Connect with us
Loading...
Loading...

ಪ್ರಚಲಿತ

ಭರ್ಜರಿ ಬೇಟೆ: ಭಾರತೀಯ ಸೇನಾ ದಿವಸ್ ದಂದೆ ಭರ್ಜರಿ ಬೇಟೆಯಾಡಿದ ಭಾರತೀಯ ಸೇನೆ!!!

Published

on

 • 1.9K
 •  
 •  
 •  
 •  
 •  
 •  
 •  
  1.9K
  Shares

ಭಾರತೀಯ ಸೇನಾಪಡೆಯ ದಿನವೇ ಭಯೋತ್ಪಾದಕರನ್ನು 72 ಕನ್ಯೆಯರತ್ತ ಕಳುಹಿಸಿದ ಹೆಮ್ಮೆಯ ಭಾರತೀಯ ಸೇನೆ.

ಹೌದು ಇಂದು ಭಾರತೀಯ ಸೇನಾಪಡೆಯ ರಾಷ್ಟ್ರೀಯ ಸೇನಾ ದಿವಸ್. ತನ್ನದೆಲ್ಲ ಸ್ವಾರ್ಥವನ್ನು ಬಿಟ್ಟು ದೇಶ ಮೊದಲೆಂದು ದೇಶ ಕಾಯುವ ಸೈನಿಕನಿಗೆ ಸಲಾಮ್. ಸೈನಿಕನಿಗೆ ಯಾವುದೇ ಸ್ವಾರ್ಥವಿರಲ್ಲ. ಆತ ತನ್ನ ಮತೃಭೂಮಿಗಾಗಿ ಬಡಿದಾಡುತ್ತಾನೆ. ಬಡಿದಾಡುತ್ತಲೇ ಇರುತ್ತಾನೆ. ತನ್ನ ಪ್ರಾಣ ಹೋದರೂ ಸರಿ ಮಾತೃಭೂಮಿಯ ಒಂದಿಂಚು ಜಾಗವನ್ನೂ ಬಿಟ್ಟು ಕೊಡುವುದಿಲ್ಲವೆಂದು ಸಂಕಲ್ಪ ಮಾಡಿಯೇ ದೇಶವನ್ನು ಕಾಯುತ್ತಿರುತ್ತಾನೆ. ಆ ಸಂಕಲ್ಪಕ್ಕೆ ಕಟಿಬದ್ಧನಾಗಿ ಪ್ರಾಣ ತ್ಯಾಗ ಮಾಡುತ್ತಾನೆ ಹೊರತು, ತಾಯಿನಾಡಿನ ಒಂದಿಂಚು ಜಾಗವನ್ನು ಬಿಟ್ಟುಕೊಡುವುದಿಲ್ಲ. ಅಂತಹ ಎಲ್ಲ ಸೈನಿಕರಗೂ ದೊಡ್ಡ ಸಲಾಮ್.

ಇಂದು ಭಾರತೀಯ ಸೇನಾಪಡೆಯ ರಾಷ್ಟ್ರೀಯ ಸೇನಾ ದಿವಸ್.
ಈ ದಿನದಂದೇ ಭಾರತೀಯ ಸೇನೆ ಭರ್ಜರಿ ಬೇಟೆಯಾಡಿದೆ. ಸೇನೆಯ ಜೊತೆ ಕಿರಿಕ್ ಮಾಡಲು ಬಂದ ಭಯೋತ್ಪಾದಕರನ್ನು ನಮ್ಮ ಹೆಮ್ಮೆಯ ಭಾರತೀಯ ಸೇನೆ ನೇರವಾಗಿ 72 ಕನ್ಯೆಯರತ್ತ ಅಟ್ಟಿದ್ದಾರೆ. ಇವತ್ತು ನಸುಕಿನ ಜಾವದಲ್ಲಿ, ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರರು ಜಮ್ಮು ಕಾಶ್ಮೀರದ ಮೆಂಧರ್ ಸೆಕ್ಟರ್ ನ ಕೋಟ್ಲ ಪ್ರದೇಶದಲ್ಲಿ ಭಾರತೀಯ ಸೇನೆಯ ಮೇಲೆ ಶೆಲ್ ದಾಳಿ ನಡೆಸೋ ಯೋಜನೆಯನ್ನು ಹಾಕಿದ್ದರು. ಆ ಯೋಜನೆಯಂತೆ ಉಗ್ರರೆಲ್ಲಾ ತಯಾರಾಗಿಯೇ ನಿಂತಿದ್ದರು.

ತಕ್ಷಣವೇ ದಾಳಿಯ ಮುನ್ಸೂಚನೆ ಸಿಕ್ಕ ಭಾರತೀಯ ಸೇನಾಪಡೆ ಪಾಕ್ ಉಗ್ರರನ್ನ ಅಟ್ಟಾಡಿಸಿ ಬೀದಿ ನಾಯಿಗಳಂತೆ ಓಡಾಡಿಸಿ ಹೊಡೆದುರುಳಿಸಿದ್ದರ ಪರಿಣಾಮ 7 ಜನ ಪಾಕ್ ಬೆಂಬಲಿತ ಭಯೋತ್ಪಾದಕರು ತಮ್ಮ ಜಿಹಾದ್ ಗಾಗಿ ಜನ್ನತ್ ಸೇರಿದ್ದಾರೆ.

ಸತ್ತ ಏಳೂ ಜನ ಭಯೋತ್ಪಾದಕರು ಜೈಷ್ ಎ ಮೊಹಮ್ಮದ್(JeM) ಉಗ್ರಗಾಮಿ ಸಂಘಟನೆಯವರೆಂದು ಮಾಹಿತಿ ತಿಳಿದು ಬಂದಿದೆ.

ಮುಂಚೆ ಭಾರತೀಯ ಸೇನೆಗೆ ಒಂದು ಗುಂಡು ಶತ್ರುಗಳತ್ತ ಹಾರಿಸಬೇಕಾದರೂ ಕೇಂದ್ರ ಸರ್ಕಾರದ ಪರ್ಮಿಷನ್ ಕೇಳಿ ಸುಸ್ತಾಗಿ ಉಗ್ರರ ಗುಂಡಿಗೆ ಎದೆಯೊಡ್ಡುವ ಪರಿಸ್ಥಿತಿಯಿತ್ತು ಆದರೆ ಮೋದಿ ಸರ್ಕಾರ ಬಂದ ನಂತರ ಸೇನೆಗೆ ಆನೆ ಬಲ ಬಂದಂತಾಗಿದ್ದು ಒಂದಕ್ಕೆ ಹತ್ತು ಉಗ್ರರ ಬಲಿ ತೆಗೆದುಕೊಳ್ಳಲು ಸೇನೆ ತಯಾರಾಗಿ ನಿಂತಿದೆ. ಭಾರತೀಯ ಸೇನೆ ಕಳೆದ ಒಂದು ವರ್ಷದಲ್ಲಿ ನಡೆಸಿದ ಕಾರ್ಯಾಚರಣೆಯ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು ಖುಷಿಯೂ ಆಗಬಹುದು.

ಹೌದು ಕಳೆದ ಒಂದೇ ವರ್ಷದಲ್ಲಿ ಭಾರತೀಯ ಯೋಧರು ಬರೋಬ್ಬರಿ ಎರಡು ನೂರಕ್ಕೂ ಹೆಚ್ಚು ಉಗ್ರರನ್ನ ಹೊಡೆದುರುಳಿಸಿದೆ. ಸದಾ ಗಡಿಯಲ್ಲಿ ತನ್ನ ನರಿ ಬುದ್ಧಿ ತೋರಿಸುತ್ತ ಲೈನ್ ಆಫ್ ಕಂಟ್ರೋಲ್ ಉಲ್ಲಂಘಿಸುವ ಪಾಪಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸರಿಯಾದ ಪ್ರತ್ಯುತ್ತರವನ್ನೇ ಕೊಡುತ್ತಿದೆ.

ಜನರಲ್ ಬಿಪಿನ್ ರಾವತ್ ಸೈನ್ಯದ ಜವಾಬ್ದಾರಿ ತೆಗೆದುಕೊಂಡರೋ, ಆಗಿನಿಂದ ಭಾರತೀಯ ಸೈನಿಕರಿಗೆ ಆನೆ ಬಲ ಬಂದಂತಾಗಿದ್ದು ಶತ್ರುಗಳನ್ನ ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ.

ಭಾರತೀಯ ಸೇನೆಯನ್ನ ಕೆಣಕಿದ್ದ ಪ್ರತಿಯೊಬ್ಬ ಉಗ್ರ ಕಮಾಂಡರ್ ಗಳನ್ನೂ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಕಳೆದ ಎರಡು ವಾರಗಳಲ್ಲಿಯೇ ಸರಿಸುಮಾರು 25 ಭಯೋತ್ಪಾದಕರ ಸಮೇತ ಪಾಕ್ ಸೈನಿಕರು ಭಾರತೀಯ ಸೈನಿಕರ ಬಂದೂಕಿನ ನಳಿಕೆಗೆ ಹೊಗೆ ಹಾಕಿಸಿಕೊಂಡಿದ್ದಾರೆ.

ಮೋದಿಜಿಯವರು ಪ್ರಧಾನಿಯಾದದ್ದು ಬರೀ ರಾಜಕೀಯವಲ್ಲ. ಅದು ದೇಶದ ಭದ್ರತೆಯ ಬದಲಾವಣೆ. ಹೌದು!! ನಿಜಕ್ಕೂ ಎಲ್ಲಾ ಘಟನೆಗಳನ್ನು ನೆನಪು ಮಾಡಿಕೊಳ್ಳಿ ಆಗ ಅರ್ಥವಾಗುತ್ತೆ.


ನಾಲ್ಕಾರು ವರ್ಷಗಳ ಹಿಂದೆ ಕಾಲವು ಬೇರೆಯೇ ಆಗಿತ್ತು. ಆದರೆ ಮೂರು ವರ್ಷಗಳಿಂದ ಪರಿವರ್ತನೆ ಆಗಿದೆ. ಮೂರು ವರ್ಷಗಳ ಹಿಂದೆ ದೆಹಲಿ ಗದ್ದುಗೆಗೆ ರಾಷ್ಟ್ರವಾದಿಯನ್ನು ಜಾಗೃತ ಭಾರತೀಯರು ಒಟ್ಟಾಗಿ ಕೂರಿಸಿದ್ದೇವೆ. ಇವಾಗ ನಾವು ಹೆದರುವ ಅಗತ್ಯವೇ ಇಲ್ಲ. ಮೂರು ವರ್ಷಗಳ ಅವಲೋಕನ ಮಾಡಿಕೊಳ್ಳಿ. ಈ ಮೂರು ವರ್ಷಗಳಲ್ಲಿ ದೇಶದ ಯಾವುದೇ ಮೂಲೆಗಳಲ್ಲಿ ಬಾಂಬ್ ಸ್ಪೋಟವಾಗಿಲ್ಲ. ಕಾಶ್ಮೀರವನ್ನು ಭಯೋತ್ಪಾದನೆಯ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಅಲ್ಲಿದ್ದ ಭಾರತೀಯರನ್ನು ಹಿಂಡಿ ಹಿಪ್ಪೆ ಮಾಡಿದ್ದರು. ಭಾರತದ ವಿರುದ್ಧ ಯುದ್ಧಕ್ಕೆ ತಯಾರಾಗಿದ್ದ ಜಿಹಾದಿಗಳನ್ನ ಕಳೆದ ಮೂರು ವರ್ಷಗಳಿಂದ ನಮ್ಮ ಸೈನಿಕರು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಾರೆ. ಕಾರಣವಿಷ್ಟೇ ದೆಹಲಿ ಗದ್ದುಗೆಯಲ್ಲಿ ರಾಷ್ಟ್ರವಾದಿಯ ಆಡಳಿತವಿದೆ. ಆ ಗದ್ದುಗೆಯ ಮೇಲೆ ರಾಷ್ಟ್ರವಾದಿ ಕೂರಲು ಕಾರಣ ಜಾಗೃತ ಭಾರತೀಯ.

ನೀವು ಇಟ್ಟಿಗೆಯಿಂದ ಹೊಡೆದರೆ, ಮರಳಿ ನಾವು ಕಲ್ಲಿನಿಂದ ಹೊಡೆಯುತ್ತೇವೆಂದು ಪಾಕಿಸ್ತಾನದ ವಿರುದ್ಧ ಲಾಲ್ ಬಹದ್ದೂರ್ ಶಾಸ್ತ್ರೀಯವರು ತೊಡೆ ತಟ್ಟಿದ್ದರು. ಈಗ ಮೋದೀಜಿಯವರು ಲಾಲ್ ಬಹದ್ದೂರ್ ಶಾಸ್ತ್ರೀಯವರ ರೀತಿಯಲ್ಲಿಯೇ ಪಾಕಿಸ್ತಾನಕ್ಕೆ, ಉಗ್ರರಿಗೆ ತಕ್ಕ ಪಾಠವನ್ನು ಕಲಿಸುತ್ತಿದ್ದಾರೆ. ಅವರಿಂದ ಒಂದು ಗುಂಡು ಹಾರಿದರೆ, ನಮ್ಮಿಂದ ಹತ್ತು ಗುಂಡು ಹಾರಲಿ ಎಂಬುದು ಮೋದಿಯವರ ಸಿದ್ಧಾಂತ. ಏನೇ ಆಗಲಿ ಮೋದಿಯವರು ಅಧಿಕಾರಕ್ಕೆ ಬಂದದ್ದು ಭದ್ರತಾ ದೃಷ್ಟಿಯಿಂದ ತುಂಬಾ ಒಳ್ಳೆಯದಾಗಿದೆ.

ಸೇನಾಪಡೆಯ ದಿವಸವೇ ಭಾರತೀಯ ಸೇನಾಪಡೆ ಪಾಕ್ ಉಗ್ರರನ್ನ ಅಟ್ಟಾಡಿಸಿ ಬೀದಿ ನಾಯಿಗಳಂತೆ ಓಡಾಡಿಸಿ 7 ಉಗ್ರರನ್ನು ಹೊಡೆದುರುಳಿಸಿದ್ದಾರೆ.ಭಾರತೀಯ ಸೇನೆಯ ಈ ಕಾರ್ಯವನ್ನ ದೇಶವೇ ಕೊಂಡಾಡುತ್ತಿದೆ. ಅದರಲ್ಲಿ ಬೇರೆ ಇಂದು ಸೇನಾ ದಿವಸ್ ಆದ್ದರಿಂದ ಇಂದಿನ ಕಾರ್ಯಾಚರಣೆ ಭಾರತೀಯ ಸೇನೆಗೆ ಕಿರೀಟಕ್ಕೆ ಮುಕುಟಪ್ರಾಯದಂತಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ ಬಿಡಿ.

 •  
  1.9K
  Shares
 • 1.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com