Connect with us
Loading...
Loading...

ಪ್ರಚಲಿತ

ಪ್ರಧಾನಿ ಮೋದಿಯ ಬಗ್ಗೆ ಮಾಜಿ ಯೋಧರು ತೆಗೆದುಕೊಂಡರು ಮಹತ್ವದ ನಿರ್ಧಾರ!! ಏನದು ಮಹತ್ವದ ನಿರ್ಧಾರ?

Published

on

 • 10.5K
 •  
 •  
 •  
 •  
 •  
 •  
 •  
  10.5K
  Shares

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದೇಶದಲ್ಲಿ ಬದಲಾವಣೆ ಬಂದಿದೆ.

ಸೈನಿಕರಿಗೆ ಆನೆಬಲ ಬಂದಂತಾಗಿದೆ, ಕಾಳಧನಿಕರಿಗೆ ಪೆಟ್ಟು ಬಿದ್ದಿದೆ, ವಿರೋಧಿಗಳಿಗೆ ನಡುಕ ಹುಟ್ಟಿದೆ, ಮುಸ್ಲಿಂ ಮಹಿಳೆಯರಿಗೆ ನವಚೈತನ್ಯ ತಮ್ಮ ಧರ್ಮದಲ್ಲಿರುವ ಅನುಷ್ಟ ಪದ್ಧತಿಗಳ ವಿರುದ್ಧ ಹೋರಾಡಲಿ ನೈತಿಕ ಬಲ ಸಿಕ್ಕಿದಂತಾಗಿದೆ, ವಿರೋಧಿಗಳು ಒಳಗೊಳಗೆ ಭುಸುಗುಡುತ್ತಿದ್ದಾರೆ, ರಾಜಕೀಯ ವಿರೋಧಿಗಳಿಗೆ ಮಾಡಲು ಕೆಲಸವಿಲ್ಲದೆ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಮೋದಿ ಜಪ ಮಾಡುತ್ತ ಮೋದಿ ಹಾಗೆ ಮಾಡಿದ್ರು ಹೀಗೆ ಮಾಡಿದ್ರು ಅಂತ ಟೀಕೆಗಳ ಸುರುಮಳೆಯನ್ನೇ ಸುರಿಸ್ತಿರ್ತಾರೆ.

ಇದರ ಮಧ್ಯೆ ಮೋದಿ ವಿರೋಧಿಗಳಿಗೆ, ವಿರೋಧ ಪಕ್ಷಗಳಿಗೆ ಮಾಜಿ ಯೋಧರು ಮತ್ತೊಂದು ಶಾಕ್ ನೀಡಿದ್ದಾರೆ.

ಅದೇನಂತೀರಾ? ಈ ಸ್ಟೋರಿ ಓದಿ!!

ಮಾಜಿ ಯೋಧರು ಮಹತ್ವದ ನಿರ್ಣಯವೊಂದನ್ನ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಪಾಲಿಗೆ ಅದೃಷ್ಟದ ಬಾಗಿಲು ತೆರೆದಿದ್ದಾರೆ ಎಂದು ಮಾಜಿ ಯೋಧರು ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಹೂಂಕರಿಸುತ್ತ ಮಾಜಿ ಯೋಧರು ಮುಂದಿನ ಚುನಾವಣೆಯಲ್ಲಿ ನಾವು ಪ್ರಧಾನಿ ಮೋದಿಯವರಿಗೇ ಮತ ಹಾಕುತ್ತೇವೆ, ಯಾಕಂದ್ರೆ ಮೋದಿಯವರೊಬ್ಬರೆ ನಮ್ಮ ದುಖಃವನ್ನ ಆಲಿಸಿದ್ದಾರೆ ಅವರಿಂದಲೇ ಮಾತ್ರ ಒಂದು ಶ್ರೇಣಿ ಒಂದು ಪಿಂಚಣಿ(OROP: One Rank One Pension) ಜಾರಿಯಾಗಿದೆ ಹೊರತು ಇಷ್ಟು ವರ್ಷಗಳಿಂದ ನಾವು ನಡೆಸುತ್ತಿದ್ದ ಹೋರಾಟಕ್ಕೆ ಮೋದಿಯವರ ಹಾಗೆ ಯಾವ ನಾಯಕನೂ ನಮಗೆ ನ್ಯಾಯ ದೊರಕಿಸಿ ಕೊಟ್ಟಿಲ್ಲ ಎಂದಿದ್ದಾರೆ.


ಸೈನಿಕರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸೈನಿಕರಿಗಾಗಿ ಜಾರಿಗೆ ತರುತ್ತಿರುವ ಯೋಜನೆಗಳು ಸಂತಸ ತರಿಸಿವೆ ಹಾಗು ಈಗ ಮಾಜಿ ಸೈನಿಕರ ಸಂದೇಶವೂ ಸ್ಪಷ್ಟವಾಗಿದೆ ಅದುವೇ ಮುಂದಿನ ಪ್ರಧಾನಿಯೂ ನರೇಂದ್ರ ಮೋದಿಯವರೇ ಅಂತ.

ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದ ಇಲ್ಲಿಯವರೆಗೆ ಸೈನಿಕರ ಬೇಕು ಬೇಡಗಳನ್ನ ಕೂಲಂಕುಷವಾಗಿ ಪರಿಶೀಲಿಸಿ ಅವರಿಗೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನೂ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಈ ಕಾರಣಕ್ಕಾಗಿಯೇ ಮಾಜಿ ಯೋಧರು ನರೇಂದ್ರ ಮೋದಿಯವರಿಗೆ ತಮ್ಮ ಮತ ಎಂದು ಘೋಷಿಸಿದ್ದಾರೆ.

ಮಾಜಿ ಯೋಧರು ಬಿಜೆಪಿಯ ಬೆನ್ನಿಗೆ ನಿಂತುಬಿಟ್ಟಿದ್ದಾರೆ, ಮೋದಿಯವರನ್ನ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತನ್ನೂ ಮಾಜಿ ಯೋಧರು ಹೇಳಿದ್ದಾರೆ.

ಸಾಮಾಜಿಕ ನ್ಯಾಯಮಂತ್ರಿ ಅರುಣ್ ಕುಮಾರ್ ಚತುರ್ವೇದಿ, ಓಂಕಾರ್ ಸಿಂಗ್ ಲಿಖಾವತ್ , ಶಿವಶಂಕರ ಹೇಡಾ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಗ್ರೂಪ್ ಕ್ಯಾಪ್ಟನ್ ಕರಣ್ ಸಿಂಗ್ ಭಾಟಿ, ಬಿಜೆಪಿ ಸೈನಿಕ ಪ್ರಕೋಷ್ಠದ ರಾಷ್ಟ್ರೀಯ ಅಧ್ಯಕ್ಷ ಮೇಜರ್ ಘನಶಾಮ್ ರಾಠೋಡ್, ಮನೋಜ್ ಕುಮಾರ, ಪ್ರಮೋದ್ ಕುಮಾರ್, ಕ್ಯಾಪ್ಟನ್ ಸತ್ಯನಾರಾಯಣ ಸಿಂಗ್ ರಾಠೋಡ್ ಸಮೇತ ಹಲವುವಮಾಜಿ ಯೋಧರು ಉಪಸ್ಥಿತರಿದ್ದರು.

ಈ ಬೈಠಕ್ ನಲ್ಲಿ ಮಾಜಿ ಯೋಧರಿಗೆ ಮೋದಿ ಸರ್ಕಾರದ ಸೈನಿಕರೆಡೆಗಿನ ಹಾಗು ದೇಶದಲ್ಲಿ ಮೋದಿ ತೆಗೆದುಕೊಳ್ಳುತ್ತಿರುವ ಮಹತ್ವದ ನಿರ್ಧಾರಗಳನ್ನ ಚರ್ಚಿಸಲಾಗಿದೆ.

ಆರ್ಥಿಕ ಕ್ಷೇತ್ರದಲ್ಲಿ ಬೆಳವಣಿಗೆ ಕಂಡಿದ್ದರಿಂದ ರೆವೆನ್ಯೂ ಕಲೆಕ್ಷನ್ ನಲ್ಲಿ ಹೆಚ್ಚಳ ಕಂಡಿದ್ದು ಈಗ ದೇಶದ ಆರ್ಥಿಕತೆ 18 ಲಕ್ಷ ಕೋಟಿ ತಲುಪಿದೆ, ಇದು ಸದ್ಯದಲ್ಲೇ ಇದು 20 ಲಕ್ಷ ಕೋಟಿಗೆ ತಲುಪಲಿದೆ ಎಂದು ಸಭೆಯಲ್ಲಿ ಮಾಹಿತಿಯನ್ನ ಹಂಚಿಕೊಳ್ಳಲಾಯಿತು.

ಇದೇ ದುಡ್ಡಿನಲ್ಲಿ ದೇಶದ ಸಮಗ್ರ ವಿಕಾಸವಾಗಲಿದ್ದು ಆರ್ಥಿಕ ಸುಧಾರಣೆಯಾದರೆ ಸೈನಿಕರ ಸೌಲಭ್ಯಗಳಿಗೂ ಅಧಿಕ ನೆರವು ಸಿಗಲಿದೆ.

ಇದೇ ವೇಳೆ ಮಾತನಾಡಿದ ಓಂಕಾರ್ ಲಿಖಾವತ್ ಮಾತನಾಡುತ್ತ “ಈ ಬಾರಿ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸುವುದರ ಮೂಲಕ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಾಗಿದೆ, ಇದು ನರೇಂದ್ರ ಮೋದಿಯವರಿಗೆ ಕೇವಲ ಗೆಲುವಲ್ಲ ಭರ್ಜರಿ ಗೆಲುವು ಸಾಧಿಸುವ ಹಾಗೆ ನಾವು ಮಾಡಬೇಕಿದೆ” ಎಂದಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಭಾರತೀಯ ಸೇನೆಗೆ ಹಲವು ಮೂಲಭೂತ ಸೌಕರ್ಯಗಳನ್ನ ಒದಗಿಸಿತ್ತು.

ಕಳೆದ ತಿಂಗಳು ನಾನು ಗೋವಾದ ಕೋಸ್ಟ್ ಗಾರ್ಡ್ ಹೆಡ್ ಕ್ವಾರ್ಟರ್ಸ್ ಗೆ ತೆರಳಿದ್ದಾಗ ಹೀಗೇ ಸುಮ್ಮನೆ ಅಲ್ಲಿನ ಕೋಸ್ಟ್ ಗಾರ್ಡ್ ಸಿಬ್ಬಂದಿಯ ಜೊತೆ ಮಾತನಾಡುತ್ತ ಮೋದಿ ಬಂದಮೇಲೆ ದೇಶದಲ್ಲಿ ಸೈನಿಕರಿಗೆ ಉಪಯೋಗವೇನಾದರೂ ಆಗಿದೆಯಾ ಅಂತ ಕೇಳಿದೆ, ಅದಕ್ಕೆ ಅಲ್ಲಿನ ಒಬ್ಬ ಸಿಬ್ಬಂದಿ ಹೇಳ್ತಾರೆ

* ಸರ್ ಮೋದಿ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ನಮಗೆ ಆನೆ ಬಲ ಬಂದಂತಾಗಿದೆ, ಬಜೆಟ್ ನಲ್ಲಿ ಸೈನಿಕರಿಗಿದ್ದ ಹಣವನ್ನ ಮೋದಿ ಹೆಚ್ಚಳ ಮಾಡಿದ್ದಾರೆ, ಬುಲೆಟ್ ಪ್ರೂಫ್ ಜಾಕೆಟ್ ನೀಡಿದ್ದಾರೆ, ಅಡ್ವಾನ್ಸ್ಡ್ ಟೆಕ್ನಾಲಜಿಯಿರುವ ಶಸ್ತ್ರಾಸ್ತ್ರಗಳನ್ನ, ಆಟೋಮೆಟೆಡ್ ವೆಪನ್ ಗಳನ್ನ ನಮಗೆ ನೀಡಿದ್ದಾರೆ

* ಪಾಕಿಸ್ತಾನದ ನೆಲಕ್ಕೆ ಹೋಗಿ ಸರ್ಜಿಕಲ್ ಸ್ಟ್ರೈಕ್ ಮಾಡಲು ಮೋದಿ ಆದೇಶ ನೀಡಿದರು,

* ಬರ್ಮಾದಲ್ಲಿ ಹೊಕ್ಕು ಅಲ್ಲಿ ನಕ್ಸಲರನ್ನ ಬೇಟೆಯಾಡಿ ಬಂದೆವು,

* ಕಾಶ್ಮೀರದಲ್ಲಿ ಒಂದೇ ವರ್ಷದಲ್ಲಿ 200 ಕ್ಕೂ ಹೆಚ್ಚು ಉಗ್ರರನ್ನ ಸದೆಬಡೆದಿದೀವಿ

* ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ರವರೂ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಭಾರತೀಯ ಸೇನೆಗೆ ಅನೆ ಬಲ ಬಂದಂತಾಗಿದೆ

* ಲಾಲ್ ಬಹದ್ದೂರ್ ಶಾಸ್ತ್ರಿ ಯವರ ನಂತರ ಭಾರತೀಯ ಯೋಧರನ್ನ ಅತಿ ಹೆಚ್ಚು ಪ್ರೀತಿಸುವ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ

* ನಾವು ಹಬ್ಬದ ಸಮಯದಲ್ಲಿ ಮನೆಗೆ ತೆರಳೋಕಾಗಲ್ಲ, ಗಡಿ ಕಾಯಲೇಬೇಕಾಗುತ್ತೆ, ಈ ಸಂದರ್ಭದಲ್ಲಿ ಪ್ರಧಾನಿಯೇ ಖುದ್ದು ನಮ್ಮ ಹತ್ತಿರ ಬಂದು ಹಬ್ಬ ಆಚರಣೆ ಮಾಡ್ತಾರೆ ಅಂದ್ರೆ ನಮಗಿಂತ ಪುಣ್ಯವಂತರು ಯಾರಿದಾರೆ?

ಒಟ್ಟಾರೆ ಹೇಳಬೇಕಂದ್ರೆ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ನಮಗೆ ಆತ್ಮವಿಶ್ವಾಸ ಹೆಚ್ಚಾಗಿದ್ದಂತೂ ಸುಳ್ಳಲ್ಲ.

ಅಂತ ಆ ಯೋಧ ಹೇಳಿದಾಗ ನಿಜಕ್ಕೂ ಮೋದಿಯವರ ಮೇಲಿನ ನನ್ನ ಪ್ರೀತಿ ಇಮ್ಮಡಿಯಾಗಿತ್ತು.

ಸೈನಿಕರ ಒಲವು ಮೋದಿಯ ಕಡೆಗೆ ಇರುವುದರಿಂದ ಇದು ಮೋದಿ ವಿರೋಧಿಗಳಿಗೆ ಮುಂದಿನ ಚುನಾವಣೆಯಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸುವುದಂತೂ ಸತ್ಯ.

 •  
  10.5K
  Shares
 • 10.5K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com