Connect with us
Loading...
Loading...

ಇತಿಹಾಸ

ಪ್ರಕಟಣೆ ಆಗುವ ಮೊದಲೇ ಬ್ರಿಟಿಷರು ಎರಡೆರಡು ದೇಶಗಳಲ್ಲಿ ನಿಷೇಧಿಸಿದ್ದ ಕೃತಿಯ ಲೇಖಕನ ಬಗ್ಗೆ ನಿಮಗೆಷ್ಟು ಗೊತ್ತು?

Published

on

  • 1
  •  
  •  
  •  
  •  
  •  
  •  
  •  
    1
    Share

ಹೌದು ನಾನು ಹೇಳಹೊರಟಿರುವುದು ಸಾವರ್ಕರರ ಬಗ್ಗೆ. ಶಾಮಜೀ ಕೃಷ್ಣ ವರ್ಮಾ ಅವರು ಲಂಡನ್ನಿನಲ್ಲಿ ನಡೆಸುತ್ತಿದ್ದ ಭಾರತ ಭವನಕ್ಕೆ ಸಾವರ್ಕರರು ಬಾಲಗಂಗಾಧರ ತಿಲಕರ ಶಿಫಾರಸ್ಸು ಪತ್ರವನ್ನು ತೆಗೆದುಕೊಂಡು ಸೇರಿಕೊಂಡರು. ಅವರ ಉದ್ದೇಶವಿಷ್ಟೇ ಬ್ರಿಟಿಷರ ದೇಶಕ್ಕೆ ಹೋಗಿ ಬ್ರಿಟಿಷರಿಗೆ ಬಿಸಿ ಮುಟ್ಟಿಸುವುದು. ಲಂಡನ್ನಿನಲ್ಲಿದ್ದಾಗ ಸಾವರ್ಕರರು ಇಟಲಿಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅತ್ಯುನ್ನತ ಇಟಲಿಯ ಕ್ರಾಂತಿಕಾರಿ ಮ್ಯಾಝಿನಿಯ ಬಗ್ಗೆ ಒಂದು ಪುಸ್ತಕ ಬರೆದರು. ಅದರಲ್ಲಿಯ 26 ಮುನ್ನಡಿಯ ಪುಟಗಳು ಪರಮೋಚ್ಛ, ಉತ್ಕೃಷ್ಟ ದೇಶಭಕ್ತಿಯುಳ್ಳದ್ದಾಗಿದ್ದವು. ಭಾರತದ ಸ್ವಾತಂತ್ರ್ಯವನ್ನು ಉದ್ದೀಪನಗೊಳಿಸುವ ಸಲುವಾಗಿ ಆ ಪುಸ್ತಕವನ್ನು ಭಾರತಕ್ಕೆ ಕಳುಹಿಸಿದರು.

ಸಾವರ್ಕರ್ ಇಟಲಿಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮ್ಯಾಝಿನಿ ಪುಸ್ತಕ ಬರೆಯುವುದಕ್ಕೆ ಒಂದು ದೊಡ್ಡ ಉದ್ದೇಶವೇ ಇತ್ತು. ಏನು ಗೊತ್ತಾ? ಇಟಲಿಯ ಮಹಾನ್ ಕ್ರಾಂತಿಕಾರಿ ಮ್ಯಾಝಿನಿಯ ಬಗ್ಗೆ ಭಾರತೀಯರಿಗೆ ಓದಿಸಿದರೆ ಭಾರತೀಯ ಕ್ರಾಂತಿಕಾರಿಗಳು ಬ್ರಿಟಿಷರ ವಿರುದ್ಧ ರಣಕಹಳೆ ಊದುತ್ತಾರೆಂಬ ಉದ್ದೇಶವಿರುವುದರಿಂದ ಮ್ಯಾಝಿನಿಯ ಬಗ್ಗೆ ಬರೆದು ಭಾರತಕ್ಕೆ ಕಳುಹಿಸಿದ್ದರು. ಆ ಪುಸ್ತಕವನ್ನು ಭಾರತೀಯ ಕ್ರಾಂತಿಕಾರಿಗಳು ತೆಗದುಕೊಂಡು ಅದನ್ನು ಸಾವರ್ಕರರ ಸಹೋದರರಿಗೆ ತಲುಪಿಸಿದರು. ಸಾವರ್ಕರರ ಸಹೋದರ ಆ ಪುಸ್ತಕವನ್ನು ಪ್ರಕಟಿಸಿ ಕ್ರಾಂತಿಕಾರಿಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿಬಿಟ್ಟರು.

ಭಾರತೀಯ ಕ್ರಾಂತಿಕಾರಿಗಳಿಗೆ ಇನ್ನಷ್ಟು ಸ್ಪೂರ್ತಿ ಬರಲೆಂದು ಸಾವರ್ಕರರು 1857ರ ಭಾರತದ ಪ್ರಥಮ ಮಹಾ ಸ್ವಾತಂತ್ರ್ಯ ಸಂಗ್ರಾಮವೆಂಬ ಪುಸ್ತಕವನ್ನು ಬರೆದರು. ಅಲ್ಲಿಯವರೆಗೆ 1857ರ ಯುದ್ಧವನ್ನು ಸಿಪಾಯಿ ದಂಗೆಯೆಂತಲೆ ಭಾರತೀಯರು ಕರೆಯುವ ಹಾಗೆ ಬ್ರಿಟಿಷರು ಮಾಡಿಬಿಟ್ಟಿದ್ದರು. ಸಾವರ್ಕರರು ಅದನ್ನು ಸಿಪಾಯಿ ದಂಗೆಯಲ್ಲ ಅದೊಂದು ಭಾರತದ ಪ್ರಥಮ ಮಹಾ ಸ್ವಾತಂತ್ರ್ಯ ಸಂಗ್ರಾಮವೆಂದು ಸಾರಿ ಒಂದು ಉತ್ಕೃಷ್ಟ ಪುಸ್ತಕವನ್ನು ಬರೆದರು. ಬರೆದದ್ದೇನೋ ಆಗಿತ್ತು, ಆದರೆ ಇನ್ನೂ ಪ್ರಕಟಣೆಯಾಗಿರಲಿಲ್ಲ. ಪ್ರಕಟಣವಾಗುವ ಮುಂಚೆ ಆ ಪುಸ್ತಕವನ್ನು ಸ್ಕಾಟ್ ಲ್ಯಾಂಡ್ ನ ಪೋಲಿಸರು ನೋಡಿ ಅದರ ಕುರಿತಂತೆ ಬ್ರಿಟಿಷರಿಗೆ ತಿಳಿಸಿಬಿಟ್ಟರು. ಆ ಪುಸ್ತಕವೇನಾದರೂ ಪ್ರಕಟವಾಗಿ ಭಾರತಕ್ಕೆ ಬಂದರೆ ಭಾರತೀಯರು ಬ್ರಿಟಿಷರನ್ನು ಹೊಡೆದೋಡಿಸುವುದಂತು ಖಾತರಿ ಎಂದು ಸ್ಕಾಟ್ ಲ್ಯಾಂಡ್ ನ ಪೋಲಿಸರು ಬ್ರಿಟಿಷರ ಕಿವಿ ಊದಿದರು.

ತತಕ್ಷಣ ಎಚ್ಚೆತ್ತುಕೊಂಡ ಬ್ರಿಟಿಷರು ಆ ಪುಸ್ತಕವನ್ನು ಬ್ಯಾನ್ ಮಾಡಿಬಿಟ್ಟರು. ಇನ್ನೂ ಪ್ರಕಟಣೆಯೇ ಆಗಿರಲಿಲ್ಲ. ಪ್ರಕಟಣೆಯೇ ಆಗದ ಪುಸ್ತಕವನ್ನು ಬ್ರಿಟಿಷರು ಬ್ಯಾನ್ ಮಾಡಿದ್ದರೆಂದರೆ ಸಾವರ್ಕರರ ಸಾಹಿತ್ಯದ ತಾಕತ್ತು ಎಷ್ಟಿರಬಹುದೆಂದು ನೀವೇ ಊಹಿಸಿಕೊಳ್ಳಿ. ಪ್ರಕಟಣೆ ಆಗುವ ಮುಂಚೆಯೇ ಬ್ರಿಟಿಷರು ಎರಡೆರಡು ದೇಶಗಳಲ್ಲಿ ನಿಷೇಧಿಸಿದ್ದ ಕೃತಿಯ ಲೇಖಕ ಹೆಮ್ಮೆಯ ಸ್ವಾತಂತ್ರ್ಯ ವೀರ ಸಾವರ್ಕರ್. ಬ್ರಿಟಿಷರು ಸಾವರ್ಕರರು ಬರೆದ 1857ರ ಭಾರತದ ಪ್ರಥಮ ಮಹಾ ಸ್ವಾತಂತ್ರ್ಯ ಸಂಗ್ರಾಮವೆಂಬ ಪುಸ್ತವೇನೋ ಬ್ಯಾನ್ ಮಾಡಿಬಿಟ್ಟರು. ಆದರೆ ಸಾವರ್ಕರ್ ಸುಮ್ಮನಾಗಲಿಲ್ಲ. ಆ ಪುಸ್ತಕವನ್ನು ಸಾವರ್ಕರರು ಬ್ರಿಟಿಷರ ಕಣ್ಣು ತಪ್ಪಿಸಿ ಭಾರತಕ್ಕೆ ಕಳುಹಿಸಿಬಿಟ್ಟರು. ಅದು ಹೇಗೆ ಗೊತ್ತಾ? ಬೈಬಲ್ ಪುಸ್ತಕಗಳ ಪೆಟ್ಟಿಗೆಯಲ್ಲಿ 1857ರ ಭಾರತದ ಪ್ರಥಮ ಮಹಾ ಸ್ವಾತಂತ್ರ್ಯ ಸಂಗ್ರಾಮವೆಂಬ ಪುಸ್ತಕವನ್ನು ಭಾರತಕ್ಕೆ ಕಳುಹಿಸಿಬಿಟ್ಟರು.

ಆ ಪುಸ್ತಕವನ್ನು ಭಾರತದಲ್ಲಿದ್ದ ಅಭಿನವ ಭಾರತದ ಯುವಕರು ಫ್ರಾನ್ಸಿಗೆ ಕಳುಹಿಸಿದರು. ಆಗ ಫ್ರಾನ್ಸಿನಲ್ಲಿ ದೇಶಭಕ್ತರಾದ ಲಾಲಾ ಹರದಯಾಳ್, ಮೇಡಂ ಕಾಮಾ, ಶಾಮಜಿ ಕೃಷ್ಣ ವರ್ಮಾ ಇದ್ದರು. ಅವರೆಲ್ಲ ಸೇರಿ ಸಾವರ್ಕರರು ಬರೆದ 1857ರ ಭಾರತದ ಪ್ರಥಮ ಮಹಾ ಸ್ವಾತಂತ್ರ್ಯ ಸಂಗ್ರಾಮವೆಂಬ ಪುಸ್ತಕವನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿ, ಹಾಲೆಂಡಿನಲ್ಲಿ ಪ್ರಕಟಿಸಿದರು. ಇದು ಸಾವರ್ಕರರ ತಾಕತ್ತು‌.

 

  •  
    1
    Share
  • 1
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com