Connect with us
Loading...
Loading...

ಪ್ರಚಲಿತ

ಪಿ.ಎಫ್.ಐ, ಎಸ್.ಡಿ.ಪಿ.ಐ ಬ್ಯಾನ್ ಆದರೂ ಪ್ರಯೋಜನವಿಲ್ಲ. ಯಾಕೆ ಗೊತ್ತಾ?!!

Published

on

 • 429
 •  
 •  
 •  
 •  
 •  
 •  
 •  
  429
  Shares

ಕರ್ನಾಟಕದ ಕಡಲತಡಿ ಕರಾವಳಿ ಭಾಗ ಬೆಚ್ಚಿ ಬೀಳುವಂತಹ ಸರಣಿ ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾದವು. ಆ ಕೊಲೆಗಳ ಹಿಂದೆ ಇರುವ ಕೈವಾಡ ಇದೇ PFI, SDPI ಎಂಬ ಇಸ್ಲಾಂ ಮೂಲಭೂತವಾದಿ ಸಂಘಟನೆಗಳದ್ದು ಅಂತ ಎಲ್ಲರಿಗೂ ಗೊತ್ತಿರುವ ವಿಚಾರ.

ಬರೀ ಕರಾವಳಿ ಭಾಗದಲ್ಲಲ್ಲ ಬೆಂಗಳೂರು, ಮೈಸೂರ್ ಹಾಗೂ ಕರ್ನಾಟಕದ ಇತರ ಭಾಗಗಳಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆಗೆ ಇದೇ ಮೂಲಭೂತವಾದಿ ಸಂಘಟನೆಗಳ ಕೈವಾಡವಿದೆ. ಬೆಂಗಳೂರಿನ ರುದ್ರೇಶ್ ಹತ್ಯೆಯನ್ನು ಇದೇ ಮೂಲಭೂತವಾದಿ ಸಂಘಟನೆಗಳ ಕಾರ್ಯಕರ್ತರು ಮಾಡಿದ್ದಾರೆಂಬುದು ಪೋಲಿಸ್ ತನಿಖೆಯಿಂದ ಬಹಿರಂಗವಾಗಿತ್ತು.

ಒಟ್ಟಿನಲ್ಲಿ ಈ ಮೂಲಭೂತವಾದಿ ಸಂಘಟನೆಗಳು ದೇಶ ದ್ರೋಹದ ಕೆಲಸದಲ್ಲಿ ತೊಡಗಿವೆ. ಸರಣಿ ಹಿಂದುಗಳ ಹತ್ಯೆಗಳಾಗಿದ್ದರಿಂದ, ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿ PFI, SDPIನಂತಹ ದೇಶದ್ರೋಹಿ ಸಂಘಟನೆಗಳು ನಿಷೇಧ ಮಾಡಿದ್ದವು, ಈಗಲೂ ನಿಷೇಧದ ಬಗ್ಗೆ ಕೂಗು ಕೇಳಿ ಬರುತ್ತಿದೆ.

ಕರ್ನಾಟಕದಲ್ಲಿ ನಡೆದ ಸರಣಿ ಹಿಂದೂ ಕಾರ್ಯಕರ್ತರ ಕೊಲೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೂ ತಲುಪಿದೆ. ಈ ಕೊಲೆಗಳ ಹಿಂದೆ PFI, SDPIನಂತಹ ಇಸ್ಲಾಂ ಮೂಲಭೂತವಾದ ಸಂಘಟನೆಗಳು ಇವೆ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಹಿಂದೂ ಕಾರ್ಯಕರ್ತರು ತಲುಪಿಸಿದ್ದಾರೆ‌.

ಹಾಗಾಗಿ PFI, SDPIನಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ದೇಶದ್ರೋಹಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡುತ್ತದೆ ಎಂಬ ಸುದ್ದಿ ಕೇಳಿ, ಹಿಂದೂ ಕಾರ್ಯಕರ್ತರು ಖುಷಿ ಪಟ್ಟಿರೋದರಲ್ಲಿ ಅನುಮಾನವೇ ಇಲ್ಲ.

ಅಷ್ಟಕ್ಕೂ ಪಿಎಫ್ ಐ ಎಂಬ ಉಗ್ರ ಸಂಘಟನೆ ಕೈವಾಡ ಅದೆಷ್ಟು ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿದೆ ಗೊತ್ತಾ?

ವಿಶ್ವನಾಥ್ 19/02/2015 – ಶಿವಮೊಗ್ಗ

ಪ್ರಶಾಂತ್ ಪೂಜಾರಿ 19/10/2015 – ಮೂಡಬಿದಿರೆ

ಕುಟ್ಟಪ್ಪ 10/11/2015 – ಕೊಡಗು

ರಾಜು 13/03/2016 – ಮೈಸೂರು

ರುದ್ರೇಶ 16/10/2016 – ಬೆಂಗಳೂರು

ಮಾಗಲಳಿ ರವಿ 05/11/2016 – ಮೈಸೂರು

ಕಿತಗನಹಳ್ಳಿ ವಾಸು 14/03/2017

ಹರೀಶ್ ಬಂಟವಾಳ 13/11/2017

ಶ್ರೀನಿವಾಸ್ ಪ್ರಸಾದ್ 03/12/2017 – ಬೆಂಗಳೂರು

ಪರೇಶ್ ಮೇಸ್ತ- ಹೊನ್ನಾವರ

ದೀಪಕ್ ರಾವ್- ಮಂಗಳೂರು

ಮೇಲೆ ಪಟ್ಟಿ ಮಾಡಿದ್ದು 2015 ರಿಂದ ಇಲ್ಲಿಯವರೆಗೆ ಆದ ಹಿಂದೂ ಕಾರ್ಯಕರ್ತರ ಹತ್ಯೆಗಳು. 2013ರಿಂದ ಇಲ್ಲಿಯವರೆಗೂ ಸುಮಾರು 22 ಜನ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಈ ಸರಣಿ ಕೊಲೆಗಳ ಹಿಂದೆ ಇರುವ ಕೈವಾಡ ಪಿಎಫ್ಐ ಉಗ್ರ ಸಂಘಟನೆಯದ್ದು. ಹೀಗಾಗಿಯೇ ಕೇಂದ್ರ ಸರ್ಕಾರ PFI, SDPIನಂತಹ ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡಲು ಯೋಚಿಸುತ್ತಿದೆ.

ಒಂದು ಸಂಗತಿಯನ್ನು ಹಿಂದೂ ಕಾರ್ಯಕರ್ತರು ಅರಿತುಕೊಳ್ಳಲೇಬೇಕು. ಏನಂದ್ರೆ PFI, SDPIನಂತಹ ದೇಶದ್ರೋಹಿ ಸಂಘಟನೆಗಳು ನಿಷೇಧ ಆದರೆ ನಮ್ಮ ಹಿಂದೂ ಕಾರ್ಯಕರ್ತರು ಖುಷಿ ಪಡುವಂತಿಲ್ಲ. ಯಾಕೆ ಗೊತ್ತಾ?

ಅಕಸ್ಮಾತ್ ಕೇಂದ್ರ ಸರ್ಕಾರ PFI SDPI ಎನ್ನುವ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿದರೆ ಸಂತೋಷ ಪಡಬೇಡಿ. ವಾಸ್ತವದಲ್ಲಿ ಬರಿ ಸಂಘಟನೆಗಳನ್ನು ನಿಷೇಧಿಸಬಹುದು ಆದರೆ ಅದರೊಳಗೆ ಇರುವ ವಿಷಜಂತುಗಳನ್ನು ಹೇಗೆ ನಿಷೇಧಿಸುತ್ತಾರೆ ಹೇಳಿ.

ಈ ಹಿಂದೆ ಸಿಮಿ (SIMI-Students Islamic Movement of India ) ಎಂಬ ಅತಿರೇಕಿ ಸಂಘಟನೆ ಕೂಡಾ ದೇಶದ್ರೋಹದ ಕೆಲಸದಲ್ಲಿ ತೊಡಗಿತ್ತು. ಆಗಲೂ ಈ ಅತಿರೇಕಿ ಸಂಘಟನೆಯನ್ನು ನಿಷೇಧಿಸಬೇಕೆಂಬ ಕೂಗು ಕೇಳಿ ಬಂದಿತ್ತು.

ಭಾರತದಲ್ಲಿದ್ದುಕೊಂಡೇ ಈ ದೇಶದ ಭದ್ರತೆಗೆ ಅಪಾಯ ತಂದಿಡುವ ಕೃತ್ಯಗಳಲ್ಲಿ ತೊಡಗಿದ ‘ಸಿಮಿ’ ಸಂಘಟನೆಯನ್ನು ಬಹಿಷ್ಕರಿಸಿ ,ಅದನ್ನು ಬುಡ ಸಮೇತ ನಾಶ ಮಾಡಬೇಕು.ಇಷ್ಟು ಮಾತ್ರದ ನಿರ್ಧಾರಕ್ಕೆ ಬರಲು ತುಂಬ ತರ್ಕ ಬೇಕಿಲ್ಲ.ಆದರೆ ನಮ್ಮ ಓಟು ಪಾಲಿಟಿಕ್ಸಿನ ರಾಜಕಾರಣಿಗಳು ಬೇರೇಯದೇ ಧಾಟಿಯಲ್ಲಿ ಆಲೋಚಿಸುತ್ತಾರೆ ಮತ್ತು ವ್ಯವಹರಿಸುತ್ತಾರೆ . ‘

ಸಿಮಿ’ ತರಹದ ಸಂಘಟನೆಯನ್ನು ಬಹಿಷ್ಕರಿಸುವುದರ ಮೂಲಕ ಭಾರತದ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲಾಗುತ್ತಿದೆ ! ಇಷ್ಟಕ್ಕೂ ‘ಸಿಮಿ’ ಒಂದು ರಾಷ್ಟ್ರವಿರೋಧಿ ಸಂಘಟನೆಯೆಂದು ಹೇಳಲು ನಿಮ್ಮ ಬಳಿ ಸಾಕ್ಷ್ಯವೆಲ್ಲಿದೆ? ಎಂಬಂತಹ ಹೇಳಿಕೆಗಳನ್ನು ನೀಡುತ್ತಾರೆ .

ಈ ಓಟು ಪಾಲಿಟಿಕ್ಸಿನ ರಾಜಕಾರಣಿಗಳಿಗೆ ಪಾನ್ ಇಸ್ಲಾಮಿಕ್ ಚಳವಳಿಯ ಅಪಾಯವೆಂಥದೆಂಬುದು ಗೊತ್ತೂ ಇರುವುದಿಲ್ಲ. ಗೊತ್ತಿದ್ದರೂ ಅದನ್ನು ಖಂಡಿಸುವ ಮೂಲಕ ಭಾರತದ ಮುಸಲ್ಮಾನರನ್ನು ಎದುರು ಹಾಕಿಕೊಳ್ಳುತ್ತೇವೆ ಎಂಬ ಆತಂಕ ಅವರನ್ನು ಕಾಡುತ್ತದೆ.

ಯಾಕೆ ಈ ವಿಚಾರ ತೆಗೆದೆ ಅಂದ್ರೆ 2001 ರಲ್ಲಿ ಅಟಲ್ ಜಿ ಪ್ರಧಾನಿಯಾಗಿದ್ದರು. ಆಗ ದೇಶದ್ರೋಹಿ ಕೆಲಸದಲ್ಲಿ ತೊಡಗಿದ್ದ SIMI ( ದಿ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ) ಅನ್ನುವ ಸಂಘಟನೆಯನ್ನು ಅಟಲ್ ಜಿ ನಿಷೇಧಿಸಿದ್ದರು.

ಆದರೆ ಆ ಸಂಘಟನೆಗಳ ಕಾರ್ಯಕರ್ತರು ಜೈಷ್ ಮೊಹಮ್ಮದ್ ತಾಲಿಬಾನ್ ಆಲ್ ಖೈದಾ ಈ ರೀತಿಯ ಭಯೋತ್ಪಾದಕ ಸಂಘಟನೆಗಳನ್ನು ಸೇರಿ ಮತ್ತೆ ಭಾರತದಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಿದರು.

ಈಗ ಮೂಲ ವಿಷಯಕ್ಕೆ ಬರೋಣ ನಮಗೆ ಗೊತ್ತಿರುವಂತೆ PFI SDPI ಸಂಘಟನೆಗಳು ಐಸಿಸ್ ನ ನಿಕಟವರ್ತಿಗಳು. ಭಾರತದಲ್ಲಿ ಜಿಹಾದ್ ಹೆಸರಿನ ಮೇಲೆ ಮತಾಂತರ ಲವ್ ಜಿಹಾದ್ ಹಿಂದೂ ಕಾರ್ಯಕರ್ತರ ಮಾರಣಹೋಮ ಹೀಗೆ ಹಲವಾರು ಕೃತ್ಯಗಳಲ್ಲಿ ಪಾಲ್ಗೊಂಡಿರುವ ಈ ಸಂಘಟನೆಗಳು ಭವಿಷ್ಯ ಭಾರತದ ಭದ್ರತೆಗೆ ಬಾರಿ ಅಪಾಯ.

ಅಕಸ್ಮಾತ್ ಈ ಸಂಘಟನೆಗಳನ್ನು ನಿಷೇಧಿಸಿದರೂ ಸಹ ಈ ಕಾರ್ಯಕರ್ತರ ಮನಸ್ಥಿತಿ ಬದಲಾಗದು. ಮತ್ತೆ ಇವರು ಸಂವಿಧಾನದ ಅಡಿಯಲ್ಲಿ ಮತ್ತೊಂದು ಸಂಘಟನೆ ಹುಟ್ಟು ಹಾಕುತ್ತಾರೆ.

So ಇವರ ದೇಶವಿರೋಧಿ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಇವರನ್ನು ಶಾಶ್ವತವಾಗಿ ಜೈಲಿನಲ್ಲೆ ಕೊಳೆಯುವಂತೆ ಮಾಡಬೇಕಿದೆ. ಇಲ್ಲವಾದರೆ ರಕ್ತ ಬೀಜಾಸುರರಂತೆ ಇವರು ಪದೇ ಪದೇ ಹುಟ್ಟಿ ನಮಗೆ ಆತಂಕ ತರುವುದರಲ್ಲಿ ಅನುಮಾನವೇ ಬೇಡ.

 •  
  429
  Shares
 • 429
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com