Connect with us
Loading...
Loading...

ಪ್ರಚಲಿತ

ತಾಜಮಹಲ್ ನೆನ್ನೆ ಅಕ್ಷರಶಃ ಕೇಸರಿಮಯವಾಗಿದ್ದು ಥೇಟ್ ತೇಜೋಮಹಾಲಯದಂತೆಯೇ ಕಂಗೊಳಿಸುತ್ತಿತ್ತು!! ಯಾಕೆ ಗೊತ್ತಾ?

Published

on

  •  
  •  
  •  
  •  
  •  
  •  
  •  
  •  

ಇಸ್ರೇಲ್ ಪ್ರಧಾನಿ ಶ್ರೀ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಬಂದಿರುವುದನ್ನು ಇಡೀ ಜಗತ್ತೇ ನೋಡುತ್ತಿದೆ.‌ ಇಡೀ ಜಗತ್ತಿನ ಕ್ಯಾಮರಾಗಳು ಭಾರತ ಕಡೆ ತಿರುಗಿವೆ. ಇಸ್ರೇಲ್ ಪ್ರಧಾನಿ ಶ್ರೀ ಬೆಂಜಮಿನ್ ನೇತನ್ಯಾಹು ಅವರನ್ನು ಭಾರತ ಅತೀ ಗೌರವದಿಂದ ಸ್ವಾಗತಿಸಿದೆ.

ಪ್ರಧಾನಿ ಮೋದಿಯವರ ಭೇಟಿಯ ನಂತರ, ಇಸ್ರೇಲ್ ಪ್ರಧಾನಿ ಶ್ರೀ ಬೆಂಜಮಿನ್ ನೇತನ್ಯಾಹು ಅವರನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭೇಟಿಯಾಗಿದ್ದಾರೆ.

ಭಾರತೀಯರು ಹೆಮ್ಮೆಯಿಂದ ಬೀಗುವಂತಹ ವಿಚಾರವಿದು. ಅದೇನೆಂದರೆ ವಿದೇಶಿಗನೊಬ್ಬ ಪ್ರೀತಿಯಿಂದ, ಗೌರವದಿಂದ ಭಾರತವನ್ನು ತನ್ನ ಮಾತೃಭೂಮಿ ಎಂದು ಹೆಮ್ಮೆಯಿಂದ ಹೇಳಿಕೊಂಡದ್ದು. ಭಾರತವನ್ನು ತನ್ನ ಮಾತೃಭೂಮಿ ಎಂದು ಹೇಳಿದ್ದು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತಾನ್ಯಾಹು. ಇದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ವಿಷಯ.

ಕಳೆದ ಕೆಲ ತಿಂಗಳ ಹಿಂದೆ ಮೋದಿಯವರು ಒಂದು ಐತಿಹಾಸಿಕ ಘಟನೆಗೆ ಮುನ್ನುಡಿ ಬರೆದಿದ್ದರು. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಇನ್ನೂವರೆಗೂ ಭಾರತದ ಪ್ರಧಾನಿ ಇಸ್ರೇಲಿಗೆ ಭೇಟಿ ನೀಡಿರಲಿಲ್ಲ. ಆದರೆ ಮೋದಿಯವರು ಕೆಲ ತಿಂಗಳುಗಳ ಹಿಂದೆ ಇಸ್ರೇಲಿಗೆ ಭೇಟಿ ನೀಡಿ ಐತಿಹಾಸಿಕ ಘಟನೆಗೆ ಮುನ್ನುಡಿ ಬರೆದಿದ್ದರು‌. ಆ ಭೇಟಿಯ ವೇಳೆ ಇಸ್ರೇಲ್ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ಮೋದಿಯವರನ್ನು ತುಂಬಾ ಗೌರವದಿಂದ ಸತ್ಕರಿಸಿತ್ತು.

ಮೋದಿಜಿಯವರ ಭೇಟಿಯ ವೇಳೆ ಇಡೀ ಇಸ್ರೇಲ್ ಮಂತ್ರಿ ಮಂಡಲವೇ ವಿಮಾನ ನಿಲ್ದಾಣಕ್ಕೆ ಹೋಗಿ ಸತ್ಕರಿಸಿತ್ತು‌. ತದನಂತರ ಮೋದಿಯವರನ್ನು ಇಸ್ರೇಲ್ ತನ್ನ ದೇಶದ ಅತೀ ಸುರಕ್ಷತೆಯ ಸ್ಥಳದಲ್ಲಿ ಇರಿಸಿ ಗೌರವಿಸಿತ್ತು. ಬರೀ ಅಷ್ಟೇ ಅಲ್ಲ ಇಸ್ರೇಲಿಗರು ಬೆಳೆಯುವ ವಿಶೇಷವಾದ ಹೂವಿಗೆ ಮೋದಿಯವರ ಹೆಸರನ್ನಿಟ್ಟು ತನ್ನ ಮತ್ತು ಭಾರತದ ಗೆಳೆತನವನ್ನು ಸಾಬೀತು ಮಾಡಿತ್ತು.

ಮೋದಿಯವರು ಇಸ್ರೇಲಿಗೆ ಹೋಗಿ ಬಂದದ್ದೇನೋ ಆಯಿತು. ಈಗ ಇಸ್ರೇಲಿನ ಪ್ರಧಾನಿ ಭಾರತಕ್ಕೆ ಆಗಮಿಸಿದ್ದಾರೆ. ನಮ್ಮ ಪ್ರಧಾನಿ ಮೋದಿಯವರು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರನ್ನು ಗೌರವದಿಂದ ಸತ್ಕರಿಸಿದ್ದಾರೆ. ಒಟ್ಟು ಆರು ದಿನಗಳ ಕಾಲ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಭಾರತದ ಪ್ರವಾಸ ಮಾಡಲು ಬಂದಿದ್ದಾರೆ.

ಅಷ್ಟಕ್ಕೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಭಾರತಕ್ಕೆ ಸುಖಾಸುಮ್ಮನೆ ಬಂದಿಲ್ಲ. ಭಾರತದ ಜೊತೆ ಮತ್ತಷ್ಟು ಗಟ್ಟಿ ಸಂಭಂದವನ್ನು ಸಾಬೀತು ಮಾಡಲು ಬಂದಿದ್ದಾರೆ.

ಪ್ರಧಾನಿ ಮೋದಿಯವರ ಭೇಟಿಯ ನಂತರ, ಇಸ್ರೇಲ್ ಪ್ರಧಾನಿ ಶ್ರೀ ಬೆಂಜಮಿನ್ ನೇತನ್ಯಾಹು ಅವರನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭೇಟಿಯಾಗಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಇಸ್ರೇಲ್ ಪ್ರಧಾನಿ ಶ್ರೀ ಬೆಂಜಮಿನ್ ನೇತನ್ಯಾಹು ಅವರನ್ನು ಭೇಟಿಯಾಗಿ, ತಾಜ್ ಮಹಲ್ ನತ್ತ ಪಯಣ ಬೆಳೆಸಿದ್ದರು. ಆ ಇಬ್ಬರ ಪ್ರವೇಶದಿಂದ ತಾಜ್ ಮಹಲ್ ಥೇಟ್ ತೇಜೋಮಹಾಲಯದಂತೆ ಕಂಗೊಳಿಸುತ್ತಿತ್ತು. ಯೋಗಿ ಅದಿತ್ಯನಾಥರು ಹೇಳಿ ಕೇಳಿ ಹಿಂದೂ ಫೈರ್ ಬ್ರ್ಯಾಂಡ್, ಇನ್ನು ಇಸ್ರೇಲ್ ಪ್ರಧಾನಿ ಶ್ರೀ ಬೆಂಜಮಿನ್ ನೇತನ್ಯಾಹು ಕೂಡಾ ಭಾರತವನ್ನು ಮಾತೃ ಭೂಮಿಯೆಂದು ಗೌರವಿಸುವವರು.

ಯೋಗಿ ಆದಿತ್ಯನಾಥರು ತಾಜ್ ಮಹಲ್ ಹಿಂದುಗಳ ದಾಸ್ಯದ ಕುರುಹು ಎಂದು ಅನೇಕ ಬಾರಿ ಹೇಳಿದ್ದರು. ಹೀಗಾಗಿಯೆ ಉತ್ತರ ಪ್ರದೇಶದ ಸರ್ಕಾರ ತಾಜ್ ಮಹಲ್ ನ್ನು ಪ್ರವಾಸೋಧ್ಯಮ ಇಲಾಖೆಯ ಪಟ್ಟಿಯಿಂದ ಕೈಬಿಟ್ಟಿತ್ತು. ಯೋಗಿ ಆದಿತ್ಯನಾಥರು ತಾಜ್ ಮಹಲಿಗೆ ಭೇಟಿ ನೀಡಿರುವುದರಿಂದ ತಾಜ್ ಮಹಲ್ ತೇಜೋಮಹಾಲದ ರೀತಿಯಲ್ಲಿ ಹಿಂದುಗಳಿಗೆ ಭಾಸವಾಗುತ್ತಿತ್ತು.

ಅಷ್ಟಕ್ಕೂ ಯೋಗಿ ಆದಿತ್ಯ ನಾಥರು ತಾಜ್ ಮಹಲ್ ನ್ನು ದಾಸ್ಯದ ಕುರುಹು ಅಂದಿದ್ದು ಯಾಕೆ ಗೊತ್ತಾ?

ಪ್ರೊಫೆಸರ್ ಪಿ.ಎನ್. ಓಕ್ ಅವರು ತಾಜ್ ಮಹಲ್ ಬಗ್ಗೆ ಸಂಶೋಧನೆ ಮಾಡಿ ಅದರ ಸತ್ಯಾಸತ್ಯತೆಗಳನ್ನು ಹೊರ ತಂದ ಪ್ರಮುಖರಲ್ಲಿ ಒಬ್ಬರು. ಅವರು ತಮ್ಮ ಸಂಶೋಧನೆಯಿಂದ ಇಡೀ ಜಗತ್ತಿಗೆ ತಾಜ್ ಮಹಲ್ ವೈದಿಕ ದೇವಾಲಯವಾಗಿತ್ತು ಎಂದು ಸಾಬೀತು ಮಾಡಲು ಪ್ರಯತ್ನಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿಸಲು ಸಂಶೋಧನೆ ಮಾಡಿ “ತಾಜ್ ಮಹಲ್” ಎಂಬ ಪುಸ್ತಕವನ್ನು ಬರೆದಿದ್ದಾರೆ.

ಸುಮಾರು ವರ್ಷಗಳ ಸಂಶೋಧನೆಯಿಂದ ಪ್ರೊಫೆಸರ್ ಪಿ.ಎನ್. ಓಕ್ ಅವರು “ತಾಜ್ ಮಹಲ್” ಎಂಬ ಪುಸ್ತಕದಲ್ಲಿ ತಾಜ್ ಮಹಲ್ ಮುಮ್ತಾಜಳ ಗೋರಿಯಲ್ಲ ಅದೊಂದು ವೈದಿಕ ದೇವಾಲಯವಾಗಿತ್ತು. ಮತ್ತು ಅದನ್ನು “ತೇಜೋ ಮಹಾಲಯ” ಎಂದು ಕರೆಯುತ್ತಿದ್ದರು.ಅಲ್ಲಿ ಶಿವನನ್ನು ಆರಾಧಿಸುತ್ತಿದ್ದರು. ಅದು ಶಿವನ ದೇವಾಲಯವಾಗಿತ್ತು ಎಂದು ಪ್ರೊಫೆಸರ್ ಪಿ.ಎನ್. ಓಕ್ ಅವರು “ತಾಜ್ ಮಹಲ್” ಎಂಬ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ.

ತೇಜೋ ಮಹಾಲಯವನ್ನು ಅಂದಿನ ಜೈಪುರುದ ರಾಜನಾಗಿದ್ದ ಜೈ ಸಿಂಗ್ ನಿಂದ ಕಿತ್ತುಕೊಳ್ಳಲಾಗಿತ್ತು ಎಂದು ಪ್ರೊಫೆಸರ್ ಪಿ.ಎನ್. ಓಕ್ ಅವರು ಉಲ್ಲೇಖಿಸಿದ್ದಾರೆ.

ಇದಕ್ಕೆ ಇಂಬುಕೊಡುವಂತೆ ಶಹ ಜಹಾನ್ ತನ್ನ “ಬಾದಶಹನಾಮ“ದಲ್ಲಿ ರಾಜಾ ಜೈಸಿಂಗನಿಂದ ಆಗ್ರಾದ ಅಸಾಧಾರಣವಾದ ಸುಂದರ ಭವ್ಯ ಮಹಲು ಮತ್ತು ಸುಂದರ ಅರಮನೆಯನ್ನು ಮುಮ್ತಾಜಳ ಶವಸಂಸ್ಕಾರಕ್ಕೆ ಪಡೆದದ್ದನ್ನು ಉಲ್ಲೇಖಿಸಿದ್ದಾನೆ.

“ಬಾದಶಹನಾಮ” ಅಂದ್ರೆ ಶಹ ಜಹಾನ್ ತನ್ನ ದಾಖಲೆಗಳನ್ನು ಬರೆದಿಡುತ್ತಿದ್ದ ಹೊತ್ತಿಗೆ. ಶಹ ಜಹಾನ್ ಆ ತೇಜೋ ಮಹಲ್ ನ್ನು ತನಗೆ ಒಪ್ಪಿಸಿ ಶರಣಾಗುವಂತೆ ರಾಜಾ ಜೈ ಸಿಂಗ್ ನಿಗೆ ಪತ್ರ ಬರೆದಿದ್ದನಂತೆ. ಆ ಪತ್ರದ ದಾಖಲೆಗಳು ಈಗಲೂ ರಹಸ್ಯ ಸಂಗ್ರಹಣೆಯಲ್ಲಿ ಇವೆ ಎಂದು ಹೇಳಲಾಗುತ್ತಿದೆ.

ಈ ಕಾರಣಕ್ಕಾಗಿಯೇ ಯೋಗಿ ಆದಿತ್ಯನಾಥರು ತಾಜ್ ಮಹಲ್ ನ್ನು ದಾಸ್ಯದ ಕುರುಹು ಎಂದಿದ್ದರು.

ಇಸ್ರೇಲ್ ಪ್ರಧಾನಿ ಭಾರತಕ್ಕೆ ಬಂದಿರುವುದೇ ಕೆಲವರಿಗೆ ತಡೆದುಕೊಳ್ಳಲಾಗುತ್ತಿಲ್ಲ, ಇನ್ನು ಹಿಂದೂ ಫೈರ್ ಬ್ರ್ಯಾಂಡ್ ಯೋಗೀಜಿಯವರನ್ನು ಭೇಟಿಯಾಗಿದ್ದಂತೂ ಹೇಗೆ ಸಹಿಸಿಕೊಳ್ಳುತ್ತಾರೋ?

– Nationalist Mahi

  •  
  •  
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com