Connect with us
Loading...
Loading...

ಪ್ರಚಲಿತ

ಭಾರತದ ಇತಿಹಾಸದಲ್ಲೇ ಸುಪ್ರಿಂಕೋರ್ಟ್ ಜಡ್ಜ್ ಗಳು ಪ್ರೆಸ್ ಮೀಟ್ ಮಾಡಿರಲಿಲ್ಲ!!! ಇವರು ಮಾಡಿದ್ದೇಕೆ? ಅದರ ಹಿಂದಿನ ಉದ್ದೇಶವೇನಿದೆ ಗೊತ್ತಾ?

Published

on

 • 1.6K
 •  
 •  
 •  
 •  
 •  
 •  
 •  
  1.6K
  Shares

ಹೌದು ಭಾರತ ಸಂವಿಧಾನವನ್ನ ಸರ್ವಶ್ರೇಷ್ಠ ಗ್ರಂಥವೆಂದು ಒಪ್ಪಿಕೊಂಡು 67 ವರ್ಷಗಳೇ ಕಳೆದಿವೆ, ಸಂವಿಧಾನಾತ್ಮಕವಾಗಿ ನ್ಯಾಯಾಲಯವೆಂಬುದು ಪ್ರಜಾ ಪ್ರಭುತ್ವದ ನಾಲ್ಕು ಅಂಗಗಳಲ್ಲಿ ಒಂದಾಗಿದೆ.

ಈ 67 ವರ್ಷಗಳಲ್ಲಿ ಸುಪ್ರೀಂಕೋರ್ಟಿನ ಯಾವ ಜಡ್ಜ್ ಗಳೂ ಪ್ರೆಸ್ ಮೀಟ್ ಮಾಡಿರಲಿಲ್ಲ, ದೇಶದ ಇತಿಹಾಸದಲ್ಲಿ ಇದು ಮೊಟ್ಟ ಮೊದಲನೆಯ ಜಡ್ಜ್ ಗಳ ಪ್ರೆಸ್ ಮೀಟ್ ಆಗಿತ್ತು.

ಅಷ್ಟಕ್ಕೂ ಪ್ರೆಸ್ ಮೀಟ್ ನಲ್ಲಿ ಸುಪ್ರೀಂ ಕೋರ್ಟಿನ ಆ ಹಿರಿಯ ಜಡ್ಜ್ ಗಳು ಹೇಳಿದ್ದಾರೂ ಏನು?

ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿ, ನ್ಯಾಯಾಂಗ ವ್ಯವಸ್ಥೆಯ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆ.

ಸುಪ್ರೀಂ ಕೋರ್ಟ್ ನ ನ್ಯಾಯಾಮೂರ್ತಿಗಳಾದ ಚಲಮೇಶ್ವರ್, ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಒಂದು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಬರೆದ ಪತ್ರ ಸಾರಾಂಶವನ್ನು ಬಹಿರಂಗ ಪಡಿಸಿದ್ದಾರೆ.

ನ್ಯಾ. ಚಲಮೇಶ್ವರ್ ಮಾತನಾಡಿ, ನಾವು ಭಾರತ ಮುಖ್ಯ ನ್ಯಾಯಮೂರ್ತಿ (ಸಿಐಜೆ)ಗಳಿಗೆ ಪತ್ರ ಬರೆದಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಸ್ವಾತಂತ್ರ್ಯದ ಕುರಿತು ನಮ್ಮ ಕಾಳಜಿಯನ್ನು ತಿಳಿಸಿದ್ದೇವು, ಆದರೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಈ ಕುರಿತು ಮನವರಿಕೆ ಮಾಡಿಕೊಡಲು ವಿಫಲವಾಗಿದ್ದೇವೆ. ನ್ಯಾಯಾಂಗ ವ್ಯವಸ್ಥೆಯು ನಿಸ್ಪಕ್ಷಪಾತವಿಲ್ಲದೇ ಇದ್ದರೆ ಪ್ರಜಾಪ್ರಭುತ್ವ ಬದುಕುಳಿಯಲು ಸಾಧ್ಯವಿಲ್ಲ. ಅದ್ದರಿಂದ ಅನಿವಾರ್ಯವಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದರು.

ಅಷ್ಟಕ್ಕೂ ಸುಪ್ರೀಂಕೋರ್ಟ್ ಚೀಫ್ ಜಸ್ಟಿಸ್ ದೀಪಕ್ ಮಿಶ್ರಾರವರ ವಿರುದ್ಧ ಇವರ ಅಸಮಾಧಾನ ಸ್ಪೋಟಗೊಂಡಿದ್ದರ ಹಿಂದಿನ ಉದ್ದೇಶವಾದರೂ ಏನಿದೆ ಗೊತ್ತಾ?

ನೆನ್ನೆ ಪ್ರೆಸ್ ಮೀಟ್ ಮಾಡಿದ ನಾಲ್ವರು ಜಡ್ಜ್ ಗಳೂ ಒಂದು ರೀತಿಯಲ್ಲಿ ಎಡಪಂಥೀಯ ಧೋರಣೆ ಇದ್ದಂತಹ ನ್ಯಾಯಮೂರ್ತಿಗಳೇ ಆಗಿದ್ದಾರೆ.

ಕಳೆದ ವರ್ಷ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರಿಂದ ಸುಪ್ರೀಂ ಕೋರ್ಟಿನ ಚೀಫ್ ಜಸ್ಟಿಸ್ ಆಗಿ ಅಧಿಕಾರ ಸ್ವೀಕರಿಸಿದ ದೀಪಕ್ ಮಿಶ್ರಾ ಸುಪ್ರೀಂಕೋರ್ಟಿನಲ್ಲಿರುವ ಎಡಪಂಥೀಯ ವಿಚಾರಧಾರೆಯಿರುವಂತಿರುವ ಜಡ್ಜ್ ಗಳಿಗೆ ಕ್ಯಾರೆ ಅನ್ನದಿರುವುದೇ ಈ ನಾಲ್ಕೂ ಜಡ್ಜ್ ಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಅಷ್ಟಕ್ಕೂ ಚೀಫ್ ಜಸ್ಟಿಸ್ ಆಫ್ ಇಂಡಿಯಾ ಆಗಿರುವ ದೀಪಕ್ ಮಿಶ್ರಾ ತೆಗೆದುಕೊಂಡಂತಹ ಆ ನಿರ್ಧಾರಗಳಾದರೂ ಯಾವುವು?

1. ಎರಡು ದಿನಗಳ ಹಿಂದೆ ಚೀಫ್ ಜಸ್ಟಿಸ್ ಆಗಿರುವ ದೀಪಕ್ ಮಿಶ್ರಾರವರು 1984 ರಲ್ಲಿ ನಡೆದ ದೆಹಲಿ ಸಿಖ್ಖರ ಹತ್ಯಾಕಾಂಡದ ಬಗ್ಗೆ ಹಾಗು ಅದಕ್ಕೆ ಸಂಬಂಧಿಸಿದ 186 ಕೇಸ್ಗಳನ್ನ ಮತ್ತೆ ರೀ ಓಪನ್ ಮಾಡಲು ಎಸ್.ಐ.ಟಿ(Special Investigation Team) ಗೆ ಸೂಚನೆ ನೀಡಿದ್ದರು.

2. ಕಳೆದ ತಿಂಗಳು ಕಾಂಗ್ರೆಸ್ಸಿನ ಹಿರಿಯ ನಾಯಕ ಕಮ್ ಸುಪ್ರಿಂಕೋರ್ಟಿನ ವಕೀಲನಾದ ಕಪಿಲ್ ಸಿಬ್ಬಲ್ ಗೆ ದೀಪಕ್ ಮಿಶ್ರಾ ರಾಮಜನ್ಮಭೂಮಿ ಕೇಸ್ ನ್ನ 2019 ರ ಚುನಾವಣೆ ಮುಗಿದಮೇಲೆ ವಿಚಾರಣೆ ನಡೆಸಬೇಕು ಅಂತ ಹೇಳಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದರು

3. ರಾಮಜನ್ಮಭೂಮಿ ತೀರ್ಪನ್ನ ನೀಡುವ ಮುಖ್ಯವಾದ ನಿರ್ಣಯ ದೀಪಕ್ ಮಿಶ್ರಾರವರ ಬಳಿಯಿದೆ.

4. ದೀಪಕ್ ಮಿಶ್ರಾರವರ ವಿರುದ್ಧದ ಈ ಕ್ಯಾಂಪೇನ್ ನ ಮುಖ್ಯ ಉದ್ದೇಶ ಚೀಫ್ ಜಸ್ಟಿಸ್ ಎಂಬ ಸ್ಥಾನಕ್ಕೆ ಧಕ್ಕೆ ತರಲು ಈ ನಾಲ್ವರೂ ಜಡ್ಜ್ ಗಳು ನಡೆಸುತ್ತಿರುವ ಹುನ್ನಾರ ಎಂಬುದು ಅನೇಕ ಹಿರಿಯ ವಕೀಲರಲ್ಲಿ ಕೇಳಿಬರುತ್ತಿದೆ. ದೀಪಕ್ ಮಿಶ್ರಾರವರ ಹತ್ತಿರವಿರುವ ಸಿಖ್‌ ಹತ್ಯಾಕಾಂಡದ ಕೇಸ್ ಹಾಗು ರಾಮಮಂದಿರದ ತೀರ್ಪು ಎಲ್ಲಿ ತಮ್ಮ ಆಶಯದ ವಿರುದ್ಧ ಬಂದುಬಿಡುತ್ತೋ ಅನ್ನೋದು ಇವರಿಗೆ ನುಂಗಲಾರದ ತುತ್ತಾಗಿ ಕಾಡುತ್ತಿದೆ.

ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್ ಆಗಿರುವ ಆರ್.ಎಸ್.ಸೋಧಿ ಯವರು ಹೇಳುವ ಪ್ರಕಾರ, “ಪ್ರೆಸ್ ಮೀಟ್ ಮಾಡಿರುವ ಈ ನಾಲ್ಕು ಜಡ್ಜ್ ಗಳು ತಮ್ಮದೇ ಆದ ಒಂದು ಯೂನಿಯನ್ ಮಾಡಿಕೊಂಡಿದ್ದಾರೆ. ಇವರ ಜೊತೆ ಇನ್ನೂ 23 ಜಡ್ಜ್ ಗಳೂ ಇದಾರೆ. ಈ ಟ್ರೇಡ್ ಯೂನಿಯನ್ ಚೀಫ್ ಜಸ್ಟಿಸ್ ರವರ ಕಾರ್ಯಶೈಲಿ ಹಾಗು ಅವರ ತೇಜೋವಧೆಗೆ ಮುಂದಾಗಿದೆ. ಈ ನಾಲ್ಕೂ ಜಡ್ಜ್ ಗಳಿಗೆ ಸುಪ್ರಿಂಕೋರ್ಟಿನಲ್ಲಿ ಕೂರುವ ನೈತಿಕತೆಯೇ ಇಲ್ಲ ಹಾಗು ಇವರಿಗೆ ಛೀಮಾರಿ ಹಾಕುವುದೊಂದೆ ದಾರಿ” ಅಂತ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.

ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಮನಬಂದಂತೆ ತಮಗೆ ಬೇಕಾದ ಹಾಗೆ ಎಲ್ಲ ಇಲಾಖೆಗಳನ್ನೂ ಬಳಸಿಕೊಳ್ಳುತ್ತ ಬಂದಿದೆ ಅದರಲ್ಲಿ ಸುಪ್ರಿಂಕೋರ್ಟ್ ಹಾಗು ಜಡ್ಜ್ ಗಳೂ ಹೊರತಾಗಿಲ್ಲ.

ಈಗ ರಾಷ್ಟ್ರಪತಿ ರಾಮನಾಥ ಕೋವಿಂದ್ ರವರಿಂದ ನಿಯುಕ್ತಿಯಾದ ದೀಪಕ್ ಮಿಶ್ರಾರವರಿಂದ ಎಲ್ಲಿ ತಮ್ಮ ಬುಡಕ್ಕೆ ಬಾಂಬ್ ಬೀಳಬಹುದೋ ಎಂದು ಕಾಂಗ್ರೆಸ್ ಮಾಡುತ್ತಿರುವ ಪ್ರೀಪ್ಲ್ಯಾನ್ ಇದು ಅನ್ನೋದು ರಾಷ್ಟ್ರಭಕ್ತ ವಕೀಲರಲ್ಲಿ ಕೇಳಿಬರುತ್ತಿರುವ ವಾದವಾಗಿದೆ ಹಾಗು ಇವರ ವಾದ ನಿಜವೂ ಅನಿಸುತ್ತೆ.

ಇಷ್ಟು ವರ್ಷ ತಾವು ಆಡಿದ್ದೇ ಆಟ ಎನ್ನುವವರಿಗೆ ಇನ್ನು ಮುಂದೆ ತಮ್ಮ ಆಟ ನಡೆಯಲ್ಲ ಅಂತ ಗೊತ್ತಾದಮೇಲೇ ಈ ರೀತಿಯ ಅರಚಾಟ ಕಿರುಚಾಟ ಸರ್ವೇ ಸಾಮಾನ್ಯ ಅಲ್ಲವೇ?

ಆದರೆ ನಿಸ್ವಾರ್ಥವಾಗಿ ದೇಶಕ್ಕಾಗಿ ದುಡಿಯುತ್ತಿರುವ ಪ್ರಧಾನಿ ಮೋದಿಗೆ ನಾವು ಬೆಂಬಲಿಸದಿದ್ದರೆ ಮುಂದೆ ಯಾವತ್ತೂ ಇಂತಹ ನಾಯಕ ಭಾರತಕ್ಕೆ ಸಿಗಲಾರ.

ಆಯ್ಕೆ ನಿಮಗೆ ಬಿಟ್ಟದ್ದು!!!

– ಕ್ಷಿತಿಜ್ ಮೋಹನ್

 •  
  1.6K
  Shares
 • 1.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com