Connect with us
Loading...
Loading...

ಪ್ರಚಲಿತ

ಬಿಗ್ ಬ್ರೇಕಿಂಗ್: ಮೋದಿ ವಿರೋಧಿಗಳಿಗೆ ಬಿಗ್ ಶಾಕ್; 2019 ರ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನ ಬೆಂಬಲಸಲಿದೆ ಈ ರಾಜ್ಯ

Published

on

 • 3.1K
 •  
 •  
 •  
 •  
 •  
 •  
 •  
  3.1K
  Shares

ದೇಶದಲ್ಲಿ ಸದ್ಯದಲ್ಲೇ ನಡೆಯಲಿರುವ ವಿಧಾನಸಭಾ ಹಾಗು 2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಚಟುವಟಿಕೆಗಳು ಬಿರುಸಾಗೇ ಶುರುವಾಗಿವೆ. ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಚುನಾವಣೆಯ ಕುರಿತಾಗಿ ಭರ್ಜರಿ ಸಿದ್ಧತೆಯನ್ನ ನೋಡಲು ಕಾಣಸಿಗುತ್ತಿದೆ. ಈ ಮಧ್ಯೆ ಇತ್ತೀಚೆಗಷ್ಟೇ ದೆಹಲಿಯಿಂದ ಮೋದಿ ವಿರೋಧಿ ಪಕ್ಷಗಳಿಗೆ ಬಿಗ್ ಶಾಕಿಂಗ್ ಸುದ್ದಿಯೊಂದು ಹೊರ ಬಂದಿದೆ‌. ವಿಷ್ಯ ಏನಂತ ಗೊತ್ತಾದರೆ ಪ್ರಧಾನಿ ಮೋದಿ ವಿರುದ್ಧ ಸಮರ ಸಾರಲು ಸಜ್ಜಾಗಿರುವ ವಿರೋಧಪಕ್ಷಗಳ ಎದೆಯಲ್ಲಿ ನಡುಕ ಶುರುವಾಗದೆ ಇರದು.

ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವು ಬಿಗಿ ಹಿಡಿತ ಹೊಂದಿರುವ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ ಮಾತ್ರ. ಅದನ್ನ ಹೊರತುಪಡಿಸಿದರೆ ತಮಿಳುನಾಡು,‌ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಓರಿಸ್ಸಾ ದಲ್ಲಿ ಬಿಜೆಪಿ ಪಕ್ಷ ಭದ್ರ ಬುನಾದಿ ಹಾಕುವತ್ತ ಹೆಜ್ಜೆಯಿಡುತ್ತಿದೆ. ಈ ಮಧ್ಯೆ ದಕ್ಷಿಣದ ರಾಜಕೀಯ ವಲಯದಿಂದ ಬಂದಿರುವ ಸುದ್ದಿಯೊಂದನ್ನ ತಿಳಿದ ಬಳಿಕ ವಿರೋಧಪಕ್ಷಗಳಲ್ಲಿ ನಡುಕ ಹುಟ್ಟದೆ ಇರಲಾರದು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಂದು ಕಡೆ ದೇಶದ ವಿವಿಧ ಮೋದಿ ವಿರೋಧಿ ಮಾನಸಿಕತೆಯ ಪಕ್ಷಗಳ ಜೊತೆಗೂಡಿ ಮಹಾಗಟಬಂಧನ್(ಮಹಾಮೈತ್ರಿ) ಮಾಡಿಕೊಂಡು ಮೋದಿ ಸರ್ಕಾರದ ವಿಜಯಯಾತ್ರೆಯನ್ನ ತಡೆಯಲು ಹೊರಟಿದ್ದರೆ ಅತ್ತ ತಮಿಳುನಾಡಿನ ಮುಖ್ಯಮಂತ್ರಿ ಏದಾಪಲ್ಲಿ.ಕೆ.ಪಳನಿಸ್ವಾಮಿ ದೆಹಲಿಗೆ ತೆರಳಿ ಪ್ರಧಾನಿ ಮೋದಿಯವರನ್ನ ಭೇಟಿಯಾಗಿ ದೇಶದ ರಾಜಕಾರಣದಲ್ಲಿ ಹಾಗು ವಿರೋಧಪಕ್ಷಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಮುಂದಾಗಿದ್ದಾರೆ.

ಸುದ್ದಿ ಮೂಲಗಳ ಪ್ರಕಾರ ತಮಿಳುನಾಡಿನ ಮುಖ್ಯಮಂತ್ರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಕೈ ಜೋಡಿಸಿ ಮಹಾಗಟಬಂಧನ್ ಗೆ ಭಾರೀ ಹೊಡೆತ ಕೊಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಹಾಗು ಪಳನಿಸ್ವಾಮಿಯವರ ಈ ಭೇಟಿಯ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿದೆ.

ಪ್ರಧಾನಿ ಮೋದಿಯವರ ಭೇಟಿಯ ಬಳಿಕ ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ನೀಡಿರುವ ಮುನ್ಸೂಚನೆಯನ್ನ ಗ್ರಹಿಸಿದರೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಅವರು ಮಹತ್ವದ ಘೋಷಣೆಯೊಂದನ್ನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಅನುಮಾನಗಳ ಮಧ್ಯೆಯೇ ಅವರು ಪ್ರಧಾನಿ ಮೋದಿಯವರ ಜೊತೆ ಅನೌಪಚಾರಿಕ ಭೇಟಿ ನಡೆಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಲಿದೆಯೆಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.


ಪ್ರಧಾ‌ನಿ ಮೋದಿಯವರ ಭೇಟಿಯ ಬಳಿಕ ಪಳನಿಸ್ವಾಮಿ ಮಾತನಾಡುತ್ತ ತಮಿಳುನಾಡಿನ ಪ್ರಮುಖ ಸಮಸ್ಯೆಗಳ ಕುರಿತಾಗಿ ಪ್ರಧಾ‌ನಿ ಮೋದಿಯವರನ್ನ ಭೇಟಿಯಾಗಲು ಬಂದಿದ್ದಾಗಿ ತಿಳಿಸಿದ್ದಾರೆ. ಮುಂದೆ ಮಾತನಾಡುತ್ತ ಅವರು “ನಾವು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ(ಅಮ್ಮ) ಹಾಗು ಅರಯಿನಾರ್ ಅಣ್ಣಾ(ಸಿಎನ್ ಅನ್ನಾದುರೈ) ರವರಿಗೆ ‘ಭಾರತರತ್ನ’ ಪ್ರಶಸ್ತಿ ನೀಡಬೇಕೆಂಬ ಮನವಿಯನ್ನ ಮಾಡಿದ್ದೇವೆ. ಅದರ ಜೊತೆಗೆ ಚೆನ್ನೈ ರೇಲ್ವೇ ಸ್ಟೇಷನ್ನಿನ ಹೆಸರನ್ನ AIADMK ಸಂಸ್ಥಾಪಕ ಎಮ್‌ಜಿ ರಾಮಚಂದ್ರನ್ ರವರ ಹೆಸರಿನಿಂದ ಮರುನಾಮಕರಣ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ದೇಶದ ಪ್ರತಿಯೊಂದು ರಾಜ್ಯದಲ್ಲೂ ತನ್ನ ಬಿಗಿಹಿಡಿತ ಸಾಧಿಸಿ ಕೇಸರಿ ಪತಾಕೆ ಹಾರಿಸಲು ಬಿಜೆಪಿ ಚಾಣಕ್ಯ ಅಮಿತ್ ಶಾ ಭರ್ಜರಿ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಅದರಲ್ಲಿ ದಕ್ಷಿಣ ಭಾರತದ ರಾಜ್ಯಗಳೂ ಇವೆ. ಇದೀಗ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಹಾಗು ಪ್ರಧಾನಿ ಮೋದಿಯವರ ಭೇಟಿಯ ಬಳಿಕ ಕಾಂಗ್ರೆಸ್ ಸಮೇತ ಎಲ್ಲಾ ವಿರೋಧ ಪಕ್ಷಗಳ ಎದೆಯಲ್ಲೂ ನಡುಕ ಶುರುವಾಗಿದೆ.

ಪ್ರಧಾನಿ ಮೋದಿಯವರನ್ನ ಭೇಟಿಯಾದ ಪಳನಿಸ್ವಾಮಿ ಯವರಿಗೆ ಪತ್ರಕರ್ತರು AIADMK ಹಾಗು ಬಿಜೆಪಿ ಮೈತ್ರಿಯ ಕುರಿತಾಗಿ ಪ್ರಶ್ನಿಸಿದಾಗ ಪಳನಿಸ್ವಾಮಿ ಮೈತ್ರಿಯ ಕುರಿತು ನಿರಾಕರಿಸದೆ ಅದಕ್ಕೆ ಉತ್ತರಿಸುತ್ತ ಮೊದಲು ಚುನಾವಣಾ ದಿನಾಂಕ ಘೋಷಣೆಯಾಗಲಿ ನಂತರ ಮೈತ್ರಿಯ ವಿಚಾರವಾಗಿ ನಾವು ನಿರ್ಧರಿಸುತ್ತೇವೆ ಎಂದಿದ್ದಾರೆ. ಇದನ್ನ ನೋಡಿದರೆ AIADMK ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರಿಗೆ ಬೆಂಬಲ ಸೂಚಿಸುತ್ತದೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತೆ.

ಇದಕ್ಕೂ ಮೊದಲು ಕಾವೇರಿ ವಿವಾದದಲ್ಲೂ ತಮಿಳುನಾಡಿನ ಆಡಳಿತಾರೂಢ ಪಕ್ಷ ಅನ್ನಾಮುದ್ರಕ್(AIADMK) ವಿರೋಧಪಕ್ಷಗಳು ಬಿಜೆಪಿಯನ್ನ ಎಷ್ಟೇ ವಿರೋಧಿಸಲಿ ಆದರೆ ನಮ್ಮ ಹಾಗು ಬಿಜೆಪಿ ನಡುವಿನ ಸಂಬಂಧ ಕೆಡುವುದಕ್ಕೆ ನಾವು ಬಿಡೆವು ಎಂದು ತಿಳಿಸಿತ್ತು.

ಈ ಎಲ್ಲಾ ವಿಚಾರಗಳನ್ನ ಸೂಕ್ಷ್ಮವಾಗಿ ಅವಲೋಕಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನಲ್ಲೂ ಬಿಜೆಪಿ ಕೇಸರಿ ಪತಾಕೆ ಹಾರಿಸಿ ಮತ್ತೆ ಮೋದಿಯವರನ್ನ ಪ್ರಧಾನಿ ಮಾಡಲು ಭರ್ಜರಿ ಸಿದ್ಧತೆಯನ್ನ ಆರಂಭಿಸಿದೆ ಅನ್ನೋದನ್ನ ಅಲ್ಲಗಳೆಯುವಂತಿಲ್ಲ.

– Team Nationalist Views

Nationalist Views ©2018 Copyrights Reserved

 •  
  3.1K
  Shares
 • 3.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com