Connect with us
Loading...
Loading...

ಅಂಕಣ

ಭವ್ಯ ಭಾರತದ ಈ ವಿಷಯಗಳ ಬಗ್ಗೆ ನಿಮಗೆ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ!! ಏನು ಆ ಇಂಟರೆಸ್ಟಿಂಗ್ ವಿಷಯಗಳು?? ಭಾಗ 1

Published

on

  • 6
  •  
  •  
  •  
  •  
  •  
  •  
  •  
    6
    Shares

ಭಾರತ ಎಂದರೆ ಅದೊಂದು ಬರೀ ದೇಶವಲ್ಲ, ಭಾರತವನ್ನೋದು ಸಂಸ್ಕೃತಿಯ ತವರೂರು, ವಿಭಿನ್ನತೆಯಲ್ಲಿ ಏಕತೆ ಎತ್ತಿ ತೋರಿಸುವ ಮಹಾನ್ ತಪೋ ಭೂಮಿ.

ಸಂತರು ತಪಗೈದು ಪುಣ್ಯಭೂಮಿಯಾಗಿ ಪರಿವರ್ತಿಸಿದ ದೇವಲೋಕವೆಂದರೂ ತಪ್ಪಾಗಲಾರದೇನೋ!!

ಈ ಪುಣ್ಯಭೂಮಿಯ ಬಗ್ಗೆ ನಿಮಗೆ ಗೊತ್ತಿರದ ಕೆಲ ಇಂಟರೆಸ್ಟಿಂಗ್ ವಿಷ್ಯಗಳನ್ನ ನೋಡೋಣ ಬನ್ನಿ.

1. ನೀರಿನಲ್ಲಿ ತೇಲುವ ಪೋಸ್ಟ್ ಆಫೀಸ್

ಇಡೀ ಜಗತ್ತಿನಲ್ಲಿ ಅತಿ ದೊಡ್ಡ ಅಂಚೆ ಸಂಪರ್ಕ(postal network) ಇರೋದು ನಮ್ಮ ಭಾರತದಲ್ಲಿಯೇ. ಭಾರತದಲ್ಲಿ ಸರಿಸುಮಾರು 1, 55,015 ಪೋಸ್ಟ್ ಆಫೀಸ್ ಗಳಿವೆ.

ಸರಾಸರಿಯಾಗಿ ಒಂದು ಪೋಸ್ಟ್ ಆಫೀಸ್ ಬರೋಬ್ಬರಿ 7,175 ಜನರಿಗೆ ಪತ್ರ ವ್ಯವಹಾರಕ್ಕೆ, ಸಂದೇಶ ರವಾನೆ ಮಾಡಲು ಅನುಕೂಲಕರವಾಗಿ ನಿಂತಿದೆ.

ಭಾರತದಲ್ಲಿ ಇಷ್ಟೊಂದು ಪೋಸ್ಟ್ ಆಫೀಸ್ ಗಳಲ್ಲಿ ಗಮನಸೆಳೆಯುವ ಒಂದು ಪೋಸ್ಟ್ ಆಫೀಸ್ ಕಾಶ್ಮೀರದಲ್ಲಿದೆ.

ಈ ಪೋಸ್ಟ್ ಆಫೀಸಿನ ವಿಶೇಷತೆಯೆಂದರೆ ಇದು ಸರೋವರದಲ್ಲಿ ತೇಲುವ ಪೋಸ್ಟ್ ಆಫೀಸ್ ಆಗಿದೆ. ಇದು ಇರೋದು ಕಾಶ್ಮೀರದ ಶ್ರೀನಗರ ಜಿಲ್ಲೆಯ ದಾಲ್ ಸರೋವರದಲ್ಲಿ. ಇದನ್ನ 2011 ರ ಆಗಷ್ಟ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು.

2. ಆಕಾಶದಿಂದ ನೋಡಿದರೂ ಕಾಣುವ ಬೃಹತ್ ಕುಂಭಮೇಳದ ಅದ್ಭುತ ದೃಶ್ಯ

ಇಲ್ಲೀವರೆಗೂ ಭಾರತ ದಲ್ಲಿ ನಡೆದ ಕುಂಭಮೇಳಗಳಲ್ಲಿ 2011 ರಲ್ಲಿ ನಡೆದ ಕುಂಭಮೇಳ ಅತಿ ಹೆಚ್ಚು ಶ್ರದ್ಧಾಳುಗಳು ಸೇರಿದ್ದ ಕುಂಭಮೇಳವಾಗಿದೆ, ಇದರಲ್ಲಿ ಸರಿಸುಮಾರು 75 ಮಿಲಿಯನ್ ಅಂದರೆ ಏಳೂವರೆ ಕೋಟಿ ಜನ ಭಾಗವಹಿಸಿದ್ದರು.

ಇಷ್ಟು ಜನ ಸೇರಿದ್ದ ಕುಂಭಮೇಳದ ಅಮೋಘ ದೃಶ್ಯವು ಅಂತರಿಕ್ಷದಿಂದ ನೋಡಬಹುದಾಗಿತ್ತಂತೆ.

3. ಜಗತ್ತಿನ ಅತಿ ಮಳೆ ಬೀಳುವ ಪ್ರದೇಶವಿರೋದು ಭಾರತದಲ್ಲಿ

ಮೇಘಾಲಯದ ಖಾಸಿ ಪರ್ವತ ಶ್ರೇಣಿಯಲ್ಲಿನ ಮೌಸಿನ್ರಾಮ್ ಎಂಬ ಪುಟ್ಟ ಹಳ್ಳಿಯಲ್ಲಿ ಇಡೀ ಜಗತ್ತಿನಲ್ಲಿ ಬೀಳದಿರೋಷ್ಟು ಮಳೆ ಇಲ್ಲಾಗುತ್ತೆ.

ಮೇಘಾಲಯದ ಚಿರಾಪುಂಜಿ ಕೂಡ ಇದಕ್ಕೆ ಹೊರತಾಗಿಲ್ಲ,
1861 ರಲ್ಲಿ ಇಲ್ಲಿ ವಿಶ್ವದಾಖಲೆಯ ಮಳೆಯಾಗಿದ್ದರ ಪುರಾವೆಗಳಿವೆ.

4. ಬಾಂದ್ರಾ ವರ್ಲಿಯ ಸ್ಟೀಲ್ ಸೀ ಲಿಂಕ್

ಪೂರ್ತಿ ಸ್ಟೀಲ್‌ನ್ನ ಬಳಸಿ 2,57,00,000 ಗಂಟೆಗಳ ಸತತ ಕೆಲಸದ ಮೂಲಕ ಈ ಸೇತುವೆಯನ್ನು ನಿರ್ಮಿಸಲಾಗಿದೆ, ಇದರ ತೂಕ 50,000 ಆಫ್ರಿಕನ್ ಆನೆಗಳ ತೂಕದಷ್ಟಿದೆ ಎಂಬ ಅಂದಾಜಿದೆ. ಇದೊಂದು ಇಂಜಿನಿಯರಿಂಗ್ ಹಾಗು ಆರ್ಕಿಟೆಕ್ಚರ್ ವಿಭಾಗದ ಅತ್ಯುತ್ತಮ ನಿದರ್ಶನವಾಗಿದೆ.

5. ಪ್ರಪಂಚದ ಅತಿದೊಡ್ಡ ಕ್ರಿಕೆಟ್ ಮೈದಾನ ಭಾರತದಲ್ಲೇ ಇರೋದು

ಹಿಮಾಚಲ ಪ್ರದೇಶದ ಚೇಲ್ ಪ್ರದೇಶದಲ್ಲಿರುವ ಚೇಲ್ ಕ್ರಿಕೆಟ್ ಗ್ರೌಂಡ್ ಪ್ರಪಂಚದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದ್ದು ಇದು 2,444 ಮೀಟರ್ ಎತ್ತರದ ಪ್ರದೇಶದಲ್ಲಿ 1893 ರಲ್ಲಿ ನಿರ್ಮಿಸಲಾಗಿದೆ.

ಸದ್ಯ ಈ ಕ್ರಕೆಟ್ ಮೈದಾನ
ಚೇಲ್ ಮಿಲಟರಿ ಶಾಲೆಯ ಅಧಿನದಲ್ಲಿದೆ

6. ಶ್ಯಾಂಪು ಅನ್ನೋದು ಭಾರತದ ಅನ್ವೇಷಣೆ

ಇಂದು ನಾವು ನೀವು ಬಳಸುವ ಶ್ಯಾಂಪು ಭಾರತದ ಅನ್ವೇಷಣೆಯಾಗಿದ್ದು ಇದು ಕಮರ್ಷಿಯಲ್ ಲಿಕ್ವಿಡ್ ಒಳಗೊಂಡಿರದೆ ಗಿಡಮೂಲಿಕೆಗಳಿಂದ ತಯಾರಿಸಲ್ಪಡುವ ಲಿಕ್ವಿಡ್ ಆಗಿತ್ತು.

ಶಾಂಪೂ ಅನ್ನೋ ಶಬ್ದ ಸಂಸ್ಕೃತ ಶಬ್ದವಾದ ‘ಚಂಪೂ’ ಎಂಬ ಪದದಿಂದ ಎರವಲು ಪಡೆಯಲಾಗಿದೆ. ಚಂಪೂ ಪದದ ಅರ್ಥ ಮಸಾಜ್ ಎಂಬುದಾಗಿದೆ

7. ಇಲ್ಲೀವರೆಗೂ ನಡೆದ ಕಬಡ್ಡಿ ವರ್ಲ್ಡ್ ಕಪ್ ಗಳನ್ನ ಭಾರತವೇ ಗೆದ್ದಿದೆ.

ಇಲ್ಲೀವರೆಗು ನಡೆದ 5 ವರ್ಲ್ಡ್ ಕಪ್ ಗಳಲ್ಲಿ ಭಾರತವೇ ಎಲ್ಲಾ ಕಪ್ ಗಳನ್ನೂ ತನ್ನ ಮುಡಿಗೇರಿಸಿಕೊಂಡಿದೆ.

ಭಾರತದಲ್ಲಿ ಮಹಿಳಾ ಕಬಡ್ಡಿ ಟೀಂ ಕೂಡ ಇದ್ದು ಇದೂ ಕೂಡ ಎಲ್ಲಾ ಮಹಿಳಾ ಕಬಡ್ಡಿ ವರ್ಲ್ಡ್ ಕಪ್ ಗಳನ್ನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.

ಭಾರತದ ಬಗೆಗಿನ ಅ ಮಾಹಿತಿಗಳನ್ನ ಹೀಗೇ ನಮ್ಮ ಅಂಕಣಗಳ ಮೂಲಕ ನಿರಂತರವಾಗಿ ನಿಮಗೆ ನೀಡುತ್ತಿರುತ್ತೇವೆ.

ಮುಂದುವರೆಯುವುದು….

  •  
    6
    Shares
  • 6
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com