Connect with us
Loading...
Loading...

ಅಂಕಣ

ದಶಕಗಳ ಬಳಿಕ ಬಯಲಾಯ್ತು ಸ್ಪೋಟಕ ರಹಸ್ಯ; ಆಜಾದ್‌ರನ್ನ ನೆಹರು ಕೊಲ್ಲಿಸಿದ್ದು ಹೇಗೆ ಗೊತ್ತಾ?

Published

on

 • 5.8K
 •  
 •  
 •  
 •  
 •  
 •  
 •  
  5.8K
  Shares

ಹೌದು!! ಅಂದು 1931 ನೇ ಇಸವಿ ಫೆಬ್ರವರಿ 27ನೇ ತಾರೀಖು ಬೆಳಗ್ಗೆ ಚಂದ್ರ ಶೇಖರ್ ಅಜಾದ್ ಒಬ್ಬರನ್ನು ಭೇಟಿ ಮಾಡಲು ಅಲಹಾಬಾದಿನಲ್ಲಿ ಆಲ್ಫ್ರೆಡ್ ಪಾರ್ಕಿನ ಕಡೆ ಹೆಜ್ಜೆ ಹಾಕಿದ. ಈ ವಿಷಯ ಮಿತ್ರದ್ರೋಹಿ ಕಾಂಗ್ರೆಸ್ಸಿಗನೊಬ್ಬ ಈ ಸುದ್ದಿಯನ್ನು ಬ್ರಿಟಿಷ್ ಪೋಲಿಸರಿಗೆ ಮುಟ್ಟಿಸಿ, ಅವರ ಬಳಿ ಹಣ ಪಡೆದು ತನ್ನ ಮನೆಗೆ ತೆರಳುತ್ತಾನೆ. (ಅಜಾದ್ ರನ್ನು ಹಿಡಿದುಕೊಟ್ಟವನು ದೇಶದ್ರೋಹಿ ಕಾಂಗ್ರೆಸ್ಸಿಗ ಎಂದು ವಿದ್ಯಾನಂದ ಶೆಣೈ ಅವರು ತಮ್ಮ ಭಾಷಣದಲ್ಲಿ ಹೇಳುತ್ತಿರುವಾಗ ಮೈ ಉರಿದಿತ್ತು)

ಕೆಲವೇ ನಿಮಿಷಗಳಲ್ಲಿ ಪೊಲೀಸ್ ಅಧಿಕಾರಿ ಹಾಲಿನ್ಸ್ ನೇತೃತ್ವದಲ್ಲಿ ಬ್ರಿಟಿಷ್ ಪೊಲೀಸರು ಉದ್ಯಾನವನ್ನು ಸುತ್ತುವರಿದರು. ತನ್ನ ಬಳಿಯಿದ್ದ ಎರಡೂ ಬಂದೂಕುಗಳಿಂದ ಪೊಲೀಸರ ಮೇಲೆ ಗುಂಡಿನ ಮಳೆಗೆರೆದರು. ಒಂದು ಕಡೆಗೆ 80 ಕ್ಕೂ ಹೆಚ್ಚು ಪೊಲೀಸರು, ಇನ್ನೊಂದು ಕಡೆ ಒಬ್ಬನೇ ಒಬ್ಬ ಆಜಾದ್! ಅಷ್ಟು ಮಂದಿಯ ಎದುರಾಗಿ ಅರ್ಧಗಂಟೆಗೂ ಹೆಚ್ಚು ಸಮಯ ಹೋರಾಡಿದ ಕೇವಲ ಇಪ್ಪತ್ತು ನಾಲ್ಕು ವರ್ಷದ ಆ ಧೀರಕುಮಾರ. ಹೋರಾಟದ ನಡುವೆಯೇ ಜೊತೆಯಲ್ಲಿದ್ದ ಗೆಳೆಯನನ್ನು ರಕ್ಷಿಸುತ್ತಾ ಅಲ್ಲಿಂದ ಕಳಿಸಿಬಿಟ್ಟ.

ಆಜಾದ್ ಅವರ ನಿಶ್ಚಿತ ಗುರಿ ಮತ್ತು ಚಾಕಚಕ್ಯತೆಯನ್ನು ಕಂಡು ಬ್ರಿಟಿಷ್ ಅಧಿಕಾರಿ ಹಾಲಿನ್ಸ್ ದಂಗುಬಡಿದ. ಆದರೂ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿದ್ದ ಪೊಲೀಸರೊಂದಿಗೆ ಏಕಾಂಗಿಯಾಗಿ ಹೋರಾಟ ನಡೆಸುವುದು ಆಜಾದ್ಗೆ ಅಸಾಧ್ಯವೇ ಆಗಿತ್ತು. ಪೊಲೀಸರು ತನಗೆ ಹತ್ತಿರವಾಗುತ್ತಿರುವುದನ್ನು ಆಜಾದ್ ಗಮನಿಸಿದರು. ಅವನ ಬಳಿ ಕೊನೆಯಲ್ಲಿ ಒಂದೇ ಒಂದು ಗುಂಡು ಉಳಿದಿತ್ತು. ಅದರ ಲೆಖ್ಖವೂ ಅವನಿಗಿತ್ತು. ಆಗ ಅವನಿಗೆ ಬಾಲ್ಯದ ಪ್ರತಿಜ್ಞೆ ಜ್ಞಾಪಕಕ್ಕೆ ಬಂತು; ಜೀವಂತವಾಗಿ ನಾನು ಎಂದೂ ಸಿಕ್ಕಿ ಬೀಳುವುದಿಲ್ಲ.”

ಮತ್ತೇನೂ ಆಲೋಚಿಸದ ಆಜಾದ್ ಬಂದೂಕನ್ನು ನೇರವಾಗಿ ತನ್ನ ಹಣೆಗೆ ಗುರಿಯಾಗಿಸಿಕೊಂಡರು. ಭಾರತ ಮಾತೆಯನ್ನು ಮನದಲ್ಲೇ ನೆನೆದು ಬಂದೂಕಿನ ಟ್ರಿಗರ್ ಒತ್ತಿದರು. ಒಮ್ಮೆಲೇ ರಕ್ತದೋಕುಳಿ ಹರಿಯಿತು. ಆದರೆ, ಆಜಾದ್ ಮುಖದ ಮೇಲಿನ ಮಂದಹಾಸ ಮಾತ್ರ ಹಾಗೆಯೇ ಇತ್ತು. ಹೀಗೆ ಭಾರತದ ಕ್ರಾಂತಿಯ ದೀಪವೊಂದು ಆರಿ ಹೋಯಿತು. ತನ್ನ ತಾಯಿ ಭಾರತಿಗೆ ಕುಸುಮದಂತೆ ತನ್ನ ಪ್ರಾಣವನ್ನು ಅರ್ಪಿಸಿದ.

ಅಂದು ಚಂದ್ರಶೇಖರ್ ಅಜಾದ್ ರು ಆ ಪಾರ್ಕಿನಲ್ಲಿರುವುದನ್ನು ಹೇಳಿಕೊಟ್ಟ ದೇಶದ್ರೋಹಿ ಕಾಂಗ್ರೆಸ್ಸಿಗನ ಹೆಸರು “ವೀರಭದ್ರ ತಿವಾರಿ”. ( ವಿದ್ಯಾನಂದ ಶೆಣೈ ಅವರು ತಮ್ಮ ಭಾಷಣದಲ್ಲಿ ಈ ಮಾತನ್ನು ಹೇಳಿದಾಗ ಕೇಳಿದವರಿಗೆ ಅದೆಷ್ಟು ಕೋಪ ಬಂದಿರಬೇಡ) ಹೌದು ಈ ದೇಶದ್ರೋಹಿ ಅಜಾದ್ ಸಾವಿಗೆ ಕಾರಣನಾದ. ಎಂಜಲು ಕಾಸಿಗೆ ಅಜಾದ್ ರ ಸುಳಿವನ್ಮು ನೀಡಿ ಹಣ ಪಡೆದಿದ್ದ. ಇದೇ ದೇಶದ್ರೋಹಿ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸಿನಿಂದ ಶಾಸಕನೂ ಆಗಿದ್ದ. ಬಾಯಿ ಬಿಟ್ಟರೆ ನಾವೇ ಸ್ವಾತಂತ್ರ್ಯ ಹೋರಾಟಗಾರರು ಎನ್ನುವ ಕಾಂಗ್ರೆಸ್ಸಿಗರು ಮಾಡಿದ್ದೆಲ್ಲಾ ಇದನ್ನೇ. ಕಾಂಗ್ರೆಸ್ಸಿಗರಲ್ಲಿ ಒಂದು ಪ್ರಶ್ನೆ. ಅದೆಷ್ಟು ಕಾಂಗ್ರೆಸ್ಸಿಗರು ದೇಶಕ್ಕಾಗಿ ಹೋರಾಡಿ ನೇಣುಗಂಬವೇರಿದ್ದಾರೆ ಲೆಕ್ಕ ಕೊಡಿ ನೋಡೋಣ. ಕ್ರಾಂತಿಕಾರಿಗಳ ಕೆಚ್ಚೆದೆಯಿಂದ ದೊರಕಿದ ಸ್ವಾತಂತ್ರ್ಯವೇ ಹೊರತು ಅಹಿಂಸಾ ಮಾರ್ಗದ ಒಳ ಒಪ್ಪಂದದಿಂದಲ್ಲ.

ಅಜಾದ್!! ಸ್ವಾತಂತ್ರ್ಯಕ್ಕೆ ಇನ್ನೊಂದು ಹೆಸರೇ ಅಜಾದ್!!.

ಬ್ರಿಟೀಷರು ಹೊಡೆದ ಒಂದೊಂದು ಏಟಿಗೂ ಆ ಬಾಲಕ ‘ಭಾರತ್ ಮಾತಾ ಕೀ ಜೈ’ , ‘ವಂದೇ ಮಾತರಂ’ ಎಂದು ಜೈಕಾರ ಕೂಗಿದ್ದ. “ದುಷ್ಮನೋಂಕೆ ಗೋಲಿಯೋ ಮೈ ಸಾಮನಾ ಕರೂಂಗಾ ಅಝಾದ್ ಹೂಂ ಮೈ ಅಝಾದ್ ಹೀ ರಹೂಂಗಾ”…

ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ ಹೋರಾಟಗಾರರ ಜಾಥಾ ನಡೆದಿತ್ತು. ಹದಿನೈದನೇ ವಯಸ್ಸಿಗಾಗಲೇ ತಾಯ್ನಾಡಿನ ಹಂಬಲ ಹತ್ತಿಸಿಕೊಂಡಿದ್ದ ಹುಡುಗನೊಬ್ಬ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. “ಬೋಲೋ ಭಾರತ್ ಮಾತಾ ಕೀ… ಜೈ!” “ವಂದೇ… ಮಾತರಂ!” ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕು? ಪೋಲಿಸರ ದಂಡು ಜೇನ್ನೊಣಗಳ ಹಾಗೆ ಎಗರಿತು. ಘೋಷಣೆ ಕೂಗುತ್ತ ತನ್ನ ಪಾಡಿಗೆ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಲಾಯ್ತು. ಎಂಭತ್ತರ ಆಸುಪಾಸಿನ ವೃದ್ಧರೊಬ್ಬರ ಎದೆ ಮೇಲೆ ಆಂಗ್ಲರ ಗುಲಾಮನೊಬ್ಬ ಲಾಠಿ ಬೀಸಿದ. ಆ ಹಿರಿಯ ಜೀವ ನೋವಿನಿಂದ ಚೀರುತ್ತ ಕೆಳಗುರುಳಿತು. ಪೆಟ್ಟು ತಿನ್ನುತ್ತಿದ್ದ ಹಿರಿಯರನ್ನು ನೋಡುತ್ತ ಸಂಕಟಪಡುತ್ತಿದ್ದ ಪೋರನಿಗೆ ಇನ್ನು ತಡಿಯಲಾಗಲಿಲ್ಲ. ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಕಲ್ಲನ್ನೆತ್ತಿ ಒಗೆದ? ವಾಹ್! ಎಂಥ ಗುರಿ! ಕಲ್ಲು ನೇರವಾಗಿ ಕ್ರೂರ ಗುಲಾಮನ ಹಣೆಯೊಡೆಯಿತು. ಅಷ್ಟೇ. ಮರು ಘಳಿಗೆಯಲ್ಲಿ ಬಾಲಕ ಜೈಲುಪಾಲಾಗಿದ್ದ.

ಮರುದಿನ ಅವನನ್ನು ನ್ಯಾಯಾಲಯದಲ್ಲಿ ಹಾಜರು ಮಾಡಿದರು. ಅಲ್ಲಿನ ನ್ಯಾಯಾಧೀಶ ಬಹಳ ಕೆಟ್ಟವನು. ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ಉತ್ರ ಶಿಕ್ಷೆ ವಿಧಿಸುತ್ತಿದ್ದ. ಅವನು ಚಂದ್ರಶೇಖರನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾ ಅಬ್ಬರಿಸಿದ. “ಹೇಳೋ, ಏನೋ ನಿನ್ನ ಹೆಸರು?”

ಅವನನ್ನು ನೋಡಿಯೇ ಚಂದ್ರಶೇಖರನಿಗೆ ಸಿಟ್ಟು ಬಂತು. ಆಂಗ್ಲರು ಎಸೆಯುವ ರೊಟ್ಟಿಯ ತುಣುಕಿಗಾಗಿ ತನ್ನನ್ನೇ ಮಾರಿಕೊಂಡಿರುವ ಈ ಗುಲಾಮನು ದೇಶ ದ್ರೋಹಿ, ಅವನಿಗೆ ಸ್ವಲ್ಪವೂ ಗೌರವ ಕೊಡಬಾರದು ಎಂದು ನಿರ್ಧರಿಸಿಬಿಟ್ಟ.

“ಹೊಂ ನನ್ನ ಹೆಸರು ಆಜಾದ್!” ಎಂದು ಗಟ್ಟಿಯಾಗಿ ಗರ್ಜಿಸಿದ.

ಅವನ ಹೆಸರು ಅಜಾದ್ ಎಂದು ಅಲ್ಲ. ಅಜಾದ್ ಎಂದರೆ “ಸ್ವತಂತ್ರ” ಎಂದು ಅರ್ಥ. ನಾನು ಯಾರಿಗೂ ಗುಲಾಮನಲ್ಲ ಎಂದು ಅರ್ಥ. ನ್ಯಾಯಾಧೀಶ ಇನ್ನೊಂದು ಪ್ರಶ್ನೆ ಕೇಳಿದ:

“ನಿನ್ನಪ್ಪನ ಹೆಸರು?”

“ಸ್ವಾಧೀನತೆ”

“ನಿನ್ನ ವಿಳಾಸ?”

“ನನ್ನ ವಿಳಾಸ ಸೆರೆಮನೆ!”

ಒಂದೊಂದು ಉತ್ತರವೂ ಗುಂಡು ಹೊಡೆದಂತೆ ಹೊರಬಂತು. ಆ ದುಷ್ಟ ನ್ಯಾಯಾಧೀಶನಿಗೆ ದೆಟ್ಟ ಉತ್ತರ ಕೊಟ್ಟ ಪುಟ್ಟ ಬಾಲಕನನ್ನು ನೋಡಿ ಅಲ್ಲಿದ್ದವರೆಲ್ಲ ಖುಷಿಪಟ್ಟರು. ಅಬ್ಬ, ಎಂಥ ಎದೆಗಾರ ಹುಡುಗ ಎಂದು ಮನಸಾರೆಕೊಂಡಾಡಿದರು.

ಈ ಮಾತಿಗೆ ಬಾಲಕನಿಗೆ 15 ಛಡಿಯೇಟುಗಳ ಶಿಕ್ಷೆ ವಿಧಿಸಲಾಯಿತು. ಬ್ರಿಟಿಷರು ಹೊಡೆದ ಒಂದೊಂದು ಏಟಿಗೂ ಆ ಬಾಲಕ ‘ಭಾರತ್ ಮಾತಾ ಕೀ ಜೈ’ ,ವಂದೇ ಮಾತರಮ್ ಎಂದು ಜೈಕಾರ ಕೂಗಿದ್ದ.

ಹೀಗೆ ದೇಶಕ್ಕಾಗಿ ತನ್ನ ಹೆಸರನ್ನೇ ಬದಲಾಯಿಸಿಕೊಂಡ ಧೀರ ಬೇರ್ಯಾರೂ ಅಲ್ಲ, ಚಂದ್ರಶೇಖರ ಸೀತಾರಾಮ್ ತಿವಾರಿ ಅರ್ಥಾತ್ ಚಂದ್ರಶೇಖರ್ ಆಜಾದ್. 1906ರ ಜುಲೈ 23ರಂದು ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಭವ್ರಾ ಎಂಬ ಹಳ್ಳಿಯಲ್ಲಿ ಪಂಡಿತ್ ಸೀತಾರಾಮ್ ತಿವಾರಿ ಮತ್ತು ಜಾಗ್ರಣೀದೇವಿಯವರ ಮಗನಾಗಿ ಜನಿಸಿದ ಚಂದ್ರಶೇಖರ ಆಜಾದ್, ಬಾಲ್ಯದಿಂದಲೂ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದರು.

1919ರ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಬಳಿಕ ಬ್ರಿಟಿಷರ ವಿರುದ್ಧ ಅವರ ಆಕ್ರೋಶ ಇನ್ನಷ್ಟು ಹೆಚ್ಚಾಯಿತು. ವಿಭಿನ್ನ ಆಲೋಚನಾ ಶಕ್ತಿ, ವಾಕ್ಚಾತುರ್ಯ, ಸಾಹಸ ಪ್ರವೃತ್ತಿ ಮತ್ತು ಯುದ್ಧಭೂಮಿಯಲ್ಲಿ ಹೋರಾಡುವ ವೀರ ಯೋಧನ ಸ್ಥೈರ್ಯದಿಂದ ಆಜಾದ್ ಮುಂದೆ ಕ್ರಾಂತಿಕಾರಿ ಸಂಘಟನೆಯ ಕೇಂದ್ರಬಿಂದುವಾದರು.

ಅವನ ಹದಿನಾರನೆ ವಯಸ್ಸಿನ ವೇಳೆಗೆ ಅವನು ಕ್ರಾಂತಿಕಾರಿ ಸೈನಿಕನಾದ. ಆಗ ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿ ಎಂಬ ಕ್ರಾಂತಿಕಾರಿ ಸಂಸ್ಥೆ ಇತ್ತು. ಅದಕ್ಕೆ ರಾಮಪ್ರಸಾದ್ ಬಿಸ್ಮಿಲ್ ಎಂಬ ಒಬ್ಬ ಧೀರರು ನಾಯಕರು. ಆಜಾದ್ ಅವರ ಗುಂಪನ್ನು ಸೇರಿದ. ಕ್ರಾಂತಿ ಚಟುವಟಿಕೆಗಳನ್ನು ಹೇಗೆ ನಡೆಸುವುದು ಎಂಬುದನ್ನು ಕಲಿತ.ರಾಮ್ ಪ್ರಸಾದ್ ಬಿಸ್ಮಿಲ್ ಅವರ ಕಟ್ಟಾ ಶಿಷ್ಯನಾಗಿ ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿ ಗೆ ಸದಸ್ಯನೂ ಆದ.

ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿಗೆ ಬಂದೂಕು, ಪಿಸ್ತೂಲು, ಕಾಡತೂಸು ಮುಂತಾದವು ಬೇಕಾಗಿತ್ತು. ಅದಕ್ಕೆ ಹಣ ಎಲ್ಲಿಂದ ತರುವುದು? ಬಿಸ್ಮಿಲ್ಲರ ನೇತೃತ್ವದಲ್ಲಿ ಒಂಬತ್ತು ಜನರ ದಂಡು ಸಿದ್ಧವಾಯಿತು. ಅದರಲ್ಲಿ ಆಜಾದನೂ ಒಬ್ಬ.

1925 ನೇ ಇಸವಿ ಆಗಸ್ಟ್ 9 ನೇ ತಾರೀಖು ಉತ್ತರಪ್ರದೇಶದ ರಾಜಧಾನಿ ಲಕ್ನೋ ಬಳಿಯ ಕಾಕೋರಿ ಎಂಬ ರೈಲು ನಿಲ್ದಾಣದ ಹತ್ತಿರ ರೈಲು ನಿಲ್ಲಿಸಿ ಅದರಲ್ಲಿ ರವಾನೆ ಆಗುತ್ತಿದ್ದ ಸರಕಾರಿ ಖಜಾನೆಯನ್ನು ಕ್ರಾಂತಿಕಾರಿಗಳು ಲೂಟಿ ಮಾಡಿದರು. ಆದರೆ ಪೊಲೀಸರು ಬೇಗ ಎಚ್ಚರಗೊಂಡು ಎಲ್ಲರನ್ನೂ ಬಂಧಿಸಿಬಿಟ್ಟರು. ಬಿಸ್ಮಿಲ್ಲರೂ ಸಿಕ್ಕಿಬಿದ್ದರು. ಪೊಲೀಸರು ತಿಪ್ಪರಲಾಗ ಹಾಕಿದರೂ ಹಿಡಿಯಲು ಆಗದೆ ಹೋದದ್ದು ಒಬನನ್ನೇ, ಅವನೇ ಚಂದ್ರಶೇಖರ ಆಜಾದ್.

ಸಂನ್ಯಾಸಿಯ ಹಾಗೆ, ಕೋಲಿಯ ಹಾಗೆ, ಸಾಹುಕಾರನ ಹಾಗೆ, ಡ್ರೈವರನ ಹಾಗೆ, ಕೊನೆಗೆ ಪೊಲೀಸರ ಹಾಗೆ ವೇಷ ಧರಿಸಿಕೊಂಡು ಪೊಲೀಸರಿಗೆ, ಗುಪ್ತಚಾರರಿಗೆ ಮಂಕುಬೂದಿ ಎರಚುತ್ತಾ ಆಜಾದ್ ತಪ್ಪಿಸಿಕೊಳ್ಳುತ್ತಿದ್ದ. ಲಕ್ನೋ, ಕಾನಪುರ, ಝಾನ್ಸಿ, ದಿಲ್ಲಿ, ಲಾಹೋರ್, ಕಾಶಿ ಮುಂತಾದ ಕಡೆಯಲೆಲ್ಲ ಓಡಾಡುತ್ತಿದ್ದ.ಬ್ರಿಟಿಷರಿಗೆ ಬಿಸ್ಮಿಲ್ ಹಾಗೂ ಮೂವರು ಸಿಕ್ಕಿಬಿದ್ರು ಗಲ್ಲಿಗೇರಿಸಲಾಯಿತು.

ಆಗ ಆಜಾದ್ ಗೆ ಸಿಕ್ಕಿದ್ದು ತರುಣ ಭಗತ್ ಸಿಂಗ್ ಈತನಿಂದ ಆರ್ಮಿ ಮತ್ತೆ ತಲೆ ಎತ್ತಿತ್ತು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಆಯ್ತು ಅದಕ್ಕೆ ಆಜಾದ್ ಸೇನಾದಿಪತಿ!!1928 ರ ಸೆಪ್ಟೆಂಬರ ೮ ರಂದು ದಿಲ್ಲಿಯ ಪಾಳುಬಿದ್ದ ಕೋಟೆ ಫಿರೋಜ್ ಷಾ ಕೊಟ್ಲಾ ಎಂಬಲ್ಲಿ ಸಭೆ ನಡೆಯಿತು. ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿಗೆ ಹೊಸ ರೂಪ ಕೊಟ್ಟು. ಹೆಸರನಲ್ಲೂ ಬದಲಾವಣೆ ಮಾಡಿದರು. ಹಿಂದುಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಷಿಯೇಷನ್ ಎಂದು ಕರೆದರು. ಅದಕ್ಕೆ ಪ್ರಧಾನ ಸೇನಾಧಿಪತಿಯೇ ಚಂದ್ರಶೇಖರ ಆಜಾದ್.

ಆಗಿನ ದಿನಗಳಲ್ಲಿ ಆಂಗ್ಲ ಸರಕಾರ ಒಂದು ಹೊಸ ಯೋಜನೆ ಮಾಡಿತು. ಸೈಮನ್ ಎಂಬ ಒಬ್ಬ ಅಧಿಕಾರಿಯ ನಾಯಕತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಆ ಸಮಿತಿಯು ಕೆಲವು ಸುಧಾರಣೆಗಳನ್ನು ಮಾಡುವ ನೆಪದಲ್ಲಿ ದೇಶದಲ್ಲಿ ಎಲ್ ಕಡೆ ಓಡಾಡಿ ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಸಡಿಲತೆ ತರುವುದೆಂದು ರಾಷ್ಟ್ರದ ನಾಯಕರು ತೀರ್ಮಾನಿಸಿದರು. ಆದ್ದರಿಂದ ಆ ಸೈಮನ್ ಸಮಿತಿಯನ್ನು ಎಲ್ಲ ಕಡೆ ಬಹಿಷ್ಕರಿಸಬೇಕೆಂದು ರಾಷ್ಟ್ರಕ್ಕೆ ಕರೆ ನೀಡಿದರು.

ಸೈಮನ್ ಸಮಿತಿ ಲಾಹೋರಿಗೆ ಬಂದಾಗ ಅಲ್ಲೊಂದು ಭಾರೀ ಪ್ರದರ್ಶನ ನಡೆಯಿತು. ಅದರ ನಾಯಕರು ಪಂಜಾಬಿನ ಸಿಂಹ ಲಾಲಾ ಲಜಪತ್‌ರಾಯ್. ಅದಕ್ಕೆ ಜನರನ್ನು ಸೇರಿಸಿದವರು ಆಜಾದನ ಗೆಳೆಯರು ಕ್ರಾಂತಿಕಾರಿಗಳೇ. ಪ್ರದರ್ಶನದ ಬೆನ್ನೆಲುಬೇ ಅವರು. ಪೊಲೀಸರಂತೂ ಬಹಳ ಅನಾಗರಿಕವಾಗಿ ವರ್ತಿಸಿದರು. ಸ್ಯಾಂಡರ್ಸ್‌ ಎಂಬ ಅಧಿಕಾರಿ ಲಾಲಾಜಿಯವರನ್ನು ತನ್ನ ಕೈಯಾರ ಚೆನ್ನಾಗಿ ಬಡಿದ. ಆ ಪೆಟ್ಟುಗಳಿಂದ ನರಳಾಡಿ 1928ರ ನವೆಂಬರ್ ಹದಿನೇಳರಂದು ಲಾಲಾಜಿ ಅಸುನೀಗಿದರು.

ಈ ಘಟನೆಯಿಂದ ಆಜಾದ್, ಭಗತ್‌ಸಿಂಗ್ ಮತ್ತು ಗೆಳೆಯರಿಗೆ ಬಹಳ ದಃಖವಾಯಿತು, ಸಿಟ್ಟುಬಂತು. ಅದು ಮೂವತ್ತು ಮೂರು ಕೋಟಿ ಭಾರತೀಯರ ಎದೆಗೆ ಒದ್ದು ಅವಮಾನ ಮಾಡಿದಂತೆ. ಭಾರತದಲ್ಲಿ ಹಂಡಸುತನ ಉಳಿದಿದೆ ಎಂದು ಸಾಧಿಸಿಬೇಕಾದರೆ ಅದಕ್ಕೆ ಪ್ರತೀಕಾರ ತೋರಿಸಬೇದಿ ಎಂದು ತೀರ್ಮಾನಿಸಿದರು. ಆಜಾದನ ಮಾರ್ಗದರ್ಶನದಲ್ಲಿ ಪ್ರತೀಕಾರದ ಯೋಜನೆ ತಯಾರಾಯಿತು.

ಲಾಲಾ ಲಜಪತ್‌ರಾಯ್ ತೀರಿಹೋಗಿ ಒಂದು ತಿಂಗಳಿಗೆ ಸರಿಯಾಗಿ ಆಜಾದ್, ಭಗತ್‌ಸಿಂಗ್, ರಾಜಗುರು ಮುಂತಾದವರು ಲಾಹೋರಿನ ಪೊಲೀಸ್ ಸೂಪರಿಂಟೆಂಡೆಂಟಿನ ಕಛೇರಿಯ ಹತ್ತಿರ ಶಸ್ತ್ರಸಜ್ಜಿತರಾಗಿ ಸೇರಿದರು. ಅವರ ಉದ್ದೇಶ ಒಬ್ಬ ಪೊಲೀಸ್ ಅಧಿಕಾರಿಯನ್ನು ಮುಗಿಸಿಹಾಕಿ ಲಾಲಾಜಿ ಕೊಲೆಗೆ ಪ್ರತೀಕಾರ ತೀರಿಸುವುದು. ಗುಂಡಿಗೆ ಗುಂಡಿನಿಂದಲೇ, ಕತ್ತಿಗೆ ಕತ್ತಿಯಿಂದಲೇ ಉತ್ತರ ಕೊಡಬೇಕು ಎಂಬುದು ಕ್ರಾಂತಿಕಾರಿಗಳಾದ ಅವರ ನಂಬಿಕೆ.

ಲಾಲಾಜಿಯವರನ್ನು ಕೊಂದು ಹಾಕಿದ್ದ ಸ್ಯಾಂಡರ್ಸನು ಕಛೇರಿಯಿಂದ ಹೊರಬರುತ್ತಿದ್ದಂತೆ ಭಗತ್‌ಸಿಂಗ್ ಮತ್ತು ರಾಜಗುರು ಗುಂಡುಹಾರಿಸಿ ಅವನನ್ನು ನೆಲಕ್ಕೆ ಕೆಡವಿದರು ಅವನು ಅಲ್ಲೇ ಪ್ರಾಣಬಿಟ್ಟ. ಆಜಾದ್ ದೂರದಲ್ಲಿ ನಿಂತು ಇದನ್ನೆಲ್ಲ ಗಮನಿಸುತ್ತಿದ್ದ. ಭಗತ್‌ಸಿಂಗ್ ಮತ್ತು ರಾಜಗುರುವನ್ನು ಪೊಲೀಸರು ಅಟ್ಟಿಸಿಕೊಂಡು ಹೋಗಲಾರಂಭಿಸಿದರು. ಇನ್ನೇನು ಒಬ್ಬ ಪೊಲೀಸ್ ಭಗತ್‌ಸಿಂಗನನ್ನು ಹಿಡಿಯಬೇಕು, ಅಷ್ಟರಲ್ಲಿ ಆಜಾದ್ ತಾನು ನಿಂತಲ್ಲಿಂದಲೇ ಗುಂಡು ಹಾರಿಸಿದ, ಆ ಪೊಲೀಸಿನವನು ಕೆಳಕ್ಕೆ ಬಿದ್ದ. ಭಗತ್‌ಸಿಂಗ್ ಅಲ್ಲಿಂದ ಓಡಿಹೋದ. ಆಜಾದ್ ಹೀಗೆ ಇಬ್ಬರು ಗೆಳೆಯರನ್ನೂ ರಕ್ಷಿಸಿದ. ಎಲ್ಲರೂ ಪೊಲೀಸರಿಂದ ಪಾರಾಗಿಹೋದರು.

ಸ್ಯಾಂಡರ್ಸ ಹತನಾದ ಸ್ವಲ್ಪ ಸಮಯದಲ್ಲಿಯೇ ಸುದ್ದಿ ಎಲ್ಲೆಡೆ ಹಬ್ಬಿತು. ಸ್ಯಾಂಡರ್ಸನಿಗೆ ಗುಂಡಿಟ್ಟವರು ಯಾರು ಎಂದು ಎಲ್ಲರೂ ಕುತೂಹಲಗೊಂಡರು. ಮರುದಿನ ಲಾಹೋರಿನಲ್ಲಿ ಭಿತ್ತಿಪತ್ರಗಳು ಕಾಣಿಸಿಕೊಂಡವು. ಕ್ರಾಂತಿಕಾರಿಗಳು ತಾವೇ ಆ ಕೆಲಸ ಮಾಡಿರುವುದಾಗಿಯೂ ಅದು ಪೂಜ್ಯ ಲಾಲಾಜಿಯವರ ಕಗ್ಗೊಲೆಗೆ ಪ್ರತ್ಯುತ್ತರ ಎಂದು ಬರೆದಿದ್ದರು. ಇವೆಲ್ಲ ಪತ್ರಿಕೆಗಳಲ್ಲೂ ಪ್ರಕಟವಾದವು. ಭಾರತದ ಜನತೆ ಹೆಮ್ಮೆ ಪಟ್ಟುಕೊಂಡಿತು. ಪೊಲೀಸರು ಆಜಾದ್ ಮತ್ತು ಗೆಳೆಯರನ್ನು ಹುಡುಕುವುದನ್ನು ತೀವ್ರಗೊಳಿಸಿದರು. ಇಡೀ ಲಾಹೋರಿನಲ್ಲಿ ಎಲ್ಲ ನೋಡಿದರೂ ಪೊಲೀಸ್ ಪಹರೆ ಗುಪ್ತಚರ ಜಾಲ.

ಆಜಾದನು ಒಬ್ಬ ಮಠಧಿಪತಿಯಂತೆ ವೇಷಧರಿಸಿ ಶಿಷ್ಯರ ಜೊತೆ ತೀರ್ಥಯಾತ್ರೆಗೆ ಹೋಗುವವನಂತೆ ಅಭಿನಯಿಸುತ್ತಾ ಲಾಹೋರಿನಿಂದ ಹೊರಕ್ಕೆ ಹೋದ. ಆಜಾದನ ಸಲಹೆಯಂತೆ ಭಗತ್‌ಸಿಂಗ್ ಒಬ್ಬ ಸರಕಾರಿ ಅಧಿಕಾರಿಯಂತೆಯೂ, ರಾಜಗುರುವು ಅವನ ನೌಕರನಂತೆಯೂ, ಕ್ರಾಂತಿಕಾರಿಣಿ ದುರ್ಗದೇವಿ ಭಗತ್‌ಸಿಂಗನ ಪತ್ನಿಯಂತೆಯೂ ನಟಿಸುತ್ತಾ ಲಾಹೋರಿನಿಂದ ರೈಲಿನಲ್ಲಿ ಹೊರಟು ಹೋದರು. ಈ ಇಡೀ ಕಾರ್ಯಾಚರಣೆಯ ಯೋಜನೆಯನ್ನು ರೂಪಿಸಿದವನು ಆಜಾದ್.

1929 ಏಪ್ರಿಲ್ ತಿಂಗಳ ವೇಳೆಗೆ ಸರಕಾರ ಇನ್ನೊಂದು ದುಷ್ಟ ಯೋಜನೆ ಮಾಡಿತು. ಭಾರತದ ಜನರ ಗುಲಾಮಗಿರಿಯ ಬಂಧನವನ್ನು ಮತ್ತಷ್ಟು ಬಿಗಿ ಮಾಡುವ ಸಂಚು ಅದು. ಅಂತಹ ಎರಡು ಮಸೂದೆಗಳನ್ನು ಆಗಿನ ಅಸೆಂಬ್ಲಿಯಲ್ಲಿ ಅದು ಮಂಡಿಸಲು ಸಿದ್ಧತೆ ನಡೆಸಿತು.

ಈ ಕುತಂತ್ರವನ್ನು ಪ್ರತಿಭಟಿಸಲು ಆಜಾದನ ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌, ತೀರ್ಮಾನಿಸಿತು. ಆ ಮಸೂದೆಗಳು ಮಂಡನೆ ಆಗುವಾಗ ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್ತರು ಅಸೆಂಬ್ಲಿ ಭವನದಲ್ಲಿ (ಈಗಿನ ಪಾರ್ಲಿಮೆಂಟ್ ಭವನ) ಬಾಂಬುಗಳನ್ನು ಸ್ಫೋಟಿಸಿ, ಕೈಹೊತ್ತಗೆಗಳನ್ನು ಎರಚಬೇಕೆಂದು ತಿರ್ಮಾನವಾಯಿತು. ಇದಕ್ಕೆಲ್ಲ ಆಜಾದನದೇ ಮಾರ್ಗದರ್ಶನ. 1929ರ ಏಪ್ರಿಲ್ 8ರಂದು ಅಸೆಂಬ್ಲಿ ನಡಿಯುತ್ತಿದ್ದಾಗಲೇ ಬಾಂಬುಗಳು ಸ್ಫೋಟಗೊಂಡವು. “ಕ್ರಾಂತಿ ಚಿರಾಯುವಾಗಿರಲಿ” ಎಂಬಘೋಷಣೆ ಮೊಳಗಿತು. ಭಗತ್‌ಸಿಂಗ್‌ ಮತ್ತು ಬಟುಕೇಶ್ವರ ದತ್ತರು ಅಲ್ಲಿಯೇ ಬಂಧನಕ್ಕೊಳಗಾದರು. ಯೋಜನೆಯಂತೆ ಆಜಾದ್ ಅಲ್ಲಿಂದ ಮೊದಲೇ ಬಂದು ಬಿಟ್ಟಿದ್ದ. ಭಗತ್‌ಸಿಂಗ್ ಮತ್ತು ದತ್ತರ ಮೇಲೆ ಸರಕಾರ ಮೊಕದ್ದಮೆ ಹೂಡಿತು.

ಆಜಾದನನ್ನು ಹುಡುಕುವ ಪ್ರಯತ್ನವಂತೂ ನೂರು ಪಟ್ಟು ಹೆಚ್ಚಾಯಿತು. ಅವನೇ ಕ್ರಾಂತಿಕಾರಿಗಳ ಸೇನಾಪತಿ. ಅವನೇ ಕ್ರಾಂತಿ ಕಾರ್ಯಚರಣೆಗಳ ಯೋಜಕ. ಅವನೇ ಯಾವಾಗಲೂ ತಮಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಣಕ್ಯ ಎಂದು ಸರಕಾರಕ್ಕೆ ಚೆನ್ನಾಗಿ ಗೊತ್ತಿತ್ತು. ಆದರೆ ಆಜಾದ್ ಅವರ ಕೈಗೆ ಅಷ್ಟು ಸುಭವಾಗಿ ಸಿಕ್ಕಿ ಬೀಳುವ ಮೂರ್ಖನಾಗಿರಲಿಲ್ಲ. ಎಷ್ಟೋ ಸಲ ಅವರ ಕೈಗೆ ಸಿಕ್ಕಿಬಿಟ್ಟಂತೆ ಅವರಿಗೆ ಕಂಡರೂ ಕ್ಷಣಾರ್ಧದಲ್ಲಿ ನುಣುಚಿಕೊಂಡು ಹೋಗಿಬಿಡುತ್ತಿದ್ದ.

ಅದು 1931 ನೇ ಇಸವಿ ಫೆಬ್ರವರಿ 27ನೇ ತಾರೀಖು ಬೆಳಗ್ಗೆ ಅಜಾದ್ ಒಬ್ಬರನ್ನು ಭೇಟಿ ಮಾಡಲು ತೆರಳಿದ್ದ ಆತನೇ ಜವಾಹರಲಾಲ್ ನೆಹರು, ಅವರಿಬ್ಬರ ನಡುವೆ ಅದೇನು ಮಾತುಕತೆ ನಡೆಯಿತೋ ಗೊತ್ತಿಲ್ಲ ನೆಹರುವಿನ ಮನೆಯಿಂದ ಹೊರಗೆ ಬಂದ ಆಜಾದ್ ಬಳಿಕ ಅಲಹಾಬಾದಿನಲ್ಲಿ ಆಲ್ಫ್ರೆಡ್ ಪಾರ್ಕಿನ ಕಡೆ ಹೆಜ್ಜೆ ಹಾಕಿದ. ಈ ವಿಷಯ ಮಿತ್ರದ್ರೋಹಿ ವೀರಭದ್ರ ತಿವಾರಿ ಬ್ರಿಟಿಷರಿಗೆ ಹೇಳಿಬಿಟ್ಟ . ಈ ವೀರಭದ್ರ ತಿವಾರಿ ನೆಹರುವಿನ ಪರಮಾಪ್ತ ಕಾಂಗ್ರೆಸ್ಸಿಗನಾಗಿದ್ದ.

ಕೆಲವೇ ನಿಮಿಷಗಳಲ್ಲಿ ಪೊಲೀಸ್ ಅಧಿಕಾರಿ ಹಾಲಿನ್ಸ್ ನೇತೃತ್ವದಲ್ಲಿ ಪೊಲೀಸರು ಉದ್ಯಾನವನ್ನು ಸುತ್ತುವರಿದರು. ತನ್ನ ಬಳಿಯಿದ್ದ ಎರಡೂ ಬಂದೂಕುಗಳಿಂದ ಪೊಲೀಸರ ಮೇಲೆ ಗುಂಡಿನ ಮಳೆಗೆರೆದರು.ಒಂದು ಕಡೆಗೆ 80 ಕ್ಕೂ ಹೆಚ್ಚು ಪೊಲೀಸರು, ಇನ್ನೊಂದು ಕಡೆ ಒಬ್ಬನೇ ಒಬ್ಬ ಆಜಾದ್! ಅಷ್ಟು ಮಂದಿಯ ಎದುರಾಗಿ ಅರ್ಧಗಂಟೆಗೂ ಹೆಚ್ಚು ಸಮಯ ಹೋರಾಡಿದ ಕೇವಲ ಇಪ್ಪತ್ತು ನಾಲ್ಕು ವರ್ಷದ ಆ ಧೀರಕುಮಾರ. ಹೋರಾಟದ ನಡುವೆಯೇ ಜೊತೆಯಲ್ಲಿದ್ದ ಗೆಳೆಯನನ್ನು ರಕ್ಷಿಸುತ್ತಾ ಅಲ್ಲಿಂದ ಕಳಿಸಿಬಿಟ್ಟ.

ಆಜಾದ್ ಅವರ ನಿಶ್ಚಿತ ಗುರಿ ಮತ್ತು ಚಾಕಚಕ್ಯತೆಯನ್ನು ಕಂಡು ಬ್ರಿಟಿಷ್ ಅಧಿಕಾರಿ ಹಾಲಿನ್ಸ್ ದಂಗುಬಡಿದ. ಆದರೂ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿದ್ದ ಪೊಲೀಸರೊಂದಿಗೆ ಏಕಾಂಗಿಯಾಗಿ ಹೋರಾಟ ನಡೆಸುವುದು ಆಜಾದ್ಗೆ ಅಸಾಧ್ಯವೇ ಆಗಿತ್ತು. ಪೊಲೀಸರು ತನಗೆ ಹತ್ತಿರವಾಗುತ್ತಿರುವುದನ್ನು ಆಜಾದ್ ಗಮನಿಸಿದರು.

ಅವನ ಬಳಿ ಕೊನೆಯಲ್ಲಿ ಒಂದೇ ಒಂದು ಗುಂಡು ಉಳಿದಿತ್ತು. ಅದರ ಲೆಖ್ಖವೂ ಅವನಿಗಿತ್ತು. ಆಗ ಅವನಿಗೆ ಬಾಲ್ಯದ ಪ್ರತಿಜ್ಞೆ ಜ್ಞಾಪಕಕ್ಕೆ ಬಂತು; ಜೀವಂತವಾಗಿ ನಾನು ಎಂದೂ ಸಿಕ್ಕಿ ಬೀಳುವುದಿಲ್ಲ.”

ಮತ್ತೇನೂ ಆಲೋಚಿಸದ ಆಜಾದ್ ಬಂದೂಕನ್ನು ನೇರವಾಗಿ ತನ್ನ ಹಣೆಗೆ ಗುರಿಯಾಗಿಸಿಕೊಂಡರು. ಭಾರತ ಮಾತೆಯನ್ನು ಮನದಲ್ಲೇ ನೆನೆದು ಬಂದೂಕಿನ ಟ್ರಿಗರ್ ಒತ್ತಿದರು. ಒಮ್ಮೆಲೇ ರಕ್ತದೋಕುಳಿ ಹರಿಯಿತು. ಆದರೆ, ಆಜಾದ್ ಮುಖದ ಮೇಲಿನ ಮಂದಹಾಸ ಮಾತ್ರ ಹಾಗೆಯೇ ಇತ್ತು. ಹೀಗೆ ಭಾರತದ ಕ್ರಾಂತಿಯ ದೀಪವೊಂದು ಆರಿ ಹೋಯಿತು. ತನ್ನ ತಾಯಿ ಭಾರತಿಗೆ ಕುಸುಮದಂತೆ ತನ್ನ ಪ್ರಾಣವನ್ನು ಅರ್ಪಿಸಿದ.ಆಜಾದ್ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾರ್ಕ್ ಬಳಿ ಸೇರಿದರು. ಆದರೆ, ಬ್ರಿಟಿಷರು ಯಾರಿಗೂ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಿಲ್ಲ. ಗಂಗೆಯ ದಡದಲ್ಲಿ ಆಜಾದರ ಅಂತ್ಯಕ್ರಿಯೆ ರಹಸ್ಯವಾಗಿ ನಡೆಯಿತು.

ಧೀರ ಮಣ್ಣಿನ ಮಗ ಚಂದ್ರಶೇಖರ ಆಜಾದನನ್ನು ಇಂದು ಕೂಡ ನಾವೆಲ್ಲ ನೆನೆಯುತ್ತೇವೆ. ಅವನ ದೇಹದಾಢ್ರ್ಯ, ಸಾಮರ್ಥ್ಯ, ಬುದ್ಧಿವಂತಿಕೆ, ತ್ಯಾಗ ಮನೋಭಾವನೆ, ಮಿತ್ರ ಪ್ರೇಮ, ಸಂಘಟನಾಶಕ್ತಿ, ರಾಷ್ಟ್ರದ ಎಲ್ಲ ಯುವಕರಲ್ಲೂ ಮೂಡಲಿ ಎಂದು ಬಯಸುತ್ತೇವೆ. ಅವನೇ ‘ಆದರ್ಶ ಭಾರತೀಯ ಕ್ರಾಂತಿಕಾರಿ’ ಎಂದು ಕೊಂಡಾಡುತ್ತೇವೆ. ಹೊರದೇಶದಿಂದ ವ್ಯಾಪಾರಕ್ಕೆ ಬಂದು, ಮೋಸವನ್ನು ಬಳಸಿ, ಈ ದೇಶವನ್ನೇ ತಮ್ಮ ವಶ ಮಾಡಿಕೊಂಡು ಲೂಟಿ ಹೊಡೆದ ವಿದೇಶೀಯರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಮಹಾಧೀರರಲ್ಲಿ ಆಜಾದ್ ಒಬ್ಬ. ಆತನೂ ಆತನೊಡನೆ ಕೆಲಸಮಾಡಿದ ದೇಶಭಕ್ತರೂ ಹಿಂಸೆಯನ್ನು ಬಳಸಿದ್ದು ವಿದೇಶಿ ಸರ್ಕಾರದ ವಿರುದ್ಧ. ಇಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ವಿದೇಶೀಯರ ವಿರುದ್ಧ. ತಮ್ಮ ಸುಖವನ್ನು ತಮ್ಮ ಸಂಸಾರದವರ ಉಳಿವನ್ನು ಬದಿಗೊತ್ತಿ ತಾಯ್ನಾಡಿಗೆ ತಮ್ಮ ಪ್ರಾಣವನ್ನೆ ಅರ್ಪಿಸಿದ ಆ ಧೀರರು ಎಂದೆಂದಿಗೂ ನಮ್ಮ ಸ್ಮರಣೆಯಲ್ಲಿ ಬೆಳಗಬೇಕಾದ ಹುತಾತ್ಮರು.

– Team Nationalist Views

©2018 Copyrights Reserved

 •  
  5.8K
  Shares
 • 5.8K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com