Connect with us
Loading...
Loading...

ಅಂಕಣ

“ಭಾರತ ನನ್ನ ಮಾತೃಭೂಮಿ, ಇಸ್ರೇಲ್ ನನ್ನ ಧರ್ಮಭೂಮಿ” ಎಂದು ಸತ್ಕರಿಸುವ ಭಾರತದ ಪರಮಾಪ್ತನ ಆಗಮನ: ಗೆಳೆಯನ ಆಗಮನವನ್ನು ಐತಿಹಾಸಿಕಗೊಳಿಸಿದ ಮೋದಿ!!

Published

on

 • 5.4K
 •  
 •  
 •  
 •  
 •  
 •  
 •  
  5.4K
  Shares

ಇಸ್ರೇಲ್!! ಈ ದೇಶದ ಹೆಸರನ್ನು ಕೇಳಿದರೆ ಒಮ್ಮೆಲೆ ರೋಮಾಂಚನವಾಗುತ್ತದೆ. ಯಾಕೆ ಗೊತ್ತಾ? ಅದು ತುಂಬಾ ಚಿಕ್ಕ ರಾಷ್ಟ್ರ. ಅದರ ಸುತ್ತಲೂ ಬರೀ ವೈರಿಗಳೇ ತುಂಬಿದ್ದಾರೆ. ದೊಡ್ಡ ದೊಡ್ಡ ದೇಶಗಳು ಇಸ್ರೇಲ್ ಕಂಡರೆ ಉರಿಯುತ್ತಾರೆ. ಆದರೆ ಇಸ್ರೇಲ್ ಯಾವನಿಗೂ ಹೆದರಿಲ್ಲ, ಹೆದರಲ್ಲ. ಅದರಲ್ಲಿ ಆ ತಾಕತ್ತಿದೆ. ಇಸ್ರೇಲಿನ ಒಬ್ಬನೇ ಒಬ್ಬ ಸೈನಿಕ ಬೇರೆ ದೇಶದ ಸೈನಿಕನಿಂದ ಹುತಾತ್ಮನಾದರೆ, ಇಸ್ರೇಲ್ ಏನು ಮಾಡುತ್ತೆ ಗೊತ್ತಾ? ಹತ್ಯೆ ಮಾಡಿದ ಸೈನಿಕನ ದೇಶದ ಪ್ರಧಾನ ಮಂತ್ರಿಯ ಪಕ್ಕದ ಮನೆಯವರನ್ನು ಉಡಾಯಿಸಿ, ಒಂದು ಮೆಸೇಜ್ ಕೊಡುತ್ತದೆ. ಅದೇನು ಮೆಸೇಜ್ ಗೊತ್ತಾ? ಪ್ರಧಾನ ಮಂತ್ರಿಗಳ ಪಕ್ಕದ ಮನೆಗೆ ಬಂದು ಉಡಾಯಿಸಿ ಹೋಗಿದ್ದೇವೆಂದರೆ, ಪ್ರಧಾನಿಯನ್ನು ನಾವು ಉಡಾಯಿಸಬಲ್ಲೆವು ಎಂಬ ಮೆಸೇಜ್ ಕೊಡ್ತಾರೆ.

ಹೀಗಾಗಿಯೆ ಆ ಪುಟ್ಟ ದೇಶಕ್ಕೆ ಜಗತ್ತೇ ಹೆದರುತ್ತದೆ. ಶತ್ರುರಾಷ್ಟ್ರಗಳ ಮಧ್ಯೆ ಇದ್ದರೂ ಎದೆಗುಂದದೆ ಏಕಾಂಗಿಯಾಗಿ ಹೋರಾಡುತ್ತಲೇ ವಿರೋಧಿಗಳ ಚಕ್ರವ್ಯೂಹವನ್ನು ಹೇಗೆ ಭೇದಿಸಬೇಕೆಂಬುದನ್ನು ವಿಶ್ವಕ್ಕೆ ಪರಿಚಯಿಸಿದ ಇಸ್ರೇಲ್ ರಣತಂತ್ರ.

ಕಳೆದ ಬಾರಿ ಮೋದಿಯವರು ಇಸ್ರೇಲ್ ಗೆ ಭೇಟಿಕೊಟ್ಟದ್ದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿತ್ತು. ಭೇಟಿಯ ವೇಳೆ ಇಸ್ರೇಲ್ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ಮೋದಿಯವರನ್ನು ತುಂಬಾ ಗೌರವದಿಂದ ಸತ್ಕರಿಸಿತ್ತು.

ಮೋದಿಜಿಯವರ ಭೇಟಿಯ ವೇಳೆ ಇಡೀ ಇಸ್ರೇಲ್ ಮಂತ್ರಿ ಮಂಡಲವೇ ವಿಮಾನ ನಿಲ್ದಾಣಕ್ಕೆ ಹೋಗಿ ಸತ್ಕರಿಸಿತ್ತು‌. ತದನಂತರ ಮೋದಿಯವರನ್ನು ಇಸ್ರೇಲ್ ತನ್ನ ದೇಶದ ಅತೀ ಸುರಕ್ಷತೆಯ ಸ್ಥಳದಲ್ಲಿ ಇರಿಸಿ ಗೌರವಿಸಿತ್ತು. ಬರೀ ಅಷ್ಟೇ ಅಲ್ಲ ಇಸ್ರೇಲಿಗರು ಬೆಳೆಯುವ ವಿಶೇಷವಾದ ಹೂವಿಗೆ ಮೋದಿಯವರ ಹೆಸರನ್ನಿಟ್ಟು ತನ್ನ ಮತ್ತು ಭಾರತದ ಗೆಳೆತನವನ್ನು ಸಾಬೀತು ಮಾಡಿತ್ತು.

ಈಗ ಮತ್ತೊಂದು ಐತಿಹಾಸಿಕ ಘಟನೆಗೆ ಭಾರತ ಸಾಕ್ಷಿಯಾಗಲಿದೆ. ಅದೇನು ಗೊತ್ತಾ? ಇಸ್ರೇಲಿನ ಪ್ರಧಾನಿ ಇಂದು ಭಾರತಕ್ಕೆ ಬಂದಿದ್ದಾರೆ. ಇವತ್ತಿನಿಂದ ಆರು ದಿನಗಳ ಕಾಲ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಭಾರತದ ಪ್ರವಾಸದಲ್ಲಿರುತ್ತಾರೆ. ಅಷ್ಟಕ್ಕೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಭಾರತಕ್ಕೆ ಸುಖಾಸುಮ್ಮನೆ ಬಂದಿಲ್ಲ. ಭಾರತದ ಜೊತೆ ಮತ್ತಷ್ಟು ಗಟ್ಟಿ ಸಂಭಂದವನ್ನು ಸಾಬೀತು ಮಾಡಲು ಬಂದಿದ್ದಾರೆ.

ಅಷ್ಟಕ್ಕೂ ಇಸ್ರೇಲಿಗೂ ಭಾರತಕ್ಕೂ ಅದೇನಿದೆ ಅವಿನಾಭಾವ ಸಂಭಂದ? ಅಷ್ಟಕ್ಕೂ ಇಸ್ರೇಲ್ ಎಂಬ ಪುಟ್ಟ ರಾಷ್ಟ್ರ ಭಾರತವನ್ನ ಯಾಕೆ ಅಷ್ಟೊಂದು ಪ್ರೀತಿಸುತ್ತೆ?

ಇಸ್ಲಾಮೀಕರಣಕ್ಕೆ ತೊಡೆ ತಟ್ಟಿ ಇಸ್ರೇಲ್ ನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುವ ಜಿಹಾದಿಗಳ ತೊಡೆಯನ್ನೇ ಇಸ್ರೇಲ್ ಮುರಿದುಹಾಕಿತ್ತು. ಹೀಗಾಗಿಯೇ ಇಸ್ಲಾಮೀಕರಣಕ್ಕೆ ಇಸ್ರೇಲೀಕರಣವೇ ಮದ್ದು ಎಂಬಂತಾಗಿದೆ.

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಭಾರತದ ಪ್ರಧಾನಿ ಇಲ್ಲಿಯವರೆಗೆ ಭೇಟಿ ನೀಡಿರಲಿಲ್ಲ. ಯಾಕೆ ಗೊತ್ತಾ? ಸೆಕ್ಯುಲರಿಸಂ ಎಂಬ ಭೂತದಿಂದ. ಇಸ್ರೇಲ್ ಸುತ್ತ ಮುಸ್ಲಿಂ ರಾಷ್ಟ್ರ ಮತ್ತು ಕ್ರೈಸ್ತ ರಾಷ್ಟ್ರಗಳ ಹಾವಳಿ ಇದೆ. ಇವೆಲ್ಲವನ್ನೂ ಮೆಟ್ಟ ಇಸ್ರೇಲ್ ಜಗತ್ತಿನಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಭಾರತದ ಪ್ರಧಾನಿ ಇಸ್ರೇಲಿಗೆ ಭೇಟಿ ನೀಡಿದರೆ ಇಲ್ಲಿಯ ಮುಸಲ್ಮಾನರಿಗೆ ಮತ್ತು ಕ್ರೈಸ್ತರಿಗೆ ಕೋಪ ಬರುತ್ತದೆಂಬ ಸೆಜ್ಯಲರಿಸಂ ಭೂತದಿಂದ ಇಲ್ಲಿಯವರೆಗೂ ಭಾರತದ ಪ್ರಧಾನಿ ಇಸ್ರೇಲಿಗೆ ಭೇಟಿ ನೀಡಿರಲಿಲ್ಲ. ಅಷ್ಟಕ್ಕೂ ಭಾರತದ ಮುಸಲ್ಮಾನರಿಗೆ ಮತ್ತು ಕ್ರೈಸ್ತರಿಗೆ ಯಾಕೆ ಕೋಪ ಬರುತ್ತೆ ಅಂತ ಅರ್ಥ ಆಗುತ್ತಿಲ್ಲ. ಭಾರತೀಯ ಮುಸಲ್ಮಾನರು, ಕ್ರೈಸ್ತರು ಭಾರತಕ್ಕೆ ನಿಷ್ಠರಾಗಿದ್ದಾರೆ. ಅಂದಮೇಲೆ ಯಾಕೆ ಕೋಪ ಬರುತ್ತೆ? ರಾಜಕಾಣಿಗಳ ಉದ್ದೇಶವೇ ಇದು. ಇವರು ಸುಖಾ ಸುಮ್ಮನೆ ಪ್ರಚೋದಿಸಿ ಬಕೆಟ್ ಹಿಡಿದು ಇಲ್ಲಿನ ಅನ್ಯ ಧರ್ಮೀಯರನ್ನು ಭಾರತದ ವಿರೋಧಿಗಳನ್ನಾಗಿ ಮಾಡುತ್ತಿದ್ದಾರೆ.

ಭಾರತದ ಮೇಲೆ ದಾಳಿಯಾದಂತೆ ಇಸ್ರೇಲಿಗರ ಮೇಲೆಯೂ ವಿದೇಶಿಯರ ದಾಳಿಗಳು ಆಗಿದ್ದವು. ಹೀನಾತೀತ ದಾಳಿಗಳಾಗಿದ್ದವು. ಸುಮಾರು ದಶಕಗಳ ಕಾಲ ಇಸ್ರೇಲಿಗರ ಮೇಲೆ ವಿದೇಶಿಯರು ದಾಳಿ ಮಾಡಿದ್ದರು. ಇಸ್ರೇಲಿಗರು ಮೂಲತಃ ಯಹೂದಿ ಧರ್ಮದವರು. ವಿದೇಶಿಯರ ದಾಳಿಗೆ ತತ್ತರಿಸಿ ಹೋದ ಯಹೂದಿಗಳು ಪ್ರಾಣ ಉಳಿಸಿಕೊಳ್ಳಲು ದೇಶಾಂತರ ಹೋದಾಗ, ಜಗತ್ತಿನ ಯಾವುದೇ ರಾಷ್ಟ್ರ ಅವರಿಗೆ ಆಶ್ರಯ ಕೊಡಲಿಲ್ಲ. ಆಗ ಯಹೂದಿಗಳಿಗೆ ಆಶ್ರಯ ಕೊಟ್ಟದ್ದು ನನ್ನ ಭಾರತ. ಹೀಗಾಗಿಯೇ ಯಹೂದಿಗಳು(ಇಸ್ರೇಲಿಗರು) ಭಾರತದ ಋಣದಲ್ಲಿರುವಂತೆ, ಭಾರತಕ್ಕೆ ನಿಷ್ಠರಾಗಿದ್ದಾರೆ. ಭಾರತ ಯಹೂದಿಗಳಿಗೆ ಆಶ್ರಯ ಕೊಟ್ಟಿದ್ದಕ್ಕೆ ಯಹೂದಿಗಳೆಲ್ಲ ಭಾರತದಲ್ಲಿ ಭಾರತೀಯರಂತೆ ಬೆರೆತು ಹೋದರು. ಅವರು ಯಾವತ್ತೂ ಕೋಮು ಗಲಭೆ ಮಾಡಲೇ ಇಲ್ಲ.

1948ರಲ್ಲಿ ಯಹೂದಿಗಳೆಲ್ಲ ಒಟ್ಟಾಗಿ ಇಸ್ರೇಲ್ ಎಂಬ ರಾಷ್ಟ್ರವನ್ನು ಹುಟ್ಟುಹಾಕಿದರು. ಆಗ ಭಾರತದಲ್ಲಿದ್ದ ಯಹೂದಿಗಳೆಲ್ಲ ಇಸ್ರೇಲ್ ಗೆ ಹೋದರು. ಇಸ್ರೇಲ್ ಸ್ಥಾಪನೆಯಾಗಿದ್ದಾಗಿನಿಂದ ಇಲ್ಲಿಯವರೆಗೆ ಅದು 17 ಯುದ್ದಗಳನ್ನು ಮೆಟ್ಟಿ ನಿಂತಿದೆ. ಐಸಿಸ್ ನಂತ ಐಸಿಸ್ ಕೂಡಾ ಇಸ್ರೇಲಿಗೆ ಹೆದರುತ್ತದೆ. ಇಸ್ರೇಲ್ ತನ್ನ ಭಾರತದ ನಿಷ್ಠೆಯನ್ನು ಸಾಬೀತು ಮಾಡಲು ಭಾರತಕ್ಕೆ ಅನೇಕ ಸಲ ನೆರವಾಗಿದೆ‌. ಇಸ್ರೇಲ್ ಭಾರತದ ನೆರವಿಗೆ ಎಷ್ಟು ಬಾರಿ, ಯಾವಾಗ ಯಾವಾಗ ಆಗಿದೆ ಗೊತ್ತಾ? 1971 ರ ಭಾರತ-ಪಾಕಿಸ್ತಾನದ ಯುದ್ಧದಲ್ಲಿ ಭಾರತದ ಬೆಂಬಲಕ್ಕೆ ನಿಂತು ಭಾರತ ಗೆಲ್ಲುವಂತೆ ಮಾಡಿತ್ತು. 1999ರ ಕಾರ್ಗಿಲ್ ಯುದ್ಧದಲ್ಲೂ ಕೂಡಾ ಇಸ್ರೇಲ್ ಭಾರತದ ಬೆಂಬಲಕ್ಕೆ ನಿಂತು ಗೆಲ್ಲುವಂತೆ ಮಾಡಿತ್ತು.

ಮೋದಿಯವರು ಇಸ್ರೇಲಿಗೆ ಭೇಟಿ ನೀಡಿದ್ದಾಗ ಅನೇಕ ವಿರೋಧಿಗಳಿಗೆ ಹೊಟ್ಟೆ ಉರಿದಿತ್ತು. ಕಾರಣವಿಷ್ಟೇ ವಿರೋಧಿಗಳಿಗೆ ದೇಶದ ಹಿತಾಸಕ್ತಿ ಬೇಕಾಗಿಯೇ ಇಲ್ಲ. ಅವರಿಗೆ ಬೇಕಾಗಿದ್ದು ಬರೀ ರಾಜಕೀಯ. ಈಗ ವಿರೋಧಿಗಳ ಹೊಟ್ಟೆ ಮತ್ತೆ ಉರಿಯುತ್ತಿದೆ. ಯಾಕೆಂದರೆ ಇಸ್ರೇಲ್ ಪ್ರಧಾನಿ ಭಾರತಕ್ಕೆ ಆಗಮಿಸಿದ್ದಾರೆ‌‌. ವಿರೋಧಿಗಳ ಹೊಟ್ಟೆ ಉರಿಯುತ್ತಿದೆ ಎಂದರೆ ದೇಶ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದರ್ಥ‌. ಒಟ್ಟಾರೆ ಇಸ್ರೇಲ್ ಮತ್ತು ಭಾರತದ ಗೆಳೆತನ ಮತ್ತಷ್ಟು ಗಟ್ಟಿಗೊಳ್ಳುತ್ತಿರುವುದು ಖುಷಿಯ ವಿಚಾರ.

– Nationalist Mahi

ನಿಮಗೆ ಈ ಸುದ್ದಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ, ಈ ರೀತಿಯ ಸುದ್ದಿಗಳನ್ನ ನಿಮ್ಮ ಮುಂದೆ ಹೀಗೆಯೇ ಇಡುತ್ತಿರುತ್ತೇವೆ

 •  
  5.4K
  Shares
 • 5.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com