Connect with us
Loading...
Loading...

ಪ್ರಚಲಿತ

ಭರತಖಂಡವನ್ನ ವಿಶ್ವಗುರು ಮಾಡುವ ಕನಸು ಹೊತ್ತು ತಂದ ಕೇಸರಿ ವೀರ!!

Published

on

 • 47
 •  
 •  
 •  
 •  
 •  
 •  
 •  
  47
  Shares

ನರೇಂದ್ರ ಮೋದಿಯವರು ಭಾರತವನ್ನು ಆಳಲು ಬಂದವರಲ್ಲ. ಬದಲಿಗೆ ಭಾರತದ ಸೇವೆ ಮಾಡಲು ಬಂದವರು. ಹೀಗಾಗಿಯೇ ಪ್ರಧಾನಿ ಗದ್ದುಗೆಗೆ ಏರಿದ ತಕ್ಷ ತನ್ನನ್ನು ತಾನು ಪ್ರಧಾನ ಸೇವಕ ಎಂದು ಹೇಳಿಕೊಂಡರು. ನಿಜಕ್ಕೂ ಮೋದಿಯವರು ಪ್ರಧಾನ ಸೇವಕರೇ. ಸರಿಯಾಗಿ ನಿದ್ದೆ ಮಾಡದೇ, ದಿನಕ್ಕೆ 16 ಗಂಟೆಗಳು ಕೆಲಸ ಮಾಡುತ್ತಾರೆ. ಯಾರಿಗಾಗಿ? ಏತಕ್ಕಾಗಿ? ಒಂದು ಬಾರಿ ನಿಮ್ಮಲ್ಲೇ ಯೋಚನೆ ಮಾಡಿ.

ಆತನಿಗೆ ಅಳಿಯನೂ ಇಲ್ಲ, ಮಗನೂ ಇಲ್ಲ. ಹೀಗಾಗಿ ಆತನಿಗೆ ಯಾರಗೋಸ್ಕರವೂ ಕೂಡಿಡುವ ಪ್ರಮೇಯವೇ ಬರುವುದಿಲ್ಲ. ಆತ ಸರಿಯಾಗಿ ನಿದ್ದೆಯನ್ನ ಮಾಡದೇ ದಿನಕ್ಕೆ 18 ಗಂಟೆ ಕೆಲಸ ಮಾಡುವುದು ಯಾರಿಗಾಗಿ ಹೇಳಿ? ಆತನಿಗೆ ಭಾರತವನ್ನು ಅತೀ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಬೇಕೆಂಬ ದೊಡ್ಡ ಕನಸಿದೆ. ಆತನಿಗೆ ಭಾರತವನ್ನು ವಿಶ್ವಗುರುವಾಗಿಸುವ ಕನಸಿದೆ. ಹೀಗಾಗಿಯೇ ಅತ ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಲೇ ಇರುತ್ತಾನೆ.

ಆತನಿಗೆ ರಾಜಕೀಯ ದುರಾಸೆಯಾಗಲಿ, ಹಪಹಪಿಯಾಗಲಿ, ಅಧಿಕಾರದ ಆಸೆಯಾಗಲಿ ಯಾವುದೂ ಇಲ್ಲ. ಆತನ ಮುಂದಿರುವುದು ಭಾರತ ಮಾತ್ರ. ಅದನ್ನು ಅಭಿವೃದ್ಧಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಕನಸು ಮಾತ್ರ. ಆತನಿಗೆಚರಾಜಕೀಯ ದಾಹವಾಗಲಿ, ದುರಾಸೆಯಾಗಲಿ ಇಲ್ಲ ಅನ್ನುವುದಕ್ಕೆ ಕೆಲ ಉದಾಹರಣೆಗಳನ್ನು ಕೊಡುತ್ತೇನೆ.

ಆತನಿಗೆ ನಿಜವಾಗಿಯೂ ರಾಜಕೀಯ ದುರಾಸೆ ಇದ್ದಿದ್ದರೆ, ನೋಟ್ ಬ್ಯಾನ್ ನಂತಹ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ನೋಟ್ ಬ್ಯಾನ್ ಆದಾಗ ವಿರೋಧಿಗಳ ತಮ್ಮಿಂದ ಎಷ್ಟಾಗುತ್ತೋ ಅಷ್ಟು ಅಪಪ್ರಚಾರ ಮಾಡಿದರು. ಇದರ ಬಗ್ಗೆ ಮೋದಿಯವರು ತಲೆ ಕೆಡಿಸಿಕೊಳ್ಳಲಿಲ್ಲ. ಓಟುಗಳನ್ನು ಕಳೆದುಕೊಳ್ಳುತ್ತೇನೆಂದು ಭಯವೂ ಪಡಲಿಲ್ಲ. ಯಾಕೆ ಗೊತ್ತಾ? ಆತನಿಗೆ ರಾಜಕೀಯ ದುರಾಸೆ ಇಲ್ಲ. ಬದಲಿಗೆ ರಾಷ್ಟ್ರವನ್ನು ಕಟ್ಟುವ ಕನಸಿದೆ. ಹೀಗಾಗಿಯೇ ಆತ ಓಟಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಇನ್ನೊಂದು ಉದಾಹರಣೆ ಅಂದ್ರೆ GST ಜಾರಿ. ಇದರ ಬಗ್ಗೆ ಬಹತೇಕರಿಗೆ ಜ್ಞಾನವೇ ಇಲ್ಲ. ಭಾರತೀಯರನ್ನು ಹಿಂದೆ ಬಂದ ಸರ್ಕಾರ ಹೇಗೆ ಮಾಡಿದೆ ಅಂದ್ರೆ, ಬಿತ್ತಿದ ತಕ್ಷಣವೇ ಫಲ ಕೊಡಬೇಕು ಎನ್ನುವ ಮನಸ್ಥಿತಿಯನ್ನು ಉಂಟು ಮಾಡಿದ್ದಾರೆ. ಹೀಗೆ ಮಾಡಿದ್ದರ ಪರಿಣಾಮವೇ GST ಜಾರಿಗೆ ಆದ ತಕ್ಷಣವೇ ಅದರ ಫಲಿತಾಂಶ ಕೇಳಲು ಶುರು ಮಾಡಿಬಿಟ್ಟರು. GST ಅಂದ್ರೆ ಅದು ಜಾರಿಯಾದ ತಕ್ಷಣವೇ ಫಲಿತಾಂಶ ಕೊಡುವ ಯೋಜನೆಯಲ್ಲ. ಅದಕ್ಕೆ ಸುಮಾರು ವರ್ಷಗಳು ಬೇಕು. ಭಾರತೀಯರು ಕಾಯೋದಕ್ಕೆ ತಯಾರಿದ್ದಾರೆ ಬಿಡಿ. ಯಾಕಂದ್ರೆ ಸುಮಾರು ವರ್ಷಗಳು ಕಾಲ ದಾಸ್ಯದ ನೆರಳಿನಲ್ಲಿ ಬದುಕಿದ್ದಾರೆ. ಈಗ ಒಬ್ಬ ವ್ಯಕ್ತಿ ರಾಷ್ಟ್ರವನ್ನು ಕಟ್ಟಲು ಬಂದಿದ್ದಾರೆಂದರೆ, ಭಾರತೀಯರು ಕಾಯಲು ತಯಾರಿದ್ದಾರೆ ಅಂತಲೇ ಅರ್ಥ.

 •  
  47
  Shares
 • 47
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com