Connect with us
Loading...
Loading...

ಪ್ರಚಲಿತ

ಭಾರತ ಗಂಡೆದೆಯ ಈ ದಿಟ್ಟ ಸಚಿವೆಯ ಬಗ್ಗೆ ನಿಮಗೆಷ್ಟು ಗೊತ್ತು?

Published

on

 • 3.8K
 •  
 •  
 •  
 •  
 •  
 •  
 •  
  3.8K
  Shares

ಸೈನಿಕರಿಗೆ ಅದೆಷ್ಟು ಸ್ವಾತಂತ್ರ್ಯ ಸಿಕ್ಕಿದೆ ಅಂದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಕಾಶ್ಮೀರದ ಬೀದಿ ಬೀದಿಗಳಲ್ಲಿ ಭಯೋತ್ಪಾದಕರ ಹೆಣಗಳು ಉರುಳುತ್ತಿವೆ. ಕೇವಲ ಒಂದೇ ವರ್ಷದಲ್ಲಿ 200ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಮ್ಮ ಸೈನಿಕರು ಸಂಹರಿಸಿದ್ದಾರೆ‌. ಇದಕ್ಕೆ ಕಾರಣ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿರುವುದು.

ಈಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಯೋತ್ಪಾದಕರ ವಿರುದ್ಧ ರಣಕಹಳೆ ಊದಿದ್ದಾರೆ.

“ಶರಣಾದರೆ ಸರಿ ಇಲ್ಲವಾದರೆ ಬಿಲದಲ್ಲಡಗಿ ಕೂತಿದ್ದರೂ ಸರಿ ಹುಡುಕಿ ಹುಡುಕಿ ಕೊಲ್ಲಲಾಗುತ್ತೆ” ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಯೋತ್ಪಾದಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಕಾಶ್ಮೀರದಲ್ಲಿ ಯಾವುದೇ ಭಯೋತ್ಪಾದಕನ ಮೇಲೂ ಕರುಣೆ ತೋರಬೇಡಿ. ಶರಣಾಗದಿದ್ದರೆ ಅಲ್ಲೇ ಗುರುತಿಸಿ ಸಂಹಾರ ಮಾಡಿ ಎಂದು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ.

2014 ರಿಂದ ಬದಲಾವಣೆಯ ಗಾಳಿ ಬೀಸಿದೆ ಎಂಬ ಮಾತು ಸುಳ್ಳಲ್ಲ. ಸೈನಿಕರಿಗೆ ಈಗ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಈ ಹಿಂದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚೀನಾ ಗಡಿ ಪ್ರದೇಶಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಚೀನಾ ಸೈನಿಕರಿಗೆ ಭಾರತೀಯ ಸಂಸ್ಕೃತಿಯ ಪಾಠವನ್ನು ಹೇಳಿ ಕೊಟ್ಟಿದ್ದರು. ಚೀನಿ ಸೈನಿಕರಿಗೆ ನಮಸ್ತೆ ಹೇಳಿ ಮತ್ತು ನಮಸ್ತೆ ಪದದ ಅರ್ಥವನ್ನು ತಿಳಿಸಿದ್ದರು.

ಮೋದಿಜೀಯವರು ತಮ್ಮ ಸಂಪುಟವನ್ನು ಆರಿಸುವಲ್ಲಿ ಸೋತಿಲ್ಲವೆಂಬುದು ಸಾಬೀತಾಗಿದೆ.

ತಂಡದಲ್ಲಿರುವ ಎಲ್ಲರೂ ಒಬ್ಬರಿಗಿಂತಲೂ ಒಬ್ಬರೂ ಅದಮ್ಯ ದೇಶಭಕ್ತರೇ, ಭಾರತೀಯ ಸಂಸ್ಕೃತಿಯ ಮೇಲೆ ಅಪಾರ ಭಕ್ತಿ ಉಳ್ಳವರೇ ಆಗಿದ್ದಾರೆ. ಅದೇ ತಂಡದ ದಿಟ್ಟ ಹೆಣ್ಣು ನಿರ್ಮಲಾ ಸೀತಾರಾಮನ್.

ನಿರ್ಮಲಾ ಸೀತಾರಾಮನ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕ ರಕ್ಷಣೆ ಖಾತೆ ವಹಿಸಿಕೊಂಡ 2 ನೇ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‎

ಭಾರತದ ಸಂಸ್ಕೃತಿಯ ಬಗ್ಗೆ ಮಾತನಾಡಲು ಹಿಂಜರಿಯುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ‎ಇಡೀ ಜಗತ್ತು ಭಾರತದ ಸಂಸ್ಕೃತಿಯನ್ನು ಒಪ್ಪಿಕೊಂಡಿದೆ.

ಬುಧವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುದ್ಧ ವಿಮಾನ ಸುಖೋಯ್ 30 ರಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಸಂಚರಿಸಿ ಹೊಸ ಇತಿಹಾಸವನ್ನ ಬರೆದಿದ್ದರು.

ಸುಖೋಯ್ ಯುದ್ಧ ವಿಮಾನದ ಕಾರ್ಯಾಚರಣೆ ಹಾಗೂ ಅದರ ಶಕ್ತಿ ಸಾಮರ್ಥ್ಯದ ಪುನರ್ ಪರಿಶೀಲನೆ ನಡೆಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜಸ್ಥಾನ ಜೋಧ್ ಪುರ ವಾಯುನೆಲೆಯಿಂದ ಸುಖೋಯ್‌ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಇದಕ್ಕೂ ಮೊದಲು ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರು ಯುದ್ಧ ವಿಮಾನದಲ್ಲಿ ಹಾರಾಡಿದ್ದರು. ಈ ಮೂಲಕ ನಿರ್ಮಲಾ ಸೀತಾರಾಮನ್ ಅವರು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ದೇಶದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ‌.


ಕೆಲ ದಿನಗಳ ಹಿಂದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಿಲಿಟರಿ ವ್ಯವಸ್ಥೆಯನ್ನು ಬಲಪಡಿಸಲು ಒಂದು ದೃಢ ಯೋಜನೆಯನ್ನು ಹಾಕಿದ್ದಾರೆ.

ಆ ಯೋಜನೆ ಯಾವುದು ಗೊತ್ತೆ?


ಅದು ಭಾರತದ ಮಿಲಿಟರಿಗೆ ಮಹಿಳೆಯರನ್ನು ಸೇರಿಸುವ ನೂತನ ಯೋಜನೆ. ಈ ಯೋಜನೆಯ ಮುಖಾಂತರ ಸೇನೆಯಲ್ಲೂ ಲಿಂಗ ಸಮಾನತೆ ತರುವ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ.‌ ಇದರಿಂದ‌ ಮಹಿಳೆಯರು ಬರೀ ವೈದ್ಯಕೀಯ, ಕಾನೂನು, ಶಿಕ್ಷಣ ಮತ್ತು ಇಂಜಿನಿಯರಿಂಗ್ ಗಳ ಹೊರತಾಗಿಯೂ ಸೇನೆಯಲ್ಲಿಯೂ ಸೇವೆ ಸಲ್ಲಿಸುವ ಹಾಗಾಗುತ್ತದೆ.

ಈಗಾಗಲೆ ನಿರ್ಮಲಾ ಸೀತಾರಾಮನ್ ಅವರು 800 ಮಹಿಳಾ ಮಿಲಿಟರಿ ಪೋಲೀಸರ ನೇಮಕ ಆದೇಶಕ್ಕೆ ಅಂಕಿತ ಹಾಕಿದ್ದಾರೆ.

ಭಾರತದ ಸ್ವಾತಂತ್ರ್ಯದ ಅಗ್ನಿಗೆ ಮಹಿಳೆಯರೂ ಹವಿಸ್ಸಾಗಿದ್ದರು. ಅನೇಕ ವಿದೇಶಿ ಆಕ್ರಮಣಕಾರರು ವೀರಾಂಗಿಣಿಯರಿಂದ ಸಂಹಾರವಾಗಿದ್ದರು. ಈಗ ಮಹಿಳೆಯರು ಸೇನೆಗೆ ಸೇರುವ ಅವಕಾಶ ಸಿಕ್ಕರೆ ವೀರಾಂಗಿಣಿಯರಾಗಿ ವಿದ್ರೋಹಿಗಳ ಸಂಹಾರ ಮಾಡೋದಂತೂ ಖಚಿತವಾಗಿದೆ.

ಈ ಮೂಲಕ ಮಿಲಿಟರಿಯಲ್ಲಿ ಪುರುಷನಂತೆಯೇ ಮಹಿಳೆ ಕೂಡಾ ಬಂದೂಕು ಹಿಡಿದು ಶತ್ರುಗಳನ್ನು ಸಂಹರಿಸಲಿದ್ದಾಳೆ.

ನಿರ್ಮಲಾ ಸೀತಾರಾಮನ್ ರವರ ಶಿಕ್ಷಣ:

ದೇಶವನ್ನು ತುಂಡರಿಸುವ ಬಗ್ಗೆ ಮಾತನಾಡುವ ದೇಶದ್ರೋಹಿಗಳ ಅಡ್ಡಾ ಎನಿಸಿಕೊಂಡಿರುವ ಜೆಎನ್ ಯು(JNU) ನಲ್ಲೇ ಸೀತಾರಾಮನ್ ಅವರು M.phil ಪದವಿಯನ್ನು ಪಡೆದದ್ದು.

ಅವಲೋಕನ ಮಾಡಿ, ಅದೇ ವಿಶ್ವವಿದ್ಯಾಲಯದಲ್ಲಿ ದೇಶವನ್ನು ತುಂಡರಿಸುವ ಕ್ರಿಮಿಗಳು ಈಗ ಬೆಳೆದುನಿಂತಿದ್ದಾರೆ. ಹಾಗೆಯೇ ದೇಶವನ್ನು ಕಟ್ಟುವ ದೇಶಭಕ್ತರು ಬೆಳೆದಿದ್ದಾರೆ. ಅದಕ್ಕೆ ನೇರ ಉದಾಹರಣೆ ನಿರ್ಮಲಾ ಸೀತಾರಾಮನ್.

ಅರ್ಥಶಾಸ್ತ್ರದ ವಿಷಯದಲ್ಲಿ ತಿರುಚನಾಪಲ್ಲಿಯ ಸೀತೈಯಕ್ಷಿಮಿ ರಾಮಸ್ವಾಮಿ ಕಾಲೇಜಿನಲ್ಲಿ ಪದವಿ ಪಡೆದ ಇವರು, ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಎಂ,ಫಿಲ್ ನ್ನು ದೆಹಲಿಯ ಜೆಎನ್‍ಯುನಲ್ಲಿ ಪಡೆದಿದ್ದಾರೆ.

ಒಂದೇ ವಿಶ್ವವಿದ್ಯಾಲಯದಲ್ಲಿ ದೇಶದ್ರೋಹಿಗಳು, ದೇಶ ಪ್ರೇಮಿಗಳು ಇಬ್ಬರೂ ಬೆಳೆಯುತ್ತಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಸರಳತೆ ಬಗ್ಗೆ ಹೇಳುವುದಾದರೆ ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದಾಗ ಮಾಮೂಲಿ ಹೋಟೆಲ್ ನಲ್ಲಿ ಊಟ ಮಾಡಿ, ಸಾರ್ವಜನಿಕರಂತೆ ರೋಡಿನಲ್ಲಿ ಸಂಚರಿಸಿದ್ದರು. ತಾನು VIP ಎಂಬ ಅಹಂನ್ನು ಯಾವತ್ತೂ ತೋರಿಸಲೇ ಇಲ್ಲ.

ಮೋದಿಯವರ ಸರ್ಕಾರ ಆರಿಸಿದ ನಿರ್ಮಲಾ ಸೀತಾರಾಮನ್ ಅವರು ತಾನು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದು ಸಾಬೀತು ಮಾಡಿದ್ದಾರೆ.

ಭಯೋತ್ಪಾದಕರೆ ಶರಣಾಗಿ ಇಲ್ಲವಾದರೆ ನಿಮ್ಮನ್ನು ಹುಡುಕಿ ಕೊಲ್ಲುತ್ತದೆ ನಮ್ಮ ಸೇನೆ. ಓ ಸೈನಿಕರೆ ಭಯೋತ್ಪಾದಕರ ಮೇಲೆ ಯಾವುದೇ ರೀತಿಯ ಕರುಣೆ ಬೇಡ. ಮುಲಾಜಿಲ್ಲದೇ ಭಯೋತ್ಪಾದಕರನ್ನು ಸಂಹರಿಸಿಬಿಡಿ ಎಂದು ಭಯೋತ್ಪಾದಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

– Nationalist Mahi

 •  
  3.8K
  Shares
 • 3.8K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com