Connect with us
Loading...
Loading...

ಅಂಕಣ

ನನ್ನ ದೇಹದಲ್ಲೇನೋ ಐದು ಗುಂಡುಗಳು ಹೊಕ್ಕಿರಬಹುದು. ಆದರೆ ಪ್ರಾಣ ಹೋಗಿಲ್ವಲ್ಲ. ನನ್ನ ಪ್ರಾಣ ಇರೋವರೆಗೂ ನಾನು ಮಾತೃಭೂಮಿಗಾಗಿ ಹೋರಾಡುತ್ತಲೇ ಇರುತ್ತೇನೆ!!

Published

on

 • 1.4K
 •  
 •  
 •  
 •  
 •  
 •  
 •  
  1.4K
  Shares

ದರಾಜ್ ಬಳಿಯ ಗುಮರಿ ಬೇಸ್ ಕ್ಯಾಂಪ್ ರಕ್ಷಿಸುವ ಜವಾಬ್ದಾರಿಯನ್ನು ಆ ತಂಡಕ್ಕೆ ನೀಡಲಾಗಿತ್ತು. ಆ ಬೇಸ್ ಕ್ಯಾಂಪ್ ರಕ್ಷಿಸಿಕೊಳ್ಳಲು 70 ಡಿಗ್ರಿಯಲ್ಲಿ ಬೆಟ್ಟವನ್ನು ಭಾರತೀಯ ಪಡೆಗಳು ಏರಬೇಕಿತ್ತು. ಕೊರೆಯುವ ಚಳಿಯಲ್ಲಿ ಹಗಲು ರಾತ್ರಿಯೆನ್ನದೆ ಬೆಟ್ಟವನ್ನು ಹತ್ತಬೇಕಿತ್ತು.

ಶತ್ರುಗಳೊಡನೆ ಮುಖಾಮುಖಿಯಾಗುವ ಅರಿವಿದ್ದರೂ ಪಡೆಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿತ್ತು. ಶತ್ರು ಸಂಖ್ಯೆಯ ಬಲದ ಅರಿವಿಲ್ಲ.

ಭಾರತೀಯ ಪಡೆಯ 13ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ ನ ಚಾರ್ಲಿ ಕಂಪನಿಯ ಹತ್ತು ಜನ ಯೋಧರ ತಂಡ ಅದರ ಉಸ್ತುವಾರಿಯನ್ನು ಹೊತ್ತು ಬೆಟ್ಟ ಏರುತ್ತಿತ್ತು.

ಅದರ ನೇತೃತ್ವವನ್ನು ವಹಿಸಿದ್ದ ಸೈನಿಕ ನಿದ್ರೆ ಮಾಡದೆ ಬರೋಬ್ಬರಿ 30 ಗಂಟೆಗಳಾಗಿತ್ತು. ಆದರೆ ಆ ಸೈನಿಕನಿಗೆ ನಿದ್ದೆಯ ಬದಲಾಗಿ ವೈರಿಗಳ ಪಾಲಾಗಿರುವ ಬೆಟ್ಟವನ್ನು ತನ್ನದಾಗಿಸುವ ಕನಸಿತ್ತು.

ಆ ಕನಸನ್ನು ನನಸು ಮಾಡಿಕೊಳ್ಳುವವರೆಗೂ ನಿದ್ದೆ ಮಾಡಬಾರದೆಂದು ಶಪಥ ಮಾಡಿಬಿಟ್ಟಿದ್ದ. ಆತನ ಹೆಸರು ಸಂಜಯ್ ಕುಮಾರ್/ ರೈಫಲ್ ಮ್ಯಾನ್ ಸಂಜಯ್ ಕುಮಾರ್.

ಸಂಜಯ್ ಕುಮಾರ್ ಜನಿಸಿದ್ದು ಛತ್ತೀಸ್ ಗಡದ ಬಿಲಾಸ್ಪುರ್ ಜಿಲ್ಲೆಯ ಬೈಕಣ್ ಗ್ರಾಮದಲ್ಲಿ. ಸಂಜಯ್ ಕುಮಾರ್ ನ ಚಿಕ್ಕಪ್ಪ ಸೇನೆಯಲ್ಲಿದ್ದುದರಿಂದ, ಆತನಿಗೆ ಚಿಕ್ಕಪ್ಪನೇ ಸ್ಪೂರ್ತಿಯಾಗಿದ್ದ.

ಸಂಜಯ್ ಕುಮಾರ್ ನ ಚಿಕ್ಕಪ್ಪ 1965ರ ಭಾರತ-ಪಾಕಿಸ್ತಾನದ ರೋಚಕ ಕದನದಲ್ಲಿ ಭಾಗವಹಿಸಿದ್ದರು. ಹೀಗಾಗಿ ಆ ಯುದ್ಧದ ಗೆಲುವಿನಲ್ಲಿ ಅವರದೂ ಪಾಲಿತ್ತು.

ಚಿಕ್ಕಪ್ಪನಿಗೆ ಸಂಜಯ್ ಕಂಡರೆ ತುಂಬಾ ಪ್ರೀತಿ. ಚಿಕ್ಕಂದಿನಿಂದಲೇ ಹುಡುಗ ಸಂಜಯನಿಗೆ ಸೇನೆಯ ಮೇಲೆ ಪ್ರೀತಿ ಬರುವಂತಹ ಅನೇಕ ಸೈನಿಕರ ಕಥೆಗಳನ್ನು ಹೇಳುತ್ತಿದ್ದರು.

ಅವರಿಗೆ ಸಂಜಯ್ ಕುಮಾರ್ ನನ್ನು ಸೇನೆಗೆ ಸೇರಿಸಬೇಕೆಂಬ ಮಹಾದಾಸೆಯಿತ್ತು. ಅದರಂತೆ ಸಂಜಯ್ ಕೂಡಾ ಭಾರತೀಯ ಸೇನೆಯನ್ನು ತುಂಬಾ ಪ್ರೀತಿಸುತ್ತಿದ್ದ. ಹೀಗಾಗಿ ಆ ಹುಡುಗನಲ್ಲಿ ಸೇನೆ ಸೇರಬೇಕೆಂಬ ಆಸೆ ಇತ್ತು.

ಸಂಜಯ್ 1996ರಲ್ಲಿ ಹತ್ತನೇ ತರಗತಿ ಮುಗಿಸಿದವನೇ ಸೈನ್ಯವನ್ನು ಸೇರಿಬಿಟ್ಟ. ಸೈನ್ಯದಲ್ಲಿ 13 ಜೆ.ಕೆ ರೈಫಲ್ಸ್ ನಲ್ಲಿ ಸೈನಿಕನಾಗಿ ನಿಯುಕ್ತಿಗೊಂಡರು.

ಸಂಜಯ್ ಕುಮಾರ್ 13 13 ಜೆಕ್ ರೈಫಲ್ಸ್ ನಲ್ಲಿ ಸೈನಿಕನಾಗಿ ನಿಯೋಜನೆ ಆದ ನಂತರ ರೈಫಲ್ ಮ್ಯಾನ್ ಸಂಜಯ್ ಕುಮಾರ್ ಹೆಸರಿನಿಂದಲೇ ಎಲ್ಲರೂ ಕರೆಯುತ್ತಿದ್ದರು.

ಆ ಯುವಕ ಸೇನೆ ಸೇರಿ ಮೂರು ವರ್ಷ ಕಳೆಯುವುದರೊಳಗೆ ನವಾಜ್ ಷರೀಫ್ ಭಾರತದ ಬೆನ್ನಿಗೆ ಚೂರಿ ಇರಿದಿದ್ದ. ಪಾಕಿಸ್ತಾನದ ಸೇನೆ ಬೆಟ್ಟವನ್ನು ಏರಿ ನಮ್ಮದೇ ಬಂಕರುಗಳನ್ನು ವಶಪಡಿಸಿಕೊಂಡು ಕೂತುಬಿಟ್ಟಿತು.

ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ತಲುಪಿತು. ಅದರ ಸತ್ಯಾ ಸತ್ಯತೆ ತಿಳಿದುಕೊಂಡು ಬರಲು ನಮ್ಮ ಸೇನೆ ಯೋಧ ಸೌರಬ್ ಕಾಲಿಯಾ ನೇತೃತ್ವದಲ್ಲಿ ಐದು ಜನ ಯೋಧರನ್ನು ಬೆಟ್ಟ ಹತ್ತಿಸಿತು.

ಅಂದು ಮೇ 15 , 1999ರಂದು ಕ್ಯಾಪ್ಟನ್ ಸೌರಬ್ ಕಾಲಿಯಾ ಮತ್ತು 5 ಜನ ಸಂಗಡಿರೊಂದಿಗೆ ಕಸ್ಕರ್ ಭಾಗದಲ್ಲಿದ್ದ ಬಜರಂಗ್ ಪೋಸ್ಟ್ ಕಡೆಗೆ ಹೊರಟ.

ದಟ್ಟವಾದ ಕಾಡು, ಮೈಕೊರೆಯುವ ಛಳಿ, ಅಘಾದವಾದ ಹಿಮಪಾತವನ್ನು ಲೆಕ್ಕಿಸದೇ ಸೌರಬ್ ಮುನ್ನಡೆದ. ಆ ಬೆಟ್ಟದ ಮೇಲೆ ಎಷ್ಟು ಜನ ಪಾಕಿಗಳು ಇದ್ದಾರೆ ಎಂಬ ಮಾಹಿತಿ ಸೌರಬ್ ಕಾಲಿಯಾಗೆ ಇರಲಿಲ್ಲ.

ಬರೀ ಅದರ ಸತ್ಯಾ ಸತ್ಯತೆಯನ್ನು ತಿಳಿದುಕೊಂಡು ವರದಿ ಮಾಡಲು ಬೆಟ್ಟವನ್ನೇರಿ ತನ್ನ ಐದು ಜನರ ತಂಡದೊಂದಿಗೆ ಬಂದಿದ್ದ.

ಬೆಟ್ಟವನ್ನೇರಿ ಭಜರಂಗ್ ಪೋಸ್ಟ್ ಹತ್ತಿರ ಹೋಗುತ್ತಿದ್ದಂತೆ ಸೌರಬ್ ಮತ್ತು ಅವನ ತಂಡವನ್ನು ನೂರಾರು ಜನ ಪಾಕಿಸ್ತಾನಿಯರು ಸುತ್ತುವರೆದು ಹಿಡಿದುಬಿಟ್ಟರು.

ಅಲ್ಲಿಯಿಂದಲೇ ಯುದ್ಧಕ್ಕೆ ಪಾಕಿಗಳು ಮುನ್ನುಡಿ ಬರೆದಂತಾಗಿತ್ತು. ಸೌರಬ್ ಕಾಲಿಯ ಮತ್ತು ಸಂಗಡಿಗರನ್ನು ಹಿಡಿದ ಪಾಕಿಗಳು ಸುಮಾರು 25 ದಿನಗಳ ಕಾಲ ಅವರಿಗೆ ಚಿತ್ರಹಿಂಸೆ ಕೊಟ್ಟು ಕೊನೆಯಲ್ಲಿ ಗುಂಡಿಟ್ಟು ಕೊಂದರು.

ಜೂನ್ 9 ರಂದು ಪಾಪಿಸ್ತಾನ ಸೌರಬ್ ಕಾಲಿಯಾನ ದೇಹವನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತು. ದೆಹಲಿಯಲ್ಲಿ ಅವನ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿದ ವೈದ್ಯರು ದಂಗುಬಡಿದರು. ಆ ಪರಿಯ ಚಿತ್ರಹಿಂಸೆಯ್ನು ಅವರು ಎಂದೂ ನೋಡಿರಲಿಲ್ಲ.

ದೇಹವನ್ನು ಸಿಗರೇಟ್ ಇಟ್ಟು ಸುಟ್ಟಿದ್ದರು. ಕಬ್ಬಿಣದ ಕಂಬಿಗಳನ್ನು ಕಾಯಿಸಿ ಕಣ್ಣುಗುಡ್ಡೆಗಳನ್ನು ಅದರಲ್ಲಿ ಸುಟ್ಟು ಕಿತ್ತುಹಾಕಿದ್ದರು. ಬೆರಳುಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ಚಾಕುವಿನಿಂದ ಚರ್ಮ ಸುಲಿದಿದ್ದರು. ಪ್ರಾಣಿಗಳನ್ನು ಬಿಟ್ಟು ಕಚ್ಚಿಸಿದರು. ಮರ್ಮಾಂಗವನ್ನು ಕತ್ತರಿಸಿ ಬಿಸಾಡಿದ್ದರು.

ಈ ಎಲ್ಲ ಚಿತ್ರಹಿಂಸೆಯನ್ನು ಕೊಟ್ಟು ಕೊನೆಗೆ ಗುಂಡಿಟ್ಟು ಕೊಂದರು. ಅಲ್ಲಿಗೆ ಯುದ್ಧ ಸ್ಥಿತಿ ನಿರ್ಮಾಣಗೊಂಡಿತು. ಆಗಲೇ ವಾಜಪೇಯಿಯವರ ಸರ್ಕಾರ ಬೆಚ್ವಿಬಿದ್ದಿತು.

ವಾಜಪೇಯಿಯವರು ಗಟ್ಟಿಗೊಳಿಸಿದ್ದ ಸಂಭಂದ ನುಚ್ಚು ನೂರಾಗಿತ್ತು. ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿತ್ತು. ಆಗಲೇ ಘೋಷಣೆಯಾಗಿದ್ದು “ಆಪರೇಷನ್ ವಿಜಯ್”.

“ಆಪರೇಷನ್ ವಿಜಯ್” ಘೋಷಣೆಯಾಗಿ ಯುದ್ಧ ಶುರುವಾಯಿತು. ಬೆನ್ನಿಗೆ ಚೂರಿ ಹಾಕಿದ್ದ ಪಾಕಿಸ್ತಾನಿಯರನ್ನು ಸದೆಬಡೆಯಲು ನಮ್ಮ ಸೇನೆ ತಯಾರಾಯ್ತು.

ವಿಕ್ರಮ್ ಭಾತ್ರಾ ಏ ದಿಲ್ ಮಾಂಗೆ ಮೋರ್, ಎನ್ನುತ್ತಲೇ ಪರಾಕ್ರಮ ತೋರಿ ಅನೇಕ ಬೆಟ್ಟಗಳನ್ನು ವಶಪಡಿಸಿಕೊಂಡು ತಾಯಿ ಭಾರತಾಂಬೆಯ ರಕ್ಷಣೆಗಾಗಿ ಬಲಿದಾನಗೈದಿದ್ದ.

ಮನೋಜ್ ಕುಮಾರ್ ಪಾಂಡೆ ತನ್ನ ರಕ್ತದ ತಾಕತ್ತನ್ನು ತೋರಿಸಿ ಮಾತೃಭೂಮಿಗಾಗಿ ಮಡಿದಿದ್ದ. ಹೀಗೆ ಅನೇಕರು ಹೋರಾಡುತ್ತಲೇ ಇದ್ದರು.

ಯುದ್ಧ ಶುರುವಾಗಿತ್ತು. ಅನೇಕ ಕಲಿಗಳು ಬಲಿದಾನಗೈದಿದ್ದರು. ರೈಫಲ್ ಮ್ಯಾನ್ ಸಂಜಯ್ ಕುಮಾರ್ ಇದ್ದ ತಂಡಕ್ಕೆ ದರಾಜ್ ಬಳಿಯ ಗುಮರಿ ಬೇಸ್ ಕ್ಯಾಂಪ್ ರಕ್ಷಿಸುವ ಜವಾಬ್ದಾರಿ ನೀಡಲಾಯ್ತು.

ಅದರ ನೇತೃತ್ವವನ್ನು ಸಂಜಯ್ ಕುಮಾರ್ ಗೆ ವಹಿಸಲಾಗಿತ್ತು. ದರಾಜ್ ಬಳಿಯ ಗುಮರಿ ಬೇಸ್ ಕ್ಯಾಂಪ್ ರಕ್ಷಿಸ ಬೇಕೆಂದರೆ ಬೆಟ್ಟ ಏರಬೇಕಿತ್ತು.

ಆ ಬೆಟ್ಟ ಹೇಗಿತ್ತೆಂದರೆ 70 ಡಿಗ್ರಿ ಲಂಬದಲ್ಲಿತ್ತು. 70 ಡಿಗ್ರಿಯಿಂದ ಏರೋದು ಸಾಮನ್ಯದ ಕೆಲಸವಲ್ಲ. ಆದರೆ ಸೈನಿಕರು ಅಸಾಮಾನ್ಯರು. ಅಂತಹ ಎಷ್ಟೋ ಬೆಟ್ಟಗಳನ್ನು ಏರಿಯಾಗಿತ್ತು. ಈಗ ರೈಫಲ್ ಮ್ಯಾನ್ ಸಂಜಯ್ ಕುಮಾರ್ ಇದ್ದ ತಂಡ ಬೆಟ್ಟ ಏರೋಕೆ ಶುರು ಮಾಡಿತು. ಅಲ್ಲಿ ಕೊರೆಯುವ ಚಳಿ.

ಅಂತಹ ಚಳಿಯಲ್ಲಿ ರಾತ್ರಿ, ಹಗಲು ಎನ್ನದೇ 70 ಡಿಗ್ರಿಯಲ್ಲಿ ಆ ಬೆಟ್ಟವನ್ನು ಹತ್ತುತ್ತಿದ್ದರು. ಬೆಟ್ಟದ ಮೇಲೆ ಎಷ್ಟು ಜನ ಪಾಕಿಸೈನಿಕರಿದ್ದಾರೆಂಬ ಸರಿಯಾದ ಮಾಹಿತಿ ಇರಲಿಲ್ಲ. ಆದರೆ ಆ ಬೆಟ್ಟವನ್ನು ವಶಪಡಿಸಿಕೊಳ್ಳದೆ ಗುಮರಿ ಬೇಸ್ ಕ್ಯಾಂಪ್ ರಕ್ಷಿಸಲು ಆಗಲ್ಲ.

ಹೀಗಾಗಿ ಅವರು ಲೆಕ್ಕ ಹಾಕುತ್ತಾ ಕೂರಲಿಲ್ಲ. ಮಾತೃಭೂಮಿ ರಕ್ಷಣೆಗೆ ನಮ್ಮ ಪ್ರಾಣ ಹೋದರೂ ಸರಿ ಆ ಬೆಟ್ಟವನ್ನು ವಶಪಡಿಸಿಕೊಳ್ಳದೇ ಬಿಡೋದಿಲ್ಲವೆಂದು ನಿರ್ಧಾರ ಮಾಡಿದ ಭಾರತೀಯ ಪಡೆಯ 13ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ ನ ಚಾರ್ಲಿ ಕಂಪನಿಯ ತಂಡ ಬೆಟ್ಟ ಏರುತ್ತಲೇ ಇತ್ತು.

ಆಗಲೇ ರೈಫಲ್ ಮ್ಯಾನ್ ಸಂಜಯ್ ಕುಮಾರ್ ನಿದ್ರೆ ಮಾಡಿ ಬರೋಬ್ಬರಿ 30 ಗಂಟೆಗಳಾಗಿತ್ತು. ಆಗಲೇ ನೋಡಿ ನಡೆದದ್ದು ಅಚಾತುರ್ಯ.

ಬೆಟ್ಟದ ಮೇಲೆ ಇದ್ದ ಪಾಕಿ ಸೇನೆ ಈ ತಂಡವನ್ನು ನೋಡಿ ಗುಂಡಿನ ದಾಳಿ ನಡೆಸಿತು. ಈ ತಂಡ ಕಮ್ಮಿ ಇರಲಿಲ್ಲ. ಮೇಲೆ ಹತ್ತಿದವರೇ ಪಾಕಿಗಳ ಬಂಕರುಗಳ ಕಡೆ ಗ್ರೆನೇಡ್ ಎಸೆದುಬಿಟ್ಟರು.

ಪಾಕಿಗಳ ಗುಂಡಿನ ದಾಳಿಯಿಂದ ಸಂಜಯ್ ಕುಮಾರ್ ನ ತಂಡದಲ್ಲಿದ್ದ ಒಬ್ಬೊಬ್ಬ ಸೈನಿಕನೂ ಬಲಿಯಾಗ ತೊಡಗಿದನು. ಆದರೆ ಸಂಜಯ್ ಕುಮಾರ್ ಅಸಾಮಾನ್ಯನಾದ ರೀತಿಯಲ್ಲಿ ಹೋರಾಡಿದನು.

ಪಾಕಿ ಸೇನೆಯ ಬಂದೂಕುಗಳು ಗುಂಡುಗಳನ್ನು ಉಗುಳುತ್ತಿದ್ದರೂ, ಅದನ್ನು ಲೆಕ್ಕಿಸದ ಸಂಜಯ್ ಕುಮಾರ್ ತಾನು ಗುಂಡು ಹಾರಿಸುತ್ತಲೇ ಮುನ್ನಡೆದನು.

ಆಗ ಪಾಕಿಗಳ ಗುಂಡು ಸಂಜಯ್ ಕುಮಾರ್ ಗೆ ತಗುಲಿದವು‌ ಒಟ್ಟು ಐದು ಗುಂಡುಗಳು ಸಂಜಯ್ ಕುಮಾರ್ ನ ದೇಹವನ್ನು ಹೊಕ್ಕಿದ್ದವು‌ ಕಾಲಿಗೆ ನಾಲ್ಕು ಹಾಗೂ ಸೊಂಟದ ಭಾಗದಲ್ಲಿ ಒಂದು ಗುಂಡು ತಗುಲಿತ್ತು.

ದೇಹದಲ್ಲಿ ಐದು ಗುಂಡು ಹೊಕ್ಕರೂ ಕೂಡಾ ಆ ಸೈನಿಕ ಸುಮ್ಮನಾಗಲಿಲ್ಲ.

ದೇಹದಲ್ಲಿ ಐದು ಗುಂಡು ಹೊಕ್ಕಿರಬಹುದು ಆದರೆ ಜೀವ ಇನ್ನೂ ಇದೆಯಲ್ಲ. ನನ್ನ ಪ್ರಾಣ ಇರೋವರೆಗೂ ಹೋರಾಡುತ್ತೇನೆ. ನನ್ನ ಪ್ರಾಣ ಇರೋವರೆಗೂ ಆ ಬೆಟ್ಟವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡೇ ಮಾಡುತ್ತೇನೆಂದು ಜರ್ಜಿತವಾದ ದೇಹದಿಂದಲೇ ಎದ್ದು ನಿಂತ.

ನಂತರ ಪಕ್ಕದ ಬಂಡೆಯ ಕೆಳಗೆ ಅವಿತು, ಶತ್ರುಗಳ ಮೇಲೆ ದಾಳಿ ಮುಂದುವರೆಸಿದನು. ಶತ್ರು ಸೈನ್ಯದ ಬಂಕರ್ ನಾಶ ಮಾಡದೆ ಯುದ್ಧ ಗೆಲ್ಲುವುದು ಅಸಾಧ್ಯ ಎಂದು ಅರಿತ ಸಂಜಯ್ ಕುಮಾರ್, ಗಂಭೀರವಾಗಿ ಗಾಯಗೊಂಡಿದ್ದರೂ ಮುನ್ನುಗ್ಗಿ ಶತ್ರು ಬಂಕರಿನತ್ತ ಬಾಂಬ್ ಎಸೆದರು.

ನೋಡ ನೋಡುತ್ತಿದ್ದಂತೆ ಶತ್ರುಗಳ ಬಂಕರ್ ಸ್ಫೋಟಗೊಂಡು ಅದರಲ್ಲಿದ್ದ ಪಾಕ್ ಸೈನಿಕರು ಹೆಣವಾದರು. ಕೊನೆಗೆ ಅಧಿಕಾರಿಗಳಿಂದ ಶತ್ರು ಸೈನಿಕರಾರೂ ಉಳಿದಿಲ್ಲ ಎಂದು ಮನವರಿಕೆ ಮಾಡುವವರೆಗೆ ಸಂಜಯ್ ಕುಮಾರ್ ಗುಂಡು ಹಾರಿಸುತ್ತಲೇ ಇದ್ದರು. ಆದಾಗಲೇ ಅವರ ಕೈ ಜರ್ಝರಿತವಾಯಿತು. ಪಾಯಿಂಟ್ 4875 ಭಾರತೀಯರ ವಶವಾಗಿತ್ತು.

ಅಸಾಧಾರಣ ಪರಾಕ್ರಮದಿಂದ ಶತ್ರುಗಳಿಗೆ ಮುಖಾಮುಖಿಯಾಗಿ ಮುನ್ನುಗ್ಗಿದ ಸಂಜಯ್ ಕುಮಾರ್ ತನ್ನ ಜೀವವನ್ನು ಲೆಕ್ಕಿಸದೆ ಪಾಕ್ ಬಂಕರಿನ ಅತೀ ಸಮೀಪಕ್ಕೆ ಸಾಗಿ ಅದನ್ನು ವಶಪಡಿಸಿಕೊಂಡರು .

ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶವಾಗಿತ್ತು. ತದನಂತರ ಆಸ್ಪತ್ರೆಗೆ ಸಂಜಯ್ ಕುಮಾರರನ್ನು ಸಾಗಿಸಲಾಯಿತು. ಅವರ ದೇಹದಲ್ಲಿ ಇನ್ನೂ ಐದು ಬುಲೆಟ್ ಗಳಿದ್ದವು. ಐದು ಬುಲೆಟ್ ಗಳನ್ನು ದೇಹದಲ್ಲಿಟ್ಟುಕೊಂಡೇ ಸಂಜಯ್ ಕುಮಾರ್ ಪಾಯಿಂಟ್ 4875 ಬೆಟ್ಟವನ್ನು ವಶಪಡಿಸಿಕೊಂಡಿದ್ದರು.

ದೇಹದಲ್ಲಿ ಐದು ಗುಂಡು ಹೊಕ್ಕಿದ್ದರೂ ಕೂಡಾ ಆ ಸೈನಿಕ ತನ್ನ ಪ್ರಾಣ ಇರೋವರೆಗೂ ಹೋರಾಡುತ್ತೇನೆಂದು ಸಂಕಲ್ಪ ಮಾಡಿ, ಪಾಯಿಂಟ್ 4875 ಬೆಟ್ಟವನ್ನು ವಶಪಡಿಸಿಕೊಂಡಿದ್ದ.

ದೇಹದಲ್ಲಿ ಐದು ಗುಂಡು ಹೊಕ್ಕು ಆ ಬೆಟ್ಟವನ್ನು ವಶಪಡಿಸಿಕೊಂಡರೂ ಕೂಡಾ ಆ ಸೈನಿಕನ ಗುಂಡಿಗೆ ಗಟ್ಟಿಯಾಗಿತ್ತು. ನಂತರ ಆಸ್ಪತ್ರೆಗೆ ಕರೆದೊಯ್ದು ಆ ಸೈನಿಕನನ್ನು ಉಳಿಸಿಕೊಂಡರು.

ರೈಫಲ್ ಮ್ಯಾನ್ ಸಂಜಯ್ ಕುಮಾರನ ಸಾಹಸಕ್ಕೆ ಪರಮೋಚ್ಛ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಭಾರತ ಸರ್ಕಾರ ಸಂಜಯ್ ಕುಮಾರ್ ಅವರಿಗೆ ನೀಡಿ ಗೌರವಿಸಿದೆ.

ಬದುಕಿದ್ದಾಗಲೇ ‘ಪರಮವೀರ ಚಕ್ರ’ ಪುರಸ್ಕಾರ ಪಡೆದ ಮೂವರಲ್ಲಿ ಇವರೂ ಒಬ್ಬರು. ಇದನ್ನೆಲ್ಲಾ ಸಾಧಿಸಿದಾಗ ರೈಫಲ್ ಮ್ಯಾನ್ ಸಂಜಯ್ ಕುಮಾರ್ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು.

ಇನ್ನೊಂದು ವಿಶೇಷತೆ ಏನಂದರೆ ದೇಹದಲ್ಲಿ ಐದು ಗುಂಡು ಬದುಕಿದ ಸಂಜಯ್ ಕುಮಾರ್ ಈಗಲೂ ಭಾರತೀಯ ಸೇನೆಯಲ್ಲಿದ್ದಾರೆ.

ಬದುಕಿದ್ದಾಗಲೇ ಪರಮೋಚ್ಛ ಪ್ರಶಸ್ತಿ ಪರಮವೀರ ಚಕ್ರವನ್ನು ಪಡೆದ ಮೂವರು ಯೋಧರಲ್ಲಿ ಸಂಜಯ್ ಕುಮಾರ್ ಕೂಡಾ ಒಬ್ಬರು.

ಇವರ ಈ ಸಾಹಸಕ್ಕೆ ಸೇನೆಯವಜನರಲ್ ಕೂಡಾ ಸೈಲ್ಯೂಟ್ ಹೊಡೆಯುವಂಥ ಗೌರವವನ್ನು ಸಂಜಯ್ ಕುಮಾರ್ ಗಳಿಸಿದರು. ಯೋಧನೊಬ್ಬನಿಗೆ ಸಿಗುವ ಅಪರೂಪದ ಗೌರವ ರೈಫಲ್ ಮ್ಯಾನ್ ಸಂಜಯ್ ಕುಮಾರ್ ಅವರಿಗೆ ಸಿಕ್ಕಿತು.

ದೇಹದಲ್ಲಿ ಐದು ಗುಂಡು ಹೊಕ್ಕಿದ್ದರೂ ಕೂಡಾ ಸಂಜಯ್ ಕುಮಾರ್ ಆ ಬೆಟ್ಟವನ್ನು ವಶಪಡಿಸಿಕೊಳ್ಳದೇ ಹಿಂದೆ ಬರುವುದಿಲ್ಲವೆಂದು ಸಾವಿಗೆ ಸವಾಲು ಹಾಕಿ, ಕೊನೆಗೆ ಆ ಬೆಟ್ಟವನ್ನು ವಶಪಡಿಸಿಕೊಳ್ಳದೇ ಹಿಂತಿರುಗಲಿಲ್ಲ. ಇಂತಹ ವೀರ ಯೋಧನಿಗೊಂದು ಬಿಗ್ ಸೆಲ್ಯೂಟ್.

ಜೈ ಹಿಂದ್

– Nationalist Mahi

 •  
  1.4K
  Shares
 • 1.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com