Connect with us
Loading...
Loading...

ಪ್ರಚಲಿತ

ಬಿಗ್ ನ್ಯೂಸ್: ಮೋದಿ ಸರ್ಕಾರವನ್ನ ಹಾಡಿ ಹೊಗಳಿದ ಕಾಂಗ್ರೆಸ್ ಶಾಸಕ, ಮೈತ್ರಿ ಸರ್ಕಾರದ ಪ್ರಭಾವಿ ಸಚಿವ ಯು.ಟಿ.ಖಾದರ್

Published

on

  • 3.4K
  •  
  •  
  •  
  •  
  •  
  •  
  •  
    3.4K
    Shares

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್​​ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳೂರು ಕಸಾಯಿಖಾನೆಯ ಸ್ವಚ್ಛತೆಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವ ಯುಟಿ ಖಾದರ್​​ ಅವರು ಎರಡು ಪುಟದ ಪತ್ರವನ್ನು ಬರೆದಿದ್ದಾರೆ. ಎರಡನೇ ಪುಟದ ಎರಡನೇ ಪ್ಯಾರಾದಲ್ಲಿ ಖಾದರ್​ ಅವರು, ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪತ್ರದಲ್ಲಿ ಹೊಗಳಿದ್ದು ಚರ್ಚೆಗೆ ಗ್ರಾಸವಾಗಿದೆ.

ಸಚಿವರು ಬರೆದ ಪತ್ರದ ಮೊದಲ ಪುಟದ ಎರಡನೇ ಪ್ಯಾರಾದಲ್ಲಿ ಕೇಂದ್ರ ಸರ್ಕಾರವನ್ನು ಹೊಗಳಿ ಈ ರೀತಿಯಲ್ಲಿ ಬರೆದಿದ್ದಾರೆ. ಕೇಂದ್ರ ಸರ್ಕಾರದ ಸ್ಮಾರ್ಟ್​ ಸಿಟಿ ಮತ್ತು ಅಮೃತ್​​ ಮಿಷನ್​ ಯೋಜನೆ ಅಡಿಯಲ್ಲಿ ಮಂಗಳೂರು ನಗರದ ಪ್ರಗತಿಗೆ ಮಹತ್ವದ ಕಾಳಜಿ ವಹಿಸಿದೆ. ಮಂಗಳೂರನ್ನು ಕೇವಲ ಸ್ಮಾರ್ಟ್​ ಸಿಟಿಯಾಗಿ ಗುರುತಿಸದೇ ಅಮೃತ್​​ ಮಿಷನ್​ ಯೋಜನೆ ಅಡಿಯಲ್ಲಿ ಕಣ್ಣಿಗೆ ಕಾಣದಂಥ ಹಲವು ಸಮಸ್ಯೆಗಳನ್ನು ಬಗೆಹರಿಸಲು ಮತ್ತು ನಾಗರಿಕ ಮೂಲಭೂತ ಸೌಕರ್ಯವನ್ನು ಉನ್ನತೀಕರಣ ಗೊಳಿಸಲು ಈ ಯೋಜನೆಗಳು ಸಹಾಯ ಮಾಡಿದವು ಹೀಗಾಗಿ ಕೇಂದ್ರ ಸರ್ಕಾರದ ಕಾರ್ಯಗಳಿಗೆ ನಾವು ಎಷ್ಟೇ ಋಣಿಯಾಗಿದ್ದರೂ ಸಾಲದು ಎಂದು ಖಾದರ್ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಇಂದು ಸಚಿವ ಖಾದರ್​ ಅವರು, ಕುದ್ರೋಳಿ ಕಸಾಯಿ ಖಾನೆ ಸ್ವಚ್ಛತೆಯ ಬಗ್ಗೆ ಪ್ರಧಾನಿ ಮೋದಿ ಅವರ ಸಲಹೆ ಪಡೆಯಲು ಪತ್ರ ಬರೆದಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದ ಸಾಧನೆ ಕುರಿತು ಖಾದರ್​​ ಹೊಗಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್​​ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳೂರು ಕಸಾಯಿಖಾನೆಯ ಸ್ವಚ್ಛತೆಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ತಾನೆ ಸ್ಮಾರ್ಟ್​​ಸಿಟಿ ಯೋಜನೆಗಾಗಿ ಮೀಸಲಿಟ್ಟಿದ್ದ ಸುಮಾರು 15 ಕೋಟಿ ರೂಪಾಯಿ ಹಣವನ್ನು, ಕುದ್ರೋಳಿಯ ಒಂದೇ ಕಸಾಯಿ ಖಾನೆಗೆ ಯು.ಟಿ ಖಾದರ್ ನೀಡಿದ್ರು. ಈ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಕಾರಣದಿಂದಾಗಿ ಇಂದು ಖಾದರ್ ಬರೆದ ಪತ್ರ ಮಹತ್ವವನ್ನು ಪಡೆದುಕೊಂಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಖಾದರ್, ಕೇಂದ್ರದ ಸ್ಮಾರ್ಟ್​​ ಸಿಟಿ ಯೋಜನೆಯಲ್ಲಿ ಮಂಗಳೂರನ್ನು ಉತ್ತಮ ನಗರವನ್ನಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರದ ಸ್ವಚ್ಛ ಭಾರತ್​ ಮಿಷನ್​​ ಅಡಿಯಲ್ಲಿ ಮಂಗಳೂರು ಸ್ವಚ್ಛನಗರಿ ಎಂದು ಬಿರುದು ಪಡೆದುಕೊಂಡಿದೆ. ಆದರೆ ಸ್ವಚ್ಛತೆ ಅಂದ್ರೆ ಕೇವಲ ರಸ್ತೆ ಸ್ವಚ್ಛ ಮಾಡುವುದು ಮಾತ್ರವಲ್ಲ. ತಿನ್ನುವ ಆಹಾರವೂ ಸ್ವಚ್ಛವಾಗಿರುಸುವುದು ಕೂಡ ಒಂದಾಗಿದೆ.

ದಕ್ಷಿಣ ಕನ್ನಡ ಉಸ್ತುವಾರಿ ಸಚಿವನಾಗಿ ಸ್ಮಾರ್ಟ್ ಸಿಟಿ ಯೋಜನೆಯನ್ವಯ ಜನರಿಗೆ ಶುದ್ಧ ಮಾಂಸ ಒದಗಿಸುವ ಕಸಾಯಿಖಾನೆಯ ಸ್ವಚ್ಛತೆ ಕಾಪಾಡಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು ಸಿಟಿ ಕಾರ್ಪೋರೇಷನ್​ ಜೊತೆಗೂಡಿ ತಯಾರಿಸಲಾಗಿದೆ. ಆದರೆ, ಕೆಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಇದರಿಂದಾಗಿ ನಾನು ನಿಮ್ಮ ಮೌಲ್ಯಯುತ ಉತ್ತರವನ್ನು ಪಡೆಯಲು ಪತ್ರ ಬರೆಯುತ್ತಿದ್ದೇನೆ. ಅಲ್ಲದೇ, ಈ ಯೋಜನೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಆಗಬೇಕಾದ ಕೆಲಸವನ್ನು ಮಾಡಿಕೊಡಬೇಕೆಂದು ಪತ್ರದಲ್ಲಿ ಖಾದರ್​ ಮನವಿ ಮಾಡಿಕೊಂಡಿದ್ದಾರೆ.

  •  
    3.4K
    Shares
  • 3.4K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com