಲ್ಲಿ ಹುತಾತ್ಮರಾದ ಯೋಧ ನಿರಂಜನ್ ಕುಟುಂಬದ ಬಗ್ಗೆ ಎಷ್ಟು ಮಾಧ್ಯಮಗಳು ಸುದ್ದಿ ಮಾಡಿವೆ???

ಯಾವಾಗಲೂ ಈ ಕನ್ಹಯ್ಯ ಉಮರ್ ಖಾಲಿದ್ ಆ ಲೋಫರ್ ಅಫ್ಜಲ್ ಗುರು ಇವರ ವಿಷಯಗಳ ಸುತ್ತ ಈ ಮಾಧ್ಯಮಗಳು ಗಿರಕಿ ಹೊಡೆಯೋದು ನೋಡಿದ್ರೆ ಇವರಿಗೆ ಸಾಮಾಜಿಕ ಕಳಕಳಿ ಜವಾಬ್ದಾರಿ ಇದೆಯೇ ಅನ್ನೊ ಅನುಮಾನ ಮೂಡುತ್ತದೆ.

ಅಷ್ಟೆ ಯಾಕೆ ನಿನ್ನೆ ಗಡಿಯಲ್ಲಿ ನಮ್ಮ ಯೋಧರು ಪಾಕಿಸ್ತಾನದ 10 ರೇಂಜರ್ಸ್ ಗಳನ್ನು ಸಂಹರಿಸಿದ್ದಾರೆ. ಇದರಲ್ಲಿ ನಾಲ್ಕು ಜನ ನಮ್ಮ ಯೋಧರು ಬಲಿದಾನಗೈದಿದ್ದಾರೆ. ಇದರ ಬಗ್ಗೆ ನಮ್ಮ ಕನ್ನಡದ ಎಷ್ಟು ಮಾಧ್ಯಮಗಳು ಹೇಳಿದ್ದಾವೆ?

ಗಡಿಯಲ್ಲಿ ಯೋಧ ತನ್ನ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿ, ಬಲಿದಾನಗೈಯುತ್ತಿದ್ದರೆ, ಇತ್ತ ನಮ್ಮ ಕೆಲ ಮಾಧ್ಯಮಗಳು TRP ಹುಚ್ಚಿಗಾಗಿ ಅದನ್ನೆಲ್ಲಾ ಮರೆತು ಬಿಟ್ಟಿದ್ದಾರೆ. ಮಾಧ್ಯಮಕ್ಕೆ ಅದರದೇ ಆದ ಜವಾಬ್ದಾರಿಗಳಿರುತ್ತವೆ. ಆದರೆ ಆ ಜವಾಬ್ದಾರಿಯನ್ನು ಮರೆತು ಬೇಜವಾಬ್ದಾರಿಯ ರೀತಿಯಲ್ಲಿ ಕೆಲ ಮಾಧದಯಮದವರು ವರ್ತಿಸುತ್ತಿದ್ದಾರೆ. ನಮ್ಮನ್ನು ಸ್ಪೂರ್ತಿಗೊಳಿಸಬೇಕಾದ ಮಾಧ್ಯಮಗಳು, ನಮ್ಮನ್ನು ನಿರುತ್ಸಾಹಿಗಳನ್ನಾಗಿ ಮಾಡುತ್ತಿದ್ದಾರೆ.

ಯೋಧರ ಬಗ್ಗೆ ಕಾಳಜಿ ಇಲ್ಲದ ಕೆಲ ಮಾಧ್ಯಮಗಳು ಇದ್ದರೂ ಇಲ್ಲದಂತೆ. ಕಳೆದ ಒಂದು ವರ್ಷದಲ್ಲಿ ನಮ್ಮ ಯೋಧರು 200ಕ್ಕೂ ಹೆಚ್ಚು ಉಗ್ರರನ್ನು ಸಂಹರಿಸಿದ್ದಾರೆಂಬುದು ಎಷ್ಟು ಜನರಿಗೆ ಗೊತ್ತಿದೆ? ಇದನ್ನು ತಿಳಿಸಬೇಕಾದ ಮಾಧ್ಯಮಗಳು ಬಾಯಿಗೆ ಬಟ್ಟೆ ಕಟ್ಟಿಕೊಂಡು ಕೂತಿದ್ದಾವೆ. ಯೋಧರ ಬಲಿದಾನಕ್ಕೆ ನಮ್ಮ ಕೆಲ ಮಾಧ್ಯಮಗಳು ಕೊಡುವ ಗೌರವ ಇದೇನಾ?

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಯೋಧ ವಿಧವೆಯರನ್ನು ಹೊಂದಿದ ದೇಶ ನಮ್ಮ ಭಾರತ. ಈ ವಿಷಯ ಅದೆಷ್ಟು ಜನರಿಗೆ ಗೊತ್ತು? ಇದನ್ನು ತಿಳಿಸಬೇಕಾಗಿದ್ದು ಮಾಧ್ಯಮದವರ ಕೆಲಸ ಅಲ್ಲವೇ?
ಅಂಕಿ-ಅಂಶಗಳ ಪ್ರಕಾರ ನಮ್ಮ ಭಾರತದಲ್ಲಿ ಯೋಧ ವಿಧವೆಯರ ಸಂಖ್ಯೆ 25,000. ಮೊದಲ ಜಾಗತಿಕ ಯುದ್ಧದಲ್ಲಿ ಮತ್ತು ಎರಡನೇ ಜಾಗತಿಕ ಯುದ್ಧದಲ್ಲಿ ಬಲಿದಾನಗೈದ ಭಾರತೀಯ ಯೋಧರ ಸಂಖ್ಯೆ ಸಾಕಷ್ಟಿದೆ.

1) 1949ರಲ್ಲಿ ಕಾಶ್ಮೀರಕ್ಕಾಗಿಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡಿದಾಗ ನಡೆದ ಆ ಯುದ್ಧದಲ್ಲಿ 1104 ಯೋಧರನ್ನು ಭಾರತ
ಕಳೆದುಕೊಂಡಿತು.

2) 1962ರ ಭಾರತ-ಚೀನಾ ಯುದ್ಧದಲ್ಲಿ ಭಾರತ 3250 ಯೋಧರನ್ನು ಭಾರತ ಕಳೆದುಕೊಂಡಿತು.

3) 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ 3264 ಯೋಧರನ್ನು ಭಾರತ ಕಳೆದುಕೊಂಡಿತು.

3) 1971ರ ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ ಭಾರತ 3843 ಯೋಧರನ್ನು ಕಳೆದುಕೊಂಡಿತು.

4) 1984ರಲ್ಲಿ ನಡೆದ ಆಪರೇಷನ್ ಬ್ಲ್ಯೂಸ್ಟಾರ್ ಹೆಸರಲ್ಲಿ ಸುಮಾರು 700ರಿಂದ 900 ಯೋಧರನ್ನು ಭಾರತ ಕಳೆದುಕೊಂಡಿತು.

5) 1987ರ ಶ್ರೀಲಂಕಾದ ಐಪಿಕೆಎಫ್ ಕಾರ್ಯಾಚರಣೆಯಲ್ಲಿ 1157 ಯೋಧರನ್ನು ಭಾರತ ಕಳೆದುಕೊಂಡಿತು.

6) 1999ರ ಕಾರ್ಗಿಲ್ ಕದನದಲ್ಲಿ 527 ಯೋಧರನ್ನು ಭಾರತ ಕಳೆದುಕೊಂಡಿತು.

ಬಲಿದಾನಗೈದ ಇಷ್ಟೂ ಸೈನಿಕರ ಮಕ್ಕಳ ಬಗ್ಗೆ ನಮ್ಮ ಮಾಧ್ಯಮದವರು ಯಾವತ್ತಾದರೂ ಹೇಳಿದ್ದಾವಾ? ಬಲಿದಾನಗೈದ ಯೋಧರ ಮಕ್ಕಳು ತನ್ನ ತಂದೆಯಂತೆ ತಾವೂ ಸೇನೆಗೆ ಸೇರಿದ್ದಾರೆ. ಇವರ ಬಗ್ಗೆ ನಮ್ಮ ಮಾಧ್ಯಮಗಳು ತೋರಿಸಿದ್ದಾವಾ? ಅಫ್ಜಲ್ ಗುರುನ ಮಗನ ಬಗ್ಗೆ ತೋರಿಸುವ ಮಾಧ್ಯಮಗಳಿಗೆ, ಸೈನಿಕರ ಮಕ್ಕಳು ಯಾಕೆ ಕಾಣೋದಿಲ್ಲ?

ಈಗಿನ ಮಾಧ್ಯಮದವರು ಹೇಗಿದ್ದಾರೆಂದರೆ,

ಮೊದಲೆಲ್ಲಾ ಸಂತರು ಮಾಡುವ ಹೋಮ ಹವನಗಳಿಂದ ನಾಡಿಗೆ ಒಳ್ಳೆಯದಾಗುತ್ತೆ ಅಂತ ರಾಕ್ಷಸರೆಲ್ಲಾ ಸೇರಿ ಹೋಮ ಹವನಗಳನ್ನು ಹಾಳು ಮಾಡುತ್ತಿದ್ದರಂತೆ. ಈಗ ಮಾಧ್ಯಮಗಳು ಆ ಸ್ಥಾನವನ್ನು ಗಿಟ್ಟಿಸಿಕೊಂಡಿವೆ. ಅಷ್ಟಕ್ಕೂ ಮಾಧ್ಯಮದವರು ಮಾಧ್ಯಮದವರ ರೀತಿಯಲ್ಲಿ ಉಳಿದಿಲ್ಲವೇಕೆ ಎಂಬುದೆ ಯಕ್ಷ ಪ್ರಶ್ನೆ.

– Nationalist Mahi

 •  
  664
  Shares
 • 664
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com