Connect with us
Loading...
Loading...

ಪ್ರಚಲಿತ

ಕನ್ನಡಿಗರನ್ನ, ಕರ್ನಾಟಕದವರನ್ನ ಅವಮಾನಿಸುವವು ಯಾರೇ ಆದರೂ ಅವರೇ ನಿಜವಾದ ಹರಾಮಿಗಳು ಹೊರತು ಕನ್ನಡಿಗರಲ್ಲ!!!”

Published

on

 •  
 •  
 •  
 •  
 •  
 •  
 •  
 •  

ಮಹಾದಾಯಿ ಹೋರಾಟಕ್ಕೆ 900 ದಿನಗಳು ಪೂರೈಸಿವೆ,‌ ಹೋರಾಟದ ಕಿಚ್ಚು ಉತ್ತರ ಕರ್ನಾಟಕವನ್ನ ಹೊತ್ತಿ ಉರಿಸುತ್ತಿದೆ, ಅಂಥದ್ರಲ್ಲಿ ಗೋವಾ ರಾಜ್ಯದ ನೀರಾವರಿ ಸಚಿವನ ವಿವಾದಾತ್ಮಕ ಹೇಳಿಕೆ ಸುರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಗೋವಾ ನೀರಾವರಿ ಮಂತ್ರಿ ವಿನೋದ್ ಪಾಲೇಕರ್ ಹೊಲಸು ಭಾಷೆಗೆ ಕನ್ನಡಿಗರಿಂದ ತೀವ್ರ ಆಕ್ರೋಶವ್ಯಕ್ತವಾಗಿದೆ.

 

ಉತ್ತರಕರ್ನಾಟಕ ಸಮೇತ ಬೆಂಗಳೂರಿನಲ್ಲಿ ಕೂಡ ಪ್ರತಿಭಟನೆಗಳು, ಪಾಲೇಕರ್ ಪ್ರತಿಕೃತಿ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಅಷ್ಟಕ್ಕೂ ವಿನೋದ್ ಪಾಲೇಕರ್ ಹೇಳಿದ್ದಾದರೂ ಏನು?

“ಕರ್ನಾಟಕದವರು ಹರಾಮಿಗಳು, ಅವರು ಏನು ಬೇಕಾದರೂ ಮಾಡಬಹುದು. ಹೀಗಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಮಹದಾಯಿ ಕಾಮಗಾರಿ ಪರಿಶೀಲನೆಗಾಗಿ ಕರ್ನಾಟಕಕ್ಕೆ ಆಗಮಿಸಿದ್ದೇವೆ”

ಎಂದು ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ಉದ್ದಟತನದ ಹೇಳಿಕೆ ನೀಡಿದ್ದ.

ಈ ಉದ್ಧಟತನದ ಹೇಳಿಕೆಯನ್ನ ಸಿಎಂ ಸಿದ್ದರಾಮಯ್ಯ ಸಮೇತ ಎಲ್ಲ ಪಕ್ಷಗಳ ನಾಯಕರೂ ಖಂಡಿಸಿದ್ದಾರೆ.

ಹೌದು ನಾಡು ನುಡಿ ಜಲದ ಆತ್ಮಾಭಿಮಾನಕ್ಕೆ ಧಕ್ಕೆ ಬಂದರೆ ಪಕ್ಷ, ಪಂಥ ಬದಿಗೊತ್ತಿ ಹೋರಾಟ ಮಾಡಲೇಬೇಕು. ಪಾಲೇಕರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಆತ “ನಾನು ಆ ರೀತಿಯಲ್ಲಿ ಹೇಳಿಕೆಯನ್ನ ಕೊಟ್ಟಿರಲಿಲ್ಲ,‌ ಮಾಧ್ಯಮದವರು ನನ್ನ ಹೇಳಿಕೆಯನ್ನ ತಿರುಚಿ ಪ್ರಸಾರ ಮಾಡಿದ್ದಾರೆ” ಅಂತ as usual ರಾಜಕಾರಣಿಗಳ ಗೊಸುಂಬೆ ಸ್ಟೇಟಮೆಂಟ್ ನೀಡಿದ್ದಾನೆ.

ಅಷ್ಟಕ್ಕೂ ಯಾರು ಈ ವಿನೋದ್ ಪಾಲೇಕರ್?

ವಿನೋದ್ ಪಾಲೇಕರ್ ಗೋವಾದ ಪ್ರಾದೇಶಿಕ ಪಕ್ಷವಾದ “ಗೋವಾ ಫಾರ್ವರ್ಡ್ ಪಾರ್ಟಿ (GPP)” ಪಕ್ಷದ ಶಾಸಕ. ಗೋವಾದಲ್ಲಿ ಬಿಜೆಪಿಗೆ ಬಹುಮತವಿಲ್ಲದಿರುವ ಕಾರಣ ಮನೋಹರ್ ಪರಿಕ್ಕರ್ ರವರನ್ನ ಬೆಂಬಲಿಸಿದ್ದ ಕಾರಣ ಈ ಗೋವಾ ಫಾರ್ವರ್ಡ್ ಪಾರ್ಟಿಯ ಶಾಸಕನಿಗೆ ಗೋವಾ ನೀರಾವರಿ ಸಚಿವ ಖಾತೆ ಒಲಿದು ಬಂದಿತ್ತು.

ಈಗ ಈತನ ಉದ್ಧಟತನದ ಹೇಳಿಕೆ ರಾಜ್ಯವ್ಯಾಪಿ ಆಕ್ರೋಶಕ್ಕೆ ಕಾರಣವಾಗಿ ಕನ್ನಡಿಗರ ಒಗ್ಗಟ್ಟಿಗೆ ಆತ ತಲೆ ಬಾಗಿದ್ದಾನೆ. ನಮ್ಮ ರಾಜ್ಯದ ರಾಜಕೀಯ ಪಕ್ಷದ ನೇತಾರರು ಪಾಲೇಕರ್ ನಮ್ಮ ಮಹಾದಾಯಿ ವಿಚಾರದಲ್ಲಿ ಕೆಟ್ಟದ್ದಾಗಿ ಮಾತಾಡಿದ್ದಕ್ಕೆ ಆತನನ್ನ ಮನೋಹರ್ ಪಾರಿಕ್ಕರ್ ತಮ್ಮ ಸಚಿವ ಸಂಪುಟದಿಂದ ಕೈ ಬಿಡಬೇಕು ಅಂತೆಲ್ಲಾ ಹೇಳುತ್ತಿದ್ದಾರೆ.

ಹೌದು ಆತನನ್ನ ಸಂಪುಟದಿಂದ ತಕ್ಷಣ ಕೈ ಬಿಡಬೇಕು.

ಪಾಲೇಕರ್ ನ್ನ ಇಂದು ವಿರೋಧಿಸುತ್ತಿರುವವರಿಗೆ ಪಾಲೇಕರ್ ನೀಡಿದ ಹೇಳಿಕೆಯ ಹಾಗೆಯೇ ಹೇಳಿಕೆ ಕೊಟ್ಟ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಮರೆತು ಹೋಗಿದೆ ಅನಿಸುತ್ತೆ.

ಕನ್ನಡಿಗರಿಗೆ ಅದ್ಯಾವ ಪಕ್ಷದಿಂದಲೇ ಅವಮಾನವಾಗಲಿ ಅದು ಅವಮಾನವೇ ಸರಿ, ಬಿಜೆಪಿ ಅವಮಾನ ಮಾಡಿದರೆ ಸರಿ ಕಾಂಗ್ರೆಸ್ ಮಾಡಿದರೆ ತಪ್ಪು ಅಂತೇನೂ ಇಲ್ವಲ್ಲಾ.

ಹೌದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದರೆ ಅದ್ಯಾರೇ ಆಗಿದ್ದರೂ ಈಗ ವಿನೋದ್ ಪಾಲೇಕರ್ ನಿಂದ ಹೇಗೆ ಕ್ಷಮೆ ಯಾಚಿಸುವಂತೆ ಮಾಡಿದೆವೋ ಹಾಗೇ ಮಾಡಬೇಕು.

ಆದರೆ ಇದು 2007 ರಲ್ಲಿ ಕರ್ನಾಟಕ ವಿರೋಧಿ ಭಾಷಣ ಮಾಡಿ ಕನ್ನಡಿಗರಿಗೆ ಅವಮಾನ ಮಾಡಿದ್ದ ವ್ಯಕ್ತಿಗೆ ಅನ್ವಯಿಸುವುದಿಲ್ಲವಾ?

ಹೌದು 2007 ರಲ್ಲಿ ಕಾಂಗ್ರೆಸ್ಸಿನ ಹೈಕಮಾಂಡ್ ಆಗಿರುವ ಸೋನಿಯಾ ಗಾಂಧಿ ಕರ್ನಾಟಕ ವಿರೋಧಿ ಹೇಳಿಕೆಯೊಂದನ್ನ ನೀಡಿದ್ದಳು, ಅದೇನು ಗೊತ್ತಾ?

2007 ರಲ್ಲಿ ಗೋವಾದಲ್ಲಿ ವಿಧಾನಸಭೆ ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತ ಕಾಂಗ್ರೆಸ್‍ನ ಅಧಿನಾಯಕಿ ಸೋನಿಯಾ ಗಾಂಧಿ “ಯಾವುದೇ ಕಾರಣಕ್ಕೂ ಮಹಾದಾಯಿ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ, ಈ ಮಾತಿಗೆ ನಾನು ಬದ್ಧಳಾಗಿದ್ದೇನೆ” ಎಂದು ಸಾರ್ವಜನಿಕವಾಗಿ ಶಪಥ ಮಾಡಿದ್ದಳು.

ಬಹುಶಃ ನಮ್ಮ ನಾಡಿನ ಜನತೆ ಇದನ್ನ ಮರೆತಿಲ್ಲ ಆದರೆ “ಇಂದು ನಾವು ಮಹಾದಾಯಿಯ ಹೋರಾಟದ ಪರ ಇದ್ದೇವೆ, ಮೋದಿ ಸರ್ಕಾರವೇ ಏನೂ ಕ್ರಮ ತಗೋತಿಲ್ಲ” ಅಂತ ಬೊಬ್ಬೆಯಿಡುತ್ತಿರೋ ರಾಜ್ಯ ಕಾಂಗ್ರೆಸ್ಸಿನವರಿಗೆ ಮರೆತೆ ಹೋಗಿದೆಯೋ ಅಥವ ಆ ವಿಷ್ಯ ಕೆದಕಿದರೆ ನಮ್ಮ ಬುಡಕ್ಕೇ ಬೆಂಕಿ ಬಿದ್ದೀತು ಅಂತ ತೆಪ್ಪಗೆ ಕೂತಿದ್ದಾರೋ ಅರ್ಥವಾಗುತ್ತಿಲ್ಲ.

ಹರಾಮಿ ಅಂತ ಕನ್ನಡಿಗರಿಗೆ ಬೈಯುವವರೇ ನಿಜವಾದ ಹರಾಮಿಗಳು, ಅದರ ಜೊತೆಗೆ ಜೊತೆ ಇಂತಹ ಸುಭೀಕ್ಷ, ಸಾಮರಸ್ಯ, ಅನ್ಯೋನ್ಯತೆಯಿಂದ ಅನ್ಯಭಾಷಿಗರನ್ನ ನೋಡಿಕೊಳ್ಳುತ್ತಿರುವ ಕನ್ನಡಿಗರಿಗೆ ಕನ್ನಡ ನಾಡಿಗೆ ಒಂದು ಹನಿ ನೀರು ಬಿಡೋಕೆ ಬಿಡೋಲ್ಲ ಅಂತ ಹೇಳಿದವರು ದಿ ಗ್ರೇಟ್ ಆಗಿ ಕಾಣಿತ್ತಾರೋ ಹೇಗೋ?!!

ಇಲ್ಲಿ ಆ ಪಕ್ಷ ಈ ಪಕ್ಷ ಅಂತ ಬಡಿದಾಡುವುದಕ್ಕಿಂತ ಕನ್ನಡ ವಿರೋಧಿ ಧೋರಣೆ ಇರೋ ಯಾವನೇ ಆದರೂ ಆತನನ್ನ ಪಕ್ಷಭೇದವಿಲ್ಲದೇ ಖಂಡಿಸಬೇಕು ಹೊರತು ಆತ ನಮ್ಮ ಪಕ್ಷದವನು ಈತ ನಮ್ಮ ಪಕ್ಷದ ಅಧಿನಾಯಕನೋ ಅಂತ ಹೊರಟರೇ ಜನ ಮಾತ್ರ ಸಿಡಿದೇಳದೇ ಇರಲ್ಲ.

ಪಾಲೇಕರ್ ಎಂಬ ಹುಂಬ ಕನ್ನಡಿಗರ ವಿರೋಧಕ್ಕೆ ತಲೆಬಾಗಿ ಕ್ಷಮೆಯಾಚಿಸಿದ್ದಾನೆ.

ಆದರೆ ಇದರಿಂದ ಮಹಾದಾಯಿ ಸಮಸ್ಯೆ ಇತ್ಯರ್ಥ ಆದಹಾಗೆ ಅಲ್ಲವಲ್ಲ, ರಾಜ್ಯದಿಂದ 15 ಕ್ಕೂ ಹೆಚ್ಚು ಭಾಜಪಾ ಲೋಕಸಭಾ ಸದಸ್ಯರನ್ನ ಆಯ್ಕೆ ಮಾಡಿ ಕಳಿಸಿದ್ದೀವಲ್ಲ ಅವರೇನು ಮಾಡ್ತಿದಾರೆ ದೆಹಲೀಲಿ?

ಬಿಜೆಪಿ ಸಂಸದರು, ಶಾಸಕರು ಮೋದಿಜೀಗೆ ಈ ವಿಷಯದ ಗಂಭೀರತೆಯ ಬಗ್ಗೆ ತಿಳಿಸುವ ಅಗತ್ಯತೆಯಿದೆ ಹಾಗು ಸಿದ್ದರಾಮಯ್ಯನವರು ಸದಾ ನಿದ್ದೆಯಲ್ಲೇ ಬ್ಯುಸಿಯಾಗಿರದೆ ವಿಪಕ್ಷಗಳನ್ನ ಮೋದಿಜೀಯನ್ನ ಪ್ರತಿಯೊಂದು ವಿಷಯದಲ್ಲೂ ಎಳೆದು ತಂದು ಎಝಕೀಯ ಮಾಡೋದನ್ನ ಬಿಟ್ಟು ಸರ್ವಪಕ್ಷಗಳ ನಿಯೋಗವನ್ನ ಪ್ರಧಾನಿಯ ಬಳಿ ಕರೆದೊಯ್ದು ಮಹಾದಾಯಿ ಸಮಸ್ಯೆಯ ಪರಿಹಾರಕ್ಕಾಗಿ ಮಾತುಕತೆ ನಡೆಸಬೇಕು.

ಅಷ್ಟೇ ಅಲ್ಲ ಗೋವಾದ ಬಿಜೆಪಿ ಯನ್ನ ದೂಷಿಸುವ ಮೊದಲು ತಮ್ಮ ಪಕ್ಷ ಅಂದರೆ ಗೋವಾದ ಕಾಂಗ್ರೆಸ್ ಶಾಸಕರು ಒಂದು ಹನಿ ನೀರನ್ನ ಕರ್ನಾಟಕಕ್ಕೆ ಬಿಡಲ್ಲ ಅಂತ ಹೇಳಿದವರನ್ನೂ ಉಗಿದು ಉಪ್ಪಿನಕಾಯಿ ಹಾಕುವ ಕೆಲಸ ಮಾಡಬೇಕಿದೆ.

ಇಲ್ಲಿ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆಯಾಗೋಕೆ ಸಾಧ್ಯ ಹೊರತು ಈ ಸಮಸ್ಯೆ ಬಗೆಹರಿಯಲ್ಲ.

ರಾಜಕೀಯ ಇಚ್ಛಾಶಕ್ತಿ ಎರಡೂ ಪಕ್ಷಗಳಲ್ಲಿ ಬರಲಿ, ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿ.

– ಪ್ರತಿಮಾ

 •  
 •  
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com