Connect with us
Loading...
Loading...

ಅಂಕಣ

ದೇವಾಲಯಗಳನ್ನೇ ನಾಶ ಮಾಡಿದರೆ, ಹಿಂದೂ ಧರ್ಮವೇ ನಾಶವಾಗುತ್ತೆಂದು ಆ ವಿಶಿಷ್ಟ ದೇವಾಲಯವನ್ನೇ ಮಸೀದಿ ಮಾಡಿಬಿಟ್ಟರಲ್ಲ!!! ಯಾವುದು ಆ ಐತಿಹಾಸಿಕ ಮಂದಿರ?

Published

on

 • 3K
 •  
 •  
 •  
 •  
 •  
 •  
 •  
  3K
  Shares

ಭಾರತದ ಮೇಲೆ ಮೊದ ಮೊದಲು ದಾಳಿ ಮಾಡಿದ್ದು ಸಂಪತ್ತು ದೋಚಲು. ಆದರೆ ದಾಳಿ ಮಾಡಿದ ವಿದೇಶಿಯರೆಲ್ಲಾ ಸಂಪತ್ತನ್ನು ಲೂಟಿ ಮಾಡಿದ ಮೇಲೆ ಮಾಡಿದ್ದೇನು ಗೊತ್ತಾ?

ಭವ್ಯ ಭಾರತದ ಸಂಸ್ಕೃತಿ, ಸಂಸ್ಕಾರವನ್ನು ಕಂಡ ವಿದೇಶಿ ಆಕ್ರಮಣಕಾರರು ಇಲ್ಲಿಯ ಸಂಸ್ಕೃತಿ, ಸಂಸ್ಕಾರಕ್ಕೆ ಕೊಳ್ಳಿ ಇಡಲು ಶುರು ಮಾಡಿದರು.

ಅವರಲ್ಲಿ ಅತೀ ಹೀನಾತೀತವಾಗಿ ನಡೆದುಕೊಂಡವರು ಘಜ್ನಿ, ಘೋರಿ, ಬಾಬರ್ ಇತ್ಯಾದಿ ಇತ್ಯಾದಿ. ಅಷ್ಟಕ್ಕೂ ನಮ್ಮ ಸಂಸ್ಕೃತಿ, ಸಂಸ್ಕಾರಕ್ಕೆ ಏಕೆ ಕೊಳ್ಳಿ ಇಡಲು ಶುರು ಮಾಡಿದರು ಗೊತ್ತೆ? ಅವರ ಧರ್ಮ ಇಡೀ ಜಗತ್ತನ್ನು ಆಳಬೇಕೆಂಬ ದುರಾಸೆಯಿಂದ.

ಬರೀ ಘಜ್ನಿ, ಘೋರಿಗಳಷ್ಟೇ ಅಲ್ಲ, ಬ್ರಿಟಿಷರು ಇದನ್ನೆ ಮಾಡಿದ್ದರು. ತಮ್ಮ ಮತವೊಂದೇ ಜಗತ್ತನ್ನು ಆಳಬೇಕು, ತಮ್ಮ ಏಕದೇವರನ್ನೇ ಇಡೀ ಜಗತ್ತು ಪೂಜಿಸಬೇಕೆಂಬುದು ಅವರ ಉದ್ದೇಶವಾಗಿತ್ತು.

ಅದಕ್ಕಾಗಿ ಆ ಮತ ಭ್ರಾಂತರು ಆರಿಸಿಕೊಂಡ ಮಾರ್ಗ ಯಾವುದು ಗೊತ್ತೆ?

ಹಿಂದೂ ಧರ್ಮವನ್ನು ನಾಶಮಾಡಬೇಕೆಂದರೆ ಅವರ ದೇವಸ್ಥಾನಗಳನ್ನು ನಾಶ ಮಾಡಬೇಕು. ದೇವಸ್ಥಾನಗಳು ನಾಶವಾದರೆ ಹಿಂದೂ ಧರ್ಮವೇ ನಾಶವಾಗುತ್ತದೆ ಎಂಬ ಲೆಕ್ಕಾಚಾರ. ಆ ಗುಬಾಲ್ಡ್ ಗಳಿಗೇನು ಗೊತ್ತು? ನಮ್ಮ ದೇವಾಲಯ ನಾಶವಾದರೂ ನಮ್ಮ ಧರ್ಮ ನಾಶವಾಗುವುದಿಲ್ಲವೆಂದು. ಏಕೆಂದರೆ ಹಿಂದೂ ಧರ್ಮ ನಮ್ಮ ಜೀವನ ಕ್ರಮ ಹೊರತು ಪುಸ್ತಕಗಳಲ್ಲಿರುವ ಕಟ್ಟಳೆಗಳಲ್ಲವೆಂದು.

ಮತಾಂಧರು ಹಿಂದೂ ಧರ್ಮವನ್ನು ನಾಶ ಮಾಡಲಿಕ್ಕಾಗಿ ನಮ್ಮ ದೇವಾಲಯಗಳನ್ನು ನಾಶ ಮಾಡಿದರು. ನಾಶಮಾಡಿ, ಅದೇ ದೇವಸ್ಥಾನದ ಅವಶೇಷಗಳನ್ನು ಬಳಸಿ ಮಸೀದಿಗಳನ್ನು ಕಟ್ಟಿಸಿದರು.

ಇದಕ್ಕೆ ಒಂದು ಉದಾಹರಣೆಯನ್ನು ಕೊಡುತ್ತೇನೆ.‌ ಇದನ್ನು ಕೆಲ ಅಡ್ನಾಡಿಗಳು ಒಪ್ಪುವುದಿಲ್ಲ. ಆದರೆ ಅದಕ್ಕೆ ಸಾಕ್ಷಿಗಳನ್ನು ನಾನು ಕೊಡುತ್ತೇನೆ. ಓದಿ ಅವಲೋಕನ ಮಾಡಿದರೆ ಆಗ ಸತ್ಯ ಅರ್ಥವಾಗುತ್ತದೆ‌.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಮತಾಂಧರ ಆಕ್ರಮಣದಿಂದ ಒಟ್ಟು 40,000( ನಲವತ್ತು ಸಾವಿರ) ದೇವಸ್ಥಾನಗಳು ನಾಶವಾಗಿವೆ. ಹಾಗೂ ಅದೇ ನಾಶವಾದ ದೇವಸ್ಥಾನಗಳ ಮೇಲೆ ಮಸೀದಿಗಳು ತಲೆ ಎತ್ತಿ ನಿಲ್ಲುವಂತೆ ದೇವಸ್ಥಾನದ ಅವಶೇಷಗಳನ್ನು ಬಳಸಿ ಮಸೀದಿಗಳನ್ನು ಆಕ್ರಮಣಕಾರ ಮತಾಂಧರು ಕಟ್ಟಿದ್ದಾರೆ.

ಇಲ್ಲಿ ಇತಿಹಾಸವನ್ನು ಭಾರತೀಯರ ಮುಂದೆ ತೆರೆದಿಡುವುದಷ್ಟೇ ನಮ್ಮ ಉದ್ದೇಶ. ಯಾರೂ ಬಾಯಿಬಿಡದ ಇತಿಹಾಸವನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದೇವೆ.

ಘಜ್ನಿ, ಘೋರಿ, ಬಾಬರ್ , ಔರಂಗ್ ಜೇಬ್, ಅಕ್ಬರ್, ಹೈದರಾಲಿ, ಟಿಪ್ಪು, ಕ್ಸೇವಿಯರ್, ಬ್ರಿಟಿಷರು, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಲೆಕ್ಕವೇ ಸಿಗದಷ್ಟು ಮತಾಂಧರು ಹಿಂದೂ ಸಂಸ್ಕೃತಿ, ಹಿಂದೂ ಧರ್ಮ , ಹಿಂದೂ ದೇವಾಲಯ, ಹಿಂದುಗಳ ಮೇಲೆ ಅಟ್ಟಹಾಸ ಮೆರೆದಿದ್ದಾರೆ.

ಈ ಆಕ್ರಮಣಕಾರಿ ಮತಾಂಧರಲ್ಲಿ ಮುಸ್ಲಾಮನ್ ಮತಾಂಧರಿಗೆ ಭಾರತವನ್ನು ಇಸ್ಲಾಮೀಕರಣ ಮತ್ತು ಕ್ರೈಸ್ತ ಮತಾಂಧರಿಗೆ ಭಾರತವನ್ನು ಕ್ರೈಸ್ತೀಕರಣ ಮಾಡುವ ಉದ್ದೇಶವಿತ್ತು. ಹೀಗಾಗಿ ಅವರು 40,000 ಹಿಂದೂ ದೇವಾಲಯಗಳನ್ನು ನಾಶ ಮಾಡಿದರು.

ಅವರ ಲೆಕ್ಕ ಹೇಗಿತ್ತು ಗೊತ್ತಾ? ಹಿಂದೂ ದೇವಾಲಯಗಳನ್ನು ನಾಶ ಮಾಡಿದರೆ, ಹಿಂದೂ ಧರ್ಮ ನಾಶವಾಗುತ್ತೆ ಎನ್ನುವ ಲೆಕ್ಕ. ಮೂರ್ಖರಿಗೇನು ಗೊತ್ತು ದೇವಾಲಯಗಳು ನಾಶವಾದರೂ ಕೂಡಾ ಪ್ರತಿಯೊಬ್ಬ ಹಿಂದುವಿನ ಮನಸ್ಸು ನಾಶವಾಗುವುದಿಲ್ಲ.

ಹಿಂದೂ ಧರ್ಮಕ್ಕೆ ಹುಟ್ಟಿದ ದಿನವೂ ಇಲ್ಲ ಹೀಗಾಗಿ ಅದು ನಾಶವಾಗುವುದಿಲ್ಲ ಎನ್ನುವುದು ಆ ಮೂರ್ಖರಿಗೆ ಗೊತ್ತಿರಲಿಲ್ಲ.

ಜಗತ್ತಿನ ಇತಿಹಾಸವನ್ನೊಮ್ಮೆ ತೆಗೆದು ನೋಡಿದ ಹಿಂದೂ ಧರ್ಮದ ಮೇಲೆ ದಾಳಿ ಆದಷ್ಟು ಯಾವ ಧರ್ಮದ ಮೇಲೂ ಆಗಿಲ್ಲ. ಇಸ್ಲಾಂ ದಾಳಿಗೆ ಇರಾಕ್ ನಾಶವಾಗಿ ಹೋಯಿತು, ಅಮೆರಿಕಾ ಕೂಡಾ ಕ್ರೈಸ್ತರ ಕ್ರೌರ್ಯಕ್ಕೆ ಅಲ್ಲಿನ ಮೂಲ ನಿವಾಸಿಗಳೇ ಇಲ್ಲಂದತಾಯ್ತು. ಆದರೆ ಭಾರತದ ಮೇಲೆ ನಿರಂತರ ದಾಳಿ ನಡೆದರೂ ಹಿಂದೂ ಧರ್ಮದ ಅವನತಿ ಆಗಲೇ ಇಲ್ಲ. ಅದು ಹಿಂದೂ ಧರ್ಮದ ತಾಕತ್ತು.

ಈ ಭೂಮಂಡಲದಲ್ಲಿ ಯಾವುದಕ್ಕೆ ಹುಟ್ಟು ಇಲ್ಲವೋ ಅದಕ್ಕೆ ಸಾವೇ ಇಲ್ಲ. ಅಂದರೆ ಹಿಂದೂ ಧರ್ಮಕ್ಕೆ ಹುಟ್ಟೇ ಇಲ್ಲ ಹೀಗಾಗಿ ಸಾಯುವುದೂ ಇಲ್ಲ.

ಗುಜರಾತಿನ ಅಹಮಾದಾಬಾದಿನಲ್ಲಿ ಜಾಮಾ ಮಸೀದಿ ಇದೆ. ಜಾಮಾ ಮಸೀದಿಯನ್ನು 1424ರಲ್ಲಿ ಅಹಮದ್ ಷಾ ಎಂಬ ಮತಾಂಧ ಭದ್ರಕಾಳಿ ದೇವಾಲಯವನ್ನು ನಾಶ ಮಾಡಿ, ಅದೇ ದೇವಾಲಯದ ಅವಶೇಷಗಳನ್ನು ಬಳಸಿ ಮಸೀದಿಯನ್ನು ಕಟ್ಟಿಸಿದ. ಅದಕ್ಕೆ ಜಾಮಾ ಮಸೀದಿ ಎಂದು ಹೆಸರಿಟ್ಟನು.

ಅಹಮದಾಬಾದ್ ಇದು ಗುಜರಾತಿನ ಒಂದು ಪಟ್ಟಣ.‌ಈ ಊರಿನ ಹೆಸರಿಗೂ ಮತಾಂಧರ ಕಪ್ಪು ಛಾಯೆ ಬಿದ್ದಿದೆ. ಅಹಮದಾಬಾದಿನ ಮೂಲ ಹೆಸರು ಕರ್ಣಾವತಿ.

ಜಾಮಾ ಮಸೀದಿ ಮೂಲತಃ ಹಿಂದೂ ಭದ್ರಕಾಳಿ ದೇವಿಯ ದೇವಾಲಯವಾಗಿತ್ತು. ಭದ್ರಕಾಳಿ ದೇವಾಲಯವನ್ನು 9ರಿಂದ 14ನೇ ಶತಮಾನದ ಮಧ್ಯದ ಕಾಲದಲ್ಲಿ ರಾಜಸ್ಥಾನದ ರಜಪೂತ ದೊರೆ ಪರ್ಮಾರು ರಾಜ ಕಟ್ಟಿಸಿದ್ದರು. 14ನೇ ಶತಮಾನದ ವೇಳೆಗೆ ಮತಾಂಧ ಅಹಮದ್ ಷಾನ ಕಣ್ಣು ಕರ್ಣಾವತಿಯ(ಅಹಮದಾ ಬಾದ್) ಮೇಲೆ ಬಿತ್ತು.

ತನ್ನ ಸೇನೆಯೊಂದಿಗೆ ಆಗಮಿಸಿದ ಅಹಮದ್ ಷಾ 1424ರಲ್ಲಿ ಭದ್ರಕಾಳಿ ದೇವಾಲಯವನ್ನು ನಾಶ ಮಾಡಿ ಮಸೀದಿ ಕಟ್ಟಿಸಿ, ಅದಕ್ಕೆ ಜಾಮಾ ಮಸೀದಿ ಎಂದು ಹೆಸರಿಟ್ಟನು. ಇದು ಭದ್ರಕಾಳಿ ದೇವಾಲಯವು ಮಸೀದಿಯಾಗಿ ಮಾರ್ಪಟ್ಟ ಇತಿಹಾಸ.

ಜಾಮಾ ಮಸೀದಿ ಮೂಲತಃ ಹಿಂದೂ ದೇವಿ ಭದ್ರಕಾಳಿಯ ದೇವಾಲಯವಾಗಿತ್ತು ಅನ್ನೋಕೆ ಒಂದೊಂದೆ ಸಾಕ್ಷಿಯನ್ನು ಹೇಳುತ್ತಾ ಹೋಗುತ್ತೇನೆ. ಓದುಗರು ಅವಲೋಕನ ಮಾಡಿದರೆ ಜಾಮಾ ಮಸೀದಿ ದೇವಾಲಯವಾಗಿತ್ತು ಅನ್ನೋದು ಅರ್ಥವಾಗುತ್ತದೆ.

ದೇವಸ್ಥಾನಗಳಲ್ಲಿ ಸ್ತಂಭಗಳು(ಕಂಬಗಳು) ಇರುವಂತೆ ಜಾಮಾ ಮಸೀದಿಯ ಒಳಗಡೆ ಹಲವಾರು ಸ್ಥಂಬಗಳಿವೆ. ಆ ಸ್ತಂಭಗಳ ಮೇಲೆ ಹೂವಿನ ಚಿತ್ರ, ಶಿಲ್ಪ ಕಲೆಗಳು, ಆನೆಗಳ ಚಿತ್ರ, ನರ್ತನೆಯ ಚಿತ್ರ, ಗಂಟೆಗಳ ಚಿತ್ರಗಳನ್ನು ಕೆತ್ತಲಾಗಿದೆ. ಅದು ಮಸೀದಿಯೇ ಆಗಿದ್ದರೆ ಈ ಕೆತ್ತನೆಗಳು ಹೇಗೆ ಬಂದವು? ಮಸೀದಿಯ ಒಳಗೆ ಸ್ತಂಭಗಳು ಇರುವುದಿಲ್ಲ. ನಮಾಜ್ ಮಾಡುವ ಅಡ್ಡಿಯಾಗುವ ಕಾರಣ ಸ್ತಂಬಗಳನ್ನು ನಿರ್ಮಿಸಿರುವುದಿಲ್ಲ. ಹಾಗಾದರೆ ಜಾಮಾ ಮಸೀದಿಯ ಒಳಗಡೆ ಕಂಬಗಳು ಹೇಗೆ ಬಂದವು?

ಅಂದರೆ ಅದು ಹಿಂದೂ ದೇವಾಲಯವಾಗಿತ್ತು ಅಂತಲೇ ಅರ್ಥ ಅಲ್ವಾ? ಅದು ಅಲ್ಲದೆ ಕಂಬಗಳ ಮೇಲೆ ಕೆತ್ತನೆ ಇದೆ. ಅದು ಕೂಡಾ ಮೂರ್ತಿಗಳ ಕೆತ್ತೆನೆ, ಕಮಲ ಹೂವಿನ ಕೆತ್ತೆನೆ. ಇವೆಲ್ಲವುಗಳನ್ನು ಗಮನಿಸಿದರೆ ಅದು ಮೂಲತಃ ಹಿಂದೂ ದೇವಾಲಯವಾಗಿತ್ತು ಅಂತ ಖಂಡಿತವಾಗಿಯೂ ಹೇಳಬಹುದು.

ಮಸೀದಿ ಎನ್ನುವುದಾದರೆ ಸ್ತಂಭಗಳ ಮೇಲೆ ಹಿಂದೂ ದೇವಾಲಯದ ಶೈಲಿಯ ಕೆತ್ತನೆಗಳು ಹೇಗೆ ಬಂದವು? ಆ ಕೆತ್ತನೆಗಳು ರಾಮಾಯಣ, ಮಹಾಭಾರತದ ಇತಿಹಾಸದಡಿಯಲ್ಲಿ ಕೆತ್ತಲಾಗಿದೆ‌.

1411ರಲ್ಲಿ ಮಜಫರೀದ್ ವಂಶದ ಒಂದನೇ ಅಹಮದ್ ಷಾ ಕರ್ಣಾವತಿಯ ಮೇಲೆ ಹೀನಾತೀತ ದಾಳಿ ಮಾಡಿ, ರಕ್ತದ ಕೋಢಿಯನ್ನು ಹರಿಸಿ, ಕರ್ಣಾವತಿಯನ್ನು ಅಹಮದಾಬಾದ್ ಆಗಿ ಮಾಡಿದ. ಅದನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ.‌

ಇದೆಲ್ಲಾ ಇತಿಹಾಸದಲ್ಲಿ ಮುಚ್ಚಿಹೋದ ಸತ್ಯಗಳು.‌ ಇದನ್ನೇ ಓದುಗರ ಮುಂದೆ ತೆರೆದಿಡಲು ನಾವು ಬಂದಿದ್ದೇವೆ.

ಕರ್ಣಾವತಿಯ ಮೇಲೆ ದಾಳಿ ಮಾಡಿ ಅದನ್ನು ಅಹಮಾದಾಬಾದ್ ಆಗಿ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ ಒಂದನೇ ಅಹಮದ್ ಷಾ ಅಲ್ಲಿಯೇ ಸಬರ ಮತಿ ನದಿಯ ದಂಡೆಯ ಮೇಲೆ ಒಂದು ಭದ್ರಕೋಟೆಯನ್ನು ಕಟ್ಟಿಸಿದ.

ಇಸ್ಲಾಂ ಧರ್ಮವು ವಿಗ್ರಹದ ಆರಾಧನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ ಮತ್ತು ದೈಹಿಕ ಪ್ರಾತಿನಿಧ್ಯವನ್ನು ಅಥವಾ ಪೂಜೆಯನ್ನು ನೀಡಲು, ಶೌರ್ಯ ಕಾನೂನಿನ ಅಡಿಯಲ್ಲಿ ನಿಷೇಧಿಸಲಾಗಿದೆ. ಹೀಗಾಗಿಯೇ ಒಂದನೇ ಅಹಮದ್ ಷಾ ಹಿಂದೂ ದೇವಾಲಯಗಳ ಮೇಲೆ ಕಣ್ಣು ಹಾಕಿ ಅದನ್ನು ನಾಶ ಮಾಡಿ, ಮಸೀದಿಯನ್ನು ಕಟ್ಟಿಸಿದ.

ಜಾಮಾ ಮಸೀದಿ ಎಂದು ಕರೆಯಲ್ಪಡುವ ಭದ್ರಕಾಳಿ ದೇವಾಲಯದ ಛಾವಣಿಗಳ ಮೇಲೆ ಈ ವಿಸ್ತಾರವಾದ ಕಸೂತಿ ಕೆತ್ತನೆಗಳು ಈಗಲೂ ಇವೆ. ಹಾಗಾದರೆ ಅದು ಹಿಂದೂ ದೇವಾಲಯವಾಯ್ತಲ್ವಾ? ಸತ್ಯವನ್ನು ಒಪ್ಪಿಕೊಳ್ಳೋಕೆ ಕೆಲವರಿಗೆ ಕಷ್ಟ ಆಗಬಹುದು. ಆದರೆ ಸತ್ಯ ಇತಿಹಾಸವನ್ನು ನಾವು ಓದುಗರಿಗೆ ತಲುಪಿಸಲೇಬೇಕೆಂದು ಶಪಥ ಮಾಡಿದ್ದೇವೆ.

ಮಸೀದಿಯಲ್ಲಿನ ಕೆಲವು ಕೇಂದ್ರ ಗುಮ್ಮಟಗಳನ್ನು ಕಮಲದ ಹೂವುಗಳಂತೆ ಕೆತ್ತಲಾಗಿದೆ, ಮತ್ತು ಕೆಲವು ಸ್ತಂಭಗಳನ್ನು ಹಿಂದೂ ದೇವಾಲಯಗಳಲ್ಲಿನ ಘಂಟೆಗಳಿಗೆ ಸಂಬಂಧಿಸಿದಂತೆ ಒಂದು ಸರಪಳಿಯಲ್ಲಿ ನೇತಾಡುವ ಗಂಟೆಯ ರೂಪದಿಂದ ಕೆತ್ತಲಾಗಿದೆ. ಅಂದರೆ ಭದ್ರಕಾಳಿ ದೇವಾಲಯದ ಅವಶೇಷಗಳಿಂದ ಜಾಮಾ ಮಸೀದಿಯನ್ನು ಕಟ್ಟಲಾಗಿದೆ ಅಂತಾಯ್ತಲ್ವಾ?

 

ಸತ್ಯವನ್ನು ಒಪ್ಪಿಕೊಳ್ಳೋಕೆ ಕೆಲವರಿಗೆ ಕಷ್ಟ ಆಗಬಹುದು. ಆದರೆ ಸತ್ಯ ಇತಿಹಾಸವನ್ನು ನಾವು ಭಾರತೀಯರ ಮುಂದೆ ತೆರೆದಿಡಬೇಕೆಂಬ ಶಪಥ ಮಾಡಿದ್ದೇವೆ.

– Nationalist Mahi

 •  
  3K
  Shares
 • 3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com