Connect with us
Loading...
Loading...

ಪ್ರಚಲಿತ

ಭಾರತಕ್ಕೆ ಸಿಕ್ಕಿತು ಫಾಸ್ಟೆಸ್ಟ್ ಸೂಪರ್ ಕಂಪ್ಯೂಟರ್!!! ಏನಿದರ ವಿಶೇಷತೆ?

Published

on

  • 1
  •  
  •  
  •  
  •  
  •  
  •  
  •  
    1
    Share

ಭಾರತಕ್ಕೆ ಸಿಕ್ಕಿತು ಅತಿ ವೇಗದ ಸೂಪರ್ ಕಂಪ್ಯೂಟರ್, ಈ ಸೂಪರ್ ಕಂಪ್ಯೂಟರ್ “ಮಲ್ಟಿ ಪೆಟಾಫ್ಲಾಪ್ಸ್” ಫೀಚರ್ ನಿಂದ ಕೂಡಿದ್ದು ನೆನ್ನೆ ಪುಣೆಯಲ್ಲಿ ಅಧಿಕೃತವಾಗಿ ದೇಶಕ್ಕೆ ಸಮರ್ಪಣೆಯಾಯಿತು.

ಕೇಂದ್ರದ ವಿಜ್ಞಾನ ಮತ್ತು ತಾಂತ್ರಿಕ ಸಚಿವ ಹರ್ಷವರ್ಧನರವರು ಈ ಪವರಫುಲ್ ಸೂಪರ್ ಕಂಪ್ಯೂಟರ್ರನ್ನ ಪುಣೆಯಲ್ಲಿ ನೆನ್ನೆ ಚಾಲನೆ ಕೊಟ್ಟರು.

ಏನಿದರ ವಿಶೇಷತೆ?

ಪೆಟಾಫ್ಲಾಪ್ಸ್ ಎಂಬುದು ಸೂಪರ್ ಕಂಪ್ಯೂಟರ್ರಿನ ವೇಗವನ್ನ ಅಳೆಯುವ ವಿಧಾನವಾಗಿದ್ದು, ಫ್ಲಾಪ್ಸ್ ಎಂದರೆ ಪ್ರತಿ ಸೆಕೆಂಡಿಗೆ ಪ್ರೊಸೆಸರ್ ಎಷ್ಟು ಫ್ಲೋಟಿಂಗ್ ಪಾಯಿಂಟನ್ನ ಪ್ರೊಸೆಸ್ ಮಾಡುತ್ತೆ ಎಂಬುದನ್ನ ನಿಖರವಾಗಿ ತಿಳಿಯುವ ಸಾಧನವಾಗಿದೆ.

ಈ ಸೂಪರ್ ಕಂಪ್ಯೂಟರ್ರಿಗೆ ‘ಪ್ರತ್ಯುಷ್’ ಎಂಬ ಹೆಸರನ್ನ ಕೊಡಲಾಗಿದ್ದು ಇದರರ್ಥ ಸೂರ್ಯ ಎಂಬುದಾಗಿದೆ.

ಈ ಸೂಪರ್ ಕಂಪ್ಯೂಟರ್ ಅತಿ ವೇಗದ ಪ್ರೊಸೆಸಿಂಗ್ ಮಾಡುವ ಶಕ್ತಿ ಹೊಂದಿದ್ದು ಇದನ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟರಾಲಜಿ, ಪುಣೆಯಲ್ಲಿ ಸದ್ಯ ಇನ್ಸ್ಟಾಲ್ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲ ಹೈ ಪ್ರೊಸೆಸಿಂಗ್ ಸಿಸ್ಟಮ್ ಗಳಲ್ಲಿ ಅಳವಡಿಸಲಾಗುವುದು ಅಂತ ಇದನ್ನ ಅಭಿವೃದ್ಧಿಗೊಳಿಸಿದ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಸೂಪರ್ ಕಂಪ್ಯೂಟರ್ ನ ಸಹಾಯದಿಂದ ಹವಾಮಾನ ಮುನ್ಸೂಚನೆಗೋಸ್ಕರ ಉಪಯೋಗಿಲು ಸಹಕಾರಿಯಾಗುತ್ತದೆ.

ಸದ್ಯ ಐಐಟಿಎಮ್ ನಲ್ಲಿ ಕಾರ್ಯನಿರ್ವಹಿಸುವ ಈ ಸೂಪರ್ ಕಂಪ್ಯೂಟರ್ ಹವಾಮಾನ ಮುನ್ಸೂಚನೆ, ಮಳೆಯ ಮಾಹಿತಿ, ಮಾನಸೂನ್ ಮುನ್ಸೂಚನೆ, ಬೆಳಕಿನ ವೇಗ, ಹೈ ಟೈಡ್ಸ್ ಮಾಹಿತಿ, ಸುನಾಮಿ, ಅತಿವೃಷ್ಟಿ ಅನಾವೃಷ್ಟಿಯ ಮುನ್ಸೂಚನೆ ನೀಡಲು ಈ ಸೂಪರ್ ಕಂಪ್ಯೂಟರ್ ಸಹಕಾರಿಯಾಗಲಿದೆ.

ಇದನ್ನ ಉದ್ಘಾಟಿಸಿದ ನಂತರ ಮಾತನಾಡಿದ ಕೇಂದ್ರ ಸಚಿವ ಹರ್ಷವರ್ಧನ, “ಈ ಸೂಪರ್ ಕಂಪ್ಯೂಟರ್ ಭಾರತದ ಅತಿ ವೇಗದ ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್(HPC) ಆಗಲಿದೆ” ಅನ್ನೋದನ್ನ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಕೇವಲ ಮೂಲಭೂತ ಸೌಕರ್ಯಗಳನ್ನ ನೀಡುವುದರಿಂದ ಮಾತ್ರವಲ್ಲ ಬದಲಾಗಿ ತಂತ್ರಜ್ಞಾನ, ವಿಜ್ಞಾನ, ಪ್ರವಾಸೋದ್ಯಮ, ಆರೋಗ್ಯ ಸೇವೆಗಳ ಸಮೇತ ಇನ್ನಿತರ ಸೌಕರ್ಯಗಳನ್ನ ನೀಡುವುದರಿಂದ ಸಾಧ್ಯ.

ಈಗ ಈ ಕಾರ್ಯವನ್ನ ಪ್ರಸ್ತುತ ಕೇಂದ್ರ ಸರ್ಕಾರ ಮಾಡುತ್ತಿದ್ದು ವಿಜ್ಞಾನಿಗಳಿಂದ ಪ್ರಶಂಸೆಯ ಸುರಿಮಳೆ ಸುರಿದಿದೆ.

ಕೇಂದ್ರದಲ್ಲಿ ಮೋದಿ ಸರ್ಕಾರ ಬಂದನಂತರ ಸೈನ್ಯಕ್ಕೆ ವಿಶೇಷಾಧಿಕಾರ, ವಿಜ್ಞಾನಿಗಳಿಗೆ ಅಗತ್ಯ ನೆರವು, ವಿದೇಶಾಂಗ ಸಚಿವಾಲಯಕ್ಕೆ ಅಗತ್ಯವಾದ ಸಂಪೂರ್ಣ ಬೆಂಬಲ, ರೈತರಿಗೆ ಬೇಕಾದ ಸವಲತ್ತುಗಳು, ರಸಗೊಬ್ಬರದಲ್ಲಿ ನೀಮ್ ಕೋಟಿಂಗ್ ನಂತಹ ವಿಶೇಷ ಬದಲಾವಣೆಗಳು, ಬೇಟಿ ಬಚಾವೊ ಬೇಟಿ ಪಢಾವೋ, ಸ್ವಚ್ಛ ಭಾರತ್ ಹೀಗೆ ಹತ್ತು ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು ದೇಶ ಸರ್ವಾಂಗೀಣ ಅಭಿವೃದ್ದಿ ಗೆ ಪೂರಕವಾಗುವ ಎಲ್ಲ ಕಾರ್ಯಗಳನ್ನೂ ಸರ್ಕಾರ ಮಾಡಲು ಮುಂದಾಗಿದೆ.

ಭಾರತ ವಿಶ್ವಗುರುವಾಗಬೇಕಾದರೆ ಈ ಎಲ್ಲಾ ಕಾರ್ಯಗಳು ಇನ್ನೂ ತೀವ್ರಗತಿಯಲ್ಲಿ ಸಾಗಬೇಕಾದ ಅವಶ್ಯಕತೆಯಿದೆ.

  •  
    1
    Share
  • 1
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com