Connect with us
Loading...
Loading...

ಅಂಕಣ

ನಿಮ್ಮ ಅಧಿಕಾರ ಎಷ್ಟು ದಿವಸ ಇರುತ್ತದೆ ಎಂದು ನಾನೂ ನೋಡ್ತೇನೆ ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದವರು ಯಾರು ಗೊತ್ತಾ?

Published

on

 • 1.2K
 •  
 •  
 •  
 •  
 •  
 •  
 •  
  1.2K
  Shares

ರಾಜ್ಯದ ಖಜಾನೆಯನ್ನು ನೀವು ಲೂಟಿ ಮಾಡುತ್ತ ಇದ್ದೀರಿ. ರಾಜ್ಯದ ಜನರ ಮನ ಗೆಲ್ಲುವ ಸಂದರ್ಭದಲ್ಲಿ ಸಿದ್ದರಾಮಯ್ಯನಿಗೆ ಈ ದೇವೇಗೌಡ ಬೇಕಾಗಿದ್ದ. ಆದರೆ ಈಗ ಮುಖ್ಯಮಂತ್ರಿ ಆದ ಬಳಿಕ ಶ್ರವಣ ಬೆಳಗೊಳದ ಕಾರ್ಯಕ್ರಮದಲ್ಲಿ ನನಗೇ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ. ನಿಮ್ಮ ಅಧಿಕಾರ ಎಷ್ಟು ದಿವಸ ಇರುತ್ತದೆ ಎಂದು ನಾನು ನೋಡುತ್ತೇನೆ ಎಂದು ಸಿದ್ದರಾನಯ್ಯನವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಸವಾಲು ಹಾಕಿದ್ದಾರೆ.

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಕೆಂಗೇರಿ ಉಪನಗರದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಗುಡುಗಿದ್ದಾರೆ. ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದೇ ನನ್ನ ಜೀವನದ ಮಹಾಪರಾಧ. ಇಂದು ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ ಬಲ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡಿರುವ ಮುಖ್ಯಮಂತ್ರಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಕೀಳು ಮಟ್ಟದ ರಾಜಕಾರಣಿ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದು ನಾನು ನನ್ನ ಜೀವನದಲ್ಲಿ ಮಾಡಿದ ಮಹಾಪರಾಧ ಎಂದು ಹೇಳಿದ್ದಾರೆ.

ಕೆಂಗೇರಿ ಉಪನಗರದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ ಅವರು, ಇಂದು ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ ಬಲ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡಿರುವ ಮುಖ್ಯಮಂತ್ರಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಕೀಳು ಮಟ್ಟದ ರಾಜಕಾರಣಿ ಎಂದು ಕಿಡಿಕಾರಿದರು.

ರಾಜ್ಯದ ಜನರಿಗೆ ಹತ್ತಿರವಾಗುವುದಕ್ಕೆ ಈ ದೇವೇಗೌಡ ಬೇಕಾಗಿದ್ದ ಆದರೆ ಈಗ ನಾನು ಬೇಕಾಗಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತುದ್ದಾರೆ. ರಾಜ್ಯದ ಖಜಾನೆಯನ್ನು ಸಿದ್ದರಾಮಯ್ಯನವರು ಲೂಟಿ ಮಾಡಿದ್ದಾರೆ. ಅದರ ಕುರಿತಾದ ವಿಷಯಗಳನ್ನು ದಾಖಲೆ ಸಮೇತ ಮಾತನಾಡುತ್ತೇನೆ. ಇನ್ನೇನು ನಿಮ್ಮ ಟೈಂ ಮುಗಿಯುತ್ತ ಬಂದಿದೆ ಎಂದು ಸಿದ್ದರಾಮಯ್ಯನವರ ವಿರುದ್ಧ ಘರ್ಜಿಸಿದ್ದಾರೆ.

ತಾನು ಬೆಳೆಸಿದ ಮರವೇ ತಮ್ಮ ಮೇಲೆ ಬಿದ್ದಂತೆ ದೇವೇಗೌಡರಿಗೆ ಆಗಿರುವುದಂತು ನಿಜ. ಕಾಂಗ್ರೆಸ್ಸಿನಲ್ಲಿ ಇದೇನು ಹೊಸದಲ್ಲ. ಹಿಂದೆ ದೇವರಾಜ್ ಅರಸರನ್ನು ಇದೇ ರೀತಿಯಾಗಿ ತುಳಿಯುವ ಪ್ರಯತ್ನ ನಡೆದಿತ್ತು.

ಸರಳ ಸಜ್ಜನ ದಿವಂಗತ ದೇವರಾಜ ಅರಸರು ಕರುನಾಡಿನ ಹೆಮ್ಮೆಯ ರಾಜಕೀಯ ಧುರೀಣ. ಇಂದಿರಾಗಾಂಧಿಯವರ ರಾಜಕೀಯಕ್ಕೆ ಪುನರ್ಜನ್ಮ ನೀಡಿ ಕೊನೆ ತಾವೇ ಆ ರಾಜಕೀಯ ಪಕ್ಷದಲ್ಲಿ ಜಾಗವಿಲ್ಲದಂತರಾಗಿದ್ದರು.

ಸೋತ ಇಂದಿರಾಗಾಂಧಿಗೆ ದೇವರಾಜ ಅರಸರು ಅಧಿಕಾರ ಗದ್ದುಗೆಗೆ ಕೂರಿಸಿ ಕೊನೆಗೆ ತಾವೇ ಇಂದಿರಾ ಗಾಂಧಿಯವರಿಂದ ಕಡೆಗಣಿಸಲ್ಪಟ್ಟರು. 1975ರಲ್ಲಿ ಹೇರಿದ್ದ ಎಮರ್ಜೆನ್ಸಿಯ ಬಗ್ಗೆ ತುಂಬಾ ಜನರಿಗೆ ಗೊತ್ತಿದೆ. ಇಡೀ ದೇಶವೇ ಕರ್ಫ್ಯೂನಲ್ಲಿತ್ತು. ಯಾರು ತುಟಿ ಪಿಟಕ್ ಎನ್ನುವಂತಿರಲಿಲ್ಲ. ಈಗಿನ ಬಿಜೆಪಿ ಆಗ ಜನಸಂಘ ಎಂಬ ಹೆಸರಿನಲ್ಲಿತ್ತು.

ಆ ಜನಸಂಘದ ರಾಜಕೀಯ ಧುರೀಣರನ್ನು ಜೈಲಿಗೆ ತಳ್ಳಿ ಇಡೀ ದೇಶವನ್ನೇ ಕರ್ಫ್ಯೂನಲ್ಲಿಟ್ಟಿದ್ದರು. ಈ ಎಮರ್ಜೆನ್ಸಿಯಿಂದ ಜನರು ರೋಶಿ ಹೋಗಿ 1977ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಧೂಳಿಪಟ ಮಾಡಿದ್ದರು. ರಾಯ ಬರೇಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಹೀನಾಯ ರೀತಿಯಲ್ಲಿ ಸೋತು ಹೋಗಿದ್ದರು.

ಇತ್ತ ಅಮೇಠಿಯಲ್ಲಿ ಮಗ ಸಂಜಯ್ ಗಾಂಧಿ ಕೂಡಾ ಅದೇ ರೀತಿಯಲ್ಲಿ ಸೋತಿದ್ದ. ಆ ದಿನಗಳಲ್ಲಿ ಕಾಂಗ್ರೆಸ್ಸಿನ ಕಥೆಯೇ ಮುಗಿಯಿತೆಂಬಂತಾಗಿತ್ತು. ಇಂದಿರಾಗಾಂಧಿಯವರು ತಲೆ ಮೇಲೆ ಕೈ ಹೊತ್ತು ಕೂತುಬಿಟ್ಟಿದ್ದರು. ಆಗ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಲು ಮುಂದಾದವರು ದೇವರಾಜ ಅರಸರು. ಹೌದು ನಮ್ಮ ಕರ್ನಾಟಕದ ದೇವರಾಜ್ ಅರಸರು.

ಇಂದಿರಾಗಾಂಧಿಯವರಿಗೆ ದೇವರಾಜ್ ಅರಸರು ಧೈರ್ಯ ತುಂಬಿ ಕರ್ನಾಟಕಕ್ಕೆ ಕರೆತಂದರು. ಕರ್ನಾಟಕದಲ್ಲಿ ಒಂದೊಳ್ಳೆ ಯೋಜನೆ ಹಾಕಿ ಚಿಕ್ಕಮಗಳೂರು ಕ್ಷೇತ್ರದಿಂದ ಇಂದಿರಾ ಗಾಂಧಿಯವರನ್ನು ಸ್ಪರ್ಧಿಸಲು ತಯಾರಿ ನಡೆಸಿದರು. ಅದಕ್ಕಾಗಿ ಹಗಲಿರುಳು ಎನ್ನದೇ ಶ್ರಮಿಸಿದರು. ಕೊನೆಗೆ ಆ ಶ್ರಮಕ್ಕೆ ಚಿಕ್ಕಮಗಳೂರು ಕ್ಷೇತ್ರದಿಂದ ಇಂದಿರಾಗಾಂಧಿಯವರು ಗೆದ್ದರು. ಇದರಿಂದ ಲೋಕಸಭೆಗೆ ಇಂದಿರಾಗಾಂಧಿಯವರನ್ನು ಮರುಪ್ರವೇಶವಾಗುವಂತೆ ಮಾಡಿ ಅಧಿಕಾರದ ಗದ್ದುಗೆಗೆ ಕೂರಿಸಿದರು.

ಗದ್ದುಗೆಗೆ ಏರಿದ ತಕ್ಷಣ ಈ ಸಿದ್ದರಾಮಯ್ಯನವರು ದೇವೇಗೌಡರನ್ನು ಹೇಗೆ ಕೀಳಾಗಿ ಕಂಡರೋ, ಹಾಗೆ ಅಂದು ಇಂದಿರಾಗಾಂಧಿಯವರು ದೇವರಾಜ್ ಅರಸರಿಂದ ಗದ್ದುಗೆಗೆ ಏರಿ, ತದನಂತರ ಏರಿಬಂದ ಮೆಟ್ಟಿಲುಗಳನ್ನು ಕಡೆಗಣಿಸಲು ಶುರುಮಾಡಿದರು. ದೇವರಾಜ ಅರಸರನ್ನು ಕಾಲಕಸದಂತೆ ನೋಡಲು ಶುರು ಮಾಡಿದರು. ಭೇಟಿಯಾಗಲು ಬಂದರೆ ನಿರಾಕರಿಸಿದರು. ಇಂದಿರಾ ಸಂಜಯ್ ದರ್ಬಾರಿನಿಂದ ದೇವರಾಜ ಅರಸರಿಗೆ ಆ ಪಕ್ಷದಲ್ಲಿ ಉಸಿರು ಕಟ್ಟಿದಂತಾಯ್ತು. ತಾವೇ ರಾಜಕೀಯ ಪುನರ್ಜಜನ್ಮ ನೀಡಿ ಅವರಿಂದ ಕಡೆಗಣಿಸಲ್ಪಟ್ಟರು.

ಕರ್ನಾಟಕದ ಗುಂಡುರಾಯರು ಸಂಜಯ್ ಗಾಂಧಿಯೊಂದಿಗೆ ಚೆನ್ನಾಗಿದ್ದುದರಿಂದ ಗುಂಡುರಾಯರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿ ದೇವರಾಜ ಅರಸರಿಗೆ ಜಾಗವಿಲ್ಲದಂತೆ ಮಾಡಿದರು. ಇದರಿಂದ ಅರಸರು ಸಹಜವಾಗಿ ಅಸಹನೆಯಲ್ಲಿ ಕುದ್ದರು. ರಾಜಕೀಯ ಪುನರ್ಜನ್ಮ ನೀಡಿ ಕೊನೆಗೆ ತಾವೇ ರಾಜಕೀಯ ನೆಲೆ ಕಳೆದುಕೊಂಡರು.

ಇಂದಿರಾಗಾಂಧಿ ಮತ್ತು ಸಂಜಯರ ಈ ವರ್ತನೆಯಿಂದ ಕುದ್ದು ಹೋಗಿ ಪಕ್ಷ ಕಟ್ಟಿ ರಾಷ್ಟ್ರ ರಾಜಕಾರಣದಲ್ಲಿ ಧುಮುಕಿ ಸೋತರು. ಇಂದಿರಾ ಗಾಂಧಿಯವರಿಂದ ದೇವರಾಜ ಅರಸರ ರಾಜಕೀಯ ಬದುಕು ದುರಂತ ಅಂತ್ಯ ಕಂಡಿತು.

ವಿಷಯಗಳನ್ನು ಮೆಲುಕು ಹಾಕಿದರೆ ಅಂದು ಇಂದಿರಾಗಾಂಧಿಯವರು ದೇವರಾಜ್ ಅರಸರಿಂದ ರಾಜಕೀಯ ಪುನರ್ಜನ್ಮ ಪಡೆದು ಕೊನೆಗೆ ದೇವರಾಜ್ ಅರಸರನ್ನು ಕಡೆಗಣಿಸಿದರು. ಇಂದು ಸಿದ್ದರಾಮಯ್ಯನವರು ತಾವು ಬೆಳೆದು ಬಂದ ಹಾದಿಯನ್ನು ಮರೆತಿದ್ದಾರೆ ಅಥವಾ ಬೆಳೆದು ಬಂದ ದಾರಿಯನ್ನು ಕಡೆಗಣಿಸುತ್ತಿದ್ದಾರೆ. ಈಗ ದೇವೆಗೌಡರು ಇದರ ಕುರಿತಾಗಿ ಘರ್ಜಿಸಿದ್ದಾರೆ.

ಬೆಳೆಯುವಾಗ, ಬೆಳೆಯುವ ಸಂದರ್ಭದಲ್ಲಿ ಸಿದ್ದರಾಮಯ್ಯನಿಗೆ ಈ ದೇವೇಗೌಡ ಬೇಕಾಗಿದ್ದ. ಆದರೆ ಈಗ ಮುಖ್ಯಮಂತ್ರಿ ಆದ ಬಳಿಕ ನನ್ನನ್ನು ಕಡೆಗಣಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಶ್ರವಣ ಬೆಳಗೊಳದ ಕಾರ್ಯಕ್ರಮದಲ್ಲಿ ನನಗೆ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ. ಸಿದ್ದರಾಮಯ್ಯನವರೇ ನಿಮ್ಮ ಅಧಿಕಾರ ಎಷ್ಟು ದಿವಸ ಇರುತ್ತದೆ ಎಂದು ನಾನು ನೋಡುತ್ತೇನೆ ಎಂದು ಸಿದ್ದರಾನಯ್ಯನವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಸವಾಲು ಹಾಕಿದ್ದಾರೆ.

– Team Nationalist Views
(2018 Copyrights Reserved)

 •  
  1.2K
  Shares
 • 1.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com