Connect with us
Loading...
Loading...

ಪ್ರಚಲಿತ

ಪಾಕಿಸ್ತಾನದ ಜೊತೆಯಿದ್ದ ಹಳೆ ಸಂಪ್ರದಾಯಕ್ಕೆ ಎಳ್ಳುನೀರು ಬಿಟ್ಟ ಭಾರತೀಯ ಗಡಿ ಭದ್ರತಾ ಪಡೆ!!

Published

on

  • 7
  •  
  •  
  •  
  •  
  •  
  •  
  •  
    7
    Shares

ಈ ಬಾರಿಯ ಸ್ವಾತಂತ್ರ್ಯ ದಿನದಿಂದ ಪಾಕಿಸ್ತಾನದ ಗಡಿ ಭದ್ರೆತಾ ಪಡೆಯ ಜೊತೆಗೆ ಸಿಹಿತಿಂಡಿಯನ್ನು ವಿನಿಮಯ ಮಾಡುವುದಿಲ್ಲವೆಂದು ನಿರ್ಧರಿಸಿದ ಭಾರತೀಯ ಗಡಿ ಭದ್ರತಾ ಪಡೆ.

ಹೌದು ಈ ಬಾರಿಯ ಸ್ವಾತಂತ್ರ್ಯ ದಿನದಿಂದ ನಮ್ಮ ಗಡಿ ಭದ್ರತಾ ಪಡೆ ಪಾಕಿಸ್ತಾನದ ಭದ್ರತಾ ಪಡೆಯೊಂದಿಗೆ ಸಿಹಿತಿಂಡಿ ವಿನಿಮಯ ಮಾಡಬಾರದೆಂದು ನಿರ್ಧರಿಸಿದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ ಹಾಗೂ ಮುಂತಾದ ದಿನಗಳಲ್ಲಿ ನಮ್ಮ ಭದ್ರತಾ ಪಡೆ ಪಾಕಿಸ್ತಾನದ ಭದ್ರತಾ ಪಡೆಯೊಂದಿಗೆ ಗಡಿಯಲ್ಲಿ ಸಿಹಿತಿಂಡಿ ವಿನಿಮಯ ಮಾಡುತ್ತಿತ್ತು. ಇದು ಮೊದಲಿನಿಂದಲೂ ನಡೆದ ಸಂಪ್ರದಾಯವಾಗಿತ್ತು. ಆದರೆ ಈ ಬಾರಿಯ ಸ್ವಾತಂತ್ರ್ಯ ದಿನದಿಂದ ನಮ್ಮ ಗಡಿ ಭದ್ರತಾ ಪಡೆ ಪಾಕಿಸ್ತಾನದ ಜೊತೆ ಸಿಹಿತಿಂಡಿ ವಿನಿಮಯ ಮಾಡುವ ಸಂಪ್ರದಾಯಕ್ಕೆ ಬ್ರೇಕ್ ಹಾಕುವ ನಿರ್ಧಾರ ಮಾಡಿದೆ.

ಪಾಕಿಸ್ತಾನದ ಉಪಟಳ ಹೆಚ್ಚಾದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ಗಡಿಭದ್ರತಾ ಪಡೆ ತೆಗೆದುಕೊಂಡಿದೆ. ಆ ನಿರ್ಧಾರದ ಪ್ರಕಾರ ಈ ಬಾರಿಯ ಸ್ವಾತಂತ್ರ್ಯ ದಿನದಂದು ಅವರಿಂದ ನಮ್ಮ ಗಡಿ ಭದ್ರತಾ ಪಡೆ ಸಿಹಿತಿಂಡಿಯನ್ನು ಸ್ವೀಕರಿಸಲ್ಲ, ಹಾಗೆಯೇ ನಮ್ಮ ಗಡಿ ಭದ್ರತಾ ಪಡೆ ಪಾಕಿಸ್ತಾನದ ಗಡಿ ಭದ್ರತಾ ಪಡೆಗೆ ಸಿಹಿತಿಂಡಿಯನ್ನು ಕೊಡಲ್ಲ. ಈಗಾಗಲೇ ಗಡಿಯಲ್ಲಿ ಪಾಕಿಸ್ತಾನದ ಉಪಟಳ ಉತ್ತುಂಗಕ್ಕೇರಿದೆ. ಮೊದಲಿನಿಂದಲೂ ನಡೆದ ಸಂಪ್ರದಾಯದ ಪ್ರಕಾರ ವಾಘಾ ಗಡಿಯಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಮುಂತಾದ ದಿನಗಳಲ್ಲಿ ಸಿಹಿತಿಂಡಿ ವಿನಿಮಯ ನಡೆಯುತ್ತಿತ್ತು. ಆದರೆ ಈ ವರ್ಷದಿಂದ ಅದಕ್ಕೆ ಬ್ರೇಕ್ ಹಾಕಲು ಭದ್ರತಾ ಪಡೆ ನಿರ್ಧರಿಸಿದೆ. ಮಾಹಿತಿಗಳ ಪ್ರಕಾರ ಭದ್ರತಾ ಪಡೆಯ ಮಹಾನಿರ್ದೇಶಕರಾದ ಡಿಕೆ ಪಾಠಕ್ ಅವರು ಈ ನಿರ್ಧಾರವನ್ನು ಮಾಡಿದ್ದಾರೆ.

ಈ ಸಂಪ್ರದಾಯ ಸ್ವಾತಂತ್ರ್ಯೋತ್ಸವ ಮತ್ತು ಗಣಾರಾಜ್ಯೋತ್ಸವ ದಿನಗಳಲ್ಲಿ ಹೊರತುಪಡಿಸಿ “ದೀಪಾವಳಿ, ಹೋಳಿ ಮತ್ತು ಈದ್ ಮುಂತಾದ ರಾಷ್ಟ್ರೀಯ ದಿನಗಳಲ್ಲಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು.

ಸಾಂಪ್ರದಾಯಿಕವಾಗಿ ಈ ಸಿಹಿತಿಂಡಿ ವಿನಿಮಯ ಪಂಜಾಬಿನ ವಾಘಾ ಗಡಿಯಲ್ಲಿ ನಡೆಯುತ್ತಿತ್ತು. ಕೆಲವೊಮ್ಮೆ ಜಮ್ಮು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿರುವ ಚಕ್ ಎಂಬ ಪ್ರದೇಶದಲ್ಲೂ ನಡೆಯುತ್ತಿತ್ತು.

ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ ಪಾಕಿಸ್ತಾನ 2015ರಲ್ಲಿ 200 ಬಾರಿ ಕದನ ವಿಅಮ ಉಲ್ಲಂಘನೆ ಮಾಡಿತ್ತು. 2014ರಲ್ಲಿ 430 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಆಗ 12 ಜನ ನಾಗರಿಕರು ಹಾಗೂ ಇಬ್ಬರೂ ಭದ್ರತಾ ಪಡೆಯ ಸೈನಿಕರು ಹುತಾತ್ಮರಾಗಿದ್ದರು. 2013ರಲ್ಲಿ 148 ಬಾರಿ ಕದನ ವಿರಾಮ ಉಲ್ಲಂಘನೆಯಾಗಿತ್ತು. ಈ ಮಾಹಿತಿಯನ್ನು ಹರಿಲಾಲ್ ಚೌಧರಿ ಅವರು ಲೋಕ ಸಭೆಯಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಮಾಡುತ್ತಿರುವ ಗಡಿ ಉಲಂಘನೆ, ಉಗ್ರರನ್ನು ಒಳ ನುಸುಳುವಂತೆ ಮಾಡುವ ಅವರ ನರಿ ಬುದ್ಧಿಗೆ ಪಾಠ ಕಲಿಸಲು ಭಾರತೀಯ ಭದ್ರತಾ ಪಡೆ ಈ ನಿರ್ಧಾರವನ್ನು ತೆಗೆದುಕೊಂಡಿದೆ.

  •  
    7
    Shares
  • 7
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com