Connect with us
Loading...
Loading...

ಪ್ರಚಲಿತ

ಪಾಕಿಸ್ತಾನಿಗಳಿಗೆ ಗಣರಾಜ್ಯೋತ್ಸವದಂದೇ ಶಾಕ್ ಕೊಟ್ಟ ಬಿಎಸ್ಸೆಫ್ ಯೋಧರು!! ಏನದು ಶಾಕ್ ಗೊತ್ತಾ?

Published

on

 • 3.7K
 •  
 •  
 •  
 •  
 •  
 •  
 •  
  3.7K
  Shares

ಸ್ವಾತಂತ್ರ್ಯೋತ್ಸವದವರೆಗೂ ಕಾಯೋದ್ಯಾಕೆ ಎಂದು ಪಾಕಿಸ್ತಾನಿಗಳಿಗೆ ಬುದ್ದಿ ಕಲಿಸಿದ ಭಾರತೀಯ ಸೇನೆ.

ಈ ಸಲದ ಸ್ವಾತಂತ್ಯ್ರೋತ್ಸವಕ್ಕೆ ಪಾಕಿಸ್ತಾನಕ್ಕೆ ಪೆಟ್ಟು ಕೊಡಲಿದೆಯಾ ನಮ್ಮ ಭಾರತೀಯ ಗಡಿ ಭದ್ರತಾ ಪಡೆ ನಿರ್ಧಾ ಮಾಡಿತ್ತು. ಆದರೆ ಇದೀಗ ಭಾರತೀಯ ಸೇನೆ ಸ್ವಾತಂತ್ರ್ಯೋತ್ಸವದವರೆಗೂ ಕಾಯೋದ್ಯಾಕೆ ಈಗಿನಿಂದಲೇ ಪಾಕಿಸ್ತಾನದ ಜೊತೆಗಿದ್ದ ಹಳೆ ಸಂಪ್ರದಾಯಕ್ಕೆ ಬ್ರೇಕ್ ಹಾಕೋಣ ಎಂದು ನಿರ್ಧರಿಸಿ, ಬ್ರೇಕ್ ಹಾಕಿದೆ.

ಹೌದು ಈ ಬಾರಿಯ ಸ್ವಾತಂತ್ರ್ಯೋತ್ಸವದಿಂದ ಪಾಕಿಸ್ತಾನದ ಜೊತೆಯಿದ್ದ ಹಳೆ ಸಂಪ್ರದಾಯಕ್ಕೆ ಎಳ್ಳುನೀರು ಬಿಡಲು ಭಾರತೀಯ ಗಡಿ ಭದ್ರತಾ ಪಡೆ ನಿರ್ಧರಿಸಿತ್ತು.

ಈ ಬಾರಿಯ ಸ್ವಾತಂತ್ರ್ಯ ದಿನದಿಂದ ಪಾಕಿಸ್ತಾನದ ಗಡಿ ಭದ್ರೆತೆಯ ಜೊತೆಗೆ ಸಿಹಿತಿಂಡಿಯನ್ನು ವಿನಿಮಯ ಮಾಡುವುದಿಲ್ಲವೆಂದು ಭಾರತೀಯ ಗಡಿ ಭದ್ರತಾ ಪಡೆ ನಿರ್ಧರಿಸಿತ್ತು. ಈಗ ಗಣರಾಜ್ಯೋತ್ಸವದಿಂದಲೇ ಆ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಸೇನೆ, ಪಾಕಿಸ್ತಾನಿಗಳಿಗೆ ಸಿಹಿ ತಿಂಡಿ ಕೊಡದೆ ಹಳೆ ಸಂಪ್ರದಾಯಕ್ಕೆ ಕೊಳ್ಳಿ ಇಟ್ಟಿದೆ.

ಈ ಬಾರಿಯ ಸ್ವಾತಂತ್ರ್ಯ ದಿನದಿಂದ ನಮ್ಮ ಗಡಿ ಭದ್ರತಾ ಪಡೆ ಪಾಕಿಸ್ತಾನದ ಭದ್ರತಾ ಪಡೆಯೊಂದಿಗೆ ಸಿಹಿತಿಂಡಿ ವಿನಿಮಯ ಮಾಡಬಾರದೆಂದು ನಿರ್ಧರಿಸಿತ್ತು.

ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ ಹಾಗೂ ಮುಂತಾದ ದಿನಗಳಲ್ಲಿ ನಮ್ಮ ಭದ್ರತಾ ಪಡೆ ಪಾಕಿಸ್ತಾನದ ಭದ್ರತಾ ಪಡೆಯೊಂದಿಗೆ ಗಡಿಯಲ್ಲಿ ಸಿಹಿತಿಂಡಿ ವಿನಿಮಯ ಮಾಡುತ್ತಿತ್ತು. ಇದು ಮೊದಲಿನಿಂದಲೂ ನಡೆದ ಸಂಪ್ರದಾಯವಾಗಿತ್ತು.

ಆದರೆ ಈ ಬಾರಿಯ ಸ್ವಾತಂತ್ರ್ಯ ದಿನದಿಂದ ನಮ್ಮ ಗಡಿ ಭದ್ರತಾ ಪಡೆ ಪಾಕಿಸ್ತಾನದ ಜೊತೆ ಸಿಹಿತಿಂಡಿ ವಿನಿಮಯ ಮಾಡುವ ಸಂಪ್ರದಾಯಕ್ಕೆ ಬ್ರೇಕ್ ಹಾಕುವ ನಿರ್ಧಾರ ಮಾಡಿತ್ತು.

ಅಲ್ಲಿಯವರೆಗೂ ಕಾಯೋದು ಬೇಡ, ಪಾಕಿಸ್ತಾನದ ಉಪಟಳ ಹೆಚ್ಚಾಗಿದೆ, ಅದಕ್ಕೆ ಬುದ್ಧಿ ಕಲಿಸಬೇಕೆಂದರೆ ಈಗಿನಿಂದಲೆ ಅವರ ಜೊತೆಗಿದ್ದ ಹಳೆ ಸಂಪ್ರದಾಯವನ್ನು ನಿಲ್ಲಿಸಬೇಕೆಂದು ನಿರ್ಧರಿಸಿದ ಸೇನೆ, ಇವತ್ತು ಪಾಕಿಗಳ ಜೊತೆಗಿದ್ದ ಹಳೆ ಸಂಪ್ರದಾಯವನ್ನು ನಿಲ್ಲಿಸಿತು.

ಪಾಕಿಸ್ತಾನದ ಉಪಟಳ ಹೆಚ್ಚಾದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ಗಡಿಭದ್ರತಾ ಪಡೆ ತೆಗೆದುಕೊಂಡಿದೆ. ಆ ನಿರ್ಧಾರದ ಪ್ರಕಾರ ಈ ಬಾರಿಯ ಸ್ವಾತಂತ್ರ್ಯ ದಿನದಂದು ಅವರಿಂದ ನಮ್ಮ ಗಡಿ ಭದ್ರತಾ ಪಡೆ ಸಿಹಿತಿಂಡಿಯನ್ನು ಸ್ವೀಕರಿಸಲ್ಲ, ಹಾಗೆಯೇ ನಮ್ಮ ಗಡಿ ಭದ್ರತಾ ಪಡೆ ಪಾಕಿಸ್ತಾನದ ಗಡಿ ಭದ್ರತಾ ಪಡೆಗೆ ಸಿಹಿತಿಂಡಿಯನ್ನು ಕೊಡಲ್ಲ.

ಈಗಾಗಲೇ ಗಡಿಯಲ್ಲಿ ಪಾಕಿಸ್ತಾನದ ಉಪಟಳ ಉತ್ತುಂಗಕ್ಕೇರಿದೆ. ಮೊದಲಿನಿಂದಲೂ ನಡೆದ ಸಂಪ್ರದಾಯದ ಪ್ರಕಾರ ವಾಘಾ ಗಡಿಯಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಮುಂತಾದ ದಿನಗಳಲ್ಲಿ ಸಿಹಿತಿಂಡಿ ವಿನಿಮಯ ನಡೆಯುತ್ತಿತ್ತು.

ಆದರೆ ಈ ವರ್ಷದಿಂದ ಅದಕ್ಕೆ ಬ್ರೇಕ್ ಹಾಕಲು ಭದ್ರತಾ ಪಡೆ ನಿರ್ಧರಿಸಿ, ಅದರಂತೆ ಮಾಡಿದೆ. ಮಾಹಿತಿಗಳ ಪ್ರಕಾರ ಭದ್ರತಾ ಪಡೆಯ ಮಹಾನಿರ್ದೇಶಕರಾದ ಡಿಕೆ ಪಾಠಕ್ ಅವರು ಈ ನಿರ್ಧಾರವನ್ನು ಮಾಡಿದ್ದರು.

ಪಾಕಿಸ್ತಾನದಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆ ಆಗುತ್ತಿದ್ದು, ಇತ್ತೀಚೆಗಷ್ಟೆ ಪಾಕಿಸ್ತಾನವು ಬಿಎಸ್‌ಎಫ್ ಸೇನೆ ನೆಲೆಯನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬಿಎಸ್‌ಎಫ್ ಜವಾನರು ಅಸು ನೀಗಿದ್ದರು. ಹೀಗಾಗಿ ಬಿಎಸ್‌ಎಫ್ ಈ ನಿರ್ಧಾರಕ್ಕೆ ಬಂದಿದೆ.

ಈ ಸಂಪ್ರದಾಯ ಸ್ವಾತಂತ್ರ್ಯೋತ್ಸವ ಮತ್ತು ಗಣಾರಾಜ್ಯೋತ್ಸವ ದಿನಗಳಲ್ಲಿ ಹೊರತುಪಡಿಸಿ “ದೀಪಾವಳಿ, ಹೋಳಿ ಮತ್ತು ಈದ್ ಮುಂತಾದ ರಾಷ್ಟ್ರೀಯ ದಿನಗಳಲ್ಲಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು.

ಸಾಂಪ್ರದಾಯಿಕವಾಗಿ ಈ ಸಿಹಿತಿಂಡಿ ವಿನಿಮಯ ಪಂಜಾಬಿನ ವಾಘಾ ಗಡಿಯಲ್ಲಿ ನಡೆಯುತ್ತಿತ್ತು. ಕೆಲವೊಮ್ಮೆ ಜಮ್ಮು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿರುವ ಚಕ್ ಎಂಬ ಪ್ರದೇಶದಲ್ಲೂ ನಡೆಯುತ್ತಿತ್ತು.

ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ ಪಾಕಿಸ್ತಾನ 2015ರಲ್ಲಿ 200 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. 2014ರಲ್ಲಿ 430 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಆಗ 12 ಜನ ನಾಗರಿಕರು ಹಾಗೂ ಇಬ್ಬರೂ ಭದ್ರತಾ ಪಡೆಯ ಸೈನಿಕರು ಹುತಾತ್ಮರಾಗಿದ್ದರು.

2013ರಲ್ಲಿ 148 ಬಾರಿ ಕದನ ವಿರಾಮ ಉಲ್ಲಂಘನೆಯಾಗಿತ್ತು. ಈ ಮಾಹಿತಿಯನ್ನು ಹರಿಲಾಲ್ ಚೌಧರಿ ಅವರು ಲೋಕ ಸಭೆಯಲ್ಲಿ ತಿಳಿಸಿದ್ದಾರೆ. ಪಾಕಿಸ್ತಾನ ಮಾಡುತ್ತಿರುವ ಗಡಿ ಉಲಂಘನೆ, ಉಗ್ರರನ್ನು ಒಳ ನುಸುಳುವಂತೆ ಮಾಡುವ ಅವರ ನರಿ ಬುದ್ಧಿಗೆ ಪಾಠ ಕಲಿಸಲು ಭಾರತೀಯ ಭದ್ರತಾ ಪಡೆ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಮುಂಚೆ ಭಾರತೀಯ ಸೇನೆಗೆ ಒಂದು ಗುಂಡು ಶತ್ರುಗಳತ್ತ ಹಾರಿಸಬೇಕಾದರೂ ಕೇಂದ್ರ ಸರ್ಕಾರದ ಪರ್ಮಿಷನ್ ಕೇಳಿ ಸುಸ್ತಾಗಿ ಉಗ್ರರ ಗುಂಡಿಗೆ ಎದೆಯೊಡ್ಡುವ ಪರಿಸ್ಥಿತಿಯಿತ್ತು.

ಆದರೆ ಮೋದಿ ಸರ್ಕಾರ ಬಂದ ನಂತರ ಸೇನೆಗೆ ಆನೆ ಬಲ ಬಂದಂತಾಗಿದ್ದು ಒಂದಕ್ಕೆ ಹತ್ತು ಉಗ್ರರ ಬಲಿ ತೆಗೆದುಕೊಳ್ಳಲು ಸೇನೆ ತಯಾರಾಗಿ ನಿಂತಿದೆ. ಭಾರತೀಯ ಸೇನೆ ಕಳೆದ ಒಂದು ವರ್ಷದಲ್ಲಿ ನಡೆಸಿದ ಕಾರ್ಯಾಚರಣೆಯ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು ಖುಷಿಯೂ ಆಗಬಹುದು.

ಹೌದು ಕಳೆದ ಒಂದೇ ವರ್ಷದಲ್ಲಿ ಭಾರತೀಯ ಯೋಧರು ಬರೋಬ್ಬರಿ ಎರಡು ನೂರಕ್ಕೂ ಹೆಚ್ಚು ಉಗ್ರರನ್ನ ಹೊಡೆದುರುಳಿಸಿದೆ. ಸದಾ ಗಡಿಯಲ್ಲಿ ತನ್ನ ನರಿ ಬುದ್ಧಿ ತೋರಿಸುತ್ತ ಲೈನ್ ಆಫ್ ಕಂಟ್ರೋಲ್ ಉಲ್ಲಂಘಿಸುವ ಪಾಪಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸರಿಯಾದ ಪ್ರತ್ಯುತ್ತರವನ್ನೇ ಕೊಡುತ್ತಿದೆ.

ಜನರಲ್ ಬಿಪಿನ್ ರಾವತ್ ಸೈನ್ಯದ ಜವಾಬ್ದಾರಿ ತೆಗೆದುಕೊಂಡರೋ, ಆಗಿನಿಂದ ಭಾರತೀಯ ಸೈನಿಕರಿಗೆ ಆನೆ ಬಲ ಬಂದಂತಾಗಿದ್ದು ಶತ್ರುಗಳನ್ನ ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ.

ಭಾರತೀಯ ಸೇನೆಯನ್ನ ಕೆಣಕಿದ್ದ ಪ್ರತಿಯೊಬ್ಬ ಉಗ್ರ ಕಮಾಂಡರ್ ಗಳನ್ನೂ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಕಳೆದ ಎರಡು ವಾರಗಳಲ್ಲಿಯೇ ಸರಿಸುಮಾರು 25 ಭಯೋತ್ಪಾದಕರ ಸಮೇತ ಪಾಕ್ ಸೈನಿಕರು ಭಾರತೀಯ ಸೈನಿಕರ ಬಂದೂಕಿನ ನಳಿಕೆಗೆ ಹೊಗೆ ಹಾಕಿಸಿಕೊಂಡಿದ್ದಾರೆ.

ಅಂತೂ ಇಂತೂ ಪಾಕಿಸ್ತಾನದ ಜೊತೆಗಿದ್ದ ಹಳೆ ಸಂಪ್ರದಾಯಕ್ಕೂ ಗಡಿ ಭದ್ರತಾ ಪಡೆ ಬ್ರೇಕ್ ಹಾಕಿದೆ.

 •  
  3.7K
  Shares
 • 3.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com