Connect with us
Loading...
Loading...

ಪ್ರಚಲಿತ

ಉತ್ತರಪ್ರದೇಶವನ್ನ ಕೇಸರಿ ರಾಮರಾಜ್ಯ ಮಾಡುತ್ತಿರುವ ಯೋಗಿಜೀ!! ಬದಲಾಗುತ್ತಿದೆ ಉತ್ತರಪ್ರದೇಶದ ಚಿತ್ರಣ

Published

on

 • 4.6K
 •  
 •  
 •  
 •  
 •  
 •  
 •  
  4.6K
  Shares

ಉತ್ತರಪ್ರದೇಶ ಎಂದರೆ ಅದೊಂದು ಕೊಲೆಗಡುಕರ ರಾಜ್ಯ, ಕ್ರೈಮ್ ಗಳ ನಾಡು ಅಂತಲೇ ಕುಖ್ಯಾತಿ ಪಡೆದಿತ್ತು. ಉತ್ತರಪ್ರದೇಶ ಅಂದರೆ ಮೂಗು ಮುರಿಯುತ್ತಲೇ ಅದರತ್ತ ನೋಡುವ ಭಾರತವಿತ್ತು.

ಆದರೆ ಯಾವಾಗ ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರೋ ಆಗಿನಿಂದ ಉತ್ತರಪ್ರದೇಶ ನಕ್ಷೆಯನ್ನೇ ಬದಲಾಯಿಸಲು ಹೊರಟಿದ್ದಾರೆ ಯೋಗಿಜೀ!

ಪ್ರಖರ ಹಿಂದುತ್ವವಾದಿ, ಕಣಕಣದಲ್ಲೂ ಹಿಂದುತ್ವದ ರಕ್ತ ಹರಿಯುತ್ತಿರುವ ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗುವ ಮುನ್ನವೇ ತಮ್ಮ ಲೋಕಸಭಾ ಕ್ಷೇತ್ರ ಗೋರಖಪುರ ಹಾಗು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಖರ ಹಿಂದುತ್ವದ ಛಾಪನ್ನ ಮೂಡಿಸಿದ್ದರು.

ತಮ್ಮದೇ ಆದ ಹಿಂದೂ ವಾಹಿನಿಯೆಂಬ ಸಂಘಟನೆಯೂ ಕಟ್ಟಿ ಬೆಳಿಸಿದ್ದಾರೆ ಯೋಗಿ ಆದಿತ್ಯನಾಥರು. ಇಂತಹ ಯೋಗಿಜೀ ತಮ್ಮ ಕ್ಷೇತ್ರವನ್ನಲ್ಲದೆ ಇಡೀ ರಾಜ್ಯವನ್ನೇ ಆಳುವ ಮುಖ್ಯಮಂತ್ರಿಯಾಗಿಬಿಟ್ಟರೆ ಆ ರಾಜ್ಯ ರಾಮರಾಜ್ಯವಾಗುವುದರಲ್ಲಿ ಸಂಶಯವುಂಟೇ?

ಪ್ರಭು ಶ್ರೀರಾಮ ಜನಿಸಿದ ರಾಜ್ಯವಾದ ಉತ್ತರಪ್ರದೇಶವನ್ನ ಈಗ ಸಂತನೊಬ್ಬ ಆಳುತ್ತಿದ್ದಾನೆ, ಆತನಿಗೆ ಲೌಕಿಕ ಆಸೆಗಳಿಲ್ಲ, ಕುಟುಂಬಕ್ಕೆ ಆಸ್ತಿ ಮಾಡಿಡಬೇಕೆನ್ನುವ ದರ್ದಿಲ್ಲ.

ಅಂತಹ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕನಸೊಂದೇ, ಅದುವೇ ಭಾರತ ಹಿಂದುರಾಷ್ಟ್ರವಾಗಬೇಕು ಎನ್ನುವುದು. ಹಿಂದೂ ರಾಷ್ಟ್ರದ ಕಲ್ಪನೆಯೆಂದರೆ ಬರೀ ಹಿಂದುಗಳಷ್ಟೇ ಭಾರತದಲ್ಲಿ ಬದುಕಬೇಕು ಉಳಿದ ಮತದ ಜನರನ್ನೆಲ್ಲ ದೇಶ ಬಿಟ್ಟು ಓಡಿಸಬೇಕು ಅನ್ನೋದಲ್ಲ ಬದಲಾಗಿ ಹಿಂದೂ ಮೌಲ್ಯಗಳನ್ನ ಅಳವಡಿಸಿಕೊಂಡು ರಾಷ್ಟ್ರ ಮುನ್ನಡೆಯಬೇಕು ಎನ್ನುವುದು.

ಅಲ್ಲಿ ಆಕ್ರಣಕಾರಿ ವಿದೇಶಿಗರನ್ನ ಹಿರೋಗಳಾಗಿ ಬಿಂಬಿಸದೆ ಆಕ್ರಮಣಕಾರಿಯನ್ನ ಆಕ್ರಮಣಕಾರಿ ಹಾಗೇ ತೋರಿಸುವುದು, ಭಾರತದ ಸನಾತನ ಪರಂಪರೆಗೆ ಧಕ್ಕೆ ಬರದಂತೆ ಅವುಗಳನ್ನ ಅಳವಡಿಸಿಕೊಂಡು ಮುನ್ನಡೆಯುವಂತಹ ಆಡಳಿತ ನೀಡುವುದು ಯೋಗಿಜೀಯ ಕನಸಾಗಿದೆ.

ಈಗ ಯೋಗಿಜೀಯ ಉತ್ತರಪ್ರದೇಶ ಸರ್ವಂ ಹಿಂದೂಮಯಂ ಆಗುವತ್ತ ಹೆಜ್ಜೆ ಹಾಕಿದೆ. ಅದೇನಪ್ಪಾ ಅಂತೀರಾ?

* ಯೋಗಿಜೀ ಅಧಿಕಾರ ಸ್ವೀಕರಿಸಿದ ನಂತರ ಗೋಹತ್ಯೆಯನ್ನ ನಿಷೇಧಿಸಿದರು

* ಮದರಸಾಗಳನ್ನ ಡಿಜಿಟಲೀಕರಣಗೊಳಿಸಲು ಸೂಚಿಸಿದರು.

* ಮದರಸಾಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡುವಂತೆ ಮಾಡಿದರು.

* ಕೈಲಾಸ ಮಾನಸಸರೋವರ ಯಾತ್ರಿಗಳಿಗೆ ಸಬ್ಸೀಡಿ ಘೋಷಿಸಿದರು.

* ಕ್ರೈಂ ರಾಜ್ಯ ಅಂತ ಕುಖ್ಯಾತಿ ಪಡೆದಿದ್ದ ರಾಜ್ಯವನ್ನ ಕ್ರೈಂ ಮುಕ್ತಮಾಡುವಲ್ಲಿ ಹೆಜ್ಜೆ ಗಾಕಿರುವ ಯೋಗಿಜೀಯ ಸರ್ಕಾರ ಇದುವರೆಗೆ ಹತ್ತಿರತ್ತಿರ 1000 ರೌಡಿಗಳ ಎನಕೌಂಟರ್ ಮಾಡಿದೆ.

ಹೀಗೆ ರಾಮರಾಜ್ಯ ಮಾಡುವ ಎಲ್ಲ ಸಂಕಲ್ಪಗಳನ್ನೂ ಯೋಗಿಜೀ ಮಾಡಿದ್ದಾರೆ.

ಇದಿಷ್ಟೇ ಅಲ್ಲ ಯೋಗಿಜೀ ಉತ್ತರಪ್ರದೇಶವನ್ನ ಹಿಂದೂಮಯವಾಗಿಯೂ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ರಾಮಭಕ್ತರ ಹೂಂಕಾರ ಮೊಳಗುತ್ತಿದೆ, ಮತ್ತೊಮ್ಮೆ ಉತ್ತರಪ್ರದೇಶ ತನ್ನ ಕಳೆದುಹೋದ ಸಂಸ್ಕೃತಿಗೆ ಮರಳಲು ಸಜ್ಜಾಗಿ ನಿಂತಿದೆ.

ಮೊಘಲರು ಯಾವಾಗ ಈ ದೇಶದ ಮೇಲೆ ಆಕ್ರಮಣ ಮಾಡಿ ನೂರಾರು ವರ್ಷಗಳ ಕಾಲ ಉತ್ತರಭಾರತವನ್ನ ಆಳಿದರೋ ಆಗ ಉತ್ತರಪ್ರದೇಶವನ್ನ ಸಾಕಷ್ಟು ಇಸ್ಲಾಮಿಕರಣ ಮಾಡಿದ್ದರು.

ಅದು ಊರು ಕೇರಿಗಳ ಹೆಸರಿನ ಮೂಲಕವಾಗಬಹದು ಅಥವ ಹಿಂದುಗಳ ಬಲವಂತದ ಮತಾಂತರದಿಂದಾಗಬಹುದು ಹೀಗೆ ತಮ್ಮ ಕ್ರೌರ್ಯವನ್ನ ಮೊಘಲರು ಹಿಂದುಗಳ ಮೇಲೆ ಮೆರೆದಿದ್ದರು.

ಈಗಲೂ ದೇಶದ ಹಲವಾರು ಊರುಗಳ ಹೆಸರುಗಳು ಮೊಘಲರು ಬದಲಿಸಿದ್ದ ಹೆಸರುಗಳಿಂದಲೇ ಕರೆಯಲ್ಪಡುತ್ತವೆ.

ಆದರೆ ಇದು ರಾಮರಾಜ್ಯದಲ್ಲಿ ಇನ್ನುಮುಂದೆ ನಡಿಯಲ್ಲ ಅಂತ ಯೋಗಿಜೀ ರಣಕಹಳೇ ಊದಿದ್ದಾರೆ. ಹಿಂದೂಸ್ಥಾನದ ಗತವೈಭವವನ್ನ ಮತ್ತೆ ಮರುಸ್ಥಾಪಿಸಲು ಯೋಗಿಜೀ ಪಣತೊಟ್ಟಿದ್ದಾರೆ.

ಮೊಘಲ್ ಆಕ್ರಮಣಕಾರಿ ಅಕ್ಬರ್ ಕೂಡ ಉತ್ತರಪ್ರದೇಶದ ಮೇಲೆ ದಾಳಿ ಮಾಡಿದ್ದವನೇ ಆಗಿದ್ದ, ಆತ ಆಡಳಿತ ನಡೆಸಿದ ಜಾಗಗಳನ್ನೆಲ್ಲಾ ಹಿಂದೂ ಹೆಸರುಗಳಿಂದ ಮುಸ್ಲಿಂ ಹೆಸರುಗಳಾಗಿ ಬದಲಿಸಿಬಿಟ್ಟಿದ್ದ.

ಅದರಲ್ಲಿ ಒಂದು ಹಿಂದುಗಳ ಪುಣ್ಯಕ್ಷೇತ್ರ ‘ತ್ರಿವೇಣಿ ಸಂಗಮ, ಪ್ರಯಾಗ’. ಗಂಗಾ, ಯಮುನಾ ಹಾಗು ಸರಸ್ವತಿ ಮೂರು ನದಿಗಳು ಒಂದೆಡೆ ಸೇರುವ ಜಾಗವಾದ ತ್ರಿವೇಣಿಸಂಗಮವಿದ್ದ ಸ್ಥಳಕ್ಕೆ “ಪ್ರಯಾಗ್” ಎಂಬ ಹೆಸರಿತ್ತು.

ಆದರೆ ಅಕ್ಬರ್ ಈ ಹೆಸರನ್ನ ಬದಲಿಸಿ ‘ಅಲ್ಲಾಹಾಬಾದ್’ ಅಂತ ಮಾಡಿಬಿಟ್ಟಿದ್ದ. ಅಂದು ಆತ ಮಾಡಿದ್ದು ಇಂದಿಗೂ ದಾಸ್ಯತೆಯ ಪ್ರತೀಕವೆಂಬಂತೆ ಹಿಂದುಗಳು ಅದನ್ನ ಹಾಗೆಯೇ ಕರೆಯುತ್ತ ಬಂದಿದ್ದರು.

ಆದರೆ ಪ್ರಖರ ಹಿಂದುತ್ವವಾದಿ ಯೋಗಿಜೀ ಅದಕ್ಕೆ ಫುಲ್ ಸ್ಟಾಪ್ ಹಾಕಲು ಮುಂದಾಗಿದ್ದಾರೆ.

ಪ್ರಯಾಗ ಎಂಬ ತ್ರಿವೇಣಿ ಸಂಗಮದ ಉಲ್ಲೇಖ ವೇದಗಳು, ರಾಮಾಯಾಣ, ಮಹಾಭಾರತದಲ್ಲೂ ಸಿಗುತ್ತವೆ. ಅಂತಹ ಸ್ಥಳದ ಈಗಿನ ಹೆಸರಾಗಿದ್ದ ಅಲ್ಲಾಹಾಬಾದ್ ನ್ನ ಯೋಗಿಜೀ ಮತ್ತೆ ಪ್ರಯಾಗ್ ಅಂತ ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೇಗೆ ಅಂತೀರಾ?

ಪ್ರತಿ ವರ್ಷ ತ್ರಿವೇಣಿ ಸಂಗಮದ ಹತ್ತಿರ ದೊಡ್ಡ ಜಾತ್ರೆ ನಡೆಯುತ್ತೆ, ಜಗತ್ತಿನ ಅತಿದೊಡ್ಡ ಜಾತ್ರೆ ಎಂದು ಇದು ಹೆಸರುವಾಸಿಯಾಗಿದೆ, ಆದರೆ ವಿಷಯ ಅದಲ್ಲ, ಕಳೆದ ವರ್ಷದವರೆಗೆ ತ್ರಿವೇಣಿ ಸಂಗಮದ ಜಾತ್ರಯ ಬೋರ್ಡ್ ಗಳಲ್ಲಿ ಅಲ್ಲಾಹಾಬಾದ್ ಅಂತಲೇ ಪ್ರಿಂಟ್ಮಾಡಲಾಗುತ್ತಿತ್ತು ಆದರೆ ಈ ಬಾರಿ ಅಲ್ಲಾಹಾಬಾದ್ ಹೆಸರನ್ನ ಅಳಿಸಿ “ಪ್ರಯಾಗರಾಜ್” ಅಂತ ಕೇಂದ್ರ ಸರ್ಕಾರದ ಸೈನ್ ಬೋರ್ಡ್ ಗಳ ಮೇಲೆ ಬರೆಸಲಾಗಿದೆ.

ಯೋಗಿಜೀಯ ಆಡಳಿತದಲ್ಲಿ ಉತ್ತರಪ್ರದೇಶ ಹಿಂದೂಮಯವಾಗುತ್ತಿರುವುದು ಅಲ್ಲಿಮ ಜನತೆಗೆ ಸಂತಸ ತಂದಿದೆ. ಅವರಿಗಷ್ಟೇ ಯಾಕೆ ಹಿಂದೂ ಅಂತ ಹೇಳಿಕೊಳ್ಳುವ ಹಾಗು ಹಿಂದುತ್ವದ ಅಭಿಮಾನವಿರುವ ಎಲ್ಲ ಹಿಂದುಗಳಿಗೂ ಇದು ಹೆಮ್ಮೆಯ ವಿಷಯವೇ ಆಗಿದೆ

 •  
  4.6K
  Shares
 • 4.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com