Connect with us
Loading...
Loading...

ಅಂಕಣ

ಜಗತ್ತಿನ ಈ ರಾಷ್ಟ್ರಗಳೂ ಸುಗ್ಗಿಯ ಸಂಭ್ರಮವನ್ನ ಆಚರಿಸುತ್ತವೆ!! ಆ ದೇಶಗಳ್ಯಾವುವು? ಅವರಿಗೂ ಸಂಕ್ರಾಂತಿಗೂ ಸಂಬಂಧವೇನು ಗೊತ್ತಾ?

Published

on

 • 1.3K
 •  
 •  
 •  
 •  
 •  
 •  
 •  
  1.3K
  Shares

ಭಾರತ ಹೇಗೆ ಸಂಕ್ರಾಂತಿಯನ್ನ ಆಚರಿಸುತ್ತದೆಯೋ ಹಾಗೆಯೇ ಜಗತ್ತಿನಲ್ಲಿರುವ 7 ದೇಶಗಳೂ ಸಂಕ್ರಾಂತಿಯನ್ನ ಆಚರಿಸುತ್ತವೆ. ಶಾಕ್ ಆದ್ರಾ? ಅವರಿಗೂ ಸಂಕ್ರಾಂತಿಗೂ ಸಂಬಂಧವೇನು ಅಂತೀರಾ? ಹಾಗಿದ್ದರೆ ಓದಿ

ಜಗತ್ತಿನಲ್ಲಿರುವ ಪ್ರತಿಯೊಂದು ರಾಷ್ಟ್ರದ್ದೂ ಅದರದ್ದೇ ಆದ ಸಂಸೃತಿ, ಆಚಾರ ವಿಚಾರಗಳಿವೆ. ಅಲ್ಲೂ ಹಬ್ಬಗಳ ಆಚರಣೆಗಳಿವೆ, ಕೊನೆಗೆ ಎಲ್ಲ ರಾಷ್ಟ್ರಗಳ ಸಂಬಂಧವೂ ಒಂದೆ ಕಡೆಗೆ ಬಂದು ಬೆಸೆದುಕೊಂಡು ನಿಂತು ಬಿಡುತ್ತವೆ.

ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ.

ವಾರ್ಷಿಕ ಸುಗ್ಗಿಯ ಪರ್ವವೆಂದು ನಮ್ಮಲ್ಲಿ ಆಚರಿಸುವ ಸಂಕ್ರಾಂತಿಯಂತೆಯೇ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿಯೂ ಸುಗ್ಗಿಯ ಪರ್ವವನ್ನ ಆಚರಿಸಲಾಗುತ್ತದೆ.

ಯಾವೆಲ್ಲಾ ರಾಷ್ಟ್ರಗಳು ಹೇಗೆಲ್ಲಾ ಈ ಸಂಕ್ರಾಂತಿಯನ್ನ ಆಚರಿಸುತ್ತವೆ ನೋಡೋಣ ಬನ್ನಿ!!!

1. ಅಮೇರಿಕಾ

ಸುಗ್ಗಿ ಪರ್ವವನ್ನ ಅಮೇರಿಕಾದಲ್ಲಿ ಆಚರಿಸುವ ವಿಧಾನವೇ ವಿಶಿಷ್ಟವಾದುದು, ಸುಗ್ಗಿಯ ಪರ್ವವನ್ನ ಅಮೆರಿಕನ್ನರು ‘ಕೃತಜ್ಞತಾ ದಿನ’ ಅಂದರೆ Thanksgiving day ಅಂತ ಆಚರಿಸುತ್ತಾರೆ.

ಅಲ್ಲಿ ನವಂಬರ್ ತಿಂಗಳ ನಾಲ್ಕನೇ ಮಂಗಳವಾರದಂದು ಈ ದಿನವನ್ನ ಆಚರಿಸಲಾಗುತ್ತೆ, ಅಂದು ಸರ್ಕಾರಿ ರಜೆ ಕೂಡ ಇರುತ್ತದೆ. ಪ್ರತಿಯೊಬ್ಬರು ಪ್ರೀತಿಯಿಂದ ಒಬ್ಬರಿಗೊಬ್ಬರು ಶುಭಾಷಯ ವಿನಿಮಯ ಮಾಡಿಕೊಂಡು ಈ ದಿನವನ್ನ ಆಚರಿಸುತ್ತಾರೆ.

ಈ ಆಚರಣೆ ಅಲ್ಲಿ ಶುರುವಾದದ್ದು ಕ್ರಿ.ಶ.1621 ರಲ್ಲಿ.

ಟರ್ಕಿಯ ಯಾತ್ರಿಕರು ಅಮೇರಿಕಾಕ್ಕೆ ಬಂದಾಗ ಗೋಧಿಯನ್ನ ಬೆಳೆದು ಅದರಿಂದ ಬಂದ ಫಸಲಿನ ಸಂಭ್ರಮಾಚರಣೆಗಾಗಿ ಮೂರು ದಿನದ ಹಬ್ಬ ಆಚರಿಸಿ ಅಮೇರಿಕಾದ ಆದಿವಾಸಿಗಳಿಗಸ ಹಬ್ಬದೌತಣ ಬಡಿಸಿದ್ದರಿಂದ Thanksgiving ದಿನವನ್ನ ಅಮೇರಿಕಾ ಇಂದಿಗೂ ಆಚರಿಸಿಕೊಂಡು ಬರುತ್ತಿದೆ.

2. ಬಾಲಿ, ಇಂಡೋನೇಷ್ಯಾ

ಸುಗ್ಗಿಯ ಸಂಭ್ರಮವನ್ನ ಇಂಡೋನೇಷ್ಯಾದ ಬಾಲಿ ದ್ವೀಪವೂ ಸಂಭ್ರಮಾಚರಣೆಯ ಮೂಲಕ ಆಚರಿಸುತ್ತೆ.

ಅಲ್ಲಿ ಅವರು ಅನ್ನವನ್ನೇ ದೇವತೆಯೆಂದು ಪೂಜಿಸುತ್ತಾರೆ. ಹಾಗಾಗಿ ಭತ್ತದ ಸುಗ್ಗಿಯಾದ ದಿನವನ್ನ ಅವರು “ದೇವಿ ಶ್ರೀ” ಎಂಬ ದೇವತೆಗೆ ಅರ್ಪಿಸುವ ಆಚರಣೆ ಬಾಲಿಯಲ್ಲಿ ನಡೆದುಕೊಂಡು ಬರುತ್ತದೆ.

ಈ ಹಬ್ಬದಂದು ಬಾಲಿಯ ಪ್ರತಿಯೊಂದು ಹಳ್ಳಿಗಳೂ ಧ್ವಜಗಳಿಂದ ಅಲಂಕೃತಗೊಂಡಿರುತ್ತವೆ. ಇದರ ಜೊತೆ ಜೊತೆಗೆ ಬಿದಿರು ಬಂಬೂವಿನಿಂದ ತಯಾರಿಸಿದ ದೇವಸ್ಥಾನಗಳನ್ನೂ ದೇವಿಶ್ರೀ ದೇವತೆಗೆ ಅರ್ಪಿಸುವ ಮೂಲಕ ಭತ್ತದ ಗದ್ದೆಗಳಲ್ಲಿ ಪ್ರತಿಷ್ಠಾಪಿಸುತ್ತಾರೆ.

3. ಚೀನಾ

ಸುಗ್ಗಿ ಚಂದ್ರ ಸಂಭ್ರಮ (Harvest Moon Festival) ಎಂಬ ಹಬ್ಬವನ್ನ ಚೀನಾ ರಾಷ್ಟ್ರ ಚೈನೀಸ್ ಲೂನಾರ್ ಕ್ಯಾಲೆಂಡರ್ರಿನ ಎಂಟನೆ ತಿಂಗಳಿನ 15 ನೆಯ ದಿನದಂದು ಆಚರಿಸುತ್ತೆ.

ಈ ಆಚರಣೆಯೂ ಕೂಡ ಅವರು ಆಚರಿಸುವುದು ಭತ್ತ ಹಾಗು ಗೋಧಿಯ ಸುಗ್ಗಿಗಾಗಿಯೇ. ಈ ದಿನ ಅಲ್ಲಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಸೇರಿ ಅಂದು ಚಂದ್ರನ ದರ್ಶನ ಮಾಡುತ್ತಾರೆ. ಅಂದು ಚಂದ್ರನ ದರ್ಶನ ಮಾಡುವುದರಿಂದ ಸಾಮರಸ್ಯ, ಅದೃಷ್ಟ ಒಲಿದುಬರುತ್ತೆ ಅನ್ನೋದು ಚೀನಿಗರ ನಂಬಿಕೆ.

4. ಸಕ್ಕೋಟ್, ಇಸ್ರೇಲ್

ಇಸ್ರೇಲಿನ ಸಕ್ಕೋಟ್ ಪ್ರದೇಶದಲ್ಲಿ ‘ಹೃದಯವೈಶಾಲ್ಯದ ದಿನ’ವಂತ ಆಚರಿಸಲಾಗುತ್ತೆ.

ಈ ದಿನವನ್ನ ತಮ್ಮ ಪೂರ್ವಜ ಇಸ್ರೇಲಿಗರು ಊಟಕ್ಕಾಗಿ ಮರುಳುಗಾಡಿನಲ್ಲಿ ಪರದಾಡುತ್ತ ಅಲ್ಲಲ್ಲಿ ಝೋಪಡಿಗಳನ್ನ ಮಾಡಿಕೊಂಡು ಊಟ ಸಿಕ್ಕಲ್ಲಿ ಊಟ ಮಾಡಿ, ಊಟ ಸಿಗದಿದ್ದಾಗ ಒಂದು ವಾರಗಳ ಕಾಲ ಉಪವಾಸವಿದ್ದ ದಿನಗಳನ್ನ ನೆನೆದು ಇಸ್ರೇಲಿಗರು ಈ ದಿನವನ್ನ ಆಚರಿಸುತ್ತಾರೆ.

5. ಪೋರ್ಚುಗಲ್

ನಮ್ಮಲ್ಲೆಲ್ಲಾ ಆಹಾರಪದಾರ್ಥಗಳ ಸುಗ್ಗಿಗಾಗಿ ಹಬ್ಬ ಆಚರಿಸಿದರೆ ಪೋರ್ಚುಗಲ್ ನಲ್ಲಿನ ಜನ ಒಂದು ವಿಧಧ ಪುಷ್ಪ(ಹೂವು)ದ ಸುಗ್ಗಿಯನ್ನೇ ವಿಜೃಂಭಣೆಯಿಂದ ಆಚರಿಸುತ್ತಾರೆ.

ಮದೀರಾ ಎಂಬ ಪುಷ್ಪದ ಪುಷ್ಪಮೇಳವನ್ನ ಪೋರ್ಚುಗಲ್ ನಲ್ಲಿ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ.

 

ಮದೀರಾ ಪುಷ್ಪದ ಸುವಾಸನೆಯೊಂದಿಗೆ ವಸಂತಮಾಸವನ್ನ ಬರಮಾಡಿಕೊಳ್ಳಲು ಈ ಆಚರಣೆ ಪೋರ್ಚುಗಲ್ ನಲ್ಲಿ ರೂಢಿಯಲ್ಲಿದೆ.

ಆ ದಿನದಂದು ದ್ವೀಪದ ಮಕ್ಕಳೆಲ್ಲಾ ವಿಧವಿಧದ ಹೂವುಗಳನ್ನ ತಂದು ಊರನ್ನ ಶೃಂಗಾರ ಮಾಡುವುದು ಅವರ ಆಚರಣೆಯ ಸಂಕೇತವಾಗಿದೆ.

6. ಇಂಗ್ಲೆಂಡ್

ಇಂಗ್ಲೆಂಡ್ ಅಥವ ಯುನೈಟೆಡ್ ಕಿಂಗಡಮ್ ನಲ್ಲಿ ಲಮ್ಮಾಸ್ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತೆ.

ಈ ಹಬ್ಬವನ್ನ ಆಗಷ್ಟ್ 1 ರಿಂದ ಸೆಪ್ಟೆಂಬರ್ 1 ರ ಮಧ್ಯೆ ಆಚರಿಸಲಾಗುತ್ತದೆ. ಈ ಹಬ್ಬವನ್ನ ವಾರ್ಷಿಕ ಗೋಧಿ ಸುಗ್ಗಿ ಎಂದು ಆಚರಿಸಲಾಗುತ್ತದೆ.

– Vinod Hindu Nationalist

ನಿಮಗೆ ಈ ಅಂಕಣ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ, ಈ ರೀತಿಯ ಸುದ್ದಿಗಳನ್ನ ನಿಮ್ಮ ಮುಂದೆ ಹೀಗೆಯೇ ಇಡುತ್ತಿರುತ್ತೇವೆ

 •  
  1.3K
  Shares
 • 1.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com