Connect with us
Loading...
Loading...

ಅಂಕಣ

ಭಾರತ ಇಸ್ರೇಲ್ ನಡುವೆ ಅಷ್ಟು ಉತ್ತಮ ಸ್ನೇಹವಿದ್ದರೂ ಮೊನ್ನೆ ಮೊನ್ನೆ ಜೆರುಸೆಲೆಂ ವಿಷಯದಲ್ಲಿ ಇಸ್ರೇಲ್ ವಿರುದ್ಧ ಭಾರತ ಮತಚಲಾಯಿಸಿತ್ತು?

Published

on

 • 2.7K
 •  
 •  
 •  
 •  
 •  
 •  
 •  
  2.7K
  Shares

ಪ್ರಧಾನಿ ಮೋದಿ “ಜೆರುಸೆಲೆಂ ಪಟ್ಟಣ ಇಸ್ರೇಲ್ ರಾಜಧಾನಿಯಾಗಬೇಕು” ಎಂದು ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮುಂದಿಟ್ಟ ರೆಸೊಲ್ಯೂಷನ್ ವಿರುದ್ಧ ಅಂದರೆ ಇಸ್ರೇಲ್ ವಿರುದ್ಧ ಮತಚಲಾಯಿಸಿದ್ಯಾಕೆ ಅಂತ ತಿಳಿಯಬೇಕಾದರೆ ಮೊದಲು ಜೆರುಸೆಲೆಂ ಇತಿಹಾಸ ತಿಳಿದುಕೊಳ್ಳಲೇಬೇಕು. ಇಲ್ಲವಾದರೆ ಈ ಘಟನೆಯ ಬಗ್ಗೆ ನಿಮಗೆ ಅರ್ಥವಾಗೋಕೆ ಸಾಧ್ಯವೇ ಇಲ್ಲ.

ಬನ್ನಿ ಜೆರುಸೆಲೆಂ ಇತಿಹಾಸವನ್ನೊಮ್ಮೆ ನೋಡೋಣ!!

ಅದು ಜೆರುಸೆಲೆಂ ಎಂಬ ಪಟ್ಟಣ, ಜೆರುಸೆಲೆಂ ಮುಸಲ್ಮಾನರಿಗೆ, ಕ್ರಿಶ್ಚಿಯನ್ನರಿಗೆ ಹಾಗು ಇಸ್ರೇಲಿನ ಯಹೂದಿಗಳಿಗೂ ಪುಣ್ಯಕ್ಷೇತ್ರ.

ಆ ಮೂರೂ ಮತದವರೂ ಆ ಪಟ್ಟಣ ನಮ್ಮದೇ ಅನ್ನುವ ವಾದ ಮಾಡ್ತಾರೆ, ಕ್ರಿಶ್ಚಿಯನ್ನರಿಗಿಂತ ಜಾಸ್ತಿ ಮುಸಲ್ಮಾನರು ಜೆರುಸೆಲೆಂ ನಮ್ಮ ಊರು ಅಂತ ಸದಾ ಕ್ಯಾತೆ ತೆಗೆಯುತ್ತಲೇ ಇರುತ್ತೆ.

ಈಗ ಭಾರತ ಪಾಕಿಸ್ತಾನದ ಸಂಬಂಧ ಹೇಗಿದೆಯೋ, ಪಾಕಿಸ್ತಾನ ಹೇಗೆ ಯಾವಾಗಲೂ ಭಾರತದ ವಿರುದ್ಧ ಕತ್ತಿ ಮಸಿಯುತ್ತಿರುತ್ತದೋ ಅದೇ ರೀತಿಯಲ್ಲಿ ಇಸ್ರೇಲ್ ವಿರುದ್ಧ ಪ್ಯಾಲೇಸ್ತೀನ್ ಎಂಬ ಮುಸ್ಲಿಂ ರಾಷ್ಟ್ರ ಕತ್ತಿ ಮಸಿಯುತ್ತಲೇ ಇರುತ್ತೆ ಇಸ್ರೇಲ್ ನಿಂದ ಸೋತು ಸುಣ್ಣವಾಗುತ್ತಲೇ ಇರುತ್ತದೆ. ಆದರೂ ಇಸ್ರೇಲ್ ವಿರುದ್ಧದ ತನ್ನ ನರಿ ಬುದ್ಧಿ ತೋರಿಸುವುದನ್ನ ನಿಲ್ಲಿಸೋದೇ ಇಲ್ಲ.

ಜೆರುಸೆಲೆಂ ಪಟ್ಟಣ ಇಸ್ರೇಲ್ ಹಾಗು ಪ್ಯಾಲೇಸ್ತೀನ್ ಎರಡೂ ದೇಶಗಳ ನಡುವೆ ಹಂಚಿ ಹೋಗಿದೆ, ಪೂರ್ಣ ಜೆರುಸಲೆಂ ನಮ್ದು ಎಂದು ಇಸ್ರೇಲ್ ಒಂದು ಕಡೆ ವಾದ ಮಾಡಿದರೆ ಮತ್ತೊಂದು ಕಡೆ ಪ್ಯಾಲೆಸ್ತೀನ್ ಹಾಗು ಮುಸ್ಲಿಂ ರಾಷ್ಟ್ರಗಳು ಅದು ನಮ್ಮದು ಅಂತ ಸದಾ ಇಸ್ರೇಲ್ ವಿರುದ್ಧ ಕತ್ತಿ ಮಸಿಯುತ್ತಲೇ ಇರುತ್ತವೆ.

ಅಷ್ಟಕ್ಕೂ ಜೆರುಸೆಲೆಂ ಗಾಗಿ ಯಾಕೆ ಇಷ್ಟು ಕದನಗಳು?

ಜೆರುಸೆಲೆಂ ಜಗತ್ತಿನ ಅತೀ ಪುರಾತನ ಪಟ್ಟಣಗಳಲ್ಲೊಂದು,‌ ಜೆರುಸೆಲೆಂ ಕ್ರಿಶ್ಚಿಯನ್ನರ ಚರ್ಚ್, ಮುಸಲ್ಮಾನರ ಮಸೀದಿ ಹಾಗು ಯಹೂದಿಗಳ ಸಿನಾನೇಜ್(ಪ್ರಾರ್ಥನಾ ಸ್ಥಳ) ವಾಗಿದ್ದು ಒಂದೇ ಮಂದಿರ ಈ ಮೂವರರ ಶೃದ್ಧಾಕೇಂದ್ರವೂ ಗಗಿದೆ.

ಈ ಜೆರುಸೆಲೆಂ ನ ಇತಿಹಾಸ ನೋಡೋಣ ಬನ್ನಿ!!

ಕ್ರಿ.ಪೂ.1000 ದಲ್ಲಿ ಕಿಂಗ್ ಡೇವಿಡ್ ಜೆರುಸೆಲೆಂನ್ನ ಗೆದ್ದು ಯಹೂದಿಗಳ ಊರಾಗಿ ಮಾಡಿದ. ಮುಂದಿನ ನೂರಾರು ವರ್ಷಗಳಲ್ಲಿ ಯಹೂದಿಗಳಿಂದ ಏಸುವಿನ ಮೂಲಕ ಹೊಸ ಧರ್ಮ ಕ್ರಿಶ್ಚಿಯಾನಿಟಿ ಸ್ಥಾಪಿಸಿದ ಕ್ರಿಶ್ಚಿಯನ್ನರು ಯಹೂದಿಗಳೆ ನಮ್ಮ ದೇವರು ಏಸುವನ್ನ ಕೊಂದ ಪಾಪಿಗಳು ಅಂತ ಕಂಡ ಕಂಡಲ್ಲಿ ಯಹೂದಿಗಳ ವಿರುದ್ಧ ಕ್ರೂಸೇಡ್ ಆರಂಭಿಸಿಬಿಟ್ಟರು.

ಕ್ರೂಸೇಡ್ ಎಂದರೆ ತಮ್ಮ ಮತವನ್ನ, ದೇವರನ್ನ ಒಪ್ಪದವರನ್ನ ಕೊಂದುಬಿಡುವುದು.

ಕಿಂಗ್ ಡೇವಿಡ್ ನಿಂದ ಯಹೂದಿಗಳ ಅಧಿಪತ್ಯದಲ್ಲಿದ್ದ ಜೆರುಸೆಲೆಂ ಪಟ್ಟಣವನ್ನ ಮುಂದೆ ಕ್ರಿಶ್ಚಿಯನ್ನರು, ಮುಸಲ್ಮಾನರು ದಾಳಿ ಮಾಡಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದೂ ಉಂಟು.

ಕ್ರಿ.ಶ 1567 ರಿಂದ 1917 ರ ಸುದೀರ್ಘ 400 ವರ್ಷಗಳ ಕಾಲ ಜೆರುಸೆಲೆಂ ಒಟ್ಟೋಮನ್ ಅಧಿಪತ್ಯದಡಿಯಲ್ಲಿ ಮುಸ್ಲಿಂರ ಆಡಳಿತಕ್ಕೊಳಪಟ್ಟಿತು.

ಈ ಸಮಯದಲ್ಲಿ ಯಹೂದಿಗಳನ್ನ ಅತ್ತ ಕ್ರಿಶ್ಚಿಯನ್ನರು ಕ್ರೂಸೇಡ್ ಮೂಲಕ ಕೊಲ್ಲುತ್ತಿದ್ದರೆ ಮತ್ತೊಂದೆಡೆ ಮುಸಲ್ಮಾನರು ಜಿಹಾದ್ ಹೆಸರಿನಲ್ಲಿ‌ ಯಹೂದಿಗಳ ಮಾರಣಹೋಮ ಮಾಡಿ ಬಿಟ್ಟರು.

ಜಗತ್ತಿನ ವಿವಿಧ ದೇಶಗಳಿಗೆ ಪ್ರಾಣ ಭಿಕ್ಷೆ ಬೇಡಿ ಯಹೂದಿಗಳು ದಿಕ್ಕಾಪಾಲಾಗಿ ಹೋದರು, ಆದರೆ ಯಾವ ರಾಷ್ಟಗಳಿಗೆ ಹೋದರೂ “ನಿಮಗೆ ನಮ್ಮ ದೇಶದಲ್ಲಿ ಜಾಗ ಇಲ್ಲ” ಎನ್ನುವ ಉತ್ತರ ಅಥವ ಮತ್ತೆ ಮಾರಣಹೋಮದ ಮೂಲಕ ಸಾಯುವ ಸ್ಥಿತಿಗೆ ಯಹೂದಿಗಳು ತಲುಪಿಬಿಟ್ಟರು.

ಅಂತಹ ಸಮಯದಲ್ಲಿ ಯಾವುದೇ ರಾಷ್ಟ್ರಗಳು ಯಹೂದಿಗಳಿಗೆ ಜಾಗ ನೀಡದಿದ್ದ ಸಂದರ್ಭದಲ್ಲಿ ಅವರಿಗೆ ನೆಲೆ ನೀಡಿ ಅವರ ಧರ್ಮಾಚರಣೆ ಮಾಡಲು ಅವಕಾಶ ನೀಡಿದ್ದು ಭಾರತವೊಂದೇ.

ಅದಕ್ಕಾಗಿಯೇ ಅಲ್ಲವೇ ಇಸ್ರೇಲ್ ಪ್ರಧಾನಿ ಭಾರತದ ಕುರಿತಾಗಿ ಮಾತನಾಡುವಾಗ “ಭಾರತ ನಮ್ಮ ಧರ್ಮಭೂಮಿ ಇಸ್ರೇಲ್ ನಮ್ಮ ಮಾತೃಭೂಮಿ” ಅಂತ ಹೇಳೋದು.

ಅದಿರಲಿ‌ ಜೆರುಸೆಲೆಂ ಇತಿಹಾಸಕ್ಕೆ ಮರಳೋಣ!!

ಯಹೂದಿಗಳ ಮೂಲ ಭಾಷೆಯಾದ ‘ಹಿಬ್ರೂ’ ಭಾಷೆಯ ಬೈಬಲ್ ನಲ್ಲಿ ಜೆರುಸೆಲೆಂ ಪಟ್ಟಣದ ಉಲ್ಲೇಖವಿದೆ.
ಅದರ ಪ್ರಕಾರ ಯಹೂದಿಗಳ ಮೊದಲ ಪ್ರವಾದಿ ಅಬ್ರಹಾಂ ತನ್ನ ಮಕ್ಕಳನ್ನು ದೇವರಿಗೆ ಅರ್ಪಿಸಿದ ಎನ್ನುವ ಸಾವಿರಾರು ವರ್ಷಗಳ ಹಿಂದೆ ನಡೆದಿದ್ದ ಕಥೆಗಳಿವೆ.

ಆದರೆ ಯಾವಾಗ ಕ್ರಿಶ್ಚಿಯನ್ನರು ಜೆರುಸೆಲೆಂ ವಶಪಡಿಸಿಕೊಂಡರೋ ಆಗ ಯಹೂದಿಗಳು ಜೆರುಸೆಲೆಂಗೆ ಹೋಗುವುದನ್ನ ಕ್ರಿಶ್ಚಿಯನ್ನರು ನಿಷೇಧಿಸಿಬಿಟ್ಟಿದ್ದರಿಂದ ಯಹೂದಿಗಳು ಜೆರುಸೆಲೆಂ ದಿಕ್ಕಿನ ಕಡೆ ಮುಖ ಮಾಡಿ ಪ್ರಾರ್ಥನೆ ಸಲ್ಲಿಸೋಕೆ ಶುರುಮಾಡಿದರು.

ಮುಂದೆ ಒಟ್ಟೋಮನ್ ಸಾಮ್ರಾಜ್ಯ ಜೆರುಸೆಲೆಂ ವಶಪಡಿಸಿಕೊಂಡರು. ಇದರ ಹಿಂದೆಯೂ ಒಂದು ಇತಿಹಾಸವಿದೆ!!

ಮುಸಲ್ಮಾನರ ಪ್ರಕಾರ ತಮ್ಮ ಪ್ರವಾದಿ ಪ್ರಾಫೆಟ್ ಮೊಹಮ್ಮದ್ ಕೊನೆಯ ಬಾರಿಗೆ ಭೇಟಿ ಕೊಟ್ಟ ಸ್ಥಳವೇ ಈ ಜೆರುಸೆಲೆಂ ಆಗಿತ್ತಂತೆ. ಕೊನೆಯ ಬಾರಿಗೆ ಮೆಕ್ಕಾದಿಂದ ಮೊಹಮ್ಮದ್ ಈ ಸ್ಥಳಕ್ಕೆ ಬಂದು ಇಲ್ಲಿಂದಲೇ ಸ್ವರ್ಗದಲ್ಲಿದ್ದ ದೇವರ ಜೊತೆ ಮಾತನಾಡಿದ್ದನಂತೆ.

ಪ್ರಾಫೆಟ್ ಮೊಹಮ್ಮದ್ ಮೆಕ್ಕಾದಿಂದ ರಾತ್ರೋರಾತ್ರಿ ಜೆರುಸೆಲೆಂ ಗೆ ಬಂದದ್ದು ಹಾಗು ಸ್ವರ್ಗದ ದೇವರ ಜೊತೆ ಮಾತನಾಡಿದ್ದ ದಿನಗಳನ್ನ ಮುಸಲ್ಮಾನರು ಪವಿತ್ರ ದಿನಗಳಂತ ಭಾವಿಸುತ್ತಾರೆ.

ಪ್ರಾಫೆಟ್ ಮೊಹಮ್ಮದ್ ದೇವರ ಜೊತೆ ಮಾತನಾಡುವಾಗ ದೇವರು ನೀನು ಸಲಾತ್ ನ್ನ ದಿನಕ್ಕೆ 50 ಬಾರಿ ಪಠಣ ಮಾಡಬೇಕು ಅಂದರಂತೆ ಅದಕ್ಕೆ ಮೊಹಮ್ಮದ್ ದೇವರಿಗೆ ಕಾಡಿಬೇಡಿ ಅದನ್ನ 5 ಕ್ಕೆ ಇಳಿಸಿದರಂತೆ, ಇದೇ ಕಾರಣಕ್ಕೆ ಮುಸಲ್ಮಾನರು ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಾರೆ.

ಮುಂದೆ ಅಂದರೆ 1917 ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ಆಡಳಿತ ಜೆರುಸೆಲೆಂ ನಲ್ಲಿ ಅಂತ್ಯವಾಗಿತ್ತು.

ಆದರೆ ಕ್ರಿಶ್ಚಿಯನ್ನರು ಯಾಕೆ ಜೆರುಸೆಲೆಂನ್ನ ತಮ್ಮ ಪ್ರಾರ್ಥನಾ ಸ್ಥಳವೆಂದು ಹೋಗುತ್ತಾರೆ ಗೊತ್ತಾ?

ಜೆರುಸೆಲೆಂ ನಲ್ಲಿ ಕ್ರಿ.ಶ.334 ರಲ್ಲಿ ಕ್ರಿಶ್ಚಿಯನ್ನರು ಚರ್ಚ್ ನ್ನ ಸ್ಥಾಪನೆ ಮಾಡುತ್ತಾರೆ. ಜೀಸಸ್ ರನ್ನ ಇದೇ ಸ್ಥಳದಲ್ಲಿ crucify ಮಾಡಿದ್ದು, ಅಂದರೆ ಶಿಲುಬೆಗೇರಿಸಿದ್ದು ಇದೇ ಜಾಗದಲ್ಲಂತೆ ಹಾಗಾಗಿ ಈ ಜಾಗವನ್ನ ಕ್ರಿಶ್ಚಿಯನ್ನರೂ ತಮ್ಮ ಸ್ಥಾನವೆಂದು ವಾದಿಸುತ್ತಾರೆ.

ಆಗ ಜೆರುಸೆಲೆಂ ಪಟ್ಟಣವಿದ್ದ ರಾಷ್ಟ್ರ ಪ್ಯಾಲೇಸ್ತೀನ್ ಆಗಿತ್ತು ಅನ್ನೋದು ಮುಸಲ್ಮಾನರ ವಾದ,‌ ಹಾಗು ಕ್ರಿಶ್ಚಿಯನ್ನರು ಅದು ಏಸುವನ್ನ ಶಿಲುಬೆಗೇರಿಸಿದ ಸ್ಥಳ ಅನ್ನುವ ವಾದ ಮಾಡುತ್ತಾರೆ.

1948 ರಲ್ಲಿ ಪ್ಯಾಲೇಸ್ತೇನಿನಿಂದ ಸ್ವಾತಂತ್ರ್ಯ ಪಡೆದ ದೇಶ ಇಸ್ರೇಲ್ ಎಂಬ ದೇಶವಾಗಿ ಹೊರಹೊಮ್ಮಿತು!!

ಜಗತ್ತಿನಾದ್ಯಂತ ಹರಿದು ಹಂಚಿಹೋಗಿದ್ದ ಯಹೂದಿಗಳು ಸಂಕಲ್ಪ ಮಾಡಿ ಆ ಎಲ್ಲ ದೇಶಗಳಿಂದಲೂ ಹೊರಟು ವಾಪಸ್ ತಮ್ಮ ತಾಯ್ನಾಡು ಇಸ್ರೇಲ್ ಸೇರಿದ್ದರು. ಸಮಯದಲ್ಲಿ ಭಾರತದಲ್ಲಿದ ಯಹೂದಿಗಳೂ ಭಾರತದ ಮಣ್ಣಿಗೆ ನಮಸ್ಕರಿಸಿ ಇಸ್ರೇಲಿಗೆ ತೆರಳಿದ್ದರು.

ಮುಂದೆ 1967 ರಲ್ಲಿ ಇಸ್ರೇಲ್ ಹಾಗು ಈಜಿಪ್ತ್ ನ ಸುತ್ತಮುತ್ತಲಿನ ರಾಷ್ಟ್ರಗಳ(ಯೂನೈಟೆಡ್ ಅರಬ್ ರಿಪಬ್ಲಿಕ್) ನಡುವೆ ಯುದ್ಧ ನಡೆಯುತ್ತೆ!!

6 ದಿನಗಳ ಕಾಲ ನಡೆದ ಘನಘೋರ ಯುದ್ಧದಲ್ಲಿ ಇಸ್ರೇಲ್ ದೇಶ ಎಷ್ಟು ರಾಷ್ಟ್ರಗಳನ್ನ ಸದೆಬಡಿದಿತ್ತು ಗೊತ್ತಾ?

1967 ರ ಯುದ್ಧದಲ್ಲಿ ಇಸ್ರೇಲ್ ಏಕಾಂಗಿಯಾಗಿ ಒಂದು ಕಡೆಯಾದರೆ, ಶತ್ರುರಾಷ್ಟ್ರಗಳ ಸಾಲಿನಲ್ಲಿ ಈಜಿಪ್ತ್, ಜೋರ್ಡನ್, ಸಿರಿಯಾ, ಲೆಬನಾನ್, ಇರಾಕ್, ಅಲ್ಜೀರಿಯ, ಕುವೈತ್, ಮೊರೊಕ್ಕೊ, ಪಾಕಿಸ್ತಾನ, ಸೂಡಾನ್, ಟುನಿಶಿಯಾ ಒಂದು ಕಡೆ ಇದ್ದವು.

ಇಷ್ಟು ರಾಷ್ಟ್ರಗಳು ಇಸ್ರೇಲ್ ಎಂಬ ಪುಟ್ಟ ರಾಷ್ಟ್ರದ ವಿರುದ್ಧ ಮುಗಿಬಿದ್ದರೂ ನೀವು ನಂಬಲಿಕ್ಕಿಲ್ಲ ಇಸ್ರೇಲ್ ಏಕಾಂಗಿಯಾಗಿ ಈ ಎಲ್ಲಾ ರಾಷ್ಟ್ರಗಳ ಸೊಕ್ಕನ್ನ ಕೇವಲ ಆರು ದಿನಗಳಲ್ಲಿ ಸದೆಬಡಿದಿತ್ತು.

ಯುದ್ಧ ಗೆದ್ದ ಈ ಸಂದರ್ಭದಲ್ಲಿ ಇಸ್ರೇಲ್ ಜೆರುಸೆಲೆಂನ್ನ ತನ್ನ ರಾಜಧಾನಿ ಅಂತ ಘೋಷಿಸಿಬಿಟ್ಟಿತು ಆದರೆ ಅಂತರಾಷ್ಟ್ರೀಯ ಸಂಸ್ಥೆ ಇದಕ್ಕೆ ಮಾನ್ಯತೆ ನೀಡದೆ ಜೆರುಸೆಲೆಂ ನ್ನ ಇಸ್ರೇಲ್ ಹಾಗು ಪ್ಯಾಲೇಸ್ತೀನ್ ಎರಡೂ ರಾಷ್ಟ್ರಗಳಿಗೆ ಹಂಚಿಬಿಟ್ಟಿತು. ಆದರೆ ಇಸ್ರೇಲ್ ಮಾತ್ರ ಜೆರುಸೆಲೆಂನ್ನ ತನ್ನ ರಾಜಧಾನಿಯಂತಲೇ ಹೇಳಿಕೊಳ್ಳುತ್ತೆ.

ಅತ್ತ ಪ್ಯಾಲೇಸ್ತೀನ್ ಹಾಗು ಉಳಿದ ಮುಸ್ಲಿಂ ರಾಷ್ಟ್ರಗಳು ಜೆರುಸೆಲೆಂನ್ನ ಮುಸ್ಲಿಂ ರಾಷ್ಟ್ರವೇ ಅಂತ ಈಗಲೂ ಕ್ಯಾತೆ ತೆಗೆಯುತ್ತಲೇ ಇರುತ್ತವೆ.

ಮಹತ್ವದ ಬೆಳವಣಿಗೆಯಲ್ಲಿ ಇತ್ತೀಚೆಗಷ್ಟೇ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೆರುಸೆಲೆಂನ್ನ ಇಸ್ರೇಲ್ ನ ರಾಜಧಾನಿ ಅಂತ ಘೋಷಿಸಲು ಸಜ್ಜಾಗಿದ್ದರು!!

ಇದಕ್ಕಾಗಿ ಅವರು 128 ರಾಷ್ಟ್ರಗಳ ಸಮ್ಮುಖದಲ್ಲಿ, ಡಿಸೆಂಬರ್ 2017 ರಲ್ಲಿ, UN general assembly resolution ನಲ್ಲಿ ಭಾರತಕ್ಕೂ ತನ್ನ ಪರವಾಗಿ ಮತ ಹಾಕುವಂತೆ ಕೇಳಿತ್ತು ಅಮೇರಿಕಾ!

ಆದರೆ, ಭಾರತ ಅಮೇರಿಕಾದ ವಿರುದ್ಧ, ಅಂದರೆ ಇಸ್ರೇಲ್ ನ ರಾಜಧಾನಿ ಜೆರುಸಲೇಮ್ ಆಗಬೇಕೆಂಬ ಅಮೇರಿಕಾದ ಪ್ರಸ್ತಾಪಕ್ಕೆ ವಿರೋಧಿಸಿ ಮತ ಚಲಾಯಿಸಿಬಿಟ್ಟಿತ್ತು.

ಭಾರತ ಇಸ್ರೇಲ್ ಎರಡೂ ರಾಷ್ಟ್ರಗಳ ನಡುವೆ ಅಷ್ಟು ಒಳ್ಳೆಯ ಬಾಂಧವ್ಯವಿದ್ದರೂ ಭಾರತವೇಕೆ ಇಸ್ರೇಲ್ ವಿರುದ್ಧ ಮತ ಹಾಕಿದ್ದು ಗೊತ್ತಾ?

ಇಸ್ರೇಲ್ ಭಾರತಕ್ಕೇ ಅತೀ ಆತ್ಮೀಯ ರಾಷ್ಟ್ರವೇ, ಅದರಲ್ಲಿ ಸಂದೇಹವೇ ಇಲ್ಲ ಆದರೆ ಜಗತ್ತಿನಲ್ಲಿರುವ ಎಲ್ಲ ಮುಸ್ಲಿಂ ರಾಷ್ಟ್ರಗಳೂ ಇಸ್ರೇಲನ್ನ ಕಂಠಮಟ್ಟ ದ್ವೇಷಿಸುತ್ತವೆ. ಸಮತ ಸಿಕ್ಕರೆ ಇಸ್ರೇಲ್ ನ್ನ ಉಡಾಯಿಸೋಕೆ ತುದಿಗಾಲಲ್ಲಿ ನಿಂತಿವೆ.

ಇಂಥ ಸಂದರ್ಭದಲ್ಲಿ ಇಸ್ರೇಲ್ ವಿರುದ್ಧ ಮತ ಹಾಕಿದ ಭಾರತದ ನಿರ್ಣಯವನ್ನ ಮುಸ್ಲಿಂ ರಾಷ್ಟ್ರಗಳು ಹಾಡಿ ಹೊಗಳಿದ್ದವು.

ಇಸ್ರೇಲ್ ವಿರುದ್ಧ ಮತ ಹಾಕುವುದರ ಹಿಂದೆಯೂ ಪ್ರಧಾನಿ ಮೋದಿಯ ಚಾಣಾಕ್ಷತೆ ಇತ್ತು!!

ಜಗತ್ತಿನಾದ್ಯಂತ ಭಯೋತ್ಪಾದನೆಯನ್ನ ಪೋಷಿಸುತ್ತಿರುವ ಮುಸ್ಲಿಂ ರಾಷ್ಟ್ರಗಳನ್ನ ಹೆಡೆಮುರಿ ಕಟ್ಟುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಾಗಿ ಅವುಗಳನ್ನ ಕೆಡುವುದು ಆಗಿದೆ.

ಇಸ್ರೇಲ್ ವಿರುದ್ಧ ಮತ ಹಾಕಿದ್ದ ಭಾರತ ಆ ಮುಸ್ಲಿಂ ರಾಷ್ಟ್ರಗಳ ವಿರೋಧ ಕಟ್ಟಿಕೊಳ್ಳುವ ಗೋಜಿಗೆ ಹೋಗಲಿಲ್ಲ.

ಕಾರಣ ಮಿಡಲ್ ಈಸ್ಟ್ ರಾಷ್ಟ್ರಗಳಿಂದ ಭಾರತಕ್ಕೆ ಉದ್ಯಮದಲ್ಲಿ, ಇಂಧನದಲ್ಲಿ, ಎಂಬ ಹಲವು ಘಟಕಗಳಲ್ಲಿ ಸಹಕಾರವಿದೆ!

2016-17 ರಲ್ಲಿ ಅರಬ್ ರಾಷ್ಟ್ರಗಳಿಗೆ ವ್ಯಾಪಾರ ವಹಿವಾಟು ನಡೆದಿರುವುದು ಬರೋಬ್ಬರಿ 121 ಬಿಲಿಯನ್ ಡಾಲರ್ ಗಳು!

ಅಂದರೆ, ಭಾರತದ ಒಟ್ಟಾರೆ ವಹಿವಾಟಿನ 18.25 % ರಷ್ಟು! ಅದೇ ., ಇಸ್ರೇಲಿನ ಜೊತೆಗಿರುವುದು 5 ಬಿಲಿಯನ್ ಡಾಲರ್ ಗಳು! ಒಟ್ಟಾರೆ, 1% ಕೂಡ ಆಗಲಾರದು!

ಯಾವಾಗ ಮೋದಿ 2016 ರಲ್ಲಿ ಸೌದಿಗೆ ಭೇಟಿ ಕೊಟ್ಟರೋ, ಸೌದಿಯ ರಾಜ ದೇಶದ ಗಡಿ ಭದ್ರತಾ ವ್ಯವಸ್ಥೆ, ವ್ಯಾಪಾರ ಮತ್ತು ರಕ್ಷಣಾ ವಲಯದಲ್ಲಿ ಸಹಕರಿಸಬೇಕೆಂದು ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಂಡಿದ್ದು ಜಗತ್ತಿಗೆ ಅಚ್ಚರಿ ಮೂಡಿಸಿತು!

ಅದಲ್ಲದೇ, ಹಿಂದೂ ಮಹಾಸಾಗರ ಮತ್ತು
ಕಡಲ್ಗಾವೆಯ ರಕ್ಷಣೆಯ ಬಗ್ಗೆಯೂ ಒಪ್ಪಂದ ಮಾಡಿಕೊಂಡರು ಸೌದೀ ರಾಜ! ಭಾರತಕ್ಕೂ ಸಹ, ವ್ಯಾಪಾರ ವಹಿವಾಟಿನಲ್ಲಿ ಬರೋಬ್ಬರಿ ಬಲ ಕೊಡುವ ಗಲ್ಫ್ ರಾಷ್ಡ್ರಗಳನ್ನು ಕಳೆದುಕೊಳ್ಳುವ ಇರಾದೆಯಿರಲಿಲ್ಲ!

ವಾಸ್ತವವಾಗಿ, ಜೆರುಸಲೇಮ್ ಅನ್ನು ಇಸ್ರೇಲ್ ನ ರಾಜಧಾನಿಯನ್ನಾಗಿ ಮಾಡಬೇಕೆಂಬ ಹೊಸ ಯೋಚನೆ ಮತ್ತು ಭಾರತ ಅವೆರಡೂ ರಾಷ್ಡ್ರಗಳ ವಿರುದ್ಧ ನಿಂತಿದ್ದೆಲ್ಲ ಪ್ರಧಾನಿ ಮೋದಿ , ಡೊನಾಲ್ಡ್ ಟ್ರಂಪ್ ಮತ್ತು ನೇತಾನ್ಯಹು ಜೊತೆ ಸೇರಿಕೊಂಡು ರೂಪಿಸಿದ ಕಾರ್ಯತಂತ್ರ!

ಒಂದು ವೇಳೆ ಭಾರತವೇನಾದರೂ ಇಸ್ರೇಲ್ ಪರ ಮತ ಚಲಾಯಿಸಿದ್ದರೆ ಭಾರತದಲ್ಲಿನ ಭಾರತವಿರೋಧಿ ಶಕ್ತಿಗಳೇ ಭಾರತದ ವಿರುದ್ಧ ತಿರುಗಿ ಬೀಳುತ್ತಿದ್ದವೇನೋ.

ಭಾರತ ಯಾವತ್ತಿದ್ದರೂ ಇಸ್ರೇಲಿನ ಪರ ಇರುವ ರಾಷ್ಟ್ರವೇ, ಮುಸ್ಲಿಂ ರಾಷ್ಟ್ರಗಳನ್ನ ಅವುಗಳಲ್ಲಿರುವ ಸಂಪತ್ತನ್ನೇ ಬಳಸಿಕೊಂಡು ಹೊಡೆಯುವ ತಂತ್ರ ಭಾರತದ್ದು ಅನ್ನೋದು ಇಸ್ರೇಲ್ ಹಾಗು ಅಮೇರಿಕಾ ಎರಡಕ್ಕೂ ಗೊತ್ತಿದೆ. ಇದೊಂದು ಈ ಮೂರೂ ರಾಷ್ಟ್ರಗಳ ಪಕ್ಕಾ ಪ್ರೀ ಪ್ಲ್ಯಾನ್ ಅನ್ನೋದು ಇನ್ನೂ ಮುಸ್ಲಿಂ ರಾಷ್ಟ್ರಗಳಿಗೆ ಗೊತ್ತಾಗಿಲ್ಲ.

ಒಂದು ವೇಳೆ ಭಾರತ ತನ್ನ ವಿರುದ್ಧ ಮತ ಚಲಾಯಿಸಿದೆ ಅಂತ ಇಸ್ರೇಲ್ ಕೋಪಗೊಂಡಿದ್ದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಕಾಲಿಡುತ್ತಲೇ ಇರಲಿಲ್ಲ, ಮೋದಿಯನ್ನ ಬಾಯಿ ತುಂಬ ಹಾಡಿ ಹೊಗಳುತ್ತಲೇ ಇರಲಿಲ್ಲ.

ಬೆಂಜಮಿನ್ ಹಾಗು ಮೋದಿಯವರ ಚಾಣಾಕ್ಷತನವನ್ನ, ಆಕ್ರಮಕಾರಿ ನೀತಿಯನ್ನ ಅಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಬಿಡಿ.

– Vinod Hindu Nationalist

 •  
  2.7K
  Shares
 • 2.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com