Connect with us
Loading...
Loading...

ಪ್ರಚಲಿತ

ಕೊನೆಗೂ ಸೋಶಿಯಲ್ ಮೀಡಿಯಾದ ಹಿಂದವಿ ಕಾರ್ಯಕರ್ತರಿಗೆ ಬೆದರಿದ ಸಿದ್ದರಾಮಯ್ಯ?! ಮತ್ತೆ ತನ್ನ ನಿರ್ಧಾರ ಬದಲಿಸಿದ ಸಿದ್ದರಾಮಯ್ಯ ಸರ್ಕಾರ!!! ಏನೀ ಸ್ಟೋರಿ?

Published

on

 • 1
 •  
 •  
 •  
 •  
 •  
 •  
 •  
  1
  Share

ಸಿದ್ದರಾಮಯ್ಯನವರ ಸರ್ಕಾರ ಮಾಡುವ ಯಡವಟ್ಟುಗಳು ಒಂದಾ ಎರಡಾ? ಅವುಗಳಿಗೆ ಯಡವಟ್ಟನ್ನಬೇಕೋ ಅಥವ ಅತಿಯಾದ ಮುಸ್ಲಿಂ ತುಷ್ಟೀಕರಣ ಅನ್ನಬೇಕೋ ಅದನ್ನ ರಾಜ್ಯದ ಜನರೇ ತೀರ್ಮಾನಿಸಬೇಕು.

ಅದಕ್ಕೆ ಕಾರಣವೂ ಇದೆ, ಮೊನ್ನೆ ಮೊನ್ನೆಯಷ್ಟೇ ಸಿದ್ದರಾಮಯ್ಯನವರ ಸರ್ಕಾರದ ವತಿಯಿಂದ ಅಂಥದ್ದೊಂದು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದನ್ನ ಟ್ರೇಸ್ ಮಾಡಿದ ಸೋಶಿಯಲ್ ಮೀಡಿಯಾ ಹಿಂದೂ ಟೆಕ್ ವಾರಿಯರ್ಸ್‌ ಗಳು ಸಿದ್ದರಾಮಯ್ಯನವರ ಸರ್ಕಾರದ ಅಲ್ಪಸಂಖ್ಯಾತ ತುಷ್ಟೀಕರಣದ ನೀತಿಯನ್ನ ದೇಶದಾದ್ಯಂತ ಬೆಂಕಿಯ ಹಾಗೆ ಹರಡಿಸಿಬಿಟ್ಟರು.

ಅದೇನು ವಿಷ್ಯ ಅಂತೀರಾ? ಹಾಗಿದ್ದರೆ ಈ ಸ್ಟೋರಿ ನೋಡಿ!!

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊನ್ನೆ ಮೊನ್ನೆಯಷ್ಟೇ 2013 ರಿಂದ 2017 ರ ಅವಧಿಯಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ, ಅಲ್ಪಸಂಖ್ಯಾತ ಸಮುದಾಯದ “ಮುಗ್ಧ”ರ ವಿರುದ್ಧ ದಾಖಲಾದ ಕೇಸ್ ಗಳನ್ನು ವಾಪಸ್ ಪಡೆಯಲು ಸರ್ಕಾರ ಮುಂದಾಗಿತ್ತು.

ಕೋಮು ಗಲಭೆಯಲ್ಲಿ ಬಾಗವಹಿಸಿರುವರ ಮುಸ್ಲಿಮರ ಮೇಲೆ ಮಾತ್ರ ಮೊಕ್ಕದ್ದಮೆಯನ್ನ ತೆಗೆದುಹಾಕಿ ಬಿಡಿ ಎನ್ನುವ ಪತ್ರವನ್ನ ಮೊಟ್ಟಮೊದಲು ಸೋಶಿಯಲ್ ಮೀಡಿಯಾಗಳಲ್ಲಿ ದೇಶಭಕ್ತ ಯುವಕರೇ ವಿರೋಧಿಸಿ ವೈರಲ್ ಮಾಡಿದ್ದರು.

ಇದರ ನಂತರ ಇದನ್ನ ಗಮನಿಸಿದ ಮಾಧ್ಯಮಗಳು ಇದನ್ನಿಟ್ಟುಕೊಂಡು ಸಿದ್ದರಾಮಯ್ಯನವರ ಸರ್ಕಾರಕ್ಕೆ ತಮ್ಮ ಸುದ್ದಿ ವಿಶ್ಲೇಷಣೆಯ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದರು.

ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಕನ್ನಡ ಮಾಧ್ಯಮಗಳಷ್ಟೇ ಅಲ್ಲದೆ ರಾಷ್ಟ್ರೀಯ ಸುದ್ದಿವಾಹಿನಿಗಳೂ ಬಿತ್ತರಿಸಿದವು. ಸಿದ್ದರಾಮಯ್ಯನವರು ಮುಂಬರುವ ಚುನಾವಣೆಯ ದೃಷ್ಟಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅಂತೆಲ್ಲಾ ಸುದ್ದಿ ಬಿತ್ತರಿಸಿದ್ದೇ ತಡ ಸರ್ಕಾರ ಬೆವೆತು ಹೋಯಿತು.

ಸಿದ್ದರಾಮಯ್ಯನವರ ಈ ನಿರ್ಧಾರವನ್ನ ನೋಡಿದ ಮೇಲೆ ಮೇಲಿನ ಸಿದ್ದರಾಮಯ್ಯನವರು ಒಂದು ಸಮುದಾಯವನ್ನು ಓಲೈಕೆ ಮಾಡಲು ಮಾಡುತ್ತಿರುವ ಕೆಲಸ ಮತ್ತು 4 ವರ್ಷದ ಆಡಳಿತ ವೈಖರಿ ಕರ್ನಾಟಕ ಭಾರತದಲ್ಲಿ ಇದ್ಯಾ ಅಥವ ಪಾಕಿಸ್ತಾನ ಅರಬ್ಬ ದೇಶದಲ್ಲಿ ಇದ್ಯಾ ಎಂಬಿತ್ಯಾದಿ ವಿಷಯಗಳನ್ನ ಜನ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ರು.

ಇದರ ಜೊತೆ ಜೊತೆಗೆ ಅವರು ಕೇಳಿದ ಪ್ರಶ್ನೆಗಳು ಹೀಗಿವೆ

* ಈಗಿನ ಮುಗ್ದ ಅಲ್ಪಸಂಖ್ಯಾತ ರು ಮಾತ್ರ ?? ಕೋಮು ಗಲಭೆಯಲ್ಲಿ ಬಾಗವಹಿಸಿರುವರ ಮುಸ್ಲಿಮರ ಮೇಲೆ ಮಾತ್ರ ಮೊಕ್ಕದ್ದಮೆ ಬಿಡಿ ಎನ್ನುವ ಪತ್ರ ಬರೆದಿರುವ ಹಿಂದಿನ ಉದ್ದೇಶವೇನು?

* ಹಿಂದೆ ಇದು ಜಿಹಾದಿ ಪರ ಇದ್ದ ಸರ್ಕಾರ ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ಈಗ ಸಿದ್ದರಾಮಯ್ಯ ಸರ್ಕಾರ ಒಪ್ಪಿಕೊಂಡ ಹಾಗೆ. ಇದರ ಅರ್ಥ ಏನು ಸಿದ್ದರಾಮಯ್ಯನವರೇ ??

* ಯಾವುದೇ ಜಿಹಾದಿ ಮುಸ್ಲಿಮರು ಕೋಮು ಗಲಭೆಯಲ್ಲಿ ಭಾಗವಹಿಸಿ ಹಿಂದುಗಳಿಗೆ ಹಾನಿ ಮಾಡಿದ್ರು , ಈ ಜಿಹಾದಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನಾ ದೊಂಬಿ ಮಾಡಲು? ಇದನ್ನು ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು

* ನಿಮ್ಮ ಪೊಲೀಸರು ಮುಗ್ದರು ಅಮಾಯಕರನ್ನೇ ಬಂಧಿಸಿ ಪ್ರಕರಣ ದಾಖಲು ಮಾಡಿಕೊಳ್ಳುತ್ತಾರಾ?

* ನ್ಯಾಯಾಲಯಗಳು ಇರೋದು ಯಾತಕ್ಕೆ ?

* ನಿಮ್ಮ ಪ್ರಕಾರ ಹಿಂದೂಗಳೇ ಕೋಮು ಗಲಭೆ ಮಾಡೋದಾ?? ಮುಸ್ಲಿಮರಷ್ಟೇ ಅಮಾಯಕರಾ?

* PFI / SDPI ಸಂಘಟನೆ ನಿಷೇಧ ಮಾಡಬೇಕು ಎಂದು ಸಚಿವ ಗುಂಡು ರಾವ್ ಹೇಳಿದ್ದು ಸುಳ್ಳಾ?

* ನ್ಯಾಯಾಲಯದಲ್ಲಿ ಪ್ರಕರಣಗಳು ಇತ್ಯರ್ಥ ಅಗೊಕ್ಕೇ ಬಿಡದೇ ನೀವೇ ನಿರ್ಧಾರ ಮಾಡೋದು ಕಾನೂನು ಪ್ರಕಾರ ಎಷ್ಟು ಸರಿ?

* ರಾಜ್ಯದಲ್ಲಿ ನೆಡೆದ ಹಿಂದೂ ಸಂಘಟನೆ ಕಾರ್ಯಕರ್ತರ ಕಗ್ಗೊಲೆಗಳೆಲ್ಲಾ ಆತ್ಮಹತ್ಯೆಗಳಾ??

* ಹಿಂದುಗಳಿಗೆ ರಕ್ಷಣೆಯೇ ಇಲ್ಲವಾ??

* ಈ ರೀತಿ ಕೋಮುಗಲಭೆಯ ಒಂದು ಸಮುದಾಯದ ಆರೋಪಿಗಳ ಪ್ರಕರಣ ಕೈ ಬಿಡೋದ್ರಿಂದ ಜಿಹಾದಿ ಮುಸ್ಲಿಮ್ ಕಿಡಿಗೇಡಿಗಳಿಗೆ ಇದು ವರದಾನ ಅಗೋಲ್ವೆ?

* ನಿಮಗೆ ನಿಮ್ಮ ಪೊಲೀಸ್ ಇಲಾಖೆ ಕಾರ್ಯ ವೈಖರಿ ಮೇಲೆ ನಂಬಿಕೆ ಇಲ್ವೆ???

* ಈ ರೀತಿ ಪ್ರಕರಣ ಕೈಬಿಡೋದ್ರಿಂದ, ಹಿಂದುಗಳ ಮೇಲೆ ದೊಂಬಿ, ಗಲಭೆ ಮಾಡೋಕ್ಕೆ ಪ್ರೋತ್ಸಾಹ ಅಗೋಲ್ವೆ???

* ತಮಗೆ ಹಿಂದುಗಳ ವೋಟ್ ಬೇಡವಾ??

* ಕಾನೂನಿನ ಪ್ರಕಾರ ಎಲ್ಲರೂ ಒಂದೇ ಅಲ್ಲವೇ? ಆರೋಪಿ ಮುಗ್ದರು ಎಂದು ನೀವೇ ಹೇಗೆ ನಿರ್ಧಾರ ಮಾಡುತ್ತೀರಾ

* ಸ್ವಾಮಿ ಸಾರ್ವಜನಿಕರ ಮನಸ್ಸಲ್ಲಿ ತಮ್ಮ ಈ 4 ವರ್ಷದ ಆಡಳಿತದಲ್ಲಿ ಹಿಂದುಗಳು ಕಷ್ಟ ಪಟ್ಟು ದುಡಿದು ಪ್ರಾಮಾಣಿಕ ತೆರಿಗೆ ಹಣ ಕಟ್ಟಿ, ಆ ಹಣ ಒಂದೇ ಸಮುದಾಯದ ಭಾಗ್ಯಕ್ಕೆ ನಿಮ್ಮ ಸರ್ಕಾರ ಎನ್ನುವ ಭಾವನೆ ಇದೆ. ತಮ್ಮ ಸರ್ಕಾರದ ಈ ನಿರ್ಧಾರ ದಿಂದ ಹಿಂದೂಗಳಲ್ಲಿ ಈಗ ಅಸುರಕ್ಷತೆ ಭಾವನೆ ಮನೆ ಮೂಡಿದೆ.

* ಇದು ನಾವೇ ಚುನಾಯಿಸಿದ ಸರ್ಕಾರನಾ? ಕರ್ನಾಟಕ ಪಾಕಿಸ್ತಾನದಲ್ಲಿ ಇದ್ಯಾ ಎನ್ನುವ ಶಂಕೆ ಮೂಡಿದೆ.

* ನಿಮ್ಮ ಈ ನೆಡೆಗಳಿಂದ ಹಿಂದುಗಳು ಕಾಂಗ್ರೆಸ್ಸ್ ನಿಂದ ವಿಮುಖರಾಗೋದ್ರಲ್ಲಿ ಯಾವುದೇ ಸಂದೇಹ ಇಲ್ಲ.

ಎಂಬ ಪ್ರಶ್ನೆಗಳನ್ನ ಸೋಶಿಯಲ್ ಮೀಡಿಯಾಗಳಲ್ಲಿ ಜನ ಸಿದ್ದರಾಮಯ್ಯನವರ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ.

ಇದರಿಂದ ಹಾಗು ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಬಿತ್ತರವಾದ ಸುದ್ದಿಗಳಿಂದ ಬೆಚ್ಚಿದ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದಾಖಲಾದ ಪ್ರಕರಣಗಳನ್ನು ಕೈ ಬಿಡುವ ನಿರ್ಧಾರವನ್ನು ಸರ್ಕಾರ ಬದಲಿಸಿದ್ದು, ಎಲ್ಲಾ ಸಮುದಾಯದ ಮುಗ್ಧರ ಕೇಸ್ ಗಳನ್ನು ವಾಪಸ್ ಪಡೆಯಲು ಮುಂದಾಗಿದೆ.

ಈಗ ತನ್ನ ನಿರ್ಧಾರವನ್ನು ಬದಲಿಸಿದ ರಾಜ್ಯ ಸರ್ಕಾರ, ಎಲ್ಲಾ ಸಮುದಾಯದ ಮುಗ್ಧರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆಯಲಾಗುವುದು ಎಂದು ಹೇಳಿದೆ.

ಕೋಮು ಗಲಭೆ ಮಾತ್ರವಲ್ಲ, ಎಲ್ಲಾ ಹೋರಾಟ, ವಿದ್ಯಾರ್ಥಿ ಚಳವಳಿ, ರೈತ ಹೋರಾಟ, ಕನ್ನಡ ಸಂಘಟನೆಗಳ ಹೋರಾಟಗಾರರ ಮೇಲಿನ ಕೇಸ್ ಗಳನ್ನು ಪರಿಶೀಲಿಸಿ ವಾಪಸ್ ಪಡೆಯಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕಣ್ತಪ್ಪಿನಿಂದಾಗಿ ಪದ ಸೇರ್ಪಡೆಯಾಗಿದೆ. ಎಲ್ಲಾ ಮುಗ್ದರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತಂತೆ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್. ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆಯುವುದಿಲ್ಲ. ಕಾನೂನು ರೀತಿ ಪರಿಶೀಲಿಸಿ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇದೇ ಅಲ್ವೇ ಸೋಶಿಯಲ್ ಮೀಡಿಯಾದಲ್ಲಿನ ರಾಷ್ಟ್ರಭಕ್ತ ಯುವಕರ ಪವರ್?

 •  
  1
  Share
 • 1
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com