Connect with us
Loading...
Loading...

ಪ್ರಚಲಿತ

ಗಣರಾಜ್ಯೋತ್ಸವದಂದೆ ಮುಹೂರ್ತ ಫಿಕ್ಸ್ ಆಯಿತು!! ಮತ್ತೆ ಚೀನಾವನ್ನು ಖೆಡ್ಡಾಗೆ ಬೀಳಿಸಲು ಮೋದಿ ರಣತಂತ್ರ!!!

Published

on

 • 2.7K
 •  
 •  
 •  
 •  
 •  
 •  
 •  
  2.7K
  Shares

ಮೋದಿಯಿಂದ ತಯಾರಾಯ್ತು ಮತ್ತೊಂದು ಅಸ್ತ್ರ. ಈ ಬಾರಿಯ ಗಣತಂತ್ರಕ್ಕೆ ತಂತ್ರ ರೂಪಿಸಿರುವ ಮೋದಿ.

ಮೋದಿಯವರು ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಮಕಾಡೆ ಮಲಗಿಸಿದ್ದಾಯ್ತು. ಚೀನಾಗೂ ಆಗಾಗ ಬಿಸಿ ಮುಟ್ಟಿಸುತ್ತಿದ್ದಾರೆ. ಡೋಕ್ಲಾಮ್ ವಿವಾದವನ್ನು ತಮ್ಮ ರಾಜತಾಂತ್ರಿಕ ನಡೆಯಿಂದ ಗೆದ್ದು ಇಡೀ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದ್ದರು.

ಪಾಪಿ ಪಾಕಿಸ್ತಾನವಂತು ಮೋದಿಯವರಿಂದ ಪತರುಗುಟ್ಟಿದ್ದು ನಿಜ. ಪಾಕಿಸ್ತಾನ ಭಾರತದಿಂದ ಪತರುಗುಟ್ಟಿದ್ದಲ್ಲದೆ ಅಮೆರಿಕಾದಿಂದಲೂ ಒದೆ ತಿಂದು ಬೆಂದು ಬಸವಳಿದಿದೆ.

ಈಗ ಮೋದಿಯವರು ಚೀನಾಕ್ಕೆ ಮಕಾಡೆ ಮಲಗಿಸಲು ಮತ್ತೊಂದು ರಣತಂತ್ರವನ್ನು ಹೆಣೆದಿದ್ದಾರೆ.

ಅದೇನು ಗೊತ್ತಾ?

ಚೀನಾದ ವಿರೋಧಿ ದೇಶಗಳು ಯಾವ್ದ್ಯಾವುದು ಇದೆಯೋ ಅವುಗಳ ಅತಿಥಿಗಳನ್ನು ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯರನ್ನಾಗಿ ಕರೆದಿದ್ದಾರೆ. ಒಟ್ಟು ಚೀನಾದ ವಿರೋಧಿ ರಾಷ್ಟ್ರಗಳಾದ 10 ದೇಶದ ಅತಿಥಿಗಳು ಈ ಬಾರಿಯ ಗಣರಾಜ್ಯೋತ್ಸವಕ್ಕೆ ಆಗಮಿಸಿದ್ದಾರೆ.

ಡೋಕ್ಲಮ್ ವಿವಾದದಿಂದಲೇ ಚೀನಾದ ಪ್ಯಾಂಟ್ ಒದ್ದೆಯಾಗಿತ್ತು. ಈಗ ಈ ಸುದ್ದಿಯನ್ನು ಕೇಳಿದರೆ ಬೆಚ್ಚಿಬೀಳೋದಂತು ಸಹಜ.

ಇನ್ನೊಂದು ವಿಷಯವನ್ನು ಇಲ್ಲಿ ಹೇಳಲೇಬೇಕು. ಇದು ಐತಿಹಾಸಿಕವಾಗಲಿದೆ. ಯಾಕೆ ಗೊತ್ತಾ? ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇಲ್ಲಿಯವರೆಗೆ 10 ದೇಶದ 10 ಜನ ಅತಿಥಿಗಳು ಬಂದಿರಲಿಲ್ಲ. ಹೀಗಾಗಿ ಇದು ಐತಿಹಾಸಿಕವೇ ಸರಿ. ಈ 10 ದೇಶಗಳು ಚೀನಾದ ಮೇಲೆ ದ್ವೇಷವಿರುವ ದೇಶಗಳು.

ಮೋದಿಯವರ ಈ ರಣತಂತ್ರದಿಂದ ಚೀನಾಕ್ಕೆ ಎಚ್ಚರಿಕೆ ಕೊಟ್ಟಂತೆ ಆಗೋದಂತು ಖಚಿತ. ಈಗ ಭಾರತ ಬಲಿಷ್ಠವಾಗಿದೆ. ಭಾರತದ ಚುಕ್ಕಾಣಿಯನ್ನು ಬಲಿಷ್ಠ ನಾಯಕ ಹಿಡಿದಿದ್ದಾನೆಂಬುದು ಖಾತ್ರಿಯಾಗಿದೆ.

ಮೋದಿಯವರು ಅಧಿಕಾರಕ್ಕೆ ಬಂದಾಗಲೇ ಚೀನಾಗೂ ಮತ್ತು ಪಾಕಿಸ್ತಾನಕ್ಕೂ ಹೆದರಿಕೆ ಉಂಟಾಗಿತ್ತು. ಅದರ ಮೇಲೆ ಮೋದಿಯವರು ಭಾರತದ ತಾಕತ್ತನ್ನು ಪ್ರದರ್ಶನ ಮಾಡಿದ ಮೇಲಂತೂ ಪಾಕಿಸ್ತಾನ ಮಕಾಡೆ ಮಲಗಿದೆ, ಚೀನಾ ಒಳಗಿಂದೊಳಗೆ ಬೆವೆತು ಹೋಗಿದೆ.

ರಾಜಕೀಯ ಅದೇನೆ ಇರಲಿ, ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಭಾರತ ಬಲಿಷ್ಠವಾಗಿದೆ ಅನ್ನೋದನ್ನ ವಿರೋಧಿಗಳು ಒಪ್ಪುತ್ತಾರೆ.

ಮೋದಿಯವರನ್ನು ಸೋಲಿಸಲು ವಿರೋಧಿಗಳು ಅದ್ಯಾವ್ ಮಟ್ಟಿಗೆ ಇಳಿದಿದ್ದರು ಗೊತ್ತಾ? ವಿರೋಧಿಗಳಲ್ಲೊಬ್ಬ ಬಹಿರಂಗವಾಗಿ ಮೋದಿಯವರನ್ನು ಸೋಲಿಸಲು ಪಾಕಿಸ್ತಾನದ ನೆರವನ್ನು ಕೇಳಿದ್ದ. ಆತನ ಹೆಸರನ್ನು ಹೇಳುವುದು ಬೇಡ. ಆದರೆ ಇತ್ತೀಚೆಗೆ ಅವರ ಪಕ್ಷದವರಿಂದಲೇ ಉಗಿಸಿಕೊಂಡು ಪಕ್ಷದಿಂದ ಉಚ್ಛಾಟನೆಯಾಗಿ ಹೋದ.

ಈ ಬಾರಿಯ ಗಣತಂತ್ರಕ್ಕೆ ರಣತಂತ್ರ ರೂಪಿಸಿರುವ ಮೋದಿ, ಯಾವ ದೇಶದವರನ್ನು ಮುಖ್ಯ ಅತಿಥಿಗಳನ್ನಾಗಿ ಕರೆಸಿದ್ದಾರೆ ಗೊತ್ತಾ?

1) ಭಾರತದ ಶಿಷ್ಯನಂತಿರುವ ಸನಾತನ ಸಂಸ್ಕೃತಿಯನ್ನು ನಮಗಿಂತಲೂ ಚೆನ್ನಾಗೇ ಅನುಸರಿಸುತ್ತಿರುವ “ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೊಡೊ” ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

2) “ಸಿಂಗಾಪೂರ್ ನ್ನು ಆಳುತ್ತಿರುವ ಹಾಲಿಮಾ ಯಾಕೂಬ್” ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

3) ನಮ್ಮ ಸನಾತನ ಸಂಸ್ಕೃತಿಯ ಅವಶೇಷಗಳು ಇಂದಿಗೂ ದೊರೆಯುತ್ತಿರುವ ರಾಷ್ಟ್ರವಾದ ” ವಿಯೆಟ್ನಾಂನ ಪ್ರಧಾನ ಮಂತ್ರಿ ನ್ಗುಯೇನ್ ಕ್ಸುವಾನ್ ಫೋಕ್ ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

4) 2009ರಲ್ಲಿ ಅಧಿಕಾವನ್ನು ವಹಿಸಿಕೊಂಡ “ಮಲೇಷಿಯಾದ ಪ್ರಧಾನಮಂತ್ರಿ ನಜೀಬ್ ರಜಾಕ್” ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

5) 2014 ರಲ್ಲಿ ಅಧಿಕಾರವನ್ನು ವಹಿಸಿಕೊಂಡಂತಹ ನಿವೃತ್ತ ರಾಯಲ್ ಥಾಯ್ ಸೇನಾ ಅಧಿಕಾರಿ, “ಥೈಲ್ಯಾಂಡ್ನ ಪ್ರಧಾನಿ ಜನರಲ್ ಪ್ರಯತ್ ಚಾನ್-ಓ” ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

6) ನೊಬೆಲ್ ಪ್ರಶಸ್ತಿ ಪುರಸ್ಕೃತ, 2016ರಲ್ಲಿ ಅಧಿಕಾರ ವಹಿಸಿಕೊಂಡ “ಮಯನ್ಮಾರ್ ದೇಶದ ಪ್ರಧಾನಿ ಆಂಗ್ ಸಾನ್ ಸ್ಸು”
ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

7) 2016 ರಲ್ಲಿ ಅಧಿಕಾರ ವಹಿಸಿಕೊಂಡ “ಫಿಲಿಪೈನ್ಸ್ ನ ಅಧ್ಯಕ್ಷರಾಗಿರುವ ರೋಡ್ರಿಗೋ ಡಟರ್ಟೆ” ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

8) ಬ್ರೂನಿಯ ಪ್ರಧಾನ ಮಂತ್ರಿಯಾದ ಹಾಜಿ ಹಾಸನಲ್ ಬೋಲ್ಖ್ಯ ಮುಯಿಝಾಡಿನ್ ವಡ್ಡೌಲಾಹ್ ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

9) ಲಾವೋಸ್ ನ ಪ್ರಧಾನ ಮಂತ್ರಿ ಥೊಂಗ್ಲೋನ್ ಸಿಸೌಲಿತ್ ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

10) ಕಾಂಬೋಡಿಯಾದ ಪ್ರಧಾನಿ ಆಗಿ 1985 ರಿಂದ ಅಧಿಕಾರ ವಹಿಸಿಕೊಂಡಿರುವ ಹನ್ ಸೇನ್ ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಈ 10 ರಾಷ್ಟ್ರಗಳು ಚೀನಾದ ಬದ್ಧವೈರಿ ರಾಷ್ಟ್ರಗಳು. ಚೀನಾದ ಬದ್ಧವೈರಿಗಳನ್ನು ಮೋದಿಯವರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆದಿರುವ ಉದ್ದೇಶ ಗೊತ್ತಾಯಿತಲ್ವಾ?

ಈ 10 ರಾಷ್ರದ ಅತಿಥಿಗಳನ್ನು ಗಣರಾಜ್ಯೋತ್ಸವಕ್ಕೆ ಕರೆಸಿದ್ದು ಭಾರತದ ಶಕ್ತಿ ಪ್ರದರ್ಶನವನ್ನು ಇಡೀ ವಿಶ್ವಕ್ಕೆ ತೋರಿಸುವುದರ ಹಿಂದೆ ಚೀನಾಕ್ಕೆ ಎಚ್ಚರಿಸುವ ಸಂದೇಶವಿದೆ. ಈಗಾಗಲೆ ಬೆದರಿರುವ ಚೀನಾ ಈ ಸುದ್ದಿಯನ್ನು ಕೇಳಿದರೆ ಚೀನಾದ ಚಡ್ಡಿ ಒದ್ದೆಯಾಗಿ, ಹೊದ್ದು ಮಲಗುವುದಂತೂ ಖಾತರಿ.

ಈ 10 ರಾಷ್ಟ್ರಗಳು ಒಂದಿಲ್ಲಾ ಒಂದು ಘಟನೆಯಲ್ಲಿ ಚೀನಾದ ವಿರೋಧಿಗಳಾಗಿವೆ. ವಿರೋಧಿಗಳ ವಿರೋಧಿಯ ಸ್ನೇಹ ಬೆಳೆಸಿದರೆ ವಿರೋಧಿಯನ್ನು ಬಗ್ಗು ಬಡೆಯಬಹುದು ಅಂತ ಮೋದಿಯವರು ಈ ರಣತಂತ್ರವನ್ನು ರೂಪಿಸಿದ್ದಾರೆ.

ಮೋದಿಯವರ ತಂತ್ರವಾದ ವಿರೋಧಿಗಳ ವಿರೋಧಿಯ ಸ್ನೇಹದ ರಣತಂತ್ರ ಇದೇ ಗಣರಾಜ್ಯೋತ್ವದಂದು ಅಂತ ಮುಹೂರ್ತ ಫಿಕ್ಸ್ ಆಗಿ, ರಣತಂತ್ರವೂ ರೂಪುಗೊಂಡಾಗಿದೆ.

ಇದೊಂದು ಮೋದಿಯವರ ಅಸ್ತ್ರವೆಂದೆ ಕರೆಯಬಹುದು. ಆ ಅಸ್ತ್ರದ ಪ್ರದರ್ಶನ ಇವತ್ತು ಅಂದರೆ ಗಣರಾಜ್ಯೋತ್ಸವದಂದು ಅನಾವರಣಗೊಂಡಿದೆ.

 •  
  2.7K
  Shares
 • 2.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com