Connect with us
Loading...
Loading...

ಪ್ರಚಲಿತ

“ಪ್ರತ್ಯೇಕ ನಾಡಧ್ವಜ ಬಹುಸಂಖ್ಯಾತ ಹಿಂದೂಗಳ ಅಸ್ಮಿತೆಯ ಸಂಕೇತವೂ ಹೌದು” ಹೇಗೆ ಅಂತೀರಾ ಓದಿ ನೋಡಿ!!

Published

on

 • 442
 •  
 •  
 •  
 •  
 •  
 •  
 •  
  442
  Shares

ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕಾಲ ಸಮೀಪಿಸಿದೆ. ಅರಿಶಿನ, ಕೆಂಪು ಹಾಗೂ ಬಿಳೀ ಬಣ್ಣದ ಮಧ್ಯದಲ್ಲಿ ಗಂಡಭೇರುಂಡ ಲಾಂಛನವಿರುವ ನಾಡ ಧ್ವಜದ ಮಾದರಿ ಅಂತಿಮಗೊಂಡಿದ್ದು ಸಚಿವ ಸಂಪುಟದ ಸಮ್ಮತಿ ಪಡೆದು ಕೇಂದ್ರಕ್ಕೆ ಕಳಿಸುವುದಷ್ಟೇ ಬಾಕಿಯಿದೆ.

ನಿಜಕ್ಕೂ ಇದೊಂದು ಅತ್ಯಂತ ವಿಶಿಷ್ಠ ಹಾಗೂ ಸಾಕಷ್ಟು ಅರ್ಥಪೂರ್ಣ ಸಂಕೇತಗಳನ್ನು ಹೊಂದಿದ ಧ್ವಜವೆಂದೇ ಹೇಳಬಹುದು. ಇದು ಕೇವಲ ಕನ್ನಡದ ಅಸ್ಮಿತೆಯನ್ನಷ್ಟೇ ಅಲ್ಲದೆ ಕರ್ನಾಟಕದಲ್ಲಿ ಕನ್ನಡವನ್ನೇ ಮಾತೃಭಾಷೆಯಾಗಿ ಬಳಸುವ ಬಹುಸಂಖ್ಯಾತ ಕನ್ನಡಿಗ ಹಿಂದೂಗಳ ಅಸ್ಮಿತೆಯ ಸಂಕೇತವೂ ಹೌದು.

ಹಿಂದೂ ಸಂಸ್ಕೃತಿಯಲ್ಲಿ ಅರಿಶಿನ ಕುಂಕುಮಕ್ಕೆ ಶ್ರೇಷ್ಠ ಸ್ಥಾನವಿದೆ. ದೇವತಾ ಕಾರ್ಯಗಳಲ್ಲಿ, ಶುಭಕಾರ್ಯಗಳಲ್ಲಿ ಅರಿಶಿನ ಕುಂಕುಮವೇ ಶೋಭೆ. ಇವು ಹಿಂದೂ ಸಂಸ್ಕೃತಿಯ ಪ್ರತೀಕವೂ ಹೌದು.

ಹಲವು ಔಷಧೀಯ ಗುಣವುಳ್ಳ ಅರಿಶಿನ ಕುಂಕುಮವನ್ನು ಅವುಗಳಲ್ಲಿರುವ ಔಷಧೀಯ ಗುಣಗಳಿಗಾಗಿಯೇ ಹಿಂದೂಗಳು ಪೂಜಿಸಲು ಪ್ರಾರಂಭಿಸಿದರು.

ಹಾಗಾಗಿ ಇದು ವೈಜ್ಞಾನಿಕವಾಗಿಯೂ ಅತ್ಯಂತ ಮಹತ್ವ ಪಡೆದಿದೆ. ಅಂತಹಾ ಪವಿತ್ರ ಅರಿಶಿನ ಮತ್ತು ಕುಂಕುಮದ ಬಣ್ಣವನ್ನು ಸಾಂಕೇತಿಕವಾಗಿ ಕನ್ನಡದ ಧ್ವಜದಲ್ಲಿ ಬಳಸಿಕೊಳ್ಳಲಾಗಿದೆ.

ಇನ್ನು ಮಧ್ಯ ಭಾಗದಲ್ಲಿ ಗಂಡಭೇರುಂಡ ಲಾಂಛನವಿದೆ. ಹಿಂದೂ ಪುರಾಣಗಳಲ್ಲಿ ಗಂಢಭೇರುಂಡ ಪಕ್ಷಿಯ ಬಗ್ಗೆ ಹಲವಾರು ಕಥೆಗಳು ಕಾಣಸಿಗುತ್ತವೆ.

ಋಗ್ವೇದದಲ್ಲಿ ಬರುವ ಎರಡು ಹಕ್ಕಿಗಳು, ವಿಷ್ಣುವಿನ ವಾಹನವಾದ ಗರುಡ ಇವುಗಳಿಂದ ಗಂಡಭೇರುಂಡ ಪಕ್ಷಿ ವಿಕಾಸಗೊಂಡಿರಬಹುದೆಂದು ಊಹಿಸಲಾಗಿದೆ. ಅಲ್ಲದೆ ವಿಷ್ಣು ನರಸಿಂಹನ ಅವತಾರವೆತ್ತಿ ಹಿರಣ್ಯಕಶಪುವನ್ನು ಸಂಹಾರ ಮಾಡಿದ ಮೇಲೂ ಅವನ ಕೋಪ ತಣ್ಣಗಾಗಲಿಲ್ಲವಂತೆ.

ಅವನಿಂದ ಇಡೀ ವಿಶ್ವವೇ ನಾಶವಾದಿತೆಂದು ಅಂಜಿ ದೇವತೆಗಳು ಶಿವನನ್ನು ಪ್ರಾರ್ಥಿಸಿದಾಗ ಶಿವ ಶರಭಾವತಾರ ಎತ್ತಿ ನರಸಿಂಹನನ್ನು ಎದುರಿಸಿದ, ಆಗ ವಿಷ್ಣು ಶರಭನನ್ನು ಅಡಗಿಸಲು ಗಂಡಭೇರುಂಡ ಪಕ್ಷಿಯಾದ ಎನ್ನುವ ಉಲ್ಲೇಖವಿದೆ.

ಬೇಲೂರಿನ ಚನ್ನಕೇಶವ ದೇಗುಲ ಮತ್ತು ಕೋರಮಂಗಲದ ಬೂಜೇಶ್ವರ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಹಾಗೆಯೇ ಕೆಳದಿಯ ಪ್ರಭು ಶ್ರೀ ರಾಮೇಶ್ವರನ ದೇವಾಲಯದ ಛಾವಣಿಯ ಮೇಲೆ ಕೆತ್ತಲ್ಪಟ್ಟಿರುವ ಗಂಡಭೇರುಂಡ ಶಿಲ್ಪವೂ ಕೂಡಾ ಗಂಡಭೇರುಂಡ ಪಕ್ಷಿಯ ಬಗ್ಗೆ ಹಿಂದೂಗಳ ನಂಬಿಕೆಗೆ ಇರುವ ಒಂದು ಐತಿಹಾಸಿಕ ಸಾಕ್ಷಿಯಾಗಿದೆ.

ಗಂಡಭೇರುಂಡ ಚಿತ್ರ ಪ್ರಾಚೀನ ಕಾಲದಿಂದಲೂ ಪ್ರಭುತ್ವದ ಲಾಂಛನವಾಗಿ ಕರ್ನಾಟಕದ ಹಲವು ರಾಜವಂಶಗಳಲ್ಲಿ ಪ್ರಚಲಿತವಾಗಿತ್ತು.ಗಂಡಭೇರುಂಡ ಶಕ್ತಿಯ ಪರಾಕಾಷ್ಠೆಯ ಚಿಹ್ನೆ.

ಅದೇ ಕಾರಣಕ್ಕೆ ಹಿಂದೂ ರಾಜರುಗಳು ಗಂಡಭೇರುಂಡವನ್ನು ರಾಜ ಚಿಹ್ನೆಯಾಗಿ ಬಳಸಿಕೊಂಡಿದ್ದಾರೆ.ಮೈಸೂರು ರಾಜ್ಯ ನಿರ್ಮಾಣದೊಂದಿಗೆ ಈ ಲಾಂಛನವು ಇಂದಿಗೂ ರಾಜಪ್ರಭುತ್ವದ ಸಂಕೇತವಾಗಿ ಉಳಿದುಬಂದಿದೆ.

ಇನ್ನು ಅದರ ಮಧ್ಯದಲ್ಲಿ “ಸತ್ಯಮೇವ ಜಯತೆ” ಎನ್ನುವ ಘೋಷವಾಕ್ಯವಿದೆ. ವೇದಗಳ ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು ಉಪನಿಷತ್‌ಗಳು ಎಂದು ಕರೆಯಲಾಗುತ್ತದೆ. ಬಹುಷಃ ಅಂತಹಾ ಉಪನಿಷತ್ ಗಳಲ್ಲಿ ಒಂದಾದ ಮುಂಡಕ ಉಪನಿಷತ್ ನಿಂದ “ಸತ್ಯಮೇವ ಜಯತೆ” ಎನ್ನುವ ವಾಕ್ಯವನ್ನು ಬಳಸಿಕೊಳ್ಳಲಾಗಿದೆ.

ದೇವನಾಗರಿ ಲಿಪಿಯಲ್ಲಿ ಆ ಶ್ಲೋಕ ಹೀಗಿದೆ.
सत्यमेव जयते नानृतं सत्येन पन्था विततो देवयानः ।
येनाक्रमन्त्यृषयो ह्याप्तकामा यत्र तत् सत्यस्य परमं निधानम् ॥

ಹಾಗೆಯೇ ಉಪನಿಷತ್ ನ सत्यमेव जयते ಘೋಷವಾಕ್ಯವನ್ನು ಹೊಂದಿರುವ ಗಂಡಭೇರುಂಡ ಲಾಂಛನವು ಕೆಂಪು ಹಾಗೂ ಅರಿಶಿನ ಬಣ್ಣಗಳನ್ನೊಳಗೊಂಡಿರುವುದರಿಂದ ಎತ್ತರದಲ್ಲಿ ಹಾರಾಡುವಾಗ ಅದು ಸ್ಪಷ್ಟವಾಗಿ ಕಾಣಿಸುವುದಿಲ್ಲ ಎನ್ನುವ ಕಾರಣಕ್ಕೆ ಹಿನ್ನೆಲೆಯ ಬಣ್ಣವಾಗಿ ಸ್ವಚ್ಛ ಬಿಳಿ ಬಣ್ಣವನ್ನು ಬಳಸಿಕೊಂಡಿರಬಹುದು.

ಬಹುಸಂಖ್ಯಾತ ಹಿಂದೂಗಳ ಅಸ್ಮಿತೆಯ ಸಂಕೇತವೂ ಆಗಿರುವ ಪ್ರತ್ಯೇಕ ಕನ್ನಡ ಧ್ವಜವನ್ನು ರೂಪಿಸಿದ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿನ್ಯಾಸ ರೂಪಿಸಿದ ಸಮಿತಿಯ ಎಲ್ಲಾ ಸದಸ್ಯರಿಗೂ ಹಿಂದೂಗಳ ಪರವಾಗಿ ಹೃದಯಪೂರ್ವಕ ಧನ್ಯವಾದಗಳು. ಯಾವುದೇ ತಕರಾರುಗಳಿಲ್ಲದೆ ಕೇಂದ್ರ ಸರ್ಕಾರ ಆದಷ್ಟು ಶೀಘ್ರದಲ್ಲಿ ನಮ್ಮ ಹೆಮ್ಮೆಯ ರಾಜ್ಯ ಧ್ವಜಕ್ಕೆ ಒಪ್ಪಿಗೆ ನೀಡಲಿ ಎಂದು ವಿಘ್ನೇಶ್ವರನಲ್ಲಿ ಪ್ರಾರ್ಥಿಸುತ್ತೇವೆ.

– Praveen Kumar Mavinakadu

 •  
  442
  Shares
 • 442
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com