Connect with us
Loading...
Loading...

ಪ್ರಚಲಿತ

ಗಣರಾಜ್ಯೋತ್ಸವಕ್ಕೆ ಕೇರಳದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಮೋಹನ್ ಭಾಗವತ್!!!

Published

on

 • 29
 •  
 •  
 •  
 •  
 •  
 •  
 •  
  29
  Shares

ಕೇರಳದಲ್ಲಿ ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಯಲ್ಲಿ ಧ್ವಜಾರೋಹಣ ಮಾಡಿದ್ದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಈ ಬಾರಿ ಗಣರಾಜ್ಯೋತ್ಸವಕ್ಕೂ ಕೇರಳದಲ್ಲಿರಲಿದ್ದಾರೆ.

ಕೇರಳ ರಾಜ್ಯದಲ್ಲಿ ಗಣರಾಜ್ಯೋತ್ಸವದಂದು ಪಾಲಕ್ಕಾಡ್ ಜಿಲ್ಲೆಯ ಹೊರವಲಯದಲ್ಲಿರುವ ಶಾಲೆಯೊಂದರಲ್ಲಿ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಧ್ವಜಾರೋಹಣ ಮಾಡಲಿದ್ದಾರೆ ಎಂದು ಸಂಘದ ಹಿರಿಯ ಸ್ವಯಂಸೇವಕರೊಬ್ಬರು ತಿಳಿಸಿದ್ದಾರೆ.

ಜನೇವರಿ 26 ರಂದು ಕೇರಳಕ್ಕೆ ಮೋಹನ್ ಭಾಗವತ್ ತೆರಳಲಿದ್ದು ಮೂರು ದಿನಗಳ ಕಾಲ ಅವರು ಕೇರಳದಲ್ಲೇ ತಂಗಲಿದ್ದಾರೆ.

“ಸರಸಂಘಚಾಲಕರು ಕೇರಳದ ಯಾವ ಭಾಗಕ್ಕೆ ಹೋದರೂ ಆ ದಿನಗಳನ್ನ ಇಲ್ಲಿನ ಜನ ಸ್ವಾತಂತ್ರ್ಯ ದಿನ, ರಿಪಬ್ಲಿಕ್ ದಿನ” ಅಂತಲೇ ಆಚರಿಸುತ್ತಾರೆ ಅಂತ ಹಿರಿಯ ಸ್ವಯಂಸೇವರೊಬ್ಬರು ತಿಳಿಸಿದ್ದಾರೆ.

“ಕಳೆದ ವರ್ಷ ಮೋಹನ್ ಭಾಗವತ್ ರವರು ಧ್ವಜಾರೋಹಣ ಮಾಡಿದ್ದನ್ನ ಕೆಲವರು ವಿರೋಧಿಸಿದ್ದರು, ಭಾರತ ದೇಶದ ಯಾವ ಭಾಗದಲ್ಲಿ ಬೇಕಾದರೂ ಭಾರತೀಯನೊಬ್ಬ ಧ್ವಜಾರೋಹಣ ಮಾಡುವ ಹಕ್ಕು ಆತನಿಗಿದೆ, ಆದರೆ ಈ ವಿಷಯವನ್ನಿಟ್ಟುಕೊಂಡು ವಿರೋಧ ಯಾಕೆ ಮಾಡಬೇಕು?
ಇದು ಭಾರತೀಯ ಪ್ರಜೆಯ ಮೂಲಭೂತ ಹಕ್ಕನ್ನ ಕಸಿದುಕೊಂಡಂತೆ ಅಲ್ಲವೇ?” ಎಂಬುದು ಕೇರಳದಲ್ಲಿನ ಸಾಮಾನ್ಯ ಜನರ ಅಭಿಪ್ರಾಯ ಹಾಗು ಸಂಘದ ಕಾರ್ಯಕರ್ತರ ಅಭಿಪ್ರಾಯವೂ ಆಗಿದೆ.

ಕಳೆದ ಆಗಷ್ಟ್ 15 ರಂದು ಜಿಲ್ಲಾ ಆಡಳಿತ ಹೊರಡಿಸಿದ್ದ ಆದೇಶವನ್ನ ಧಿಕ್ಕರಿಸಿ ಮೋಹನ್ ಭಾಗವತ್ ರವರಿಂದ ಧ್ವಜಾರೋಹಣ ಮಾಡಿಸಿದ್ದಾರೆ ಅಂತ ಅಲ್ಲಿನ ರಾಜಕೀಯ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆರೋಪ ಮಾಡಿತ್ತು.

ಈಗ ಮತ್ತೆ ಸರಸಂಘಚಾಲಕರು ಕೇರಳಕ್ಕೆ ತೆರಳಲಿದ್ದು ಈ ಬಾರಿ ಮತ್ತೆ ಅದೇನು ವಿವಾದವನ್ನ ಅಲ್ಲಿನ ಸರ್ಕಾರ ಸೃಷ್ಟಿಸುತ್ತೋ ಕಾದು ನೋಡಬೇಕಿದೆ.

 •  
  29
  Shares
 • 29
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com