Connect with us
Loading...
Loading...

ಅಂಕಣ

ನಿಜವಾಗಿಯೂ ಮೋದಿ ಮುಸಲ್ಮಾನರ ವಿರೋಧಿಯೇ??

Published

on

  • 13
  •  
  •  
  •  
  •  
  •  
  •  
  •  
    13
    Shares

ನಿಜವಾಗಿಯೂ ಮೋದಿ ಮುಸಲ್ಮಾನರ ವಿರೋಧಿಯೇ??

* ಸಭೆಯೊಂದರಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಜಾಮುದ್ದಿನ್ ಎಂಬ ಮುಸಲ್ಮಾನ ವ್ಯಕ್ತಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ???

* ತಲಾಖ್ ಎಂಬ ಅನಿಷ್ಟ ಪದ್ಧತಿಗೆ ನೂರಾರು ವರ್ಷಗಳಿಂದ ಬೇಸತ್ತಿದ್ದ ಮುಸಲ್ಮಾನ ಮಹಿಳೆಯರ ಪರ ನಿಂತು ಅವರಿಗೆ ಸಾಮಾಜಿಕ ನ್ಯಾಯ ಕೊಡಿಸಿದ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲದೆ ಮತ್ತೇನು??

* ಇಸ್ಲಾಂ ಭಯೋತ್ಪಾದನೆಯಿಂದ ಸಂಕಷ್ಟದಲ್ಲಿರುವ ಅದೇ ಇಸ್ಲಾಂ ರಾಷ್ಟ್ರವಾದ ಅಫ್ಘಾನಿಸ್ಥಾನಕ್ಕೆ ಭಾರತೀಯರ ತೆರಿಗೆಯಿಂದ ಸಂಸತ್ ಭವನ ಮತ್ತು ಅಲ್ಲಿನ ಮುಸಲ್ಮಾನರಿಗಾಗಿ ಒಂದು ಅಣೆಕಟ್ಟು ಕಟ್ಟಿಸಿ ಕೊಟ್ಟ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ??

* ಎರಡೂವರೆ ಕೋಟಿ ಬಡ ಭಾರತೀಯರಿಗೆ ಮೋದಿ ಉಚಿತ ಅಡುಗೆ ಅನಿಲದ ವ್ಯವಸ್ಥೆ ಮಾಡಿಕೊಟ್ರು ಅದರಲ್ಲಿ ಲಕ್ಷಾಂತರ ಬಡ ಮುಸಲ್ಮಾನರು ಇದ್ದರು… ಆದರೂ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲದೆ ಮತ್ತೇನು ??

* ವಿದೇಶಿ ನಾಯಕರು ಭಾರತದ ಭೇಟಿಗಾಗಿ ಬಂದಾಗ ಅತಿ ಉತ್ಸಾಹದಿಂದ ಅವರಿಗೆ ಇಲ್ಲಿನ ಐತಿಹಾಸಿಕ ಮಸೀದಿ ದರ್ಗಾಗಳ ಇತಿಹಾಸ ತಿಳಿಸಿ ಹೆಮ್ಮೆ ಪಡುವ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ??

* ತಾವು ಟೋಪಿ ಹಾಕಿಕೊಂಡು ಮುಸಲ್ಮಾನರಿಗೂ ಟೋಪಿ ಹಾಕುವ ನಾಯಕರ ನಡುವೆ ನಾನು ಟೋಪಿ ಹಾಕಿ ಮೋಸ ಮಾಡುವುದಿಲ್ಲ ಮುಸಲ್ಮಾನರ ಒಂದು ಕೈಯಲ್ಲಿ ಕುರಾನ್ ಇದ್ದರೆ ಮತ್ತೊಂದು ಕೈಗೆ ನಾನು ಕಂಪ್ಯೂಟರ್ ಕೊಡ್ತೀನಿ ಅಂತ ಹೇಳಿ ಮುಸಲ್ಮಾನರ ಏಳಿಗೆಯ ಬಗ್ಗೆ ಯೋಚನೆ ಮಾಡುವ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲದೆ ಮತ್ತೇನು??

* ತನ್ನ ಜೀವನದಲ್ಲಿ ಒಮ್ಮೆಯೂ ಕುರಾನ್ ಬಗ್ಗೆ ಮತ್ತು ಪೈಗಂಬರ್ ರವರ ಬಗ್ಗೆ ಅವಹೇಳನ ಮಾಡದ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ??

* ಮಾಧ್ಯಮಗಳ ಮುಂದೆ ಗುಜರಾತಿನ ಮುಸಲ್ಮಾನ ಮಹಿಳೆಯರು ನಾವು ಮೋದಿ ಆಡಳಿತದಲ್ಲಿ ಸಂತೋಷವಾಗಿದ್ದೇವೆ ಅಂತ ಹೇಳ್ತಾರೆ ಆದರೂ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ??

* ಹಜ್ ಸಬ್ಸೀಡಿಯನ್ನು ರದ್ದು ಮಾಡಿ, ಆ ಹಣವನ್ನು ಮುಸಲ್ಮಾನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳುವ ಯೋಜನೆ ಹಾಕಿದ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ???

* ಶಾದಿ ಶಗುಣ್ ಎಂಬ ಯೋಜನೆಯನ್ನು ಮುಸಲ್ಮಾನರಿಗಾಗಿ ಜಾರಿಗೆ ತಂದ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ???

* ಅಬ್ದುಲ್ ಕಲಾಂರನ್ನು ಪದೇ ಪದೇ ನೆನಪು ಮಾಡಿಕೊಳ್ಳುವ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ???

* ಅನೇಕ ಜನ ಮುಸಲ್ಮಾನರು ಭಾರತೀಯ ಜನತಾ ಪಕ್ಷದಲ್ಲಿದ್ದಾರೆ. ಮೋದಿಯವರು ಯಾವತ್ತಿಗೂ ಅವರ ಬಗ್ಗೆ ಮಾತಾಡಿಲ್ಲ. ಆದರೂ ಮೋದಿ ಒಬ್ಬ ಮುಸಲ್ಮಾನರ ವಿರೋಧಿ ಅಲ್ಲವೇ???

ನನಗಂತೂ ಈ ಡೋಂಗಿ ಜಾತ್ಯಾತೀತವಾದಿಗಳ ಬಗ್ಗೆ ತುಂಬಾ ಬೇಸರವಿದೆ. ಒಬ್ಬ ಹಿಂದೂ ತನ್ನನ್ನು ತಾನು ಹಿಂದೂ ಅಂತ ಹೇಳಿಕೊಂಡರೆ ಅದು ಕೋಮುವಾದ . ಅದೇ ಒಬ್ಬ ಮುಸಲ್ಮಾನ ತನ್ನನ್ನು ತಾನು ಮುಸಲ್ಮಾನ ಅಂತ ಹೇಳಿಕೊಂಡರೆ ಅದು ಜಾತ್ಯಾತೀತವಾದ. ವಾಃ ವಾಃ…

ಮೋದಿ ತನ್ನ ಧಾರ್ಮಿಕ ನಂಬಿಕೆಗಾಗಿ ಉಪವಾಸ ಮಾಡಿದರೆ ಮೋದಿಯೇನು ಹಿಂದೂಗಳ ಪ್ರಧಾನಿಯೇ ಅಂತ ಕೂಗುವ ಡೋಂಗಿ ಪ್ರಗತಿಪರರು. ಅದೇ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ರಂಜಾನ್ ವೇಳೆಯಲ್ಲಿ ಉಪವಾಸ ಮಾಡುವಾಗ ಇವರೇನು ಮುಸಲ್ಮಾನರ ಉಪರಾಷ್ಟ್ರಪತಿಯೇ ಅಂತ ಕೇಳಲಿಲ್ಲ.

ಸಮಸ್ಯೆ ಇಷ್ಟೇ ಮೋದಿ ಪ್ರತಿಬಾರಿ ತಾನೊಬ್ಬ ಹಿಂದೂ ರಾಷ್ಟ್ರೀಯವಾದಿ ಅಂತ ಎದೆ ತಟ್ಟಿ ಹೇಳಿಕೊಳ್ತಾರೆ. ಅದೊಂದು ಕಾರಣಕ್ಕೆ ಈ ಡೋಂಗಿವಾದಿಗಳು ಗಂಟಲು ಹರಿದುಕೊಳ್ತಾರೆ.

ಮೋದೀಜಿಯ ಬಗ್ಗೆ ನಮಗೆ ಗೊತ್ತಿದೆ. ಆತ ದೇಶದ್ರೋಹಿಗಳನ್ನು ಮಾತ್ರ ವಿರೋಧಿಸುತ್ತಾರೆ ಆ ದ್ರೋಹಿಗಳು ಹಿಂದೂ ಮುಸ್ಲಿಂ ಕ್ರೈಸ್ತ ಯಾರೆ ಆಗಿರಲಿ.

ವಿರೋಧಿಗಳೇ ನೀವು ಎಷ್ಟೇ ಪ್ರಯತ್ನ ಪಟ್ಟರೂ ದೇಶಭಕ್ತರ ಮನಸಲ್ಲಿ ಮೋದಿ ವಿರೋಧಿ ಬೀಜವನ್ನು ಬಿತ್ತಲು ಸಾಧ್ಯವಿಲ್ಲ….

ನರೇಂದ್ರ ಅನ್ನೊ ಹೆಸರಲ್ಲಿ ಒಂದು ಅದ್ಭುತ ಶಕ್ತಿ ಇದೆ ❤🇮🇳

✍— ಶ್ರೀನಿವಾಸ್ ಕೆ ಬಿ

  •  
    13
    Shares
  • 13
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com