Connect with us
Loading...
Loading...

ಪ್ರಚಲಿತ

ಭಾರತದಲ್ಲಿ ಬೆಂಜಮಿನ್ ಗೆ ನಾಟಿದ ಆ ಎರಡು ವಿಶೇಷ ಘಟನೆಗಳ್ಯಾವುವು ಗೊತ್ತಾ?

Published

on

 • 1.1K
 •  
 •  
 •  
 •  
 •  
 •  
 •  
  1.1K
  Shares

ಭಾರತವನ್ನು ತನ್ನ ತಾಯಿ ಭೂಮಿಯೆಂದು ಪ್ರೀತಿಯಿಂದ ಭಾರತಕ್ಕೆ ಬಂದಿದ್ದ ಇಸ್ರೇಲಿನ ಪ್ರಧಾನಿ 6 ದಿನಗಳ ಭಾರತದ ಪ್ರವಾಸವನ್ನು ಮುಗಿಸಿ ಮರಳಿ ತಮ್ಮ ಧರ್ಮಭೂಮಿಗೆ ಹೋಗಿದ್ದಾರೆ. ಇದರರ್ಥ ಇಸ್ರೇಲಿಗೆ ಮರಳಿದ್ದಾರೆ. ಅವರೇ ಭಾರತವನ್ನು ತನ್ನ ಮಾತೃಭೂಮಿ, ಇಸ್ರೇಲ್ ನ್ನು ಧರ್ಮಭೂಮಿ ಎಂದಿದ್ದರು.

ನಮ್ಮವರೇ ಆದ ಕೆಲವರು ಭಾರತವನ್ನು, ರಾಷ್ಟ್ರಗೀತೆಯನ್ನು ಹೀಗೆ ಹಲವಾರು ರಾಷ್ಟ್ರದ ಕುರಿತವುಗಳನ್ನು ಒಪ್ಪಿಕೊಳ್ಳೋದಿಲ್ಲ ಅಂಥದ್ರಲ್ಲಿ ಇಸ್ರೇಲಿನ ಪ್ರಧಾನಿ ನಮ್ಮ ಭಾರತವನ್ನು ತನ್ನ ಮಾತೃಭೂಮಿ ಎನ್ನುತ್ತಾರೆ ಅಂದರೆ ಅವರಿಗೆ ಭಾರತದ ಮೇಲೆ ಅದೆಷ್ಟು ಪ್ರೀತಿ ಇರಬಹುದು.

ಜನವರಿ 14 ರಂದು ಭಾರತಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಆಗಮಿಸಿದಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತುಂಬಾ ಗೌರವ ಪ್ರೀತಿಯಿಂದ ಸ್ವಾಗತಿಸಿದ್ದರು. ಹಿಂದೆ ಮೋದಿಯವರು ಐತಿಹಾಸಿಕ ನಿರ್ಧಾರ ಮಾಡಿ, ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಸ್ರೇಲ್ ಗೆ ಭಾರತದ ಪ್ರಧಾನಿಗಳಾರು ಭೇಟಿ ಕೊಟ್ಟಿರಲಿಲ್ಲ.

ಆದರೆ ನರೇಂದ್ರ ಮೋದಿಯವರು ಐತಿಹಾಸಿಕ ಮುನ್ನುಡಿ ಬರೆದು ಬಿಟ್ಟಿದ್ದರು. ಮೋದಿಯವರು ಇಸ್ರೇಲ್ ಗೆ ಹೋದಾಗ ಇಸ್ರೇಲಿಗರು ತುಂಬಾ ಗೌರವದಿಂದಲೇ ಸ್ವಾಗತಿಸಿದ್ದರು.

ಇಸ್ರೇಲ್ ಪ್ರಧಾನಿ ಜನವರಿ 14 ರಿಂದ 6 ದಿನಗಳ ಭಾರತದ ಮುಗಿಸಿ ಹೋಗುವಾಗ ಭಾರತದ ಕುರಿತು ಮಾತನಾಡಿ ಹೋದರು. ಭಾರತದ ಭೇಟಿ ಚಾರಿತ್ತಿಕವಾದದ್ದು. ಮೋದಿಯವರ ಈ ಸತ್ಕಾರಕ್ಕೆ ನಾನು ಆಭಾರಿ ಎಂದು ಹೇಳಿ ತಮ್ಮ ದೇಶವಾದ ಇಸ್ರೇಲ್ ಗೆ ಮರಳಿದರು.

ಮೋದಿಯವರ ಸತ್ಕಾರಕ್ಕೆ ಸೋತ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರು ತಮ್ಮ ಸಚಿವ ಸಂಪುಟದಲ್ಲಿ ಮೋದಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಭಾರತದ ಪ್ರವಾಸದ ವೇಳೆ ಎರಡು ವಿಶೇಷ ಘಟನೆಗಳು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಮನಸ್ಸನ್ನು ತಟ್ಟಿವೆ.

ಆ ಎರಡು ವಿಶೇಷ ಘಟನೆಗಳು ಯಾವವು ಗೊತ್ತೆ?

ಮುಂಬೈ ದಾಳಿಯ ವೇಳೆ ತನ್ನ ತಂದೆ ತಾಯಿಯರನ್ನು ಕಳೆದುಕೊಂಡು ಬದುಕುಳಿದದ್ದ 11 ವರ್ಷದ ಬಾಲಕ ಮೋಸೆ ಎಂಬಾತನನ್ನು ಭೇಟಿಯಾಗಿದ್ದು ಮತ್ತು ಯಹೂದಿ ಸಮುದಾಯ ಭಾರತಕ್ಕೆ ನೀಡಿದ ಕೊಡುಗೆಗಳು. ಇವೆರಡು ವಿಶೇಷ ಘಟನೆಗಳು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಮನಸ್ಸನ್ನು ತಟ್ಟಿವೆ.

ಅಷ್ಟಕ್ಕೂ ಇಸ್ರೇಲಿಗೂ ಭಾರತ ಮತ್ತು ಇಸ್ರೇಲಿನ ಗಳೆತನ ಎಷ್ಟು ವರ್ಷಗಳದ್ದು ಗೊತ್ತಾ? ಭಾರತ ಮತ್ತು ಇಸ್ರೇಲಿಗೂ ಅನೇಕ ಹೋಲಿಕೆಗಳ ಸಾಮ್ಯತೆ ಇದೆ.

ಭಾರತ ಇಸ್ರೇಲ್‌ನ ಸಂಬಂಧ ಕೆಲ ತಿಂಗಳುಗಳದ್ದೊ , ಕೆಲ ವರ್ಷಗಳದ್ದೊ ಅಲ್ಲ ಅದು ಸಹಸ್ರಾರು ವರ್ಷಗಳ ಹಿಂದೆಯೆ ಬೆಸೆದ ಅನುಬಂಧ .

“ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಧು ಎನ್ನುವ೦ತೆ” ಇಸ್ರೇಲ್ ಭೌಗೋಳಿಕ ದ್ರಷ್ಟಿಯಲ್ಲಿ ಚಿಕ್ಕ ರಾಷ್ಟ್ರವಾದರು ಕೂಡ ಜಾಗತಿಕ ಮಟ್ಟದಲ್ಲಿ ತುಂಬಾ ಬಲಿಷ್ಠ

ಭಾರತವನ್ನು ಹೇಗೆ ರಕ್ತಪಿಪಾಸುಗಳಾದ ಪಾಪಿಸ್ತಾನ, ಬಾಂಗ್ಲಾದೇಶ, ಚೀನಾ ದೇಶಗಳು ಸುತ್ತುವರಿದಿದೆಯೋ ಹಾಗೆಯೇ ಇಸ್ರೇಲ್ ಎಂಬ ಪುಟ್ಟ ರಾಷ್ಟ್ರವನ್ನು ಸಿರಿಯಾ, ಇರಾಕ್ , ಸೌದಿ, ಪಾಲೇಸ್ತೆನ್, ಅರೇಬಿಯಾ, ಇಜಿಪ್ತ್, ಮುಸ್ಲಿಂ ರಾಷ್ಟ್ರಗಳು ಸುತ್ತುವರಿದಿವೆ .

ಭಾರತ ಹೇಗೆ ಮುಸ್ಲಿಂ ಭಯೋತ್ಪಾದನೆಗೆ ನಲುಗಿದೆಯೋ ಇಸ್ರೇಲ್ ಕೂಡ ಹಮಾಸ್, ISIS ಆದಿ ಭಯೋತ್ಪಾದಕ ಸಂಘಟನೆಗಳಿಂದ ನಲುಗಿದೆ.

ಕೇವಲ 85 ಲಕ್ಷದಷ್ಟು ಜನಸಂಖ್ಯೆಯ ರಾಷ್ಟ್ರ 17 ಕ್ಕೂ ಹೆಚ್ಚು ಬಾರಿ ಮುಸ್ಲಿಂ ರಾಷ್ಟ್ರಗಳಿಂದ ಆಕ್ರಮಣಕ್ಕೊಳಗಾದರು ಮುಸ್ಲಿಂ ರಾಷ್ಟ್ರಗಳು ಮುಟ್ಟಿ ನೋಡಿ ಕೊಳ್ಳುವಂತೆ ಪಾಠ ಕಲಿಸಿತು.

ದೇಶಪ್ರೇಮಕ್ಕೆ ಇಸ್ರೇಲಿಗರು ಹೆಸರುವಾಸಿ. ಎಂತದ್ದೆ ಪರಿಸ್ಥಿತಿಯಲ್ಲಿಯೂ ಕೂಡ ಎದೆಗುಂದದೆ ತಮ್ಮ ದೇಶದ ಒಳಿತಿಗಾಗಿ , ಶ್ರೇಯಸ್ಸಿಗಾಗಿ ದುಡಿಯುವಂತಹ ಪ್ರಬುದ್ಧ ಜನಾಂಗವನ್ನು ಇಸ್ರೇಲ್ ಹೊಂದಿದೆ .

ಇಸ್ರೇಲ್ ಸುತ್ತುವರಿದಿರುವ ಶತ್ರು ರಾಷ್ಟ್ರಗಳು ಒಮ್ಮೆ ಇಸ್ರೇಲ್ ಮೇಲೆ ದಾಳಿ ಮಾಡುವುದಾದರು 100 ಬಾರಿ ಯೋಚಿಸುತ್ತಾರೆ ಯಾಕೆಂದರೆ ಒಬ್ಬ ಇಸ್ರೇಲಿಗ ಸತ್ತರೆ 50 ಮುಂದಿ ಶತ್ರುಗಳು ಶವವಾಗಿರುತ್ತಾರೆ.

ಇಸ್ರೇಲ್ ನ ಪಕ್ಕದ ರಾಷ್ಟ್ರ ಸಿರಿಯಾ ಅಲ್ಲಿನ ISIS ಭಯೋತ್ಪಾದಕರು ಹೆಚ್ಚುಕಮ್ಮಿ ವಿಶ್ವದ ಎಲ್ಲ ರಾಷ್ಟ್ರದಲ್ಲೂ ರಕ್ತ ಹರಿಸಿದ್ದಾರೆ ಆದರೇ ಪಕ್ಕದ ಇಸ್ರೇಲ್ ನ ಕೂದಲನ್ನೂ ಅಲ್ಲಾಡಿಸಲು ಸಾಧ್ಯವಾಗಿಲ್ಲ.

ವಿಶ್ವದ ಏಕಮಾತ್ರ ಯಹೂದ್ಯ ರಾಷ್ಟ್ರವೆಂದರೆ ಅದು ಇಸ್ರೇಲ್. ತಮ್ಮ ಸಂಸ್ಕೃತಿಯ ಬಗ್ಗೆ ಸಮಾಜದ ಬಗ್ಗೆ ಅವರಿಗೆ ಅಪಾರ ಕಾಳಜಿ.

ಕಳೆದು ಹೋದ ತಮ್ಮ ಹೀಬ್ರೂ ಸಂಸ್ಕೃತಿಯನ್ನು ಹೀಬ್ರೂ ಭಾಷೆಯನ್ನು ಮರಳಿ ಪಡೆಯುವಲ್ಲಿ ಅವರು ಸಫಲರಾದರು.

ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಹೀಬ್ರೂ ಇವತ್ತು ಅಲ್ಲಿನ ರಾಷ್ಟ್ರಭಾಷೆಯಾಗಿದೆ.ಆದರೆ ಭಾರತೀಯರ ಪ್ರಾಚೀನ ಸಾಂಸ್ಕೃತಿಕ ಭಾಷೆ ಸಂಸ್ಕೃತ???

ವಿಶ್ವದ 4 ನೇ ಅತೀ ದೊಡ್ಡ ಹಾಗೂ ಬಲಿಷ್ಠ ವಾಯುಸೇನೆಯನ್ನು ಹೊಂದಿರುವ ಇಸ್ರೇಲ್ ತನ್ನ ಸೇನೆಯಲ್ಲಿ 50% ಮಹಿಳೆಯರನ್ನು ನೇಮಿಸಿಕೊಂಡಿದೆ.ಕ್ರಷಿ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಹೆಮ್ಮರವಾಗಿ ಬೆಳೆದಿದೆ.

ಸಮುದ್ರ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ವಿಶಿಷ್ಟ ತಂತ್ರಜ್ಞಾನವನ್ನ ಹೊಂದಿದೆ. ಬೆಂಜಿಮನ್ ಮೋದಿ ಇದನ್ನೇ ಊಡುಗರೆಯನ್ನಾಗಿಯೂ ನೀಡಿದ್ದಾರೆ.

ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬಲಿಷ್ಠವಾಗಿರುವ ಇಸ್ರೇಲ್ ಅನೇಕ ಬಾರಿ ಯುದ್ಧಗಳಲ್ಲಿ ಸಹಾಯವನ್ನು ಮಾಡಿದೆ.

2003 ರಲ್ಲಿ ಮೊದಲ ಬಾರಿಗೆ ಇಸ್ರೇಲ್ ಪ್ರಧಾನಿ ಭಾರತಕ್ಕೆ ಅಗಮಿಸಿದ್ದರು.ಅ೦ದಿನ ಭಾರತದ ಪ್ರಧಾನಿ ಅಟಲ್ ಜಿ ಮುಸ್ಲಿಂ ರ ವಿರೋಧದ ನಡುವೆಯೂ ಅವರನ್ನು ಸತ್ಕರಿಸಿದ್ದರು.

ಆದರೆ ಎಂತಹ ದುರ್ದೈವ ನೋಡಿ ಕಾಂಗ್ರೆಸ್‌ ಮಾತ್ರ ಮುಸ್ಲಿಂ ತುಷ್ಟೀಕರಣದ ನೆಪದಲ್ಲಿ ಇಸ್ರೇಲ್ ನ್ನು ಬದಿಗೊತ್ತಿತ್ತು.

ಈಗ ಮತ್ತೆ ಮೋದಿ ಸಂಬಂಧವನ್ನು ಗಟ್ಟಿಯಾಗಿಸಿದ್ದಾರೆ.
ನಿಜವಾಗಿಯೂ ಭಾರತ ಇಸ್ರೇಲ್ ನಿಂದ ಕಲಿಯುವುದು ಸಾಕಷ್ಟಿದೆ.

 •  
  1.1K
  Shares
 • 1.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com