Connect with us
Loading...
Loading...

ಪ್ರಚಲಿತ

ಬೆಂಜಮಿನ್ ನೇತನ್ಯಾಹು ಭಾರತವನ್ನ ಹಾಗು ಪ್ರಧಾನಿ ಮೋದಿಜೀಯನ್ನ ಹಾಡಿ ಹೊಗಳಿದ್ದು ಹೀಗೆ!!!

Published

on

 • 3.8K
 •  
 •  
 •  
 •  
 •  
 •  
 •  
  3.8K
  Shares

“ಕಳೆದ ಮೂರು ಸಾವಿರ ವರ್ಷಗಳಿಂದ ಇಸ್ರೇಲ್ ನಿಮಗಾಗಿ ಕಾಯುತ್ತಿತ್ತು!!”ಎಂದು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತಮ್ಯಾಹು ಹೇಳಿದ್ದಾರೆ.

ಆರು ದಿನಗಳ ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತವನ್ನ, ಭಾರತದ ಪರಂಪರೆಯನ್ನ, ಸಂಸ್ಕೃತಿಯನ್ನ ಹಾಡಿ ಹೊಗಳಿದ್ದಾರೆ.

ಕಳೆದ ಮೂರು ಸಾವಿರ ವರ್ಷಗಳಿಂದ ಇಸ್ರೇಲಿಗರು ಭಾರತದ ರಾಜನ ಆಗಮನಕ್ಕಾಗಿ ಕಾಯುತ್ತಿದ್ದರು. ಭಾರತ ನಮ್ಮ ಧರ್ಮಭೂಮಿ, ಇಸ್ರೆಲ್ ನಮ್ಮ ಮಾತೃಭೂಮಿ.

ನಮ್ಮ ದೇಶದ ಅಸ್ಮಿತೆಯನ್ನೇ ಅಳಿಸಿಹಾಕಲು ಜಗತ್ತಿನ ಎಲ್ಲ ರಾಷ್ಟ್ರಗಳೂ ತೊಡೆತಟ್ಟಿ ನಿಂತಿದ್ದಾಗ ನಮ್ಮ ಜನರನ್ನ ಕಾಪಾಡಿದ್ದು ಏಕೈಕ ರಾಷ್ಟ್ರ ಅದುವೇ ಭಾರತ.

ಹೌದು ಇದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ರವರ ಮಾತುಗಳು.

ಯಹೂದೆಗಳೆಂದರೆ ಕಂಡ ಕಂಡಲ್ಲಿ ಮಾರಹೋಮ, ಅತ್ಯಾಚಾರ, ಲೂಟಿ, ಪ್ರಾರ್ಥನಾ ಮಂದಿರಗಳನ್ನ ಧ್ವಂಸ ಮಾಡುತ್ತಿದ್ದ ಸಮಯವದು, ಆಗ ಪ್ರಾಣಭಿಕ್ಷೆ ಬೇಡಿ ಯಹೂದಿಗಳು ಹಲವು ರಾಷ್ಟ್ರಗಳ ಸಹಾಯಹಸ್ತ ಬೇಡಿದರೂ ಅಲ್ಲೆಲ್ಲಾ ಮಾರಣಹೋಮದ ಉತ್ತರವೇ ಸಿಗುತ್ತಿತ್ತು.

“ನಮ್ಮ ರಾಷ್ಟ್ರದಲ್ಲಿ ನಿಮಗೆ ಜಾಗವಿಲ್ಲ” ಅನ್ನೋ ಉತ್ತರವೇ ಜಗತ್ತಿನ ಎಲ್ಲ ರಾಷ್ಟ್ರಗಳಿಂದಲೂ ಯಹೂದಿಗಳಿಗೆ ಸಿಗುತ್ತಿತ್ತು. ಇಂತಹ ಸಮಯದಲ್ಲಿ ಕಟ್ಟಕಡೆಯದಾಗಿ ಯಹೂದಿಗಳಿಗೆ ಆಶಾಕಿರಣವಾಗಿ ಕಂಡದ್ದು ಭಾರತ.

ಹೌದು ಭಾರತವನ್ನ ನಂಬಿ ಯಹೂದಿಗಳು ಇಲ್ಲಿಗೆ ಬಂದಾಗಲೇ ಅವರಿಗೆ ಅರ್ಥವಾಗಿದ್ದು ಭಾರತ ಎಂತಹ ಸಹಿಷ್ಣು ರಾಷ್ಟ್ರವೆಂದು.

ಆದರೆ ಇಂತಹ ಸಹಿಷ್ಣು ರಾಷ್ಟ್ರವನ್ನ ತಮ್ಮ ಸ್ವಹಿತಾಸಕ್ತಿ, ರಾಜಕೀಯ ಕಾರಣಗಳಿಗಾಗಿ ನಮ್ಮ ಭಾರತದ ಅಯೋಗ್ಯರೇ ಭಾರತ ಅಸಹಿಷ್ಣು ರಾಷ್ಟ್ರ ಅಂತ ಬೊಬ್ಬೆಯಿಡುತ್ತ ಪ್ರಶಸ್ತಿ ವಾಪಸಾತಿ ಚಳುವಳಿ ಅಂತ ಒಂದಿಷ್ಟು ಜನ ಮಾಡಿದರೆ ಇನ್ನೊಂದಿಷ್ಟು ಜನ‌ ಈ ದೇಶ ಸರಿಯಿಲ್ಲ ಅಂತ ಹೊರ ರಾಷ್ಟ್ರಗಳಲ್ಲಿ ಹೋಗಿ ಪುಕಾರು ಎಬ್ಬಿಸಿ ಬರುತ್ತಾರೆ.

ಇಂಥ ಹಲಾಲ್ಕೋರರಿಗೆ ಬೆಂಜಮಿನ್ ನೇತನ್ಯಾಹುರವರ ಮಾತುಗಳನ್ನ ಕೇಳಿದ ಮೇಲಾದರೂ ಭಾರತ ಎಂಥ ರಾಷ್ಟ್ರ ಅಂತ ಮನವರಿಕೆ ಆಗಬಹುದೇನೋ.

ಅದಿರಲಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಬಂದಿದ್ದಾರೆ, ಬೆಂಜಮಿನ್ ಭಾರತಕ್ಕೆ ಬಂದಿದ್ದಕ್ಕೂ ಕೆಲವು ಸೋ ಕಾಲ್ಡ್ ಪ್ರಗತಿಪರರಿಗೆ ಹೊಟ್ಟೆಗೆ ಕೊಳ್ಳಿ ಇಟ್ಟಂತಾಗಿದೆ.

ಅದಕ್ಕಾಗಿ ದೇಶದ ಅಲ್ಲಲ್ಲಿ ನೇತನ್ಯಾಹು ರನ್ನ ವಿರೋಧಿಸಿ ಪ್ರತಿಭಟನೆಗಳೂ ನಡೆಯುತ್ತಿವೆ.

ಆದರೆ ಪ್ರಧಾನಿ ಮೋದಿ ಮಾತ್ರ ಇವ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಿಷ್ಟಾಚಾರವನ್ನೂ ಮುರಿದು ಸ್ವತಃ ತಾವೇ ಏರಪೋರ್ಟಿಗೆ ಹೋಗಿ ನೇತನ್ಯಾಹು ರನ್ನ ಬರಮಾಡಿಕೊಂಡಿದ್ದಾರೆ.

ಭಾರತಕ್ಕೆ ಬಂದಿರುವ ನೇತನ್ಯಾಹು ಪ್ರಧಾನಿ ಮೋದಿಯವರ ವ್ಯಕ್ತಿತ್ವವನ್ನ ಹಾಡಿ ಹೊಗಳಿದ್ದಾರೆ.

ಬೆಂಜಮಿನ್ ನೇತನ್ಯಾಹುರನ್ನ ಪ್ರಧಾನಿ “ನನ್ನ ಸ್ನೇಹಿತ ಬಿಬಿ” ಅಂತ ಕರೆದರೆ ಅತ್ತ ನೇತನ್ಯಾಹು ಮೋದಿಯವರನ್ನ “ನರೇಂದ್ರ” ಅಂತ ಕರೆಯುವುದನ್ನ ನೋಡಿದರೆ ಅವರಿಬ್ಬರ ಸ್ನೇಹ ಅದೆಷ್ಟು ಗಾಢವಾಗಿದೆ ಅನ್ನೋದು ಅರ್ಥವಾಗುತ್ತದೆ.

ಭಾರತಕ್ಕಾಗಮಿಸಿರುವ ಬೆಂಜಮಿನ್ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಅವುಗಳಲ್ಲಿ ಪ್ರಮುಖವಾದುದೆಂದರೆ ತೈಲ ಹಾಗು ಗ್ಯಾಸ್ ಸೆಕ್ಟರ್ ನ ಒಪ್ಪಂದವಾಗಿದೆ.

ಪ್ರಧಾನಿ ಮೋದಿ ಹಾಗು ಬೆಂಜಮಿನ್ ರವರ ಭೇಟಿಯ ಪ್ರಮುಖಶಗಳು

* ಭಾರತ ಹಾಗು ಇಸ್ರೇಲ್ ನಡುವಣ ಸಂಬಂಧವನ್ನ ಇನ್ನಷ್ಟು ಗಟ್ಟಿಗೊಳಿಸುವುದು.

* ಭಾರತದಲ್ಲಿ ವಿದೇಶಿ ಹೂಡಿಕೆ FDI ಗಾಗಿ ಇಸ್ರೇಲ್ ಹೆಚ್ಚು ಹೆಚ್ಚು ಹೂಡಿಕೆ ಮಾಡುವುದು

* ಇಸ್ರೇಲ್ ಪ್ರಧಾನಿ ಬೆಂಜಮಿನ್ ಮಾತನಾಡುತ್ತ ಹೇಳ್ತಾರೆ “ನಾನು ಮತ್ತು ನನ್ನ ಹೆಂಡತಿ ಬಾಲಿವುಡ್ ಗೆ ಹೋಗ್ತಿದೀವಿ, ಆರು ದಿನಗಳ ಈ ಪ್ರವಾಸದಲ್ಲಿ ತಾಜಮಹಲ್ ವೀಕ್ಷಣೆ ಹಾಗು ಮುಂಬೈನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳನ್ನೂ ಭೇಟಿಯಾಗಲಿದ್ದೇವೆ”

* ಸ್ವಾತಂತ್ರ್ಯ ಬಂದ ಎಪ್ಪತ್ತು ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ಎರಡನೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

* ಭಾರತಕ್ಕೆ ಮೊದಲ ಬಾರಿಗೆ ಅಂದರೆ 2003 ರಲ್ಲಿ ಆಗಿನ ಇಸ್ರೇಲ್ ಪ್ರಧಾನಿ ಏರಿಯಲ್ ಶಾರೋನ್ ಭೇಟಿ ನೀಡಿದ್ದರು

* ನಾನು ಕೂಡ ಯೋಗ ಮಾಡಲು ಉತ್ಸುಕನಾಗಿದ್ದೇನೆ ಎಂದ ನೇತನ್ಯಾಹು

* ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತಾರಲ್ಲ ಹಾಗೆಯೇ ಭಾರತ ಹಾಗು ಇಸ್ರೇಲಿನ ಸಂಬಂಧವೂ ಸ್ವರ್ಗದಲ್ಲೇ ನಿಶ್ಚಯವಾಗಿದೆ ಅನಿಸುತ್ತೆ ಅಂತ ನೇತನ್ಯಾಹು ಭಾರತವನ್ನ ಹೊಗಳಿದರು.

* ಬೆಂಜಮಿನ್ ಭಾರತಕ್ಕೆ ಬರುವ ಕೆಲ ದಿನಗಳ ಮುಂಚೆಯಷ್ಟೇ ಇಸ್ರೇಲಿನಿಂದ 8000 ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಗಳನ್ನ ಕೊಂಡುಕೊಳ್ಳಲು ಭಾರತ ನಿರ್ಧರಿಸಿತ್ತು

* ಭಾರತದಲ್ಲಿ ಇವುಗಳ ಉತ್ಪಾದನೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಆದ ತಕ್ಷಣ ಇಸ್ರೇಲಿನಿಂದ ಆಮದು ಮಾಡಿಕೊಂಡ ಮಿಸೈಲ್ ಗಳನ್ನ ಸ್ಕ್ರ್ಯಾಪ್ ಮಾಡಲಾಗುವುದು ಅನ್ನುವ ನಿರ್ಧಾರವನ್ನೂ ಭಾರತೀಯ ಸೇನೆ ಮಾಡಿದೆ.

ಇವಿಷ್ಟೂ ಬೆಂಜಮಿನ್ ಹಾಗು ಪ್ರಧಾನಿ ಮೋದಿ ಭೇಟಿಯ ಝಲಕ್!!!

ಇನ್ನೂ ಐದು‌ ದಿನಗಳ ಕಾಲ ನೇತನ್ಯಾಹು ಭಾರತದಲ್ಲಿರಲಿದ್ದು ಇನ್ನೂ ಕುತೂಹಲಕಾರಿ ಸಂಗತಿಗಳಿಗೆ ಅವರ ಭಾರತ ಪ್ರವಾಸ ಸಾಕ್ಷಿಯಾಗಲಿದೆ.

 •  
  3.8K
  Shares
 • 3.8K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com