Connect with us
Loading...
Loading...

ಅಂಕಣ

ಭಾರತದ ಜೇಮ್ಸ್ ಬಾಂಡ್ ಖ್ಯಾತಿಯ, ಪಾಕಿಸ್ತಾನದಲ್ಲಿ 7 ವರ್ಷ ಗೂಢಚಾರನಾಗಿದ್ದ ಈ ವ್ಯಕ್ತಿಯ ಸಾಹಗಾಥೆಗಳು ನಿಮಗೆ ಗೊತ್ತೆ??

Published

on

 • 2.4K
 •  
 •  
 •  
 •  
 •  
 •  
 •  
  2.4K
  Shares

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ದ ಗ್ರೇಟ್ ಇಂಡಿಯನ್ ಸ್ಪೈ ಅಜಿತ್ ದೋವಲ್ ಸಾಹಸಗಾಥೆಗಳು ಒಂದಾ ಎರಡಾ!!

ಅಬ್ಬಾ ಎಂತಹ ಛಾತಿ ಇರೋಂಥ ವ್ಯಕ್ತಿ! ಈ ಗ್ರೇಟ್ ವ್ಯಕ್ತಿಯ ಮೇಲೆ ಫಿಲಂ ಒಂದೇನಾದರೂ ಮಾಡಿದರೆ ಭಾಗ 1,2,3 ಅಂತ ಮಾಡಿಬಿಡಬಹುದೇನೋ.

ಹೌದು ಸಿನಿಮಾ ಕಥೆಯಂತಿರುವ ದೋವಲ್ ಸಾಹಸಗಳು ನಿಜಕ್ಕೂ ರೋಚಕವಾಗಿವೆ ಎಂಬುದಕ್ಕೆ ಅವರ ಜೀವನದ ಕೆಲ ಘಟನೆಗಳೇ ಸಾಕ್ಷಿಯಾಗುತ್ತವೆ….

2005 ರಲ್ಲಿ ಭಾರತದ ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅಜಿತ್ ದೋವಲ್ ಕುರಿತು ಹಲವು ರೋಚಕ ಮತ್ತು ಸಾಹಸಗಾಥೆಗಳಿವೆ.

ಅದರಲ್ಲೊಂದು ಅಜಿತ್ ದೋವಲ್ ರು ಭಾರತದ ಗುಪ್ತಚರ ಇಲಾಖೆ ರಾ(RAW) ಏಜೆಂಟ್ ಆಗಿ ಪಾಕಿಸ್ತಾನದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ವರ್ಷ ಕಾರ್ಯನಿರ್ವಹಿಸಿದ್ದು ಅದೂ ಒಬ್ಬ ಮುಸ್ಲಿಂ ವೇಷಧಾರಿಯಾಗಿ.

7 ವರ್ಷ ಮುಸ್ಲಿಂ ವೇಷದಲ್ಲಿ ಪಾಕಿಸ್ತಾನದಲ್ಲಿದ್ದರು ದೋವಲ್!

ಸದ್ಯ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ದೋವಲ್ ಅವರನ್ನು ಭಾರತದ ಜೇಮ್ಸ್ ಬಾಂಡ್ ಎಂದೇ ಪರಿಗಣಿಸಲಾಗಿದೆ. ಭಾರತದ ಗುಪ್ತಚರ ಏಜೆಂಟ್ ಆಗಿದ್ದ ದೋವಲ್ ಮಾಹಿತಿ ಸಂಗ್ರಹಿಸಲು ಸುಮಾರು 7 ವರ್ಷಗಳ ಕಾಲ ಮುಸ್ಲಿಮ್ ವೇಷಧಾರಿಯಾಗಿ ಪಾಕಿಸ್ತಾನದ ಲಾಹೋರ್ ನಲ್ಲಿ ಕಾಲಕಳೆದಿದ್ದರಂತೆ!

ಕಾರ್ಯಕ್ರಮವೊಂದರಲ್ಲಿ ಅಜಿತ್ ದೋವಲ್ ರನ್ನ ಸಭೆಯಲ್ಲಿದ್ದ ವ್ಯಕ್ತಿಯೊಬ್ಬ ಪ್ರಶ್ನೆ ಕೇಳಿದ್ದ.

“ಸರ್ ನೀವು ಪಾಕಿಸ್ತಾನದಲ್ಲಿ ರಾ ಏಜೆಂಟಾಗಿ ಒಂದೆರಡು ವರ್ಷ ಇದ್ದರಂತಲ್ಲ ಅದು ನಿಜವಾ?”

ಅದಕ್ಕೆ ಭಾರತದ ಜೇಮ್ಸ್ ಬಾಂಡ್ ಅಜಿತ್ ದೋವಲ್ ಕೊಟ್ಟ ಉತ್ತರ ನಿಜಕ್ಕೂ ರೋಚಕವಾಗಿದೆ.

ಅವರ ಉತ್ತರ ಕೇಳಿದರೆ ನಿಜಕ್ಕೂ ಒಮ್ಮೆಲೆ ಮೈ ರೋಮಾಂಚನವಾಗಿಬಿಡುತ್ತೆ.

ಆ ವ್ಯಕ್ತಿ ಕೇಳಿದ ಪ್ರಶ್ನೆಗೆ ಅಜಿತ್ ದೋವಲ್ ಉತ್ತರ ಹೀಗಿತ್ತು

“ಪಾಕಿಸ್ಥಾನಿ ಮುಸ್ಲಿಮನಾಗಿಯೇ ಅಲ್ಲಿ ಅಂಡರ್ ಕವರ್ ಆಪರೇಷನ್ ಮಾಡುತ್ತ 7 ವರ್ಷಗಳ ಕಾಲ ಪಾಕ್ ನಲ್ಲಿದ್ದೆ. ಸ್ಥಳಿಯ ಮಸೀದಿಗಳಿಗೆ ತೆರಳಿ ಸ್ಥಳೀಯರ ಸಂಪರ್ಕ ಸಾಧಿಸುತ್ತಿದ್ದೆ. ಒಮ್ಮೆ ಪಾಕಿಸ್ತಾನ ದಲ್ಲಿ ಒಂದು ಪ್ರಸಿದ್ಧ ಮಸೀದಿಗೆ ತೆರಳಿದ್ದೆ. ಅಲ್ಲೇ ದರ್ಗಾದಲ್ಲಿ‌ ಕೂತಿದ್ದ ದಪ್ಪ ಬಿಳಿ ದಾಡಿಯ ವ್ಯಕ್ತಿ ನನ್ನನ್ನ ಹತ್ತಿರ ಕರೆದ.

ನಾನೂ ಹೋದೆ, ಏನು ಅಂತ ಕೇಳಿದೆ, ಅದಕ್ಕವನು “ನೀನು ಹಿಂದೂ ಅಲ್ವ?” ಅಂದ ನಾನದಕ್ಕೆ “ಅಲ್ಲ ನಾನು ಮುಸ್ಲಿಂ” ಅಂದೆ ಅದಕ್ಕೆ ಆ ವ್ಯಕ್ತಿ ಬಾ ನನ್ನ ಜೊತೆ ಅಂತ ಗಲ್ಲಿ ಗಲ್ಲಿ ಗಳಲ್ಲಿ ಹಾದು ತನ್ನ ಸಣ್ಣ ಮನೆಗೆ ಕರೆದುಕೊಂಡು ಹೋದ, ಮನೆಗೆ ಹೋದ ತಕ್ಷಣ ಮನೆಯ ಬಾಗಿಲು ಹಾಕಿದ ಆ ವ್ಯಕ್ತಿ “ನೋಡು ನೀನು ಹಿಂದೂವೇ” ಅಂದ, ಅದಕ್ಕೆ ನಾನು “ಹಾಗ್ಯಾಕೆ ಅಂತಿದೀರಾ? ನಾನು ಮುಸ್ಲಿಂ” ಅಂದೆ ಆದರೆ ಅದಕ್ಕೊಪ್ಪದ ಆತ ನನ್ನ ಮುಖ ನೋಡಿ “ನಿನ್ನ ಎರಡೂ ಕಿವೀಲಿ ತೂತಿವೆ, ನೀನು ಹಿಂದೂ” ಅಂತ ಹೇಳಿದ.

ಎಲ್ಲಿ ಆತನಿಗೆ ನಾನು ಭಾರತದ ಏಜೆಂಟ್ ಅಂತ ಗೊತ್ತಾಯಿತೋ ಅಂತ ಆತಂಕಕ್ಕೊಳಗಾಗಿ “ಹೌದು ನಾನು ಮೊದಲು ಹಿಂದೂವಾಗಿದ್ದೆ ಆದರೆ ಬಹಳ ವರ್ಷಗಳ ಹಿಂದೆಯೇ ನಾನು ಮುಸ್ಲಿಂ ಆಗಿ ಮತಾಂತರ
ಆಗಿದೀನಿ” ಅಂದೆ.

ಅದಕ್ಕೆ ಆತ “ನೋಡು ಪಾಕಿಸ್ತಾನ ಕೆಟ್ಟ ರಾಷ್ಟ್ರ, ಇಲ್ಲಿ ಹಿಂದುಗಳೆಂದರೆ ಬದುಕೋಕೆ ಕಷ್ಟ, ನಾನೂ ಹಿಂದೂವೇ ಆಗಿದ್ದೆ, ನನ್ನ ಕುಟುಂಬವನ್ನ ಇಲ್ಲಿನ ಮುಸಲ್ಮಾನರು ಕೊಂದು ಹಾಕಿದರು, ಹೇಗೋ ಜೀವ ಉಳಿಸಿಕೊಂಡ ನಾನೊಬ್ಬ ಬದುಕಿದ್ದೇನೆ, ಹೇಗೋ ಜೀವನ ಸಾಗಿಸಲು ನಾನೊಬ್ಬ ಮುಸಲ್ಮಾನ ಅಂತ ಉಲೇಮಾ ರೀತಿಯ ವೇಷದಲ್ಲಿ ಬದುಕುತ್ತಿದ್ದೇನೆ” ಅಂತ ಮನೆಯಲ್ಲಿದ್ದ ಆತನ ತಿಜೋರಿಯನ್ನ ತೆಗೆದ.

ತಿಜೋರಿಯನ್ನ ತೆಗೆದ ಆತ ತಿಜೋರಿಯಲ್ಲಿದ್ದ ಮುಚ್ಚಿಟ್ಟಿದ್ದ ಶಿವನ ಫೋಟೋ ತೋರಿಸಿದ. ನಂತರ ಆತ “ನೀನು ನಿನ್ನ ಕಿವಿಗೆ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊ ಇಲ್ಲವಾದರೆ ಇಲ್ಲಿ ಬದುಕೋಕೆ ಕಷ್ಟ ಆಗುತ್ತೆ” ಅಂತ ಹೇಳಿದ್ದ.

ಇದು ಪಾಕಿಸ್ತಾನದಲ್ಲಿ ನನ್ನ ಜೊತೆ ನಡೆದಿದ್ದ ಒಂದು ಘಟನೆ. ಈ ರೀತಿ ಪಾಕಿಸ್ತಾನದಲ್ಲಿ ನಾನು ಏಳು ವರ್ಷಗಳ ಕಾಲ ಮುಸಲ್ಮಾನನ ವೇಷ ಧರಿಸಿಕೊಂಡೇ ಭಾರತಕ್ಕೆ ಪಾಕಿಸ್ತಾದ ಗುಪ್ತಚರ ಮಾಹಿತಿ ರವಾನೆ ಮಾಡ್ತಿದ್ದೆ”

ಅಂತ ಹೇಳಿದಾಗ ಕಾರ್ಯಕ್ರಮದಲ್ಲಿ ಸೇರಿದ್ದ ಜನರಿಗೆಲ್ಲಾ ಒಂದು ತರಹ ರೋಮಾಂಚನವಾಗಿಬಿಟ್ಟಿತ್ತು.

ಬರೀ ಪಾಕಿಸ್ತಾನದಲ್ಲಿ ಅಂಡರ್ ಕವರ್ ಏಜೆಂಟರಾಗೇ ಕೆಲಸ ಮಾಡಿಲ್ಲ ಅಜಿತ್ ದೋವಲ್, ಭಾರತದ ಭದ್ರತೆಗೆ ಅವರದೇ ಆದ ಇನ್ನೂ ಹಲವು ಕೊಡುಗೆಗಳಿವೆ.

ಆಪರೇಷನ್ ಬ್ಲ್ಯಾಕ್ ಥಂಡರ್:

1988 ರಲ್ಲಿ ಅಪರೇಶನ್ ಬ್ಲ್ಯಾಕ್ ಥಂಡರ್ ನಡೆಯುವ ತುಸು ಮುಂಚೆ ಉಗ್ರರ ಬಳಿಕ ಹೋಗಿ ತಮ್ಮನ್ನು ತಾವು ಐಎಸ್‌ಐ ಸ್ಪೈ ಎಂದು ಪರಿಚಯಿಸಿ ನಿಮಗೆ ಸಹಾಯ ಮಾಡಲು ಬಂದಿದ್ದೇನೆ ಎಂದು ಹೇಳಿದ್ದರು. ಬಳಿಕ ಅವರಿಂದ ಮಾಹಿತಿ ಸಂಗ್ರಹಿಸಿ ಭಾರತೀಯ ಅಧಿಕಾರಿಗಳಿಗೆ ರವಾನಿಸಿದ್ದರು.

ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಅವರು ನಿರ್ವಹಿಸಿದ ಕಾರ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆ.

ಉತ್ತರಾಖಂಡದ ಪೌರಿ ಗರ್ಹ್ವಾಲ್‌ನಲ್ಲಿ ಜನಿಸಿದ ದೋವಲ್ 1968ರ ಬ್ಯಾಚ್‌ನ ಕೇರಳ ಕೇಡರ್‌ನ ಐಪಿಎಸ್ ಅಧಿಕಾರಿ.

ಮೈನ್ಮಾರ್ ಕಾರ್ಯಾಚರಣೆ:

 

ಮೈನ್ಮಾರ್ ಗಡಿ ಹೊಕ್ಕಿ ಭಾರತೀಯ ಯೋಧರ ಕೊಲೆಗಡುಕ ನಕ್ಸಲರ ವಿರುದ್ಧ ಭಾರತೀಯ ಸೇನೆ ನಡೆಸಿದ್ದ ರೋಚಕ ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಕೂಡ ಇದೇ ಅಜಿತ್ ದೋವಲ್.

ಪಾಕ್‌ ವಿರುದ್ಧದ ಸರ್ಜಿಕಲ್‌ ದಾಳಿಯ ನೀಲನಕ್ಷೆ ರೂಪಿಸಿದ್ದೂ ಇದೇ ದೋವಲ್‌

ಸೆಪ್ಟೆಂಬರ್‌ 29ರ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತನ್ನ ನಿವಾಸದಲ್ಲಿ ಕಾತರದಿಂದ, ದುಗುಡದಿಂದ ಒಂದು ದೂರವಾಣಿ ಕರೆಗಾಗಿ ಕಾಯುತ್ತಿದ್ದರು ಪ್ರಧಾನಿ ನರೇಂದ್ರ ಮೋದಿ.

ಸರಿಯಾಗಿ 4 ಗಂಟೆ, 32 ನಿಮಿಷಕ್ಕೆ ಪ್ರಧಾನಿ ಬಳಸುವ ರಾಕ್ಸ್‌ ದೂರವಾಣಿಗೆ ಮಿಲಿಟರಿ ಕಂಟ್ರೋಲ್ ರೂಂನಿಂದ ದೂರವಾಣಿ ಕರೆ ಬಂದಾಗ, ಆ ಕಡೆಯಿಂದ ಕೇಳಿಬಂದ ಸುದ್ದಿ ತಿಳಿದು ಪ್ರಧಾನಿ ನಿರಾಳರಾಗುತ್ತಾರೆ.

ಪ್ರಧಾನಿಗೆ ದೂರವಾಣಿ ಕರೆ ಮಾಡಿದವರು ದೇಶದ ಭದ್ರತಾ ಸಲಹೆಗಾರ ಅಜಿತ್‌ ದೋವಲ್. ಆ ವೇಳೆ ದೋವಲ್, ಪ್ರಧಾನಿ ಮೋದಿಗೆ ಹೇಳಿದ ಒಂದು ವಾಕ್ಯವಿದು: ‘‘ಮಿಷನ್‌ ಯಶಸ್ವಿಯಾಗಿದೆ, ಹುಡುಗರು ಸುರಕ್ಷಿತವಾಗಿ ಮರಳಿದ್ದಾರೆ.” ಖುಷಿಯಿಂದ, ‘‘ವೆಲ್ಡನ್‌ ಅಜಿತ್‌,” ಎಂದು ಅಭಿನಂದಿಸಿದ ಮೋದಿ, ಮರುಕ್ಷಣ ಫೋನಾಯಿಸಿದ್ದು ವಿದೇಶಾಂಗ ಕಾರ್ಯದರ್ಶಿ ಎಸ್‌ ಜಯಶಂಕರ್‌ ಅವರಿಗೆ.

ಬೆಳಗಿನ ಒಂಬತ್ತು ಗಂಟೆಯೊಳಗೆ ವಿಶ್ವದ ಪ್ರಮುಖ ಮೂವತ್ತು ರಾಷ್ಟ್ರಗಳ ಮುಖ್ಯಸ್ಥರಿಗೆ ದಾಳಿಯ ಅನಿವಾರ್ಯತೆ ತಿಳಿಸಿಯಾಗಿತ್ತು. ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ರಜೋರಿಯಲ್ಲಿ ಶೆಲ್ ದಾಳಿ ಆರಂಭಿಸಿದಾಗ, ‘‘ಒಂದು ಗುಂಡಿಗೆ ಎರಡು ಗುಂಡು ಹಾರಿಸಿ,” ಎಂದು ಬಿಎಸ್‌ಎಫ್‌ ಮುಖ್ಯಸ್ಥರಿಗೆ ಆದೇಶ ನೀಡಿ ನಿದ್ದೆಗೆ ಜಾರಿದ್ದರು ಮೂರು ದಿನಗಳಿಂದ ನಿದ್ದೆ ಮಾಡಿರದ ಅಜಿತ್‌ ದೋವಲ್. ಉರಿ ದಾಳಿ ನಡೆದ ದಿನವೇ ಪ್ರತಿದಾಳಿ ನಡೆಸಲು ತೀರ್ಮಾನಿಸಿದ್ದ ಪ್ರಧಾನಿ ಮೋದಿ, ಸರ್ಜಿಕಲ್ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿ ಹೊರಿಸಿದ್ದೇ ಈ ಅಜಿತ್‌ ದೋವಲ್ ಎಂಬ ಕೇರಳ ಕೇಡರ್‌ನ ನಿವೃತ್ತ ಐಪಿಎಸ್‌ ಅಧಿಕಾರಿಗೆ. ದೋವಲ್ ದೇಶದ ಅತ್ಯಂತ ಚತುರ ಚಾಣಾಕ್ಷ ಬೇಹುಗಾರರೂ ಹೌದು.

ಗುಪ್ತಚರ ಇಲಾಖೆ ಕಾರ್ಯಾಚರಣೆಗಳಲ್ಲಿ ಭಾಗಹಿಸಿದ ಇವರು, 2004-05 ರಲ್ಲಿ ಅದರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಾರತದ ಎರಡನೇ ಅತ್ಯುನ್ನತ ಶಾಂತಿ ಶೌರ್ಯ ಪ್ರಶಸ್ತಿ ಕೀರ್ತಿಚಕ್ರದಿಂದ ಇವರು ಪುರಸ್ಕೃತರಾಗಿದ್ದಾರೆ. ಗುಪ್ತಚರ ಇಲಾಖೆಯಿಂದ ನಿವೃತ್ತರಾದ ಬಳಿಕ ಇವರು ತಮ್ಮದೇ ಆದ ಥಿಂಕ್ ಟ್ಯಾಂಕ್ ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಶನ್ ಸ್ಥಾಪಿಸಿದರು.

ಇದೀಗ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅವರು ಡೋಕ್ಲಾಂ ವಿಷಯವನ್ನು ಸದ್ಯದ ಮಟ್ಟಿಗೆ ಬಗೆಹರಿಸಲು ಯಶಸ್ವಿಯಾಗಿದ್ದಾರೆ. ಅವರ ರಾಜತಾಂತ್ರಿಕ ನೈಪುಣ್ಯತೆಗೆ ಇಡೀ ಭಾರತವೇ ಭೇಷ್ ಎಂದಿದೆ.

ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತಿಯಾಗಿರುವ ಅಜಿತ್ ದೋವಲರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ!!

ಹ್ಯಾಪಿ ಬರ್ತ್ ಡೇ ಅಜಿತ ದೋವಲ್ ಜೀ!!!!

 •  
  2.4K
  Shares
 • 2.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com