Connect with us
Loading...
Loading...

ಅಂಕಣ

ಭಾರತ ಇಸ್ರೇಲ್ ಸಂಬಂಧದ ಬಗ್ಗೆ ಗೊತ್ತಿರದಿದ್ದರೆ ಇದನ್ನೊಮ್ಮೆ ಓದಿಬಿಡಿ!!

Published

on

 • 2.1K
 •  
 •  
 •  
 •  
 •  
 •  
 •  
  2.1K
  Shares

ಈಗ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿರುವುದು ಭಾರತದ ಕಡೆಗೆ, ಕಾರಣ ಇಸ್ರೇಲ್.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಆಗಮಿಸಿರುವುದರ ಚರ್ಚೆ ಇಡೀ ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿದೆ, ವಿಶ್ವವೇ ಭಾರತದತ್ತ ಕಣ್ಣು ಮಿಟುಕಿಸದೆ ನೋಡುವಂತಾಗಿದೆ.

ಪ್ರಧಾನಿ ಮೋದಿ ಇಸ್ರೇಲ್ ಭೇಟಿ ಹಾಗು ಈಗ ಬೆಂಜಮಿನ್ ನೇತನ್ಯಾಹು ಭಾರತದ ಭೇಟಿ ಭಾರತ ಹಾಗು ಇಸ್ರೇಲ್ ಸಂಬಂಧಗಳನ್ನು ಮತ್ತಷ್ಟು ಬಲಿಷ್ಟಗೊಳಿಸುವಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ.

ಅಷ್ಟಕ್ಕೂ ಭಾರತ ಇಸ್ರೇಲ್ ದೇಶಗಳ ನಡುವೆ ಇರುವ ಸಂಬಂಧವಾದರೂ ಏನು?

ಇದಕ್ಕೆ ಉತ್ತರ ಬೇಕಾದರೆ ಇದನ್ನ ಓದಿ, ನಾವು ನಿಮ್ಮನ್ನ ಕಾರ್ಗಿಲ್ ಯುದ್ಧ ದ ದಿನಗಳಿಗೆ ಕರೆದೊಯ್ಯುತ್ತೇವೆ.

ಅಷ್ಟಕ್ಕೂ ಭಾರತ ಪಾಕ್ ನಡುವೆ ನಡೆದ ಕಾರ್ಗಿಲ್ ಯುದ್ಧಕ್ಕೂ ಇಸ್ರೇಲ್ ಭಾರತಕ್ಕೂ ಸಂಬಂಧವೇನು ಅಂತ ಯೋಚಿಸುತ್ತಿದ್ದೀರಾ? ಸಂಬಂಧವಿದೆ.

ಅದು 1999 ರ ಮೇ ತಿಂಗಳಿನ ಸಮಯ, ಪಾಕಿಸ್ತಾನಿ ಸೈನಿಕರು ಭಾರತದ ದ್ರಾಸ್ ಸೆಕ್ಟರ್ ನ್ನ ಗುಳ್ಳೆ ನರಿಗಳಂತೆ ಹೊಂಚು ಹಾಕಿ ದಾಟಿ ಬಿಟ್ಟಿದ್ದರು.

ಇದನ್ನರಿತ ಭಾರತೀಯ ಸೇನೆ ಆಪರೇಷನ್ ವಿಜಯ್ ಶುರುಮಾಡಿಬಿಟ್ಟಿತು.

ಆದರೆ ಭಾರತೀಯ ಸೇನೆಗೆ ಕೆಲವೊಂದು ಅನಿವಾರ್ಯ ನಿರ್ಬಂಧನೆಗಳಿದ್ದವು. ಯುದ್ಧದ ಸಮಯದಲ್ಲಿ ಕೆಲ ಸಂಕಷ್ಟಗಳು ಭಾರತೀಯ ಸೇನೆಗೆ ಎದುರಾಗಿದ್ದವು.

ಭಾರತೀಯ ಸೈನಿಕರಿಗೆ ಅತೀ ಎತ್ತರದ ಬೆಟ್ಟ ಗುಡ್ಡಗಾಡು ಪ್ರದೇಶಗಳಲ್ಲಿ ಯುದ್ಧ ಮಾಡುವ ತರಬೇತಿಯಿರಲಿಲ್ಲ.

ಬಾರ್ಡರ್ ದಾಟಿ ಹೋಗುವುದರಿಂದ ಪೂರ್ಣ ಪ್ರಮಾಣದ ಯುದ್ಧ ಘೋಷಣೆಯಾಗಿಬಿಡುವ ಪರಿಸ್ಥಿತಿ ಇದ್ದದ್ದರಿಂದ ತನ್ನ ಲಿಮಿಟ್ ನಲ್ಲಿ ಇರುವ ಪ್ರದೇಶಗಳಲ್ಲಿ ಮಾತ್ರ ಯುದ್ಧ ಮಾಡುವ ಅವಕಾಶ ಭಾರತೀಯ ಸೈನಿಕರಿಗಿತ್ತು.

ಭಾರತೀಯ ಏರಫೋರ್ಸ್ ಪಡೆಗೆ ಪಾಕಿಸ್ತಾನಿ ಮಿಸೈಲ್ ಗಳನ್ನ ಗುರುತಿಸುವ ಟೆಲ್ನಾಲಜಿ ಇಲ್ಲದ ಕಾರಣ ಪಾಕಿಸ್ತಾನಿ ಬಂಕರ್ ಗಳನ್ನ ಹೊಡೆದುರುಳಿಸುವುದು ಕಷ್ಟದ ಮಾತಾಗಿತ್ತು.

ಭಾರತದ ಸಾಂಪ್ರದಾಯಿಕ ಪ್ಲ್ಯಾಟಫಾರ್ಮ್ ಕೂಡ ಫೇಲ್ ಆಗಿತ್ತು. ಕಾರಣ ಪಾಕಿಸ್ತಾನಿ ಸೇನೆ ಭಾರತದ ಕ್ಯಾನಬೆರಾ PR57 ನ್ನ ಟಾರ್ಗೇಟ್ ಮಾಡಿ ಕೂತಿತ್ತು.

ಇಂತಹ ಪರಿಸ್ಥಿತಿಯಲ್ಲಿ ಎತ್ತರದ ಪ್ರದೇಶಲ್ಲಿ ಕೂತಿದ್ದ ಪಾಕಿ ಸೈನಿಕರ ಮೇಲೆ ಕಣ್ಣಿಡಲು ಭಾರತಕ್ಕೆ ಸಾಧ್ಯವೇ ಆಗದ ಪರಿಸ್ಥಿತಿ ಏರ್ಪಟ್ಟಿತ್ತು.

ಪಾಕಿಸ್ತಾನ್ ಸೈನಿಕರು ಎತ್ತರದ ದ್ರಾಸ್ ಸೆಕ್ಟರ್ ನಲ್ಲಿದ್ದ ಕಾರಣ ಪಾಕಿಸ್ತಾನಿಗಳ ಅಡುಗುದಾಣಗಳು, ಅವರ ಫೈಟರ್ ಜೆಟ್ ಪ್ಲೇನ್ ಗಳು, ಅವರ ಯುದ್ಧ ಕಾರ್ಯತಂತ್ರ, ಪಾಕಿ ಸೈನಿಕರ ಚಲನವಲನಗಳನ್ನ ಗುರುತಿಸಲು ಭಾರತಕ್ಕೆ ಸಾಧ್ಯವಾಗುವ ಲಕ್ಷಣಗಳೇ ಇರಲಿಲ್ಲ.

ಭಾರತೀಯ ನೌಕಾಪಡೆ ಪಾಕಿಸ್ತಾನಿ ಸಪ್ಲೈ ರೂಟ್ ಗಳನ್ನ ಭೇದಿಸಿ ನುಗ್ಗೋಕೆ ಯತ್ನಿಸಿದರೆ ಅತ್ತ ಪಾಕಿಸ್ತಾನ ತನ್ನ ಹಾರಪೂನ್ ಮಿಸೈಲ್ ಉಡಾಯಿಸಿಬಿಡುವ ಆತಂಕ ನೌಕಾಪಡೆಗೆ ಕಾಡಿತ್ತು.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತದ ನೆರವಿಗೆ ಬಂದದ್ದೇ ಇಸ್ರೇಲ್ ದೇಶ. ಹೌದು ಇಸ್ರೇಲ್ ತನ್ನಲ್ಲಿದ್ದ ಯುದ್ಧತಂತ್ರಗಳಿಂದ ಭಾರತದ ನೆರವಿಗೆ ಧಾವಿಸಿತ್ತು.

ಪಾಕಿ ಭಯೋತ್ಪಾದಕರು ಹಾಗು ಪಾಕಿ ಸೈನಿಕರ ಅಡುಗುದಾಣಗಳನ್ನ ಪತ್ತೆ ಹಚ್ಚಲು ಇಸ್ರೇಲ್ ತನ್ನ ಬಲಿಷ್ಟವಾದ ಟೆಕ್ನಾಲಾಜಿಯನ್ನ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತಕ್ಕೋಸ್ಕರ ಉಪಯೋಗಿಸಿತ್ತು.

ಇಸ್ರೇಲಿಗರು ಹೇಳಿ ಕೇಳಿ ಮೊದಲೇ ಟೆಕ್ನಾಲಾಜಿ ಯಲ್ಲಿ ಎತ್ತಿದ ಕೈ. ಬಾರ್ಡರ್ ಕಂಟ್ರೋಲ್, ಕೌಂಟರ್ ಟೆರರಸಿಂ, ಯುದ್ಧ ಕೌಶಲ್ಯಗಳಲ್ಲಿ ಕರತಲಾಮಲಕವಾದ ದೇಶವೆಂದರೆ ಅದು ಇಸ್ರೇಲ್

ಇಸ್ರೇಲ್ ಭಾರತಕ್ಕೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ತನ್ನ ಮಿಲಿಟರಿ ಸೆಟಲೈಟಗಳ ಸಹಾಯದಿಂದ ಮಾನವರಹಿತ ಏರಿಯಲ್ ಡ್ರೋನ್ ಗಳನ್ನ ಬಳಸಿಕೊಂಡು ಶತ್ರುಗಳ ಅಡುಗುದಾಣಗಳ ಫೋಟೋಗಳನ್ನ ತೆಗೆದುಕೊಟ್ಟಿತ್ತು.

ಇದರ ಜೊತೆ ಜೊತೆಗೆ ಬೊಫೋರ್ಸ್ ಗಾಗಿ ಬುಲೆಟ್ ಹಾಗು ಶಸ್ತ್ರಾಸ್ತ್ರ ಗಳನ್ನೂ ಭಾರತಕ್ಕೆ ನೀಡಿತು

ರಣಾಂಗಣದಲ್ಲಿರುವ ಮೀರೇಜ್ 2000H ನ್ನ ನಿಯಂತ್ರಿಸಲು ಲೆಡ್ಜರ್ ಗೈಡೆಡ್ ಮಿಸೈಲ್ ನ್ನ ಕೂಡ ಇಸ್ರೇಲ್ ಭಾರತಕ್ಕೆ ನೀಡಿತು.

ಭಾರತದ ಅಂತಹ ಕಠಿಣ ಪರಿಸ್ಥಿತಿಯಲ್ಲಿ ಇಸ್ರೇಲ್ ಭಾರತದ ಬೆನ್ನಿಗೆ ನಿಂತಿತ್ತು.

1999 ರ ಕಾರ್ಗಿಲ್ ಯುದ್ಧದಲ್ಲಿ ಇಸ್ರೇಲ್ ಭಾರತಕ್ಕೆ ನೆರವು ನೀಡದೇ ಹೋಗಿದ್ದರೆ ಪಾಕಿಸ್ತಾನದ ವಿರುದ್ಧದ ಯುದ್ಧ ಗೆಲ್ಲುವುದಕ್ಕೆ ಬಹಳ ಕಷ್ಟಪಡುವ ಸಂದರ್ಭ ಭಾರತಕ್ಕೊದಗಿ ಬರುತ್ತಿತ್ತೇನೋ.

ಇಸ್ರೇಲ್ ಸಹಾಯದಿಂದ ಭಾರತ ಪಾಕಿಸ್ತಾನಕ್ಕೆ ಕಾರ್ಗಿಲ್ ಯುದ್ಧದಲ್ಲಿ ಮಣ್ಣುಮುಕ್ಕಿಸಿತ್ತು.

ಭಾರತ ಇಸ್ರೇಲ್ ಸಂಬಂಧ ಈ ಯುದ್ಧಕ್ಕೊಂದೇ ಸಂಬಂಧವಿಲ್ಲ, ಇಸ್ರೇಲ್ ಭಾರತ ಪಾಕಿಸ್ತಾನ ನಡುವೆ ನಡೆದ 1965 ಹಾಗು 1971 ಯುದ್ಧದಲ್ಲೂ ಭಾರತದ ಜೊತೆಗೆ ನಿಂತು ಪಾಪಿ ಪಾಕಿಗಳಿಗೆ ಬುದ್ಧಿ ಕಲಿಸುವಲ್ಲಿ ನೆರವು ನೀಡಿತ್ತು.

ಭಾರತ ಇಸ್ರೇಲ್ ಜೊತೆ ಇಷ್ಟು ಆತ್ಮೀಯ ವಾಗಿರುವುದು ಕೇವಲ ಯುದ್ಧದಲ್ಲಿ ಸಹಾಯ ಮಾಡಿತ್ತು ಎಂಬ ಕಾರಣದಿಂದಲ್ಲ, ಬದಲಾಗಿ ಜಗತ್ತಿನಾದ್ಯಂತ ಮೂರು ಸಾವಿರ ವರ್ಷಗಳಿಂದ ಯಹೂದಿಗಳನ್ನ ಕೊಲ್ಲುತ್ತಿದ್ದ ರಾಷ್ಟ್ರಗಳೇ ಇರುವಾಗ ಭಾರತ ಒಂದೇ ರಾಷ್ಟ್ರ ಯಹೂದಿಗಳಿಗೆ ಭಾರತದಲ್ಲಿ ಆಶ್ರಯ ನೀಡಿದ್ದ ದೇಶವಾಗಿತ್ತು‌.

ಈ ಕಾರಣದಿಂದಲೇ ಇಸ್ರೇಲ್ ಭಾರತವೆಂದರೆ ಅಷ್ಟು ಗೌರವದಿಂದ ಕಾಣುತ್ತೆ, ಇಸ್ರೇಲ್ ನ ಅಸ್ತಿತ್ವ, ಯಹೂದಿಗಳ ಅಸ್ತಿತ್ವ ಈಗ ವಿಶ್ವದಲ್ಲಿ ಇರಬೇಕಾದರೆ ಅದಕ್ಕೆ ನೇರ ಕಾರಣ ಭಾರತ ಅಂದು ಯಹೂದಿಗಳಿಗೆ ನಮ್ಮ ದೇಶದಲ್ಲಿ ನೀಡಿದ್ದ ಆಶ್ರಯವಾಗಿತ್ತು.

ಈಗ ಇಸ್ರೇಲ್ ಪ್ರಧಾನಿ ಭಾರತಕ್ಕೆ ಬಂದಿದ್ದಾರೆ. ಇಲ್ಲಿಗೆ ಬಂದ ಬೆಂಜಮಿನ್ ಈ ಇತಿಹಾಸದ ಪುಟಗಳನ್ನೂ ಮೆಲುಕು ಹಾಕಿ ಭಾರತವನ್ನ ಹಾಡಿ ಹೊಗಳಿದ್ದಾರೆ.

ಆದರೆ ನಮ್ಮಲ್ಲಿರುವ ಕೆಲವು ಪಾಕಿಸ್ತಾನಿ ಬೆಂಬಲಿತ ಜನ ಮಾತ್ರ ಗೋ ಬ್ಯಾಕ್ ನೇತನ್ಯಾಹು ಅಂತ ಬೊಬ್ಬೆಯಿಡುತ್ತಿದ್ದಾರೆ. ಮೋದಿ ನೇತನ್ಯಾಹುವಿನ ಅಪ್ಪುಗೆ ಈ ದರಿದ್ರಜೀವಿಗಳಿಗೆ ಅದೆಲ್ಲೆಲ್ಲೋ ಬೆಂಕಿಯಟ್ಟಂರ ಅನುಭವ ಮಾಡಿಸುತ್ತಿರೋದಂತೂ ಸುಳ್ಳಲ್ಲ!!!

– Vinod Hindu Nationalist

 •  
  2.1K
  Shares
 • 2.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com