Connect with us
Loading...
Loading...

ಅಂಕಣ

“ನಾನೇನಾದರೂ ಭಾರತದ ಪ್ರಧಾನಿಯಾದರೆ…”ಎಂದು 2007 ರಲ್ಲಿ ಮೋದಿ ಹೇಳಿದ್ದೇನು ಗೊತ್ತಾ?

Published

on

 • 6.2K
 •  
 •  
 •  
 •  
 •  
 •  
 •  
  6.2K
  Shares

ಭಾರತ ಸಂತರ ನಾಡು, ಆಧ್ಯಾತ್ಮಿಕತೆಯ ಬೀಡು, ಅನ್ನೋದು ನಮಗೆ ಗೊತ್ತು. ಮುಂದೆ ಆಗೋದನ್ನ ಕೆಲವರು ಮೊದಲೇ ತಮ್ಮ ದೂರದೃಷ್ಟಿಯಿಂದ ಅಥವ ಇಂಗ್ಲೀಷಿನಲ್ಲಿ ಹೇಳಬೇಕಂದರೆ sixth sense ಮೂಲಕ ಊಹಿಸುವ ಶಕ್ತಿಯನ್ನ ಹೊಂದಿರುತ್ತಾರೆ.

ಅದು ಸುಳ್ಳಲ್ಲ ನಿಜ ಅಂತ ಪ್ರೂವ್ ಮಾಡುವಂತಹ ಘಟ‌ನೆಗಳು ನಿಮ್ಮೆದುರು ಇಡ್ತೀನಿ ಓದಿ!!!

1. ನಾನೇನಾದರೂ ಭಾರತದ ಪ್ರಧಾನಿಯಾದರೆ ನನ್ನ ಮೊಟ್ಟ ಮೊದಲನೆಯ ಕೆಲಸವೇ ಭಯೋತ್ಪಾದನೆ ಹಾಗು ಭ್ರಷ್ಟಾಚಾರ ಮುಕ್ತ ಭಾರತ ಮಾಡುವತ್ತ ಹೆಜ್ಜೆ ಹಾಕುತ್ತೇನೆ. 500, 1000 ನೋಟುಗಳನ್ನ ಅಮಾನ್ಯೀಕರಣ ಮಾಡುತ್ತೇನೆ

(2007 ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರು ಹೇಳಿದ ಮಾತು)

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೇ ಅವರುಬಾಂದು ಹೇಳಿದ್ದ ಮಾತುಗಳನ್ನ ಜಾರಿಗೆ ತಂದದ್ದು ಇವತ್ತು ನಾವೆಲ್ಲಾ ನೋಡುತ್ತಿದ್ದೇವೆ.

ಬರೀ ನರೇಂದ್ರವಮೋದಿಯವರಷ್ಟೇ ಮುಂದಾಲೋಚನೆ ಇರುವಂತಹ ನಾಯಕರಾಗಿರಲಿಲ್ಲ. ಅವರಂತೆ ಇನ್ನೀ ಹಲವರು ಭಾರತದ ಬಗ್ಗೆ ದೂರದೃಷ್ಟಿ ಇಟ್ಟುಕೊಂಡವರು ಹೇಳಿದ ಮಾತುಗಳನ್ನೂ ಕೇಳಿ

2. ಮುಂದೊಂದು ದಿನ ಬರತ್ತೆ ಆಗ ಕಾಂಗ್ರೆಸ್ಸಿನವರು ಕೋಟ್ ಮೇಲೆ ಕೂಡ ಜನಿವಾರ ಹಾಕ್ಕೊಳ್ಳೋಕೆ ಶುರು ಮಾಡ್ತಾರೆ

(1959 ರಲ್ಲಿ ಸಾವರ್ಕರ್ ಹೇಳಿದ್ದು)

ವೀರ ಸಾವರ್ಕರ್ ರವರು ಹೇಳಿದ್ದು ಎಷ್ಟು ಸತ್ಯ ಅಲ್ವ? ಇವತ್ತು ರಾಹುಲ್ ಗಾಂಧಿ ತಾನೊಬ್ಬ ಶಿವಭಕ್ತ, ಜನಿವಾರುಧಾರಿ ಬ್ರಾಹ್ಮಣ ಅಂತ ದೇವಸ್ಥಾನಗಳಿಗೆ ಓಡಾಡ್ತಿರೋದು ನೋಡದ್ರೆ ಸಾವರ್ಕರ್ ಅಂದು ಹೇಳಿದ್ದು ಇಂದು ಅಕ್ಷರಶಃ ಸತ್ಯವಾಗ್ತಿದೆ ನೋಡಿ

3. ಇವತ್ತು ನಾವು ಕೆಲವೇ ಕೆಲವು ಬಿಜೆಪಿಗರಿರಬಹುದು ಆದರೆ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬಂದೆ ಬರುತ್ತೆ

(1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದು)

ಸದನದಲ್ಲಿ ಬಿಜೆಪಿಯನ್ನ ನೋಡಿ ಕಾಂಗ್ರೆಸ್ಸಿಗರು ನಗುತ್ತಿದ್ದರಂತೆ ಆಗ ವಾಜಪೇಯಿಯವರು ನೀವು ಇವತ್ತು ನಗ್ತಿದೀರ ಅಧಿಕಾರದಲ್ಲಿದೀರ ಆದರೆ ಮುಂದೆ ಬಿಜೆಪಿ ಅಧಿಕಾರಕ್ಕೆ ಬರತ್ತೆ ಅಂತ ಹೇಳಿದ್ರಂತೆ ಅದು ಈಗ ಅಕ್ಷರಶಃ ಸತ್ಯವಾಗಿದೆ.

4. ಇವತ್ತು ನಾನು ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ, ಆದರೆ ನಾನೊಂದು ಸಂಘಟನೆ ಕಟ್ಟುತ್ತೇನೆ ಅದರಿಂದ ಮುಂದೊಂದು ದಿನ ಕಾಂಗ್ರೆಸ್ ಪಕ್ಷವನ್ನ ಅಳಿಸಿ ಹಾಕುತ್ತೇನೆ ಅದಕ್ಕೆ ಬೇಕಾದರೆ 100 ವರ್ಷಗಳೇ ತಗುಲಲಿ 800 ವರ್ಷಗಳ ದಾಸ್ಯತೆ ಅನುಭವಿಸಿದ ನಮಗೆ 100 ವರ್ಷವೇನು ಹೆಚ್ಚಾಗಲ್ಲ. ಈ ನನ್ನ ಸಂಘಟನೆ ಅಖಂಡ ಭಾರತದ ಸಂಕಲ್ಪವನ್ನ ಪೂರ್ಣ ಮಾಡಲು ಹೋರಾಡುತ್ತೆ

(1922 ರಲ್ಲಿ ನಾಗಪುರದಲ್ಲಿ ಆರೆಸ್ಸೆಸ್ ಸಂಸ್ಥಾಪಕ ಕೇಶ ಬಲಿರಾಮ್ ಹೆಗಡೆವಾರ್)

ಅಂದು ಹೆಡಗೆವಾರರು ಮಾಡಿದ್ದ ಶಪಥ ಇಂದು ಅಕ್ಷರಶಃ ಸತ್ಯವಾಗುತ್ತಿದೆ, ಕಾಂಗ್ರೆಸ್ ದೇಶದ ಪ್ರತಿಯೊಂದು ರಾಜ್ಯದಲ್ಲೂ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

5. ಆ ದಿನ ಬಂದೇ ಬರುತ್ತೆ ಇಂದು ನಿಸ್ತೇಜ ಸ್ಥಿತಿಗೆ ತಲುಪಿರುವ ಹಿಂದೂ ಧರ್ಮದ ಜನ ಮುಂದೊಂದು ದಿನ ಗರ್ವದಿಂದ ತಾನೊಬ್ಬ ಹಿಂದೂ ಅಂತ ಹೇಳಿಕೊಳ್ಳುವ ಕಾಲ ಬರುತ್ತೆ. ಆಗ ಅಮೇರಿಕಾ ಕೂಡ ಭಾರತದ ಸಂಸ್ಕೃತಿಗೆ ತಲೆಬಾಗುತ್ತೆ

(1893 ರಲ್ಲಿ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಹೇಳಿದ್ದ ಮಾತುಗಳು)

ನಿಜ ಅಲ್ವ ಇವತ್ತು ಭಾರತ ಎಂದರೆ ಅಮೇರಿಕಾ ಅಷ್ಟೇ ಯಾಕೆ ಇಡೀ ಜಗತ್ತೇ ತಲೆ ಬಾಗುತ್ತಿದೆ, ಹಿಂದೂ ಸಂಸ್ಕೃತಿಯನ್ನ ಅತ್ಯಂತ ಗೌರವದಿಂದ ಕಾಣುತ್ತಿದೆ.

ಇನ್ನೊಂದು ವಿಷ್ಯ ಇಲ್ಲಿ ಪ್ರಸ್ತಾಪಿಸಲೇಬೇಕು, ಇತ್ತಿಚೆಗಷ್ಟೇ ಉತ್ತರಕೋರಿಯ ಸಮಸ್ಯೆಯ ಬಗ್ಗೆ ಮಾತನಾಡುತ್ತ ವಿಶ್ವಸಂಸ್ಥೆ ಹೇಳುತ್ತೆ “ಉತ್ತರ ಕೋರಿಯಾ ಸಮಸ್ಯೆ ಏನಾದರೂ ಬಗೆಹರಿಯಬೇಕೆಂದರೆ ಅದು ಕೇವಲ ಭಾರತದಿಂದ ಮಾತ್ರ ಸಾಧ್ಯ”

6. ಗೋಹತ್ಯೆಯನ್ನ ನಿಷೇಧಿಸಿ ಗೋಮಾತೆಯನ್ನ ರಕ್ಷಿಸಿ ಅಂತ ದೆಹಲಿಯ ಸಂಸತ್ತಿನ ಎದುರುಗಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂತರ ಮೇಲೆ ಇಂದಿರಾ ಗಾಂಧಿ ಸುಮಾರು 400 ಸಾಧುಗಳ ಮೇಲೆ ಗೋಲಿಬಾರ್ ನಡೆಸಲು ಆದೇಶ ನೀಡಿದ್ದಳು.

ಅನೇಕ ಜನ ಸಂತರು ಗುಂಡಿಗೆ ಬಲಿಯಾಗಿದ್ದರು. “ಇವತ್ತು ಸಂತರ ಮೇಲೆ ಸಂಸತ್ ಎದುರು ಗೋಲಿಬಾರ್ ಮಾಡಲಾಗಿದೆ, ಮುಂದೊಂದು ದಿನ ಆಧುನಿಕ ಸಂತನೊಬ್ಬ ಈ ಪಾರ್ಲಿಮೆಂಟನ್ನ ತನ್ನ ಅಧೀನಕ್ಕೆ ತೆಗೆದುಕೊಂಡು ಕಾಂಗ್ರೆಸ್ಸನ್ನ ನಿರ್ನಾಮ ಮಾಡುತ್ತಾನೆ, ಇದು ಸಂತನಾಗಿ ಕಾಂಗ್ರೆಸ್ಸಿಗೆ ನನ್ನ ಶಾಪ

(1966 ರಲ್ಲಿ ಕೃಪಾತ್ರಿ ಮಹಾರಾಜರು ಹೇಳಿದ್ದು)

ಅಂದು ಕೃಪಾತ್ರಿ ಮಹಾರಾಜರು ನೀಡಿದ ಶಾಪದಿಂದಲೋ ಏನೋ ಅವತ್ತು ಅವರು ಹೇಳಿದ್ದ ಮಾತು ಈಗ ಸತ್ಯವಾಗಿದೆ, ಆಧುನಿಕ ಸಂತ ನರೇಂದ್ರ ಮೋದಿ ಭಾರತದ ಸಂಸತ್ತನ್ನ ತನ್ನ ನಿಯಂತ್ರಣಕ್ಕೆ ತಗೊಂಡು ಕಾಂಗ್ರೆಸ್ ಮುಕ್ತ ಮಾಡುವತ್ತ ಮುನ್ನುಗ್ಗುತ್ತಿದ್ದಾನೆ.

7. ತನ್ನ ವೋಟ್ ಬ್ಯಾಂಕಗಾಗಿ ಕಾಂಗ್ರೆಸ್ ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲದು, ಮುಂದೊಂದಿ ದಿನ ಅಧಿಕಾರಕ್ಕಾಗಿ ಕಾಂಗ್ರೆಸ್ ಜೆಎನ್ಯೂ ನಲ್ಲಿರೋ ದೇಶದ್ರೋಹಿಗಳ ಜೊತೆ ಕೈ ಜೋಡಿಸುತ್ತೆ, ಗೋಹತ್ಯೆನ್ನ ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತೆ, ನಕ್ಸಲರ ಜೊತೆ ಕೈ ಜೋಡಿಸೋಕೂ ಹೇಸಲ್ಲ

(2009 ರಲ್ಲಿ ಆಪ್ ಕಿ ಅದಾಲತ್ ನಲ್ಲಿ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದು)

ಅವರ ಮಾತು ನಿಜ ಆಯ್ತು ನೋಡಿ, ಜೆಎನ್ಯೂ ನಲ್ಲಿ ದೇಶವಿರೋಧಿ ಘೋಷಣೆ ಕೂಗಿದ್ದ ದೇಶದ್ರೋಹಿ ವಿದ್ಯಾರ್ಥಿಗಳ ಜೊತೆ ರಾಹುಲ್ ನಿಂತುಕೊಂಡ, ಕೇರಳದಲ್ಲಿ ಕಾಂಗ್ರೆಸ್ ನಡುಬೀದಿಯಲ್ಲಿ ಗೋವನ್ನ ಕತ್ತರಿಸಿ ತಮ್ಮ ಮೋದಿ ವಿರೋಧಿ ನೀತಿ ತೋರಿಸಿದ್ದು ನೀವೆಲ್ಲಾ ನೋಡಿದ್ದೀರ

8. ಕಾಂಗ್ರೆಸ್ ಪಕ್ಷದ ಅಂತ್ಯ ಮಾಡೋಕೆ ಸಂಘದ(RSS) ವ್ಯಕ್ತಿಯೊಬ್ಬ ಬರುತ್ತಾನೆ, ಆತನೇ ಕಾಂಗ್ರೆಸ್ ಶವಪೆಟ್ಟಿಗೆಯ ಕೊನೆಯ ಮೊಳೆ ಜಡಿಯುತ್ತಾನೆ

(1984 ರಲ್ಲಿ ಸುಬ್ರಮಣಿಯನ್ ಸ್ವಾಮಿ ಪಾರ್ಲಿಮೆಂಟ್ ನಲ್ಲಿ ಹೇಳಿದ್ದು)


ನಿಜ, ಇಂದು ಕಾಂಗ್ರೆಸ್ ದೇಶದೆಲ್ಲೆಡೆ ನೆಲೆ ಕಳೆದುಕೊಳ್ಳುತ್ತಿದೆ, ಪ್ರಧಾನಿ ಮೋದಿ ಕಾಂಗ್ರೆಸ್ಸಿನ ಶವಪೆಟ್ಟಿಗೆಗೆ ಕೊನೆಯ ಮೊಳೆ ಜಡಿಯಲು ಸಿದ್ಧರಾಗಿ ನಿಂತಿದ್ದಾರೆ.

9. ನರೇಂದ್ರ ಮೋದಿ ಭಾರತದ ಭವಿಷ್ಯದ ನಾಯಕ, 2002 ರ ಗುಜರಾತ್ ದಂಗೆಗೆ ಆತನನ್ನ ಹೊಣೆಗಾರನನ್ನಾಗಿ ಮಾಡಬೇಡಿ, ಅದಕ್ಕೆ ಆತ ಕಾರಣನಲ್ಲ. ನಾನು ಅಟಲ್ ಜೀ ನಿಮಗೆ ಹಾಗು ಆರೆಸ್ಸೆಸ್ ಗೆ ಕಳಕಳಿಯಿಂದ ಕೇಳಿಕೋಳ್ತೇನೆ ನರೇಂದ್ರ ಮೋದಿಯನ್ನ ಆತನ ಕೆಲಸ ಮಾಡಲು ಮುಂದುವರೆಸಿ ಇಲ್ಲಾಂದ್ರೆ ಹಿಂದುತ್ವದ ಕೆಲಸ ನಿಂತು ಹೋಗುತ್ತೆ.

(2002 ಜೂನ್ 6 ರಂದು ಬಾಳಾಸಾಹೇಬ್ ಠಾಕ್ರೆ ಹೇಳಿದ್ದು)

ಬಾಳಾಸಾಹೇಬರ ಈ ಮಾತುಗಳ ಮೂರು ದಿನಗಳ ನಂತರ ಜೂನ್ 9, 2002 ರಂದು ಗೋವಾದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ನರೇಂದ್ರ ಮೋದಿಯವರನ್ನೇ ಗುಜರಾತಿನ ಮುಖ್ಯಮಂತ್ರಿಯಾಗಿ ಮುಂದುವರೆಸಲು ನಿರ್ಧರಿಸಿದ್ದು.

ಅಂದು ಬಾಳಾಸಾಹೇಬರು ಹೇಳಿದ್ದ ಮಾತುಗಳು ಇಂದು ಎಷ್ಟು ಸತ್ಯ ಸಾಬೀತಾಗುತ್ತಿವೆ ನೋಡಿ

ಇವರೆಲ್ಲಾ ಹೇಳಿರುವ ಮಾತುಗಳು ಅಕ್ಷರಶಃ ಇಂದು ನಿಜವಾಗುತ್ತಿವೆ, ಇಂಥವರನ್ನೇ ಸಂತರು, ಮುಂದೆ ಆಗೋದನ್ನ ಮೊದಲೇ ಗ್ರಹಿಸುವ ಮಹಾನ್ ವ್ಯಕ್ತಿಗಳು ಅಂತ ಕರೆಯೋದು.

– Vinod Hindu Nationalist

 •  
  6.2K
  Shares
 • 6.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com