Connect with us
Loading...
Loading...

ಅಂಕಣ

ಜಗತ್ತಿನ ಅತಿ ಪುಟ್ಟ ರಾಷ್ಟ್ರ ಇಸ್ರೇಲ್ ಎಂದರೆ ದೈತ್ಯ ರಾಷ್ಟ್ರಗಳೂ ಬೆಚ್ಚಿ ಬೀಳೋದ್ಯಾಕೆ ಗೊತ್ತಾ?

Published

on

 • 3.3K
 •  
 •  
 •  
 •  
 •  
 •  
 •  
  3.3K
  Shares

ವಿಶ್ವದಾದ್ಯಂತ ಮಾರಣಹೋಮಕ್ಕೊಳಗಾದ ಯಹೂದಿಗಳು ತಮ್ಮ ಸ್ವಂತ ರಾಷ್ಟ್ರ ಇಸ್ರೇಲ್ ಕಟ್ಟಿಕೊಂಡ ನಂತರ ಯಹೂದಿಗಳು ಬೆಳೆದು ನಿಂತ ರೀತಿ ಮಾತ್ರ ಅದ್ಭುತವೇ ಸರಿ.

ಭಾರತಕ್ಕೆ ಸ್ವಾತಂತ್ರ ಸಿಕ್ಕಿದ್ದು 1947, ಇಸ್ರೇಲ್ ಗೆ ಸ್ವಾತಂತ್ರ್ಯ ಸಿಕ್ಕಿದ್ದು 1948 ರಲ್ಲಿ.

ಭಾರತ ತನ್ನ ಸುತ್ತ ಪಾಕಿಸ್ತಾನ, ಚೀನಾ, ಬಾಂಗ್ಲಾದಂಥ ಶತ್ರುರಾಷ್ಟ್ರಗಳಿಂದ ಹೇಗೆ ಸುತ್ತುವರೆದಿದೆಯೋ ಹಾಗೆಯೇ ಇಸ್ರೇಲ್ ಕೂಡ ಸಿರಿಯಾ, ಇರಾಕ್, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯಾ, ಇರಾನ್, ಪ್ಯಾಲೇಸ್ತೀನ್ ನಂಥ ಶತ್ರು ರಾಷ್ಟ್ರಗಳಿಂದ ಸುತ್ತುವರೆದಿದೆ.

ಭಾರತದ ಮೇಲೆ ಶತ್ರುರಾಷ್ಟ್ರ ಪಾಕಿಸ್ತಾನ 4 ಬಾರಿ ಯುದ್ಧಕ್ಕೆ ಬಂದು ನಾಲ್ಕು ಬಾರಿಯೂ ಸೋತು ಸುಣ್ಣವಾಗಿದೆ.

ಆದರೆ ನಮ್ಮ ಬೆಂಗಳೂರಿಗಿಂತ ನಾಲ್ಕು ಪಟ್ಟು ದೊಡ್ಡದಿರೋ ಪುಟ್ಟ ರಾಷ್ಟ್ರ ಇಸ್ರೇಲ್ ಮಾತ್ರ ಇಲ್ಲೀವರೆಗೂ 17 ಯುದ್ಧ ಕಂಡಿದೆ, ಆ ಎಲ್ಲ ಯುದ್ಧಗಳಲ್ಲೂ ಇಸ್ರೇಲ್’ದ್ದೇ ಮೇಲುಗೈ ಅಂದರೆ ನೀವು ನಂಬಲಸಾಧ್ಯ.

ಇಸ್ರೇಲಿನ ಜನಸಂಖ್ಯೆ ಎಷ್ಟು ಗೊತ್ತೇನು? ಕೇವಲ 85 ಲಕ್ಷ ಮಾತ್ರ, ಅಷ್ಟು ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರ ಇಂದು ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳ ಸಾಲಿನಲ್ಲಿ ನಿಂತು ಜಗತ್ತಿಗೆ ತನ್ನ ಶಕ್ತಿಪ್ರದರ್ಶನ ಮಾಡುತ್ತೆ ಅಂದರೆ ಅದಕ್ಕೆ ಕಾರಣ ಇಸ್ರೇಲಿಗರಲ್ಲಿನ ದೇಶಭಕ್ತಿ ಮಾತ್ರ.

“ಯಾರು ಇತಿಹಾಸವನ್ನ ಮರೆಯುತ್ತಾರೊ ಅವರು ಅದೇ ಇತಿಹಾಸಕ್ಕೆ ಬಲಿಯಾಗುತ್ತಾರೆ” ಅನ್ನೋ ಮಾತನ್ನ ಇಸ್ರೇಲಿಗರು ಎಂದೂ ಮರೆಯೋದಿಲ್ಲ.

ಅವರು ತಮ್ಮ ಪೂರ್ವಜರ ಹತ್ಯೆಗಳನ್ನ, ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಮರೆತಿದ್ದರೆ ಇಂದು ಜಗತ್ತಿನ ಭೂಪಟದಲ್ಲಿ ಇಸ್ರೇಲ್ ಆಗಲಿ ಅಥವ ಯಹೂದಿ ಜನಾಂಗವಾಗಲಿ ಇರುತ್ತಲೇ ಇರಲಿಲ್ಲ.

ಸುತ್ತಲೂ ಶತ್ರು ರಾಷ್ಟ್ರಗಳಿದ್ದರೂ ಇಸ್ರೇಲಿನ ಮೇಲೆ ಕಣ್ಣು ಹಾಕೋಕೂ ಶತ್ರು ರಾಷ್ಟ್ರಗಳು ನೂರು ಬಾರಿ ಯೋಚಿಸುತ್ತವೆ. ಇಸ್ರೇಲ್’ನ ಒಬ್ಬನನ್ನು ಶತ್ರುಗಳು ಕೊಂದರೆ ಅದರ ಬದಲಾಗಿ ಇಸ್ರೇಲ್ 50 ಶತ್ರುಗಳನ್ನ ಕೊಲ್ಲುತ್ತೆ. ಶತ್ರು ಯಾವ ರಾಷ್ಟ್ರದಲ್ಲೇ ಅಡಗಿದ್ದರೂ ಅವರು ಅಡಗಿರುವ ರಾಷ್ಟ್ರಕ್ಕೆ ಹೋಗಿ ಕೊಂದು ಬರುವ ತಾಕತ್ತು ಇಂದು ಇಸ್ರೇಲಿಗಿದೆಯೆಂದರೆ ಅದಕ್ಕೆ ಕಾರಣ ಅವರ ದೇಶಾಭಿಮಾನ.

ಇಸ್ರೇಲ್’ನ ಪಕ್ಕದ ರಾಷ್ಟ್ರವೇ ಸಿರಿಯಾ, ನಿಮಗೆಲ್ಲ ಗೊತ್ತಿರೋ ಹಾಗೆ ಸಿರಿಯಾದಲ್ಲಿಯೇ ಐಸಿಸ್ ಎಂಬ ಭಯೋತ್ಪಾದಕ ಸಂಘಟನೆ ಹುಟ್ಟಿಕೊಂಡಿದ್ದು ಹಾಗು ಜಗತ್ತಿನ ಅನೇಕ ರಾಷ್ಟ್ರಗಳ ಪ್ರಜೆಗಳನ್ನ ಸಿರಿಯಾದಲ್ಲಿ ಕೊಲ್ಲುತ್ತಿರೋದು, ಆದರೆ ಐಸಿಸ್ ಉಗ್ರರು ಇಸ್ರೇಲಿನ ಒಬ್ಬ ಪ್ರಜೆಯನ್ನಾದರೂ ಕೊಂದಿದಾರಾ? ಉಹುಂ, ಇಲ್ಲ ಇಸ್ರೇಲಿನ ಮೇಲೆ ಕಣ್ಣು ಹಾಕೋ ಆ ತಾಕತ್ತು ಐಸಿಸ್ ನಲ್ಲಿಲ್ಲ, ಐಸಿಸ್’ಗೆ ಇಸ್ರೇಲ್ ನ ತಾಕತ್ತು ಗೊತ್ತಿರೋದ್ರಿಂದ ಇಲ್ಲಿವರೆಗೂ ಇಸ್ರೇಲ್’ನ ತಂಟೆಗೆ ಹೋಗಿಲ್ಲ ಮುಂದೆಯೂ ಹೋಗಲ್ಲ.

ಇಸ್ರೇಲ್ ನ ಬಗ್ಗೆ ಕೆಲ ರೋಚಕ ಕಥೆಗಳನ್ನ ನಾವು ಕೇಳಲೇಬೇಕು ಹಾಗು ಭಾರತೀಯರು ಇಸ್ರೇಲಿಗರ ಅಂಥ ಸಾಹಸಗಾಥೆಗಳನ್ನ ನಮ್ಮಲ್ಲೂ ಅನುಸರಿಸಬೇಕು.

1) ಇಸ್ರೇಲ್ ಜಗತ್ತಿನ ಪುಟ್ಟ ರಾಷ್ಟ್ರಗಳ ಸಾಲಿನಲ್ಲಿರೋ ಕೇವಲ 85 ಲಕ್ಷ ಜನಸಂಖ್ಯೆ ಇರೋ ಚಿಕ್ಕ ರಾಷ್ಟ್ರ

2) ಜಗತ್ತಿನಲ್ಲಿ ಒಂದೇ ಒಂದು ಯಹೂದಿ ರಾಷ್ಟ್ರವಿದೆ, ಅದೇ ಇಸ್ರೇಲ್

3) ನಮ್ಮಲ್ಲಿ ಸಂಸ್ಕೃತ ಭಾಷೆ ಹೇಗೋ ಹಾಗೆಯೇ ಇಸ್ರೇಲ್’ನ ಭಾಷೆ ‘ಹಿಬ್ರೂ’ ಆಗಿತ್ತು, ಮಧ್ಯಕಾಲೀನ ದಲ್ಲಿ ಅಳಿದು ಹೋಗಿದ್ದ ಹಿಬ್ರೂ ಭಾಷೆಯನ್ನ ಇಸ್ರೇಲ್ ದೇಶ ಆಡಳಿತ ಭಾಷೆಯನ್ನಾಗಿ ಮಾಡಿ ಕಳೆದುಹೋಗಿದ್ದ ಭಾಷೆಗೆ ಮತ್ತೆ ಮರುಜೀವ ನೀಡಿತು.

4) ಇಸ್ರೇಲಿನ ಪ್ರತಿಯೊಬ್ಬ ಪ್ರಜೆಯೂ ಇಸ್ರೇಲ್ ಸೈನ್ಯದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಲೇಬೇಕು. (ಗಂಡಿಗೆ ಮೂರು ವರ್ಷ ಹಾಗು ಹೆಣ್ಣಿಗೆ ಎರಡು ವರ್ಷ ಸೈನ್ಯ ತರಬೇತಿ ಕಡ್ಡಾಯ)

5) ಇಸ್ರೇಲ್ ಸೈನ್ಯದಲ್ಲಿ 50% ಗಿಂತ ಹೆಚ್ಚು ಆಫೀಸರ್’ಗಳು ಮಹಿಳೆಯರೇ.

6) ಇಸ್ರೇಲ್’ನ ವಾಯುಸೇನೆ ಜಗತ್ತಿನ ನಾಲ್ಕನೆಯ ಸ್ಥಾನ ಪಡೆದಿದೆ.

7) ಕೃಷಿಯಲ್ಲಿ ಇಸ್ರೇಲ್ ಮೂರನೆಯ ಸ್ಥಾನದಲ್ಲಿದೆ.

8) ಇಸ್ರೇಲ್’ನಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಟೆಕ್ನಾಲಜಿ ಕಂಪನಿಗಳಿವೆ, ಮೊಟೋರೋಲಾ ಫೋನ್ ಮೊಟ್ಟ ಮೊದಲಿಗೆ ಆವಿಷ್ಕಾರಗೊಂಡಿದ್ದೇ ಇಸ್ರೇಲ್’ನಲ್ಲಿ. ಟೆಕ್ನಾಲಜಿಯಲ್ಲಿ ಇಸ್ರೇಲ್ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿದೆ.

9) ಪೂರ್ಣ ಪ್ರಮಾಣದ Anti Ballistic Missile Defense System ಹೊಂದಿರೋ ದೇಶ ಇಸ್ರೇಲ್ ಮಾತ್ರ, ಯಾವ ಶತ್ರು ದೇಶವೂ ಇಸ್ರೇಲ್’ನ ಮೇಲೆ ದಾಳಿ ಮಾಡೋಕೆ ರಾಕೆಟ್ ಬಿಟ್ಟರೂ anti ballistic technology ಯ ಕಾರಣ ಆ ರಾಕೆಟ್ ಗಳು ಮಧ್ಯದಲ್ಲಿಯೇ ಟುಸ್ ಆಗ್ತವೆ.

10) ಜಗತ್ತಿನ ಅತೀ ಶಕ್ತಿಶಾಲಿ ಇಂಟೆಲಿಜೆನ್ಸ್ ಏಜೆನ್ಸಿ ಯಾವುದಾದರೂ ಇದ್ದರೆ ಅದು ಇಸ್ರೇಲಿನ ಮೊಸ್ಸಾದ್ (Mossad) ಮಾತ್ರವೇ.

ಮೊಸ್ಸಾದ್’ನ್ನ God of Intelligencies ಅಂತಲೂ ಕರೀತಾರೆ.

ಇಸ್ರೇಲಿನ ಒಬ್ಬ ನಾಗರಿಕನನ್ನ ಕೊಂದರೆ ಇಸ್ರೇಲ್ ಶತ್ರುಗಳ ಐವತ್ತು ತಲೆ ಕಡಿಯುತ್ತೆ ಅದೂ ಅವರ ರಾಷ್ಟ್ರಗಳಿಗೆ ಹೊಕ್ಕಿ ಹೆಕ್ಕಿ ತೆಗೆದು ಅವರ ಸಂಹಾರ ಮಾಡುತ್ತೆ,‌ ಈ ಕಾರಣಕ್ಕಾಗಿಯೇ ಇಸ್ರೇಲ್ ಎಂದರೆ ಜಗತ್ತಿನ ದೈತ್ಯ ರಾಷ್ಟ್ರಗಳೂ ಬೆಚ್ಚಿ ಬೀಳುತ್ತವೆ.

ಇಸ್ರೇಲ್ ಪ್ರಧಾನಿ ಭಾರತಕ್ಕಾಗಮಿಸಿದ್ದಾರೆ. ಜಗತ್ತು ರೆಪ್ಪೆ ಬಡಿಯದೇ ಭಾರತದ ಕಡೆಗೆ ನೋಡುತ್ತಿದೆ. ಪಾಕಿಸ್ತಾನವಂತೂ ಥಂಡಾ ಹೊಡೆದಿದೆ.

ಕಾರಣ ಪಾಕಿಸ್ತಾನದ ಜೊತೆ ನಡೆದ 1965, 1971 ಹಾಗು 1999 ರ ಕಾರ್ಗಿಲ್ ಯುದ್ಧಗಳಲ್ಲಿ ಇಸ್ರೇಲ್ ಬೆಂಬಲ ಭಾರತಕ್ಕಿತ್ತು.

ಸದ್ಯ ಪಾಕಿಸ್ತಾನ ಭಾರತದ ವಿರುದ್ಧ ಸದಾ ಕ್ಯಾತೆ ತೆಗೆಯುತ್ತ ಸೀಸ್ ಫೈರಗ ಉಲ್ಲಂಘನೆ ಮಾಡುತ್ತಲೇ ಇದೆ, ಭಯೋತ್ಪಾದಕರು ಗಡಿ ದಾಟಿ ಬರಲು ಹೋಗಿ ಹೆಣಗಳ ರಾಶಿಯಾಗಿ ಹೋಗುತ್ತಿದ್ದಾರೆ.

ಇಸ್ರೇಲ್ ಪ್ರಧಾನಿ ಈಗ ಭಾರತಕ್ಕೆ ಬಂದಿರುವುದರಿಂದ ನಮ್ಮ ವಿರುದ್ಧ ಏನಾದರೂ ಮತ್ತೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿಬಿಟ್ಟೀತು ಅಂತ ಪದರುಗುಟ್ಟಿದೆ.

ಇದೇ ಕಾರಣಕ್ಕೋ ಏನೋ ಭಾರತದಲ್ಲಿರುವ ಪಾಕಿಸ್ತಾನಿ ಪ್ರೇಮಿಗಳು ಬೆಂಜಮಿನ್ ನೇತನ್ಯಾಹುರ ಭಾರತ ಭೇಟಿಯನ್ನ ವಿರೋಧಿಸುತ್ತ ಗೋ ಬ್ಯಾಕ್ ಬೆಂಜಮಿನ್ ಅಂತ ಊಳಿಡುತ್ತಿವೆ.

ಉರ್ಕೊಳ್ಳೋರು ಉರ್ಕೊಳ್ಲಿ, ಭಾರತ ಬಲಿಷ್ಟವಾಗಬೇಕಷ್ಟೇ!!

– Vinod Hindu Nationalist

 •  
  3.3K
  Shares
 • 3.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com