Connect with us
Loading...
Loading...

ಅಂಕಣ

ಪುಟಗೋಸಿ, ಸ್ವಾರ್ಥ ನಾಯಕರ ಸ್ವಾರ್ಥಕ್ಕೆ ಬಲಿಯಾದ ಸುಭಾಷರ ಬಂಟ, ಐ.ಎನ್.ಎ ದಂಡನಾಯಕನ ಕಥೆ!! ಮಿಸ್ ಮಾಡದೆ ಓದಿ!!

Published

on

 • 3.4K
 •  
 •  
 •  
 •  
 •  
 •  
 •  
  3.4K
  Shares

ನೇತಾಜಿ ಅಂತಿದ್ ಹಾಗೇ ನೆನಪಿಗ್ ಬರೋದು ಅವರ ಅಪ್ರತಿಮ ದೇಶಭಕ್ತಿ ಹಾಗೂ ದೇಶಕ್ಕಾಗಿ ಯಾವುದೇ ಖಡಕ್ ನಿರ್ದಾರ ಬೇಕಿದ್ದರು ತೆಗೆದುಕೊಳ್ಳುವ ಶಕ್ತಿ ಮತ್ತು ಯುಕ್ತಿ..

ಈ ದೇಶಾಭಿಮಾನಿ 1941ರಲ್ಲಿ ದೇಶದಿಂದ ಚಾಣಕ್ಯನ ರೀತಿಯಲ್ಲಿ ತಪ್ಪಿಸಿಕೊಂಡು ನಂತರ ಬಹಳ ದಿನಗಳಾದ ಮೇಲೆ ಕಂಡದ್ದು ಜಪಾನಿನಲ್ಲಿ!!
ಅದು ಒಂದು ದೊಡ್ಡ ಸೈನ್ಯದೊಂದಿಗೆ, ಆ ಸೈನ್ಯವೆ INA(ಇಂಡಿಯನ್ ನ್ಯಾಷನಲ್ ಆರ್ಮಿ)

ಈ ಸೈನ್ಯವನ್ನ ಕಟ್ಟಿದ ಕ್ಯಾಪ್ಟನ್ ಮೋಹನ್ ಸಿಂಗ್ ಅದನ್ನ ನೇತಾಜಿಗೆ ಕೊಟ್ಟ ರೀತಿಯೇ ಒಂದು ರೋಚಕ ಕಥೆ!!

ಆ ಸೈನ್ಯವನ್ನ ಬೆಳೆಸಲು ನೇತಾಜಿ ಆಯ್ದು ಕೊಂಡವರೆಲ್ಲ ಅಪ್ರತಿಮ ದೇಶಭಕ್ತರೆ! ಹಾಗೂ ದೇಶಕ್ಕಾಗಿ ಪ್ರಾಣವನ್ನೇ ನೀಡಲು ಸದಾ ಸಿದ್ದ ಎಂದು ಹೇಳುವ ಮಹಾನ್ ಸೈನಿಕರು…

ಆ ಸೈನ್ಯದ ದಂಡನಾಯಕನ ಬಗ್ಗೇಯೆ ಈ ಲೇಖನವಿರೋದು!!

ಅಷ್ಟಕ್ಕೂ ಆತ ಕೇವಲ ದಂಡನಾಯಕ ಮಾತ್ರವಲ್ಲ ಅವನು ನೇತಾಜಿಯ ಅತ್ಯಾಪ್ತ ಹಾಗೂ ಸುಭಾಷರ ಸೈನ್ಯದ ಮಹಾನ್ ಶಕ್ತಿ ಮತ್ತೂ ಹೇಳುವುದೆಂದರೆ ಆತ ಸುಭಾಷ್ ಜಿ ಕಣ್ಮರೆಯಾದಾಗ ಅಂದರೆ ವಿಮಾನ ಅಪಘಾತವೆಂದು ನಂಬಿಸುವ ಕಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುವವ, ಯಾಕೆಂದರೆ ಅಂದು ನೇತಾಜಿಯ ಜೊತೆ ಇದ್ದ ಒಬ್ಬೇ ಒಬ್ಬ ಭಾರತಿಯನೆಂದರೆ ಅದು ಆ ದಂಡನಾಯಕ ಮಾತ್ರ!! ಅವನು ಏನನ್ನು ಹೇಳಿದನೋ ಅದಷ್ಟೆ ಸಾಕ್ಷಿ ಸುಭಾಷ್ ಜಿ ಸತ್ತಿದ್ದಾರೆ ಎಂದು ನಂಬಲು!!

ಅಷ್ಟಕ್ಕು ಆ ವ್ಯಕ್ತಿ ಯಾರು ಗೊತ್ತಾ? ಆ ವ್ಯಕ್ತಿಯ ಹಿನ್ನೆಲೆಯಾದರು ಏನು?

ಆತನ ಹೆಸರು ಹಬೀಬುರ್ ರೆಹಮಾನ್, ಇವನು ಹುಟ್ಟಿದ್ದು ಅತ್ಯಂತ ಶ್ರೀಮಂತ ಮನೆತನದಲ್ಲೆ, ಆತನ ತಂದೆ ರಾಜಾ ಮನ್ಸೂರ್ ಅಹ್ಮದ್ ಖಾನ್ ಬ್ರಿಟೀಷ್ ಸೈನ್ಯದಲ್ಲಿ ಉನ್ನತ ಸ್ಥಾನದಲ್ಲಿದ್ದವರು ಆದರೆ ಅವರಿಗೆ ರೆಹಮಾನ್ ಸೈನ್ಯ ಸೇರುವುದು ಸ್ವಲ್ಪವೂ ಇಷ್ಚವಿರಲಿಲ್ಲ!!

ವಿಧಿಯಾಟ ಬಲ್ಲವರ್ಯಾರು , ರೆಹಮಾನ್ ಹದಿಯರೆಯದ ವಯಸ್ಸಲ್ಲಿದ್ದಾಗಲೇ 1936 ರಲ್ಲಿ ಬ್ರಿಟೀಷ್ ಸೈನ್ಯ ಸೇರಿಯೇ ಬಿಟ್ಟ! ತದನಂತರ ಆತ 1942 ರ ಯುದ್ದದಲ್ಲಿ ಬರ್ಮಾ ಗಡಿಯಿಂದ ಜಪಾನ್ ಸಂಸ್ಥಾನಕ್ಕೆ ಯುದ್ದ ಖೈದಿಯಾಗಿ ಬಂಧಿಸಲ್ಪಟ್ಟ.

ಅದೇ ಸಂಧರ್ಭದಲ್ಲಿ ಎಲ್ಲ ಭಾರತೀಯ ಯುದ್ದ ಖೈದಿಗಳನ್ನ ಒಗ್ಗೂಡಿಸಿ ಸ್ವತಂತ್ರ್ಯ ಹೋರಾಟಕ್ಕಾಗಿ ಸೈನ್ಯ ಕಟ್ಟುತ್ತಿದ್ದ ಮೋಹನ್ ಸಿಂಗ್ ಕಣ್ಣಿಗೆ ಈ ಯುವಕ ಬಿದ್ದ.

ಆತನಲ್ಲಿ ಭಾರತಾಂಬೆಯ ಹೆಮ್ಮೆಯ ಕಥೆ ಹೇಳುತ್ತ ಆತನನ್ನು ಬ್ರಿಟೀಷ್ ವಿರುದ್ದ ಹೋರಾಡುವ ಸೈನ್ಯಕ್ಕೆ ಅಂದರೇ ಐಎನ್ಎ ಗೇ ಸೇರಿಸಲು ಯಶಸ್ವಿಯಾದರು ಕ್ಯಾಪ್ಟನ್!!

ಅಷ್ಟರಲ್ಲೇ ನೇತಾಜಿ ಜಪಾನಿಗೆ ಬಂದು ಮತ್ತೆ INA ಅನ್ನು ಬಲಗೊಳಿಸಲು ತೊಡಗಿದರು. ಅಪ್ಪಟ ದೇಶಭಕ್ತನ ಕಣ್ಣು ಮತ್ತೊಬ್ಬ ಮಹಾನ್ ಹೋರಾಟಗಾರನ ಮನಸ್ಥಿತಿಯಂತಿದ್ದ ರೆಹಮಾನ್ ಮೇಲೆ ಬಿತ್ತು!! ಆತನ ಛಲ ಮತ್ತು ಬಲವನ್ನ ಗಮನಿಸಿದ ನೇತಾಜಿ ರೆಹಮಾನ್ನನ್ನು ತಮ್ಮ ಆಪ್ತ ಸಲಹೆಗಾರನಾಗಿ ನೇಮಕ ಮಾಡಿಕೊಂಡರು!!

ಮುಂದೆ ಆತ 1945ರಲ್ಲಿ ಐಎನ್ಎ ಯ ದಂಡನಾಯಕ(ಚೀಫ್ ಆಫ್ ಸ್ಟಾಫ್) ಆಗಿ ನೇಮಕವಾದ ಹಾಗೂ ನೇತಾಜಿ ಕಣ್ಮರೆಯಾದ 1945 ಆಗಷ್ಟ್ 18 ರ ವರೆಗೂ ಆತ ಇದೇ ಸ್ಥಾನದಲ್ಲಿದ್ದ ಹಾಗೂ ನೇತಾಜಿಯ ಅತ್ಯಾಪ್ತನಾಗಿ ಅವರ ಕೊನೆಯಾಯಿತೆಂದು ಹೇಳುವ ಅಪಘಾತದ ಕಥೆಯಲ್ಲಿ ಸಿಗುವ ಒಬ್ಬನೇ ಒಬ್ಬ ಭಾರತೀಯನಾಗಿ ಉಳಿದ!!

ಈತನ ವಿಚಾರಣೆಗಳಲ್ಲಿ ಇವನು ಹೇಳಿದ್ದೊಂದೆ ಅಂದು ವಿಮಾನಕ್ಕೆ ಬೆಂಕಿ ತಗುಲಿತು ನೇತಾಜಿ ಪೂರ್ಣ ಬೆಂಕಿಯಲ್ಲಿ ಬೆಂದರು ಎಷ್ಟೆ ಪ್ರಯತ್ನ ಮಾಡಿದರು ಅವರನ್ನ ಬದುಕಿಸಲಾಗಲಿಲ್ಲ ಕೊನೆಗೆ ಆಗಷ್ಟ್ 18ರ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು..

ಆದರೆ ಆತನು ಹೇಳುವುದೇ ಅಂತಿಮವಾದರೂ ಅದನ್ನ ನಂಬಲು ಸ್ವತಃ ಗಾಂಧಿ ನೆಹರೂ ಆಧಿಗಳಾಗಿ ಬ್ರಿಟಿಷರು ಸಿದ್ದರಿರಲಿಲ್ಲ!!

ಆತನಿಂದ ನೇತಾಜಿಯ ಸಾವಿನ ವಿಷಯದ ಸ್ಪಷ್ಟತೆಗಾಗಿ ಆತನನ್ನು ಇವರು ಬಳಸಿಕೊಂಡ ರೀತಿ ಮಾತ್ರ ಕ್ರೌರ್ಯವೆ ಸರಿ. ಯಾಕೆಂದರೆ ಸ್ವತಂತ್ರ್ಯ ಬಂದ ಮೇಲೆ ದೇಶದ ಚುಕ್ಕಾಣಿಯಿಡಿಯಲು ನೆಹರೂ ಸಿದ್ದನಾಗಿ ನಿಂತಿದ್ದರು.

ಆದರೆ ಅವರಿಗಿದ್ದ ಭಯ ನೇತಾಜಿ ಏನಾದರು ಮತ್ತೇ ಬಂದರೆ ಎಂಬುದು, ಮತ್ತು ನೇತಾಜಿ ಬದುಕಿದ್ದಾರೆ ಎಂದು ಜನ ಇನ್ನು ನಂಬಿ ಕುಳಿತಿರುವುದು, ಎರಡಕ್ಕು ನೀರೆರೆಚ ಬೇಕಾದರೆ ರೆಹಮಾನ್ ಹೇಳುವ ಸಾವಿನ ಕಥೆ ಸತ್ಯವಾಗ ಬೇಕಿತ್ತು.

ಅದಕ್ಕಾಗಿ ಆತನನ್ನು ಬ್ರಿಟೀಷರಾದಿಯಾಗಿ ನೆಹರೂವು ಪದೇ ಪದೇ ವಿಚಾರಣೆಯ ಹೆಸರಲ್ಲಿ ಚಿತ್ರ ಹಿಂಸೆ ನೀಡಲು ಪ್ರಾರಂಭಿಸಿದರು, ಆದರೆ ಆತನಿಗಿದ್ದ ಅಚಲ ಭಕ್ತಿ ಯಾವುದೇ ಕಾರಣಕ್ಕು ನೇತಾಜಿಯ ಬಗ್ಗೆ ವಿಷಯವನ್ನ ಮಾತ್ರ ಬಿಟ್ಟು ಕೊಡಲು ಬಿಡಲಿಲ್ಲ.

ಕೊನೆಗೆ ಆತನು ಸ್ವತಂತ್ರ್ಯ ಭಾರತಕ್ಕೆ ನಿಷ್ಟನಾಗಿರುವೆ ಎಂದು ಐಎನ್ಎ ಯಲ್ಲಿದ್ದ ಅಷ್ಟೂ ಮುಸಲ್ಮಾನರೊಂದಿಗೆ ಕರೆತಂದು ಭಾರತೀಯ ಸೇನೆಗೆ ಸೇರಿಸಿಕೊಳ್ಳಿ ಅಂತ ಕೇಳಿಕೊಂಡ.

ಆದರೆ ನೆಹರು ಮಾಡಿದದೇನು ಗೊತ್ತಾ?

ನೆಹರು ಆತನಿಗೆ ಹೇಳ್ತಾರೆ “ಪಾಕೀಸ್ಥಾನ ಮಾಡಿರುವುದೆ ನಿಮಗಾಗಿ(ಮುಸಲ್ಮಾನರಿಗಾಗಿ) ಅಲ್ಲಿಗೆ ಹೋಗಿ, ಇಲ್ಲಿ ನಿಮ್ಮ ಅವಶ್ಯಕತೆ ಇಲ್ಲ” ಅಂದರಂತೆ ಎಂದು ಅದೇ ಐಎನ್ಎ ಅಲ್ಲಿದ್ದ ಝಾನ್ಸಿ ಬ್ರಿಗೇಡ್ನ ಮಾನ್ವತಿ ಆರ್ಯರವರು ಮಾಧ್ಯಮಕ್ಕೇ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ..

ಇಷ್ಟೆಲ್ಲ ಅವಮಾನಗಳಾದ ನಂತರ ಆತ ಪಾಕೀಸ್ಥಾನಕ್ಕೆ ತೆರಳುತ್ತಾನೆ ಮತ್ತು ಐಎನ್ಎ ಜೊತೆಯಿದ್ದ ಎಲ್ಲ ಸಂಪರ್ಕವನ್ನು ಕಡಿತಗೊಳಿಸಿ ಕೊಳ್ಳುತ್ತಾನೆ.

ನಂತರ ಆತನಿಗೆ ಪಾಕೀಸ್ಥಾನ ಗುಡ್ಡಗಾಡು ಜನರ ಸೈನ್ಯ ಕಟ್ಟುವ ಕೆಲಸ ನೀಡುತ್ತದೆ , ವಿಪರ್ಯಾಸ ನೋಡಿ ಅದೇ ಸೈನ್ಯ ಕಾಶ್ಮಿರದ ರಾಜ ಹರಿಸಿಂಗ್ ಸಂಸ್ಥಾನದ ಮೇಲೆ ದಾಳಿ ಮಾಡುತ್ತದೆ!!

ಮುಂದೆ ಆತ ಪಾಕೀಸ್ಥಾನದ ಬ್ರಿಗೇಡಿಯರ್ ಹುದ್ದೆಯನ್ನ ಅಲಂಕರಿಸಿ ನಿವೃತ್ತಿಯಾಗ್ತಾನೆ.

ಮತ್ತೆ ಆತ ಭಾರತಕ್ಕೆ ಸುಭಾಷ್ ಜಿ ಅವರ ಹತ್ಯೆಯ ಬಗ್ಗೆ ಹೇಳಿಕೆ ಕೊಡಲು ಬಂದು ಹೋದದ್ದಷ್ಟೆ ಮತ್ತೆಂದೂ ಆತ ಈ ದೇಶಕ್ಕೆ ಬರಲೇ ಇಲ್ಲ!!

ಅವನು ಕೊನೆಯ ಬಾರಿ ಭಾರತಕ್ಕೆ ಭೇಟಿ ನೀಡಿ ಹೇಳಿದ ಮಾತು “ನೇತಾಜಿ ಎಂಬ ಸಿಂಹ ಪ್ರಪಂಚವೇ ಗೌರವಿಸುವ ಹಾಗೂ ಎಲ್ಲರೂ ಪೂಜಿಸಲೇ ಬೇಕಾದ ವ್ಯಕ್ತಿತ್ವ” ಎಂದು!!!

ಯಾರದ್ದೋ ಆಸೆಗೆ ದೇಶ ನೇತಾಜಿಯೊಂಗೆ ಹಬೀಬುರ್ ರೆಹಮಾನ್ ರೀತಿಯ ಅನೇಕ ದೇಶ ಭಕ್ತರನ್ನು ಕಳೆದು ಕೊಂಡದ್ದು ಮಾತ್ರ ವಿಷಾದನಿಯವೇ ಸರಿ..

ಅಂದು ಸುಭಾಷರು ನೆಹರುವಿನ ಕುತಂತ್ರಕ್ಕೆ ಬಲಿಯಾಗದಿದ್ದರೆ ಭಾರತ ಎಷ್ಟು ಸುಭೀಕ್ಷವಾಗಿರುತ್ತಿತ್ತೇನೋ!!!

ಸುಭಾಷರ ಛಾತಿ, ಅವರ ಧೈರ್ಯ, ಏನೂ ಬೇಕಾದರೂ ಮಾಡಿ ತೋರಿಸಬಲ್ಲೆ ಒಟ್ಟಿನಲ್ಲಿ ತಾಯಿ ಭಾರತಿಯನ್ನು ಬ್ರಿಟಿಷ್ ಮುಕ್ತ ಮಾಡುವುದೊಂದೇ ನನ್ನ ಗುರಿ ಅಂತ ಹೇಳುತ್ತಿದ್ದುದನ್ನ ಪುಸ್ತಕದಲ್ಲಿ ಓದಿದರೇ ಮೈ ಝುಮ್ಮೆನ್ನುತ್ತೆ ಅಂಥದ್ರಲ್ಲಿ ಅವರ ಜೊತೆಗೇ ಕೆಲಸ ಮಾಡಿದ ಸೈನಿಕರಿಗೆ ಅದೆಷ್ಟು ಉತ್ಸಾಹವಿದ್ದಿರಬೇಡ!!!

ಈ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿರುವ ಮಾತುಗಳು ಮನಸ್ಸಿಗೆ ನಾಟುತ್ತಿವೆ

“ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಬೋಸ್ ರಿಂದಲೇ ಹೊರತು ಗಾಂಧಿ ನೆಹರು ರಿಂದಲ್ಲ” ಅಂತ ಅಂಬೇಡ್ಕರ್ ಹೇಳಿದ್ರು

ಅದು ಅಕ್ಷರಶಃ ಸತ್ಯವೂ ಹೌದು. ಇಂದು ನೇತಾಜಿ ನಮ್ಮ ಜೊತೆಯಿಲ್ಲ ಆದರೆ ಅವರ ಶೌರ್ಯ, ದೇಶಪ್ರೇಮದ ಛಾತಿ ಮಾತ್ರ ನಮ್ಮ ಜೊತೆಗೆ ಸದಾ ಉಳಿದಿರುತ್ತೆ. ಅವರೊಬ್ಬ ಅಜರಾಮರ ವ್ಯಕ್ತಿ!!

ಜೈ ಸುಭಾಷ್ ಜೀ
ಜೈ ಹಿಂದ್!!

– Hemant C Shekhar

 •  
  3.4K
  Shares
 • 3.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com