Connect with us
Loading...
Loading...

ಅಂಕಣ

ಭಾರತದಲ್ಲಿ ಹಿಂದೂ ಎಂದು ಹೇಳಲು ನಾಚಿಕೆಪಡುತ್ತಿದ್ದ ಕಾಲವೊಂದಿತ್ತು. ಆದರೆ ಈಗ…

Published

on

 • 5.3K
 •  
 •  
 •  
 •  
 •  
 •  
 •  
  5.3K
  Shares

ಭಾರತದಲ್ಲಿ ಹಿಂದೂ ಎಂದು ಹೇಳಲು ನಾಚಿಕೆಪಡುತ್ತಿದ್ದ ಕಾಲವೊಂದಿತ್ತು. ಆದರೆ ಮೋದಿಜಿ ದೇಶದ ಪ್ರಧಾನಿಯಾದ ನಂತರ ಬದಲಾವಣೆಯ ಗಾಳಿ ದೇಶದಲ್ಲಿ ಬೀಸಿದೆ.

ಭಾರತದಲ್ಲಿ ಹಿಂದೂ ಎಂದು ಹೇಳಲು ನಾಚಿಕೆಪಡುತ್ತಿದ್ದ ಕಾಲವೊಂದಿತ್ತು. ಆದರೆ ಮೋದಿ ಬಂದನಂತರ ಹಿಂದೂಗಳು ಒಗ್ಗಟ್ಟಾಗುತ್ತಿದ್ದಾರೆ, ಜಾಗೃತರಾಗುತ್ತಿದ್ದಾರೆ. ಹೀಗಾಗಿ ಮುಸಲ್ಮಾನರನ್ನು ಓಲೈಸುವವರು ಹಿಂದೂಗಳನ್ನು ಓಲೈಸಲು ದೇವಸ್ಥಾನಗಳಿಗೆ ಭೇಟಿನೀಡುತ್ತಿದ್ದಾರೆ. ಭಾರತದಲ್ಲಿ ಈಗ ಹಿಂದೂಗಳಿಗೆ ಬೆಲೆ ಸಿಗುತ್ತಿದೆ.

ನಾಲ್ಕಾರು ವರ್ಷಗಳ ಹಿಂದೆ ಕಾಲವು ಬೇರೆಯೇ ಆಗಿತ್ತು. ಆದರೆ ಮೂರು ವರ್ಷಗಳಿಂದ ಪರಿವರ್ತನೆ ಆಗಿದೆ.

ಮೂರು ವರ್ಷಗಳ ಹಿಂದೆ ದೆಹಲಿ ಗದ್ದುಗೆಗೆ ಹಿಂದು ರಾಷ್ಟ್ರವಾದಿಯನ್ನು ಜಾಗೃತ ಹಿಂದುಗಳು ಒಟ್ಟಾಗಿ ಕೂರಿಸಿದ್ದೇವೆ. ಆ ಗದ್ದುಗೆಯ ಮೇಲೆ ಹಿಂದು ರಾಷ್ಟ್ರವಾದಿ ಕೂರಲು ಕಾರಣ ಜಾಗೃತ ಹಿಂದು. ಈಗ ಕಾಲ ಕಳೆದಿದೆ, ನಾಲ್ಕು ವರ್ಷಗಳ ಹಿಂದಿನಂತಿಲ್ಲ ಪರಿಸ್ಥಿತಿ.

ಏಕೆಂದರೆ ನಶಿಸಿ ಹೋಗತ್ತಿರುವ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ಒಬ್ಬ ಮಹಾ ಪರುಷನ ಅವಶ್ಯಕತೆ ಭಾರತಕ್ಕೆ ಇತ್ತು. ಆ ಅವಶ್ಯಕತೆಯನ್ನು ನೀಗಿಸಲು ತಾಯಿ ಭಾರತಾಂಬೆ ಮೋದಿಯವರನ್ನು ಕಳಿಸಿದ್ದಾಳೆ ಎಂದರೆ ಅತಿಶಯೋಕ್ತಿ ಅನಿಸುವುದಿಲ್ಲ.

ಮೋದಿಜಿ ಹಿಂದುವಾದಿಯಾಗಿದ್ದರಿಂದ ಸಹಜವಾಗಿಯೇ ದೇಶಪ್ರೇಮಿಯಾಗಿದ್ದಾರೆ. ಮೋದಿಜಿ ಬಂದದ್ದು ಹಿಂದುಗಳಿಗೆ ಬರೀ ಖುಷಿಯಾಗಿಲ್ಲ. ಬದಲಿಗೆ ಆತ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿಯೇ ಬಂದಿದ್ದಾರೆಂದು ಭಾವಿಸಲಾಗುತ್ತಿದೆ. ಆ ಮಹಾಪುರುಷನ ಆಗಮನವಾಗಿರುವುದೇ ಹಿಂದುಗಳ ಕಣ್ಣೊರೆಸಲು. ಆತ ಬಂದಿರುವುದೇ ಭಾರತದಲ್ಲಿ ಸನಾತನ‌ ಪರಂಪರೆಯನ್ನ ಪುನರುತ್ಥಾನಗೊಳಿಸಲು.

ಮೋದಿಜಿ ಬರುವ ಮುನ್ನ ಹಿಂದು ಎಂದು ತನ್ನನ್ನು ತಾನು ಕರೆದುಕೊಳ್ಳಲು ನಾಚಿಕೊಳ್ಳುತ್ತಿದ್ದ ಜನ, ಮೋದಿಯವರ ಆಗಮನವಾದಮೇಲೆ ತನ್ನನ್ನು ತಾನು ಹಿಂದೂ ಎಂದು ಬಿಂಬಿಸಲು ಹೆಣಗಾಡುತ್ತಿದ್ದಾರೆ.

ಇದಕ್ಕೆ ಕಾರಣವೇನು ಗೊತ್ತಾ?

ಹಿಂದುಗಳು ಜಾಗೃತರಾಗಿದ್ದಾರೆ. ಹಿಂದುಗಳು ಹಿಂದೂವಾದಿಯನ್ನು ಗೆಲ್ಲಿಸುತ್ತಾರೆ. ಹೀಗಾಗಿಯೇ ನಾಲ್ಕಾರು ವರ್ಷಗಳ ಹಿಂದೆ ತಮ್ಮನ್ನು ತಾವು ಹಿಂದು ಎಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದವರು ಇಂದು ತಾವು ಹಿಂದೂ ಎಂದು ಹೇಳಿಕೊಳ್ಳಲು ಶುರು ಮಾಡಿದ್ದಾರೆ. ಓಟಿಗಾಗಿ ಹಿಂದುಗಳನ್ನು ಓಲೈಸಲು ತಮ್ಮನ್ನು ತಾವು ಹಿಂದು ಎಂದು ಬಿಂಬಿಸಲು ತಿಣುಕಾಡುತ್ತಿದ್ದಾರೆ.

* ರಾಹುಲ್ ಗಾಂಧಿ

ಇತ್ತೀಚೆಗೆ ರಾಹುಲ್ ಗಾಂಧಿಯವರು ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಿ ಕೊಳ್ಳಲು ದೊಡ್ಡ ದೊಂಬರಾಟವನ್ನೇ ಆಡಿಬಿಟ್ಟರು. ದೇವಸ್ಥಾನಗಳಿಗೆ ಭೇಟಿ ಕೊಟ್ಟದ್ದೇ ಕೊಟ್ಟದ್ದು. ತನ್ನನ್ನು ತಾನು ಶಿವನ ಭಕ್ತ ಅಂತ ಪ್ರಚಾದ ಮಾಡಿದ್ದೇ ಮಾಡಿದ್ದು. ಅಬ್ಬಾ ಓಟಿಗಾಗಿ ಏನೆಲ್ಲಾ ಮಾಡ್ತಾರಲ್ಲ ಈ ಜನ.

* ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಅವರೂ ಇದಕ್ಕೆ ಹೊರತಲ್ಲ. ಪಶ್ಚಿಮ ಬಂಗಾಳವನ್ನ ಜಿಹಾದಿಗಳ ಅಡ್ಡೆ ಮಾಡಿಟ್ಟಿರುವ ಮಮತಾಗೆ ಮುಂದಿನ ಚುನಾವಣೆ ಗೆಲ್ಲಲು ಕೇವಲ ಬಾಂಗ್ಲಾ ನುಸುಳುಕೋರರ ವೋಟ್ ಅಷ್ಟೇ ಸಾಕಾಗಲ್ಲ ಹಿಂದುಗಳ ವೋಟ್ ಕೂಡ ಬೇಕು‌ ಅನ್ನೋದರ ಅರಿವಾಗಿದೆ. ಹೀಗಾಗಿ ತಮ್ಮನ್ನು ತಾವು ಹಿಂದು ಎಂದು ಬಿಂಬಿಸಲು ಮಮತಾ ಬ್ಯಾನರ್ಜಿ ಹಿಂದೂ ತುಷ್ಟೀಕರಣಕ್ಕೆ ಮುಂದಾಗಿದ್ದು ಮೊನ್ನಸ ಮೊನ್ನೆಯಷ್ಟೇ ಬ್ರಾಹ್ಮಣರ ಸಮಾವೇಶ ನಡೆಸಿದ್ದಳು.

* ರಾಬರ್ಟ್ ವಾದ್ರಾ

ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಅವರು ಇದಕ್ಕೆ ಹೊರತಲ್ಲ. ರಾಬರ್ಟ್ ವಾದ್ರಾ ಕೂಡಾ ಸರಣಿ ದೇವಾಲಯಗಳಿಗೆ ಭೇಟಿ ಕೊಟ್ಟರು.

ಇತ್ತೀಚೆಗಷ್ಟೇ ದೆಹಲಿಯ ಭವಾನಿ ಮಂದಿರಕ್ಕೆ ತೆರಳಿದ್ದ ರಾಬರ್ಟ್ ಆ ಫೋಟೋಗಳನ್ನ ತಮ್ಮ ಫೇಸ್ಬುಕ್ ವಾಲ್ ಮೇಲೆ ಹಾಕಿಕೊಂಡಿದ್ದರು.

* ಕಮ್ಯುನಿಸ್ಟರು

ಇನ್ನು ಕೇರಳದ ಕಮ್ಯುನಿಸ್ಟರು ಹಾಗು DYFI ತಮ್ಮ ಸಮಾರಂಭದ ಫ್ಲೆಕ್ಸ್ ಗಳಲ್ಲಿ ಸ್ವಾಮಿ ವಿವೇಕಾನಂದರ ಫೋಟೋ ಹಾಕಿದ್ದರು.

ಒಟ್ಟಿನಲ್ಲಿ ಓಟಿಗಾಗಿ ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಲು ತಿಣುಕಾಡುತಿದ್ದಾರೆ. ಇದುವೇ ಜಾಗೃತ ಹಿಂದುವಿನ ತಾಕತ್ತು.

ಕರ್ನಾಟಕದ ವಿಷಯಕ್ಕೆ ಬಂದರೆ, ಸರಣಿ ಹಿಂದುಗಳ ಹತ್ಯೆಗಳಾದವು. ಆ ಕೊಲೆಗಳಿಗೆಲ್ಲಾ ಮುಸ್ಲಿಂ ಮೂಲಭೂತವಾದಿಗಳು ಕಾರಣವೆಂದು ಗೊತ್ತಿದ್ದರೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಕೊಲೆಗಾರರ ಮೇಲೆ Action ತೊಗೊಳ್ಳದೇ, ಅವರ ಬೆಂಬಲಕ್ಕೆ ನಿಂತರು. ಇದು ಒಂದು ವಿಷಯವಾದರೆ, ಗೋ ಮಾಂಸ ಬಗ್ಗೆಯೂ ತುಂಬಾ ಮಾತಾಡಿದ್ದರು.

ಆಹಾರ ಅವರವರ ಹಕ್ಕು ಎಂದಲೂ ಮಾತಾಡಿದ್ದರು. ಅಷ್ಟೇ ಯಾಕೆ ಧರ್ಮಸ್ಥಳದ ಮಂಜುನಾಥನ ದೇವಸ್ಥಾನಕ್ಕೆ ಮೀನು ತಿಂದು ಹೋಗಿ ಬಂದು, ಗರ್ವದಿಂದ ಮಾತಾಡಿದ್ದರು. ದೇವರೇನು ಮಾಂಸ ತಿಂದು ಬರಬೇಡ ಅಂತಾನಾ ಅಂತಲೂ ಮಾತಾಡಿದ್ದರು.

ಆದರೆ ಈಗ ಚುನಾವಣೆ ಹತ್ತಿರ ಬಂದಂತೆ ಸಿದ್ದರಾಮಯ್ಯನವರು ತಮ್ಮನ್ನು ತಾವು ಹಿಂದು ಎಂದು ಬಿಂಬಿಸುವ ಪ್ರಕ್ರಿಯೆ ಶುರು ಮಾಡಿದ್ದಾರೆ. ನಾನು ಹಿಂದು ನನ್ನ ಹೆಸರಲ್ಲೇ ರಾಮನಿದ್ದಾನೆ ಎಂದು ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಓಟಿಗಾಗಿ ಈ ರಾಜಕಾರಣಿಗಳು ಏನೆಲ್ಲಾ ಮಾಡ್ತಾರಪ್ಪಾ!!

ತಾನು ಹಿಂದೂವಾದಿಯಲ್ಲವೆಂದು ರಾಹುಲ್ ಗಾಂಧಿಯವರಿಗೆ ಗೊತ್ತಿತ್ತು. ಹಾಗಾಗಿಯೇ 2014 ರ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರಿಗೆ ಸೋಲುತ್ತೇನೆಂದು ಖಚಿತವಾಗಿ ಹೋಗಿತ್ತು .

ಹೀಗಾಗಿಯೇ ಹಿಂದಿನ ಚುನಾವಣೆಯಲ್ಲಿ ಅಂದರೆ 2014 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಖಾಡದಿಂದ ದೂರ ಸರಿದಿದ್ದರು. ತನ್ನ ಎದುರಾಳಿ ಹಿಂದೂವಾದಿ ಮೋದಿಯೆಂಬುದು ಖಾತ್ರಿಯಾದುದರಿಂದ ರಾಹುಲ್ ಗಾಂಧಿ ಚುನಾವಣಾ ಅಖಾಡದಿಂದ ದೂರ ಸರಿದಿದ್ದರು.

ದೇಶಕ್ಕೆ ದೇಶವೇ ಹಿಂದೂವಾದಿ ಮೋದಿಯ ಹೆಸರನ್ನು ಜಪಿಸುತ್ತಿರುವುದನ್ನು ನೋಡಿ ರಾಹುಲ್ ಗಾಂಧಿಯವರು ಒಳಗಿಂದೊಳಗೆ ಹೆದರಿ ಬಿಟ್ಟಿದ್ದರು. ಹಿಂದೂ ಅಲೆಯಲ್ಲಿ ತಾನು ಕೊಚ್ಚಿ ಹೋಗುತ್ತೇನೆಂದು ಅರಿತ ರಾಹುಲ್ ಗಾಂಧಿಯವರು ಹಿಂದೆ ಸರಿದಿದ್ದರು.

ಆದರೆ ಈ ಸಲ ರಾಹುಲ್ ಗಾಂಧಿಯವರಿಂದ ಹಿಡಿದು ಸಿದ್ದರಾಮಯ್ಯರವರೆಗೆ ಎಲ್ಲರೂ ತಮ್ಮನ್ನೂ ತಾವು ಹಿಂದೂ ಎಂದು ಬಿಂಬಿಸಲು ಹೆಣಗಾಡುತ್ತಿದ್ದಾರೆ.

ಇಷ್ಟು ದಿನ ಧರ್ಮವನ್ನ ಒಡೆಯುವ ಪ್ರಯತ್ನ ಮಾಡಿದವರೆಲ್ಲಾ, ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿರುವವರೆಲ್ಲಾ ಇಂದೂ ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಹಾಸ್ಯಾಸ್ಪದ.

ಕೆಲವರು ಪೂರ್ವ ಪುಣ್ಯದಿಂದ ನಾಯಕರಾಗಿ ಬಿಡುತ್ತಾರೆ. ಕೆಲವರು ನಾಯಕರಾಗಿ ಆಳಲೆಂಬ ಹಂಬಲ ಸಮಾಜದಿಂದ ಕೇಳಿಬರುತ್ತದೆ. ಇನ್ನೂ ಕೆಲವರು ಮಾತ್ರ ಭಗವಂತನ ಇಚ್ಛೆಯಿಂದ ನಾಯಕರಾಗಿ ದೀರ್ಘಕಾಲ ಧರೆಗೆ ಒಡೆಯರಾಗುತ್ತಾರೆ. ಆ ಭಗವಂತನ ಇಚ್ಛೆಯಿಂದ ನಾಯಕರಾಗಲು ಅವತರಿಸಿ ಬಂದ ಆ ಮಹಾಪುರುಷ ಬೇರೆ ಯಾರೋ ಅಲ್ಲ ಹಿಂದೂ ರಾಷ್ಟ್ರವಾದಿ ನರೇಂದ್ರ ಮೋದಿಯವರು.

ತಾಯಿ ಭಾರತಮಾತೆಯೇ ಭಾರತವನ್ನು ವಿಶ್ವಗುರುವಾಗಿಸಲು ಮಹಾಪುರುಷನೊಬ್ಬನನ್ನು ಹೆತ್ತು ಕಳಿಸಿದ್ದಾಳೆ.

ಭಾರತೀಯರು ಅದೆಷ್ಟೋ ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದರು. ಆ ದೇವರಿಗೆ 2014ರವರೆಗೂ ಭಾರತೀಯರ ಕೂಗು ಕೇಳಿರಲಿಲ್ಲವೇನೋ. ಭಾರತೀಯರು ಕಾಯ್ದದ್ದಕ್ಕೂ ಒಳ್ಳೆಯ ಫಲವೆ ಸಿಕ್ಕಿದೆ. ಮೋದಿಯವರು ದೆಹಲಿ ಗದ್ದುಗೆಯನ್ನು ಅಲಂಕರಿಸಲಿ ಕಾರಣವಾದದ್ದು ಹಿಂದೂ ಅಲೆ.

ಆ ಹಿಂದೂ ಅಲೆಗೆ ತಾವು ಕೊಚ್ಚಿ ಹೋಗುತ್ತೇವೆಂದು ಗೊತ್ತಾದ ರಾಹುಲ್ ಗಾಂಧಿಯವರು, ಮಮತಾ ಬ್ಯಾನರ್ಜಿಯವರು, ಕೇರಳದ ಕಮ್ಯುನಿಸ್ಟರು, ಕರ್ನಾಟಕದ ಸಿದ್ದರಾಮಯ್ಯನವರು ಹೀಗೆ ಹಲವಾರು ಜನ ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಇದೇ ಅಲ್ಲವೇ ಅಚ್ಛೇದಿನ್.

– Nationalist Mahi

 •  
  5.3K
  Shares
 • 5.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com