Connect with us
Loading...
Loading...

ಪ್ರಚಲಿತ

ಪ್ರಧಾನಿ ಮೋದಿ ಹಾಗು ಬೆಂಜಮಿನ್ ನೇತನ್ಯಾಹು ರವರ ಇಂದಿನ ಅಪಡೇಟ್ಸ್!!!

Published

on

 • 1.4K
 •  
 •  
 •  
 •  
 •  
 •  
 •  
  1.4K
  Shares

* ಗಾಂಧಿಯವರ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ನೇತನ್ಯಾಹು ಹಾಗು ಅವರ ಪತ್ನಿ ಸಾರಾ

* ಐಕ್ರಿಯೇಟ್(iCreate) 2011 ರಲ್ಲೇ ಗುಜರಾತಿನಲ್ಲಿ ಚಾಲನೆ ನೀಡಿದ್ದ ಆಗಿನ ಮುಖ್ಯಮಂತ್ರಿಯಾಗಿದ್ದ ಮೋದಿ

ದಿ ಗಾಲ್ (The GAL- The desalination) ಎಂಬ ಸಮುದ್ರದಿಂದ ಉಪ್ಪುನೀರಿನಿಂದ ಉಪ್ಪನ್ನ ತೆಗೆಯುವ ಜೀಪನ್ನ ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲಿರುವ ಬೆಂಜಮಿನ್.

ಕಳೆದ ವರ್ಷ ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸ ಕೈಗೊಂಡಾಗ ಇಸ್ರೇಲಿನ ಓಲ್ಗಾ ಬೀಚ್ ನಲ್ಲಿ ಇದೇ ಜೀಪ್ ನಲ್ಲಿ ರೈಡ್ ಮಾಡಿದ್ದರು. ಅದೇ ತಂತ್ರಜ್ಞಾನವನ್ನ ಬೆಂಜಮಿನ್ ಭಾರತಕ್ಕೆ ನೀಡಲಿದ್ದು ಇದರಿಂದ ಸಮುದ್ರದ ನೀರನ್ನೂ ಕುಡಿಯುವ ನೀರಾಗಿ ಪರವರ್ತಿಸಬಹುದಾಗಿದೆ.

* ಬೆಂಜಮಿನ್ ನೇತನ್ಯಾಹು ಸಮ್ಮುಖದಲ್ಲಿ iCreate ಇನಕ್ಯೂಬೇಷನ್ ಸೆಂಟರ್ ನ್ನ ಉದ್ಘಾಟಿಸಿದ ಪ್ರಧಾನಿ ಮೋದಿ

* ಕೃಷಿ, ನೀರಾವರಿ ಹಾಗು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತ ಇಸ್ರೇಲ್ ಆವಿಷ್ಕಾರ (India Israel innovation) – 2017 ರ ವಿಜೇತರಿಗೆ ಸನ್ಮಾನಿಸಿದ ಮೋದಿ ಹಾಗು ನೇತನ್ಯಾಹು.

* ಗುಜರಾತ್ ಪಾಕಿಸ್ತಾನ ಬಾರ್ಡರ್ ಗೆ ತಾಕಿಕೊಂಡಿರುವ ಹಳ್ಳಿಯಾದ ಸುಯಿಗಾಂ ನ ಜನರಿಗೆ GAL ಮೊಬೈಲ್ ನೀಡಿದ ಇಸ್ರೇಲ್ ಪ್ರಧಾನಿ ನೇತನ್ಯಾಹು

* ಪ್ರಧಾನಿ ಮೋದಿಯನ್ನ ಹಾಡಿ ಹೊಗಳಿದ ನೇತನ್ಯಾಹು, “ ನಿಮ್ಮ ಜೀವನವನ್ನ ಉತ್ತಮಗೊಳಿಸೋದಕ್ಕಾಗಿ ನಾವಿಲ್ಲಿ ಬಂದಿದ್ದೇವೆ, ನಿಮ್ಮ ಈ ಪ್ರೀತಿಗೆ ನಾ ಚಿರಋಣಿ. ನಾವು ಭಾರತಕ್ಕೆ ಭಾರತವೇ ಸಹಾಯ ಮಾಡಿಕೊಳ್ಳುವಂತಾಗಲು ಯೋಜನೆ ರೂಪಿಸಲು ಬಂದಿದ್ದೀವಿ, ಕಾರಾ ಈ ದೇಶದಲ್ಲಿ ದೂರದೃಷ್ಟಿಯಿದೆ. ಇದು ಪ್ರಧಾನಿ ಮೋದಿ ಹಾಗು ನನ್ನ ಪಾಲಿಸಿ”

* ಮಾಶಾವ್ ಬಗ್ಗೆ ಪ್ರಸ್ತಾಪಿಸಿದ ಬೆಂಜಮಿನ್ ನೇತನ್ಯಾಹು, “ಮಾಶಾವ್ ಇಸ್ರೇಲಿನ ವಿದೇಶಾಂಗ ಸಚಿವಾಲಯವಾಗಿದ್ದು ಅನ್ಯ ದೇಶಗಳೊಡನೆ ವಿದೇಶಾಂಗ ವ್ಯವಹಾರ ನಡೆಸುತ್ತೆ,‌ಆದರೆ ಆ ಎಲ್ಲ ರಾಷ್ಟ್ರಗಳಿಗಿಂತ ಹೆಚ್ಚು ಅನ್ಯೋನ್ಯತೆ ಭಾರತದೊಂದಿಗಿರಲು ಕಾರಣ ಭಾರತದಲ್ಲಿ ಮೋದಿಯಂತಹ ಬಲಿಷ್ಟ ನಾಯಕರಿರೋದರಿಂದ”

* “ಭಾರತ ಹಾಗು ಇಸ್ರೇಲ್ ನಡುವಣ ಸಂಬಂಧವನ್ನ ಮುನ್ನಡೆಸಿಕೊಂಡು ಹೋಗುವುದಕ್ಕೆ ನಾವು ಕಟಿಬದ್ಧರಾಗಿದ್ದೇವೆ, ಈ ಸಂದರ್ಭದಲ್ಲಿ ನಮ್ಮ ದೇಶದ ರೈತರ ಜೊತೆ ಸಂವಾದ ನಡೆಸಿದ ನೇತನ್ಯಾಹುರವರಿಗೆ ಧನ್ಯವಾದಗಳನ್ನ ಅರ್ಪಿಸುತ್ತೇನೆ”, ಪ್ರಧಾನಿ ಮೋದಿ

* ದೇಶದಲ್ಲಿರುವ ಸಂಪನ್ಮೂಲಗಳನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡು 2022 ರ ವೇಳೆಗೆ ದೇಶದ ರೈತರ ಉತ್ಪನ್ನ ಹಾಗು ಅವರ ಆದಾಯ ದ್ವಿಗುಣವಾಗುವಂತೆ ಮಾಡುವುದು ನನ್ನ ಗುರಿ” ಎಂದು ಶಪಥ ಮಾಡಿದ ಪ್ರಧಾನಿ ಮೋದಿ

* “ಕೃಷಿಯಲ್ಲಿ ಇಸ್ರೇಲ್ ಮಾಡಿರುವ ಅಮೋಘ ಸಾಧನೆ,‌ ನೀರಾವರಿಯಲ್ಲಿನ ಇಸ್ರೇಲ್ ಟೆಕ್ನಾಲಜಿ ಒಂದು ರಾಷ್ಟ್ರದ ಮೂಲಭೂತ ಅಭಿವೃದ್ಧಿಗೆ ಎಷ್ಟು ಮುಖ್ಯ ಅನ್ನೋದನ್ನ ಇಸ್ರೇಲ್ ತೋರಿಸಿಕೊಟ್ಟಿದೆ”, ಪ್ರಧಾನಿ ಮೋದಿ

* ಕೃಷಿ ಕ್ಷೇತ್ರದಲ್ಲಿ ವಿಶ್ವವೇ ನಿಬ್ಬೆರಗಾಗಿ ನೋಡುವಂತಹ ಸಾಧನೆ ಮಾಡಿರುವ ಇಸ್ರೇಲ್ ನ್ನ ಹಾಡಿ ಹೊಗಳಿದ ಮೋದಿ

* ಭಾರತ ಮತ್ತು ಇಸ್ರೇಲ್ ಕೃಷಿ ಕ್ಷೇತ್ರದಲ್ಲಿ ಹೇಗೆ ಒಬ್ಬರಿಗೊಬ್ಬರು ಸಹಕಾರಿಯಾಗಬಹುದೆಂಬುದನ್ನ ಹಾಗು ಪ್ರಗತಿಪರ ರೈತರ ಜೊತೆ ಸಮಾಲೋಚನೆ ನಡೆಸಿದ ಇಬ್ಬರೂ ವಿಶ್ವನಾಯಕರು.

* ಗುಜರಾತ್ ನ ವಾಡ್ರಾದ್ ನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ವೆಜಿಟೇಬಲ್ಸ್ ಗೆ ಭೇಟಿ ನೋಡಿದ ಪ್ರಧಾನಿ ಮೋದಿ ಹಾಗು ನೇತನ್ಯಾಹು

* ಪ್ರಧಾನಿ ಮೋದಿ ಹಾಗು ನೇತನ್ಯಾಹು ರವರ ಗುಜರಾತ್ ಪ್ರವಾಸ ಮುಕ್ತಾಯವಾಗಿದ್ದು ನೇತ‌್ಯಾಹು ಹಾಗು ಅವರ ಪತ್ನಿ ಸಾರಾ ಮುಂಬೈಗೆ ತೆರಳಿದ್ದಾರೆ.

 •  
  1.4K
  Shares
 • 1.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com