Connect with us
Loading...
Loading...

ಅಂಕಣ

ಚಿನ್ನ ಖರಿದಿಸುವವರಿಗೆ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ

Published

on

  •  
  •  
  •  
  •  
  •  
  •  
  •  
  •  

ಜನರು ಚಿನ್ನವನ್ನು ಸುರಕ್ಷಿತ ಹೂಡಿಕೆಯ ಸಾಧನವೆಂದು ಪರಿಗಣಿಸುತ್ತಾರೆ. ಆದರೆ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬಂದಿದೆ ಮತ್ತು ಇದು ಸಾಮಾನ್ಯ ಜನರಿಗೆ ಖರಿದಿಸಲು ಅಸಾಧ್ಯವಾಗಿದೆ. ಚಿನ್ನದ ಬೆಲೆ ಏರಿಕೆಯಿಂದ ಅನೇಕರಿಗೆ ನಿರಾಷೆಯಾಗಿದೆ ಎಂದು ಹೇಳಬಹುದು.

ಆದರೆ ಕಾಲಕಾಲಕ್ಕೆ ವಿಶೇಷ ಯೋಜನೆಯಡಿ ಬಾಂಡ್‌ಗಳ ಮೂಲಕ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಮೋದಿ ಸರ್ಕಾರ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗುತ್ತಿದ್ದು. ಈ ಯೋಜನೆಯ ಹೊಸ ನಿಯಮ ಇದೇ ತಿಂಗಳ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುತ್ತಿದೆ. ಈ ಯೋಜನೆ ಏನು ಮತ್ತು ನೀವು ಅಗ್ಗದ ಚಿನ್ನವನ್ನು ಹೇಗೆ ಖರೀದಿಸಬಹುದು ಎಂದು ನೋಡೊಣ.

ವಾಸ್ತವವಾಗಿ, 2015 ರಲ್ಲಿ ಮೋದಿ ಸರ್ಕಾರ ಸಾರ್ವಭೌಮ ಚಿನ್ನದ ಬಾಂಡ್ ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಗಳ ಸರಣಿಯಡಿಯಲ್ಲಿ ಜನರಿಗೆ ಕಾಲಕಾಲಕ್ಕೆ ಚಿನ್ನದ ಬಾಂಡ್‌ಗಳನ್ನು ಖರೀದಿಸಲು ಅವಕಾಶ ನೀಡಲಾಗುತ್ತದೆ. ಈ ಚಿನ್ನದ ಬಾಂಡ್‌ನ ಬೆಲೆ ಮಾರುಕಟ್ಟೆಯಲ್ಲಿ ನಡೆಯುವ ದರಕ್ಕಿಂತ ಕಡಿಮೆಯಾಗಿದೆ. ಸಾರ್ವಭೌಮ ಚಿನ್ನದ ಬಾಂಡ್ ಯೋಜನೆಯ ಚಿನ್ನದ ಬೆಲೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸುತ್ತದೆ.

ಸೆಪ್ಟೆಂಬರ್ 9 ರಿಂದ ಈ ಸರಣಿ ಮತ್ತೆ ಪ್ರಾರಂಭವಾಗುತ್ತದೆ, ಈಗ ಈ ಸರಣಿಯು ಸೋಮವಾರ ಅಂದರೇ ಸೆಪ್ಟೆಂಬರ್ 9 ರಂದು ಮತ್ತೆ ಪ್ರಾರಂಭವಾಗುತ್ತಿದೆ ಮತ್ತು ಸೆಪ್ಟೆಂಬರ್ 13 ರಂದು ಕೊನೆಗೊಳ್ಳಲಿದೆ. ಈ ಬಾರಿ ಚಿನ್ನದ ಬಾಂಡ್‌ನ ಬೆಲೆಯನ್ನು ಪ್ರತಿ ಗ್ರಾಂಗೆ 3,890 ರೂಪಾಯಿ ನಿಗದಿಪಡಿಸಲಾಗಿದೆ.

ನೀವು ಮಾರುಕಟ್ಟೆಯ ಬಗ್ಗೆ ಮಾತನಾಡಿದರೆ ಚಿನ್ನದ ಬೆಲೆ ಪ್ರತಿ ಗ್ರಾಂಗೆ 3,927 ರೂಪಾಯಿ ಅದರಂತೆ ಚಿನ್ನದ ಬಾಂಡ್‌ನ ಬೆಲೆ ಪ್ರತಿ ಗ್ರಾಂಗೆ 37 ರೂಪಾಯಿ, ಇದರೊಂದಿಗೆ ಖರೀದಿದಾರರಿಗೆ ಡಿಜಿಟಲ್ ಮೋಡ್‌ನಲ್ಲಿ ಪಾವತಿಸುವಾಗ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ಸಿಗುತ್ತದೆ. ಅಂದರೆ, ಚಿನ್ನದ ಮೇಲೆ ಪ್ರತಿ ಗ್ರಾಂಗೆ 87 ರೂಪಾಯಿ ಕಡಿತಗೊಳ್ಳುತ್ತದೆ.

ಈ ಯೋಜನೆಯಡಿಯಲ್ಲಿ ಚಿನ್ನದ ಬಾಂಡ್‌ಗಳನ್ನು ಖರೀದಿಸಲು ಕೆಲವು ಷರತ್ತುಗಳಿವೆ. ಮೊದಲ ಷರತ್ತು ಎಂದರೆ ಯಾವುದೇ ವ್ಯಕ್ತಿಯು ಹಣಕಾಸಿನ ವರ್ಷದಲ್ಲಿ ಗರಿಷ್ಠ 500 ಗ್ರಾಂ ಚಿನ್ನದ ಬಾಂಡ್‌ಗಳನ್ನು ಖರೀದಿಸಿರಬಾರದು. ಅದೇ ಸಮಯದಲ್ಲಿ, ಈ ಬಾಂಡ್‌ನಲ್ಲಿ ಕನಿಷ್ಠ ಹೂಡಿಕೆ ಒಂದು ಗ್ರಾಂ ಇರಬೇಕು, ಇದಲ್ಲದೆ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ ಈ ಯೋಜನೆಯ ಮೂಲಕ ಬ್ಯಾಂಕಿನಿಂದ ಸಾಲವನ್ನೂ ತೆಗೆದುಕೊಳ್ಳಬಹುದು.

ಈ ಚಿನ್ನದ ಮಾರಾಟವನ್ನು ಬ್ಯಾಂಕುಗಳು, ಅಂಚೆ ಕಚೇರಿಗಳು, ಎನ್‌ಎಸ್‌ಇ ಮತ್ತು ಬಿಎಸ್‌ಇ ಹೊರತುಪಡಿಸಿ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಯೋಜನೆಯ ಮೂಲಕ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಚಿನ್ನದ ಭೌತಿಕ ಬೇಡಿಕೆಯನ್ನು ಕಡಿಮೆ ಮಾಡಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

– Team Nationalist Views

  •  
  •  
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com