Connect with us
Loading...
Loading...

ಅಂಕಣ

ಜಗತ್ತಿನ ಯಾವ ರಾಷ್ಟ್ರವೂ ಮಾಡಿರದ ಮುಂದೆಯೂ ಮಾಡದಂತಹ ಇಸ್ರೇಲಿನ ಆಪರೇಷನ್ ಎಂಟೆಬ್ಬೆಯ ರೋಚಕ ಕಥೆ!!

Published

on

 • 2K
 •  
 •  
 •  
 •  
 •  
 •  
 •  
  2K
  Shares

ಇಸ್ರೇಲ್ ಎಂಬುದು ಪುಟ್ಟ ರಾಷ್ಟ್ರ, ತನ್ನ ದೇಶದ ನಾಲ್ಕೂ ಮೂಲೆಗಳಲ್ಲೂ ಶತ್ರು ಇಸ್ಲಾಮಿಕ್ ರಾಷ್ಟ್ರಗಳಿದ್ದರೂ ಇಸ್ರೇಲ್ ತನ್ನ ದೇಶದ ಅಸ್ಮಿತೆಯನ್ನ ಕಾಪಾಡಿಕೊಂಡು ಬಂದಿರೋದು ತನ್ನ ದೇಶಪ್ರೇಮ ಎಂಬ ಒಂದೇ ತತ್ವದಿಂದ.

ಕೇವಲ 90 ಲಕ್ಷ ಜನರ ದೇಶವೊಂದನ್ನ ಇಂದು ಜಗತ್ತಿನ ದೊಡ್ಡ ದೊಡ್ಡ ರಾಷ್ಟಗಳೂ ಮುಟ್ಟೋದಕ್ಕೇ ಹಿಂದೇಟು ಹಾಕುತ್ತವೆ, ಕಾರಣ ಇಸ್ರೇಲಿಗರಲ್ಲಿನ ಶೌರ್ಯ, ದೇಶಪ್ರೇಮವೊಂದೇ!!!

ಇಸ್ರೇಲಿನ ಶೌರ್ಯದ ಬಗ್ಗೆ ಮಾತಾಡಬೇಕೆಂದರೆ ಅಲ್ಲಿನ ಇಂಟೆಲಿಜೆನ್ಸ್ ಏಜೆನ್ಸಿ ಮೊಸ್ಸಾದ್ ನ ಬಗ್ಗೆ ತಿಳಿದುಕೊಳ್ಳಲೇಬೇಕು.

ಭಾರತದಲ್ಲಿ ಹೇಗೆ ಕೇಂದ್ರ ಗುಪ್ತಚರ ಇಲಾಖೆ ರಾ(RAW) ಸಂಸ್ಥೆ ಇದೆಯೋ ಹಾಗೆಯೇ ಇಸ್ರೇಲಿನಲ್ಲಿ ಮೊಸ್ಸಾದ್(MOSSAD) ಎಂಬ ಗುಪ್ತಚರ ತಂಡವಿದೆ.

ಮೊಸ್ಸಾದ್ ನಡೆಸಿದ್ದ ರೋಚಕ ಅಂಡರ್ ಕವರ್ ಆಪರೇಷನ್:

ಅದು 1976, ಪ್ಯಾಲೆಸ್ತೇನಿನ ಅಂದರೆ ಇಸ್ರೇಲ್ ಪಕ್ಕದ ರಾಷ್ಟ್ರದ ಉಗ್ರಗಾಮಿಗಳು ಏರ್ ಫ್ರಾನ್ಸ್ ವಿಮಾನವನ್ನು ಹೈಜಾಕ್ ಮಾಡಿ ವಿಮಾನದಲ್ಲಿದ್ದ 250 ಪ್ರಯಾಣಿಕರ ಪೈಕಿ ಉಳಿದವರನ್ನೆಲ್ಲ ವಾಪಸ್ ಕಳಿಸಿ ಇಸ್ರೇಲಿನ ಯಹೂದಿಗಳಿದ್ದ 103 ಜನರನ್ನ ಮಾತ್ರ ಒತ್ತೆಯಾಳಾಗಿಟ್ಟುಕೊಂಡಿದ್ದರು.

ಕಾರಣ ಇಸ್ರೇಲ್ ಜೈಲಿನಲ್ಲಿದ್ದ ಪ್ಯಾಲೆಸ್ತಿನ್’ನ 43 ಭಯೋತ್ಪಾದಕರ ಬಿಡುಗಡೆಯಾಗಬೇಕು ಎಂಬುದು ಹೈಜಾಕ್ ಮಾಡಿದ್ದ ಭಯೋತ್ಪಾದಕರ ಬೇಡಿಕೆಯಾಗಿತ್ತು.

ಏರ್ ಫ್ರಾನ್ಸ್ ವಿಮಾನವನ್ನು ಇಸ್ರೇಲ್’ನಿಂದ ಸುಮಾರು 2600 ಮೈಲು ಅಂದರೆ ಬರೋಬ್ಬರಿ 4200KM ದೂರದ ಉಗಾಂಡಾ ದೇಶಕ್ಕೆ ಹೈಜಾಕ್ ಮಾಡಿದ್ದ ಭಯೋತ್ಪಾದಕರನ್ನ ಉಗಾಂಡಾಕ್ಕೆ ಹೊಕ್ಕಿ ತನ್ನ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಾಪಸ್ ಕರೆತಂದ ಇಸ್ರೇಲ್ ಆರ್ಮಿಯ ಆಗ ಹಿಂದೆ ನಿಂತದ್ದೇ ಇಸ್ರೇಲಿನ ಇಂಟೆಲಿಜೆನ್ಸ್ ಏಜೆನ್ಸಿ ಮೊಸ್ಸಾದ್.

“ಆ ಆಪರೇಷನ್’ಗೆ ಕೊಟ್ಟ ಹೆಸರೇ ಆಪರೇಷನ್ ಥಂಡರಬೋಲ್ಟ್ ಅಥವ ಆಪರೇಷನ್ ಎಂಟೆಬ್ಬೆ”

ಇಸ್ರೇಲ್ ಸುತ್ತಲೂ ಮುಸ್ಲಿಂ ರಾಷ್ಟ್ರಗಳೇ ಇರುವುದರಿಂದ ಅವುಗಳೆಲ್ಲ ಇಸ್ರೇಲ್ ಹಾಗು ಇಸ್ರೇಲಿನ ಯಹೂದಿಗಳ ಬದ್ಧವೈರಿಗಳೇ, ಅವರಷ್ಟೇ ಯಾಕೆ ಜಗತ್ತಿನ ಎಲ್ಲ ಮುಸ್ಲಿಮರೂ ಯಹೂದಿಗಳೆಂದರೆ ಈಗಲೂ ಹಲ್ಲುಕಡಿಯುತ್ತಾರೆ. ಹಾಗೆಯೇ ಇಸ್ರೇಲ್ ಸುತ್ತ ಇರುವ ರಾಷ್ಟ್ರಗಳೂ ಇಸ್ರೇಲ್ ನ ಪಕ್ಕಾ ವಿರೋಧಿ ರಾಷ್ಟ್ರಗಳೇ ಆಗಿವೆ.

ಉಗಾಂಡಾ ಇಸ್ರೇಲ್’ನಿಂದ 2600 ಮೈಲು(ಅಂದರೆ 4200 ಕಿಲೋಮೀಟರ್) ದೂರವಿರೋ ಸ್ಥಳವಾಗಿತ್ತು. ಅಷ್ಟು ದೂರ ಹೋಗಿ ಹೈಜಾಕ್ ಆಗಿದ್ದ ಪ್ಲೇನ್ ನಲ್ಲಿದ್ದ ತನ್ನ ಪ್ರಜೆಗಳ ರಕ್ಷಣೆ ಮಾಡುವುದು ಇಸ್ರೇಲ್ ಗೆ ಅಸಾಧ್ಯದ ಮಾತಾಗಿತ್ತು. ಕಾರಣ ಇಸ್ರೇಲ್’ನಿಂದ ಉಗಾಂಡಾಗೆ ತೆರಳಬೇಕಾದರೆ ಶತ್ರುರಾಷ್ಟ್ರಗಳ ಮೂಲಕವೇ ಹಾದುಹೋಗಬೇಕಾಗಿತ್ತು.

ಅಷ್ಟು ದೂರದ ಪ್ರಯಾಣಕ್ಕೆ ಪ್ಲೇನ್’ಗೆ ಇಂಧನ ತುಂಬಿಸೋಕೆ ಮಾರ್ಗ ಮಧ್ಯೆ ಲ್ಯಾಂಡಿಂಗ್ ಮಾಡಲೇಬೇಕಾದ ಅನಿವಾರ್ಯತೆ ಇಸ್ರೇಲ್’ಗಿತ್ತು.

ಆದರೆ ಇಸ್ರೇಲಿಗೆ ಈ ಮಧ್ಯೆ ಸಹಾಯ ಮಾಡೋದಕ್ಕೆ ಯಾವ ರಾಷ್ಟ್ರವೂ ಒಪ್ಪಲಿಲ್ಲ & infact ಇಸ್ರೇಲ್ ಕೂಡ ಈ ಆಪರೇಷನ್ ವಿಷ್ಯವನ್ನ ಜಗತ್ತಿಗೆ ತಿಳಿಯದ ಹಾಗೆಯೇ ನಡೆಸಬೇಕಾಗಿತ್ತು.

ಇಸ್ರೇಲೀ ಸೈನ್ಯ ನಾಲ್ಕು ವಿಮಾನಗಳ ಮೂಲಕ ಉಗಾಂಡಾದ ಎಂಟೆಬ್ಬೆ ಏರಪೋರ್ಟ್’ಗೆ ಹೊರಟೇ ನಿಂತವು.

ನಾಲ್ಕು ಪ್ಲೇನ್’ಗಳ್ಯಾಕೆ?

ಒಂದ್ರಲ್ಲಿ ಇಸ್ರೇಲಿನ ಸೈನಿಕರು,

ಎರಡನೆ ಪ್ಲೇನ್’ನಲ್ಲಿ ಉಳಿದ ಪ್ಲೇನ್’ಗಳಿಗೆ ಬೇಕಾದ ಇಂಧನ,

ಮೂರನೆ ಪ್ಲೇನ್’ನಲ್ಲಿ ವೈದ್ಯಕೀಯ ತಂಡ ಹಾಗು

ನಾಲ್ಕನೇ ಪ್ಲೇನ್’ನಲ್ಲಿ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಕಾರು ಹಾಗು ಒಂದೆರಡು ಜೀಪ್.

ನಾಲ್ಕನೆಯ ಪ್ಲೇನ್’ನಲ್ಲಿ ಕಪ್ಪು ಮರ್ಸಿಡಿಸ್ ಬೆಂಜ್ ಕಾರ್ ಯಾಕೆ ಅಂತ ಯೋಚಿಸ್ತಿದೀರಾ ತಾನೆ?

ಪ್ಲೇನ್ ಹೈಜಾಕ್ ಮಾಡಿದ್ದು ಪ್ಯಾಲೇಸ್ತೇನಿನ ಉಗ್ರರು, ಹೈಜಾಕ್ ಮಾಡಿ ಪ್ರಯಾಣಿಕರನ್ನು ಒತ್ತೆಯಾಳಾಗಿಟ್ಟಿದ್ದು ಉಗಾಂಡಾದ ಎಂಟೆಬ್ಬೆ ಏರಪೋರ್ಟ್’ನಲ್ಲಿ, ಈ ಕೃತ್ಯಕ್ಕೆ ಉಗಾಂಡಾದ ಆಗಿನ ಕ್ರೂರ ಅಧ್ಯಕ್ಷ ‘ಇದಿ ಅಮೀನ್’ ಸಾಥ್ ನೀಡಿದ್ದ.

ಆತ ಪ್ಯಾಲೇಸ್ತೇನಿ ಉಗ್ರರನ್ನ ಭೇಟಿಯಾಗೋಕೆ ಎಂಟೆಬ್ಬೆ ಏರ್ಪೋರ್ಟ್’ಗೆ ಬಂದಾಗ ಆತ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ನಲ್ಲಿ ಬಂದಿದ್ದ ಎಂಬ ಸುದ್ದಿಯಿಂದ ಬಿಡುಗಡೆಯಾದ ಬೇರೆ ರಾಷ್ಟ್ರದ ಪ್ರಯಾಣಿಕರಿಂದ ಮಾಹಿತಿ ಪಡೆದುಕೊಂಡ ಇಸ್ರೇಲ್’ನ ಸೈನ್ಯ ಉಗಾಂಡಾದ ಅಧ್ಯಕ್ಷನ ರೀತಿಯಲ್ಲೇ ಥೇಟ್ ಈತ ಉಗಾಂಡಾ ಅಧ್ಯಕ್ಷನೇ ಅನ್ನೋ ರೀತಿಯಲ್ಲಿ ತನ್ನ ಸೈನಿಕನೊಬ್ಬನನ್ನ ರೆಡಿ ಮಾಡಿದ್ದರು.

ಅದು ಜೂನ್ 4, 1976, ಉಗ್ರರು ನೀಡಿದ್ದ ಡೆಡಲೈನ್ ಮುಗಿಯೋ ಹೊತ್ತಾಗಿತ್ತು. ಅದೇ ಸಮಯದಲ್ಲಿ ಎಂಟೆಬ್ಬೆ ಏರಪೋರ್ಟ್ ಮೇಲೆ ಗುಂಡಿನ ಸುರಿಮಳೆ, ಗ್ರೇನೇಡ್’ಗಳ ದಾಳಿಯಿಂದ ಪ್ಯಾಲೆಸ್ತೇನಿ ಉಗ್ರರು ಹಾಗು ಉಗಾಂಡಾ ಸೈನಿಕರು ಕಕ್ಕಾಬಿಕ್ಕಿಯಾಗಿದ್ದರು.

ನೋಡು ನೋಡುತ್ತಲೇ ಏರಪೋರ್ಟ್ ಒಳಗೆ ನುಗ್ಗಿದ ಇಸ್ರೇಲಿ ಸೈನಿಕರು ಒತ್ತೆಯಾಳಾಗಿದ್ದ ತನ್ನೆಲ್ಲ 103 ಪ್ರಯಾಣಿಕರನ್ನ ಸುರಕ್ಷಿತವಾಗಿ ವಾಪಸ್ ತನ್ನ ತಾಯ್ನಾಡಿಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿತ್ತು.

ಈ ಆಪರೇಷನ್ ಮುಂದಾಳತ್ವವಹಿಸಿದ್ದು ಇಸ್ರೇಲ್ ಡಿಫೆನ್ಸ್ ಫೋರ್ಸ್'(IDF)ನ ಅಧಿಕಾರಿ ಯೋನಾಥನ್ ನೇತನ್ಯಾಹು.

ಅದೃಷ್ಟವಶಾತ್ ಇಸ್ರೇಲಿನ ಎಲ್ಲ ಪ್ರಯಾಣಿಕರೂ ತಾಯ್ನಾಡಿಗೆ ವಾಪಸ್ಸಾದರು, ಆಪರೇಷನ್ ಎಂಟೆಬ್ಬೆ ಯಶಸ್ವಿಯಾಗಿತ್ತು ಆದರೆ ಒಬ್ಬ ಇಸ್ರೇಲಿ ಆಫೀಸರ್ ಮಾತ್ರ ಉಗಾಂಡಾದ ಎಂಟೆಬ್ಬೆ ಏರಪೋರ್ಟನಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ವೀರಮರಣವನ್ನಪ್ಪಿದ್ದ.

ಆತನೇ ಇಡೀ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದ್ದ ಯೋನಾಥನ ನೇತನ್ಯಾಹು!!

ಈಗಿನ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಯಾರು ಗೊತ್ತೆ?

ಈ ಬೆಂಜಮಿನ್ ನೇತನ್ಯಾಹು ಅಂದು ಆಪರೇಷನ್ ಎಂಟೆಬ್ಬೆಯ ಸಾರಥ್ಯ ವಹಿಸಿದ್ದ ಯೋನಾಥನ್ ನೇತನ್ಯಾಹುವಿನ ಒಡಹುಟ್ಟಿದ ತಮ್ಮ.

ಜಗತ್ತಿನ ಇತಿಹಾಸದಲ್ಲಿ ಅಂದು ಇಸ್ರೇಲ್ ನಡೆಸಿದ್ದ ಆಪರೇಷನ್ ಎಂಟೆಬ್ಬೆ ಇಡೀ ವಿಶ್ವದಲ್ಲೇ ಯಾವ ರಾಷ್ಟ್ರವೂ ಹಿಂದೆಯೂ ಮಾಡಿರಲಿಲ್ಲ ಬಹುಷಃ ಮುಂದೆಯೂ ಯಾವ ರಾಷ್ಟ್ರವೂ ಮಾಡಲಾರದೇನೋ!!

ಆಪರೇಷನ್ ಎಂಟೆಬ್ಬೆ ಹಾಗು ನಂತರದ ಕೆಲ ಚಿತ್ರಗಳು:

 

 

ಇಸ್ರೇಲ್ ಕುರಿತಾದ ಇನ್ನಷ್ಟು ಮಾಹಿತಿ ಮುಂದಿನ ಅಂಕಣದಲ್ಲಿ ನಿರೀಕ್ಷಿಸಿ……

– Vinod Hindu Nationalist

 •  
  2K
  Shares
 • 2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com