Connect with us
Loading...
Loading...

ಪ್ರಚಲಿತ

ಬ್ರೇಕಿಂಗ್ ನ್ಯೂಸ್: ಬಿಗ್ ಬ್ರೇಕಿಂಗ್: ಭಾರತದ ಈ ವ್ಯಕ್ತಿಗಾಗಿ ಭಯೋತ್ಪಾದಕರು ಸೇನೆಯ ಮೇಲೆರಗಿದ್ದು!!! ಯಾರಾತ ಗೊತ್ತಾ?

Published

on

 • 3
 •  
 •  
 •  
 •  
 •  
 •  
 •  
  3
  Shares

ಭಯೋತ್ಪಾದಕರನ್ನು ಹುತಾತ್ಮರೆಂದು ಕರೆಯುವುದು ಭಾರತದಲ್ಲಿ ಮಾತ್ರ. ಹೌದು ಭಾರತದಲ್ಲಿರುವ ಕೆಲ ಕೆಟ್ಟ ಕ್ರಿಮಿಗಳು ಭಯೋತ್ಪಾದಕರನ್ನು ದೇಶಪ್ರೇಮಿಗಳು, ಹುತಾತ್ಮರು ಎಂಬ ರೀತಿಯಲ್ಲಿ ಕರೆಯುತ್ತಾರೆ. ಆ ಕೆಟ್ಟ ಕ್ರಿಮಿಗಳ ದೃಷ್ಟಿಯಲ್ಲಿ ಅಫ್ಜಲ್ ಗುರು ಎಂಬ ಭಯೋತ್ಪಾದಕ ದೇಶಪ್ರೇಮಿ, ಆತ ಹುತಾತ್ಮನಾಗಿದ್ದಾನೆ ಅಂತಾರೆ.

ಹೌದು ಆತ ದೇಶಪ್ರೇಮಿಯೇ ಆದರೆ ಪಾಕಿಸ್ತಾನದ ಪ್ರೇಮಿ. ಹೀಗಾಗಿಯೇ ನಮ್ಮ ದೇಶದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸೆದಿದ್ದ. ಆತನ ವಿದ್ವಂಸಕ ಕೃತ್ಯಕ್ಕೆ ಭಾರತವು ಆತನಿಗೆ ಗಲ್ಲಿಗೇರಿಸಿತ್ತು. ಗಲ್ಲಿಗೇರಿಸಿದ್ದಕ್ಕೆ ಭಾರತದಲ್ಲಿರುವ ಅದೇ ಕೆಲ ಕೆಟ್ಟ ಕ್ರಿಮಿಗಳು ಭಯೋತ್ಪಾದಕ ಅಫ್ಜಲ್ ಗುರುವನ್ನು ಹುತಾತ್ಮನ ರೀತಿಯಲ್ಲಿ ಕಾಣುತ್ತಿದ್ದಾರಲ್ಲ.

ಬರೀ ಅಷ್ಟೇ ಅಲ್ಲ ಅವನನ್ನು ಗಲ್ಲಿಗೇರಿಸಿದ ಮರು ವರ್ಷದಿಂದ ಆತನ ನೆನಪಿಗಾಗಿ ವರ್ಷಾಚರಣೆಯನ್ನು ಆಚರಿಸುತ್ತಿದ್ದಾರೆ. ಇದಕ್ಕಿಂತಲೂ ನಾಚಿಕೆಗೇಡಿತನ, ದೇಶದ್ರೋಹಿತನ ಬೇರಾವ ದೇಶದಲ್ಲೂ ಕಾಣಿಸಲಿಕ್ಕಿಲ್ಲ. ಇಂತಹ ಕೆಟ್ಟ ಕ್ರಿಮಿಗಳು ಭಾರತ ಬಿಟ್ಟು ಇನ್ನಾವುದೋ ದೇಶದಲ್ಲಿದ್ದು ಭಯೋತ್ಪಾದಕರ ಪರ ನಿಂತಿದ್ದರೆ, ಈ ಕೆಟ್ಟ ಕ್ರಿಮಿಗಳನ್ನು ಹೊಸೆದು ಹಾಕುತ್ತಿದ್ದರು. ಆದರೆ ಭಾರತದಲ್ಲಿ…….??

ಭಯೋತ್ಪಾದಕ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿ ಇದೇ ಫೆಬ್ರುವರಿ 9ಕ್ಕೆ 5 ವರ್ಷಗಳಾದವು. ಆತನ ಗಲ್ಲಿಗೇರಿಸಿದ ವರ್ಷಾಚರಣೆ ಮಾಡಿ ಜಮ್ಮು-ಕಾಶ್ಮೀರದ ಸಂಜುವಾನ್ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿ ಇಬ್ಬರು ಯೋಧರನ್ನು ಕೊಂದು, ಇಬ್ಬರು ಮಕ್ಕಳನ್ನು ಕೊಂದಿದ್ದಾರೆ. ಭಯೋತ್ಪಾದಕ ಅಫ್ಜಲ್ ಗುರುವಿನ ಸತ್ತ ವರ್ಷಾಚರಣೆಯ ದಾಳಿಗೆ ಭಾರತೀಯ ಸೇನೆಯ ಇಬ್ಬರು ಹೆಮ್ಮೆಯ ಯೋಧರು ಹುತಾತ್ಮರಾಗಿದ್ದು ದುಃಖದ ಸಂಗತಿ.


ಸುಬೇದಾರ್ ಮದನ್ಲಾಲ್ ಚೌಧರಿ ಮತ್ತು ಸುಬೇದಾರ್ ಮೊಹಮ್ಮದ್ ಅಶ್ರಫ್ ಮಿರ್ ಎಂಬ ವೀರ ಯೋಧರು ಭಯೋತ್ಪಾದಕ ಅಫ್ಜಲ್ ಗುರುವಿನ ಪರ ಇದ್ದ ಭಯೋತ್ಪಾದಕರ ಜೊತೆ ಹೋರಾಡಿ ಹುತಾತ್ಮರಾಗಿದ್ದಾರೆ.

ಭಯೋತ್ಪಾದಕ ಅಫ್ಜಲ್ ಗುರುವನ್ನು ಫೆಬ್ರುವರಿ 9, 2013ರಂದು ಗಲ್ಲಿಗೇರಿಸಲಾಗಿತ್ತು. ಅದರ 5ನೇ ವರ್ಷಾಚರಣೆ ಮಾಡಲು ಕೆಲ ಕೆಟ್ಟ ಕ್ರಿಮಿಗಳು ಮತ್ತು ಭಯೋತ್ಪಾದಕರು ಮುಂದಾಗಿ, ಉಗ್ರ ಅಫ್ಜಲ್ ಗುರುವಿನ ಸಾವಿಗೆ ಪ್ರತೀಕಾರವಾಗಿ ಸೇನೆಯ ಮೇಲೆ ಫೆಬ್ರುವರಿ 10ರಂದು ಅಂದ್ರೆ ದಾಳಿ ಮಾಡಿದ್ದರು. ಅವರು ಮೊದಲೇ ಯೋಜನೆ ಹಾಕಿ ‘ಶ್ರೀನಗರ- ಜಮ್ಮು- ಪಠಾಣ್ಕೋಟ್ ಹೆದ್ದಾರಿಯ ಆಯಕಟ್ಟಿನ ಸ್ಥಳದಲ್ಲಿರುವ ಶಿಬಿರದ ಹತ್ತಿರ ಶನಿವಾರ(ಫೆಬ್ರುವರಿ 10ರಂದು) ಓಡಾಡುವಾಗ, ನಮ್ಮ ಸೇನೆ ಪರೀಶಿಲನೆ ನಡೆಸಿದಾಗ, ಸೇನೆಯ ಮೇಲೆ ದಾಳಿ ನಡೆಸಿ ನಮ್ಮ ಇಬ್ಬರು ಯೋಧರು ಕೊಂದಿದ್ದಾರೆ. ಇದರ ಹಿಂದೆ ಜೈಶ್ ಇ ಮೊಹಮ್ಮದ್ ಎಂಬ ಉಗ್ರ ಸಂಘಟನೆ.

ಸುಂಜುವಾನ್‌ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ಪ್ರಕರಣ ಶನಿವಾರ ಜಮ್ಮು-ಕಾಶ್ಮೀರ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಿತ್ತು. ಕಲಾಪದ ವೇಳೆ ದಾಳಿಯನ್ನು ಖಂಡಿಸಿ ಪಾಕ್ ವಿರುದ್ಧ ಘೋಷಣೆಯನ್ನು ಕೂಗಿದ್ದರು. ಇದೇ ವೇಳೆ ಪಾಕ್ ಪರವಾಗಿ ಸೋನಾವರಿ ಕ್ಷೇತ್ರವನ್ನು ಪ್ರತಿನಿಧಿಸುವ ನ್ಯಾಷನಲ್‌ ಕಾನ್ಫರೆನ್ಸ್‌ ಶಾಸಕ ಅಕ್ಬರ್‌ ಲೋನೆ ಎನ್ನುವ ದೇಶದ್ರೋಹಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾನೆ. ಪಾಕ್ ಪರ ಘೋಷಣೆಯನ್ನು ಕೂಗುವವರು ಅಧಿವೇಶದಲ್ಲೂ ಇದ್ದಾರೆ ಅಂದ್ರೆ ಭಾರತ ಸುರಕ್ಷಿತವಾಗಿದೆಯಾ?

ಪಾಕ್ ಪರ ಘೋಷಣೆಯನ್ನು ಕೂಗಿದವನಿಗೆ ಒದ್ದರೆ ದಾಳಿಯ ಹಿಂದೆ ಯಾರಿದ್ದಾರೆಂದು ಹೊರ ಬರುತ್ತದೆ. ಆದರೆ ಆತನಿಗೆ ಒದೆಯಲು ರಾಜಕೀಯ ಪುಢಾರಿಗಳ ಬಿಡಲ್ಲ. ಆತನಿಗೆ ಒದ್ದರೆ ಸೆಕ್ಯುಲರಿಸಂ ಗಾಂಜಾ ಕುಡಿದ ಅಬ್ಬೆಪಾರಿಗಳು ಆತನ ಪರ ಬ್ಯಾಟಿಂಗ್ ಮಾಡುತ್ತಾರೆ. ಅಲ್ಪ ಸಂಖ್ಯಾತರಿಗೆ ಅನ್ಯಾವಾಗ್ತಿದೆ ಎಂದು ಬೊಬ್ಬೆ ಹೊಡೆಯುತ್ತಾರೆ. ಹಾಗಾದರೆ ಯೋಧರ ಸಾವಿಗೆ ಬೆಲೆ ಇಲ್ವಾ? ಉಗ್ರ ಪರ ಇದ್ದವರಿಗೆ ಒದೆ ಕೊಟ್ಟರಿಗೆ ಅಲ್ಪ ಸಂಖ್ಯಾತರಿಗೆ ಯಾಕೆ ನೋವಾಗಬೇಕು? ಯಾವ ನೋವು ಇಲ್ಲ, ಮಣ್ಣು ಮಸಿಯೂ ಇಲ್ಲ.

ಈ ರಾಜಕೀಯ ಪುಢಾರಿಗಳು ಮಾಡಿದ್ದೆಲ್ಲಾ ಇಂತಹುದ್ದೆ. ಉಗ್ರರಿಂದ ಈ ದೇಶದ ಭದ್ರತೆಗೆ ಧಕ್ಕೆ ಬರುತ್ತದೆ ಎಂದು ಗೊತ್ತಿದ್ದರೂ ಅವರ ಪರ ನಿಲ್ಲುತ್ತಾರೆ ಯಾಕೆಂದರೆ ಓಟಿಗಾಗಿ. ಎಲ್ಲಿ ಉಗ್ರರಿಗೆ ವಿರೋಧ ಮಾಡಿದರೆ, ಭಾರತದಲ್ಲಿರುವ ಅಲ್ಪ ಸಂಖ್ಯಾತರ ಓಟುಗಳು ಕಳೆದುಕೊಳ್ಳುತ್ತೇವೆಂಬ ಭಯ. ಇವರ ರಾಜಕೀಯ ಹಪಹಪಿಗೆ ದೇಶ ಉಗ್ರರ ಕೈಯಲ್ಲಿ ನಲುಗಿದರೂ ಚಿಂತೆಯಿಲ್ಲ. ಓಟಿಗಾಗಿ ಉಗ್ರರ ಬೂಟು ನೆಕ್ಕಲು ತಯಾರಾಗಿ ಬಿಡುತ್ತಾರೆ.

2016ರ ಫೇಬ್ರುವರಿ 9ರಂದು ಅದೇ ಉಗ್ರ ಅಫ್ಜಲ್ ಗುರುವಿನ ನಾಲ್ಕನೇ ವರ್ಷಾಚರಣೆ ಮಾಡಿದ ಉಗ್ರರು ಸೇನೆಯ ಮೇಲೆ ದಾಳಿ ಮಾಡಿ 7 ಜನ ಯೋಧರನ್ನು ಕೊಂದಿದ್ದರು. ಆಗ ಆ ಭಯೋತ್ಪಾದಕರು ತಮ್ಮ ಉದ್ದೇಶವನ್ನು ಧೈರ್ಯದಿಂದ ಹೇಳಿದ್ದರು. ಅದೇನು ಗೊತ್ತಾ? ಅಂದು 7 ಜನ ಯೋಧರು ಹುತಾತ್ಮರಾಗಿದ್ದಕ್ಕೆ ಇದೇ ದೇಶವೇ ಕಣ್ಣೀರಿಟ್ಟಿತ್ತು. ಆಮೇಲೆ ಕಾರ್ಯಾಚರಣೆ ಮಾಡಿದಾಗ ಘಟನೆ ನಡೆದ ಸ್ಥಳದಲ್ಲಿ ಸತ್ತ ಮೂವರು ಉಗ್ರರಿಗೆ ಸೇರಿದ್ದ ಕೆಲ ಪತ್ರಗಳು ಸಿಕ್ಕಿವೆ. ಉರ್ದು ಭಾಷೆಯಲ್ಲಿದ್ದ ಒಂದು ಕಾಗದದಲ್ಲಿ ಅಫ್ಜಲ್ ಗುರುವನ್ನು ಕೊಂದಿದ್ದಕ್ಕೆ ಸೇಡಿನ ಮೊದಲ ಕಂತು ಇದು ಎಂದು ಬರೆದಿತ್ತು. ಈಗ ಅರ್ಥವಾಯಿತಲ್ವಾ? ದೇಶದ ಒಳಗೆ ಇದ್ದುಕೊಂಡು ದೇಶದ್ರೋಹಿಗಳ ಪರ ನಿಂತು, ಭಯೋತ್ಪಾದಕರ ಪರ ನಿಲ್ಲುತ್ತಾರೆಂದು.

ಜೆಎನ್ ಯು ನೆನಪಿದೆ ಅಲ್ವಾ? ಉಗ್ರ ಅಫ್ಜಲದ ಗುರು ಪರ ಘೋಷಣೆ ಹಾಕಿ ದೇಶದಲ್ಲಿ ಕೆಟ್ಟ ಸಂಚನಲವನ್ನುಂಟು ಮಾಡಿದ್ದರು. ಡೆಮೊಕ್ರಾಟಿಕ್ ಸ್ಟೂಡೆಂಟ್ಸ್ ಯೂನಿಯನ್ ಎಂಬ ಸಂಘಟನೆಯ ವಿದ್ಯಾರ್ಥಿಗಳು ಎರಡು ವರ್ಷದ ಹಿಂದೆ ನೇಣುಗಂಬವೇರಿದ್ದ ಒಬ್ಬ ಭಯೋತ್ಪಾದಕನ “ಪುಣ್ಯತಿಥಿ”ಯನ್ನು ಆಚರಿಸಲು ನಿರ್ಧರಿಸಿದ್ದರು.

ಕಾರ್ಯಕ್ರಮಕ್ಕೆ ಅವರು ಕೊಟ್ಟಿದ್ದ ಹೆಸರು “ಅಫ್ಜಲ್ ಗುರು ಮತ್ತು ಮಖ್‍ಬೂಲ್ ಭಟ್‍ರ ನ್ಯಾಯಾಂಗ ಹತ್ಯೆಯ ನೆನಪಿನಲ್ಲಿ” ನಡೆಸುವ ಕಾರ್ಯಕ್ರಮ ಎಂದು. ಒಬ್ಬ ಭಯೋತ್ಪಾದಕನನ್ನು ದೇವರ ರೂಪದಲ್ಲಿ ಕಾಣುವವರು ಭಾರತದಲ್ಲಿ ಸಿಗುತ್ತಾರಲ್ಲ ಅನ್ನುವುದೇ ವ್ಯಥೆ. ಆ ಕೆಟ್ಟ ಕ್ರಿಮಿಗಳ ಸಾಲಿನಲ್ಲಿ ಮೊದಲಿಗನಾಗಿ ಬರುವವನೇ ದೇಶದ್ರೋಹಿ ಕನ್ಹಯ್ಯ ಕುಮಾರ್.

ಉಮರ್ ಖಾಲಿದ್ ಮತ್ತು ಕನ್ಹಯ್ಯಾ ಇಬ್ಬರೂ ‘ಅಫ್ಜಲ್ ಗುರುವಿನ ಕನಸನ್ನು ನನಸು ಮಾಡುತ್ತೇವೆ, ಭಾರತವನ್ನು ಚೂರು ಚೂರು ಮಾಡುತ್ತೇವೆ ಅಂದು ಗಂಟಾಘೋಷವಾಗಿ ಅಫ್ಜಲ್ ಗುರು ಪರ ಘೋಷಣೆ ಹಾಕಿದ್ದರು. ಇಂತವನಿಗೆ ರಾಜಕೀಯ ಪುಢಾರಿಗಳು ಬೆಂಬಲಿಸಿದ್ದರು. ಇಂತಹ ಘಟನೆಗಳು ಭಾರತದಲ್ಲಿ ಬಿಟ್ಟು ಬೇರೆಲ್ಲೂ ಸಿಗಲಿಕ್ಕಿಲ್ಲ.

2016 ಫೆಬ್ರುವರಿ 9ರಂದು ದಿಲ್ಲಿಯ ಪ್ರಸ್‌ ಕ್ಲಬ್‌ ಆಫ್ ಇಂಡಿಯಾದಲ್ಲಿ ಸುಮಾರು ಮೂರು ತಾಸುಗಳ ಕಾಲ ಭಾರತ ವಿರೋಧಿ ಘೋಷಣೆಗಳು ಮತ್ತು ಅಫ್ಜಲ್‌ ಗುರು ಅಮರ್‌ ರಹೇ’ ಎಂಬ ಘೋಷಣೆಗಳು ಕೇಳಿ ಬಂದಿದ್ದವು. ದೇಶದ್ರೋಹಿಗಳು ದೇಶದ ಒಳಗೇ ಇದ್ದಕೊಂಡು ದೇಶದ ಭದ್ರತೆಗೆ ಅಡ್ಡಿಯಾಗುತ್ತಿದ್ದಾರೆಂದು ಇದರಿಂದ ಸಾಬೀತಾಗುತ್ತಿದೆ.

ಅಷ್ಟಕ್ಕೂ ಭಯೋತ್ಪಾದಕ ಅಫ್ಜಲ್ ಗುರು ಎಂತಹ ಹೇಯ ಕೃತ್ಯ ಎಸಗಿದ್ದ ಗೊತ್ತಾ?

ಪ್ರಜಾಪ್ರಭುತ್ವದ ದೇವಸ್ಥಾನವೆಂದೇ ಕರೆಯಲಾಗುವ ಸಂಸತ್ ಭವನದ ಮೇಲೆ 2001ರ ಡಿಸೆಂಬರ್‌ 13 ರಂದು 5 ಮಂದಿ ಶಸ್ತ್ರ ಸಜ್ಜಿತ ಉಗ್ರರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ ದೆಹಲಿ ಪೊಲೀಸ್ ಪಡೆಯ ಐವರು, ಓರ್ವ ಸಿಆರ್​ಪಿಎಫ್ ಮಹಿಳಾ ಸಿಬ್ಬಂದಿ, ಇಬ್ಬರು ಸಂಸತ್ ಭವನದ ಸಿಬ್ಬಂದಿ ಮತ್ತು ಓರ್ವ ಮಾಲಿ ಸೇರಿ 9 ಜನ ಹುತಾತ್ಮರಾಗಿದ್ದರು‌. ಈ ವೇಳೆ ಉಗ್ರ ಅಫ್ಜಲ್ ಗುರು ಸೆರೆ ಸಿಕ್ಕಿದ್ದ. ಈ ದಾಳಿಯ ಮಾಸ್ಟರ್ ಮೈಂಡ್ ಕೂಡಾ ಆತನೆ.

ಆ ವೇಳೆ ಸೆರೆ ಸಿಕ್ಕ ಉಗ್ರ ಅಫ್ಜಲ್ ಗುರುನ್ನ 12 ವರ್ಷಗಳ ಬಳಿಕ 2013 ಫೆಬ್ರುವರಿ 9 ರಂದು ಗಲ್ಲಿಗೇರಿಸಲಾಗಿತ್ತು. ಆತನಿಗೆ ಗಲ್ಲಿಗೇರಿಸಿದಾಗಿನಿಂದ ಪ್ರತಿವರ್ಷ ಆತನ ಸತ್ತ ದಿನ ಆತನ ಪರ ಘೋಷಣೆಗಳು ಭಾರತದಲ್ಲಿಯೇ ಆಗ್ತಿವೆ ಅನ್ನೋದು ಮಾತ್ರ ವಿಪರ್ಯಾಸವೇ ಸರಿ. ಬರೀ ಘೋಷಣೆಯಷ್ಟೇ ಅಲ್ಲ ನಮ್ಮ ಹೆಮ್ಮೆಯ ಸೇನೆಯ ಮೇಲೆ ದಾಳಿ ನಡೆಸುತ್ತಿದ್ದಾರೆ.

2016ರಲ್ಲೂ ಇದೇ ರೀತಿಯ ದಾಳಿ ನಡೆದಿತ್ತು. ಈಗ ಮತ್ತೆ ನಡೆದಿದೆ. ಇದಕ್ಕೆ ಭಾರತದ ಒಳಗಿರುವ ದೇಶದ್ರೋಹಿಗಳ ಕುಮ್ಮಕ್ಕು ಇದೆ. ಇದಕ್ಕೆ ಸೇನೆಯಿಂದಲೂ ಪ್ರತೀಕಾರವಾಗಲೇಬೇಕು. ಉಗ್ರರ ಪರ ನಿಲ್ಲುವವರನ್ನು ಮೊದಲು ಉಡಾಯಿಸಿ ಬಿಡಬೇಕು. ಯಾಕಂದ್ರೆ ದೇಶದ ಒಳಗೆ ಇದ್ದುಕೊಂಡು ದೇಶದ ಭದ್ರತೆಗೆ ಧಕ್ಕೆ ತರುವವರು ತುಂಬಾ ಡೇಂಜರಸ್.

– Nationalist Mahi

 •  
  3
  Shares
 • 3
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com