Connect with us
Loading...
Loading...

ಪ್ರಚಲಿತ

ಮತ್ತೆ ಬೆಚ್ಚಿ ಬಿತ್ತು ಚೀನಾ!! ಪ್ರಧಾನಿ ಮೋದಿ ಕುರಿತು ತನ್ನ ಪತ್ರಿಕೆಯಲ್ಲಿ ಏನು ಬರೆದುಕೊಂಡಿದೆ ಗೊತ್ತಾ?

Published

on

  • 16.7K
  •  
  •  
  •  
  •  
  •  
  •  
  •  
    16.7K
    Shares

ಇತ್ತೀಚೆಗೆ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಾದ ತಜ್ಞರು ಮೋದಿಯವರ ಕುರಿತು ಒಂದು ಹೇಳಿಕೆಯನ್ನು ನೀಡಿದ್ದರು. ಚೀನಾದ ವಿರುದ್ಧ ಸೆಡ್ಡು ಹೊಡೆದು ನಿಲ್ಲಬಲ್ಲ ಏಕೈಕ ವ್ಯಕ್ತಿ ನರೇಂದ್ರ ಮೋದಿ ಎಂದು ಅಮೆರಿಕಾದ ತಜ್ಞರು ಹೇಳಿದ್ದರು. ಅವರ ಮಾತಿಗೆ ತಕ್ಕಂತೆ ಮೋದಿಯವರು ನಿಜವಾಗಿಯೂ ಚೀನಾದ ವಿರುದ್ಧ ಸೆಡ್ಡು ಹೊಡೆಯಬಲ್ಲ ವ್ಯಕ್ತಿ ಎಂದು ಸಾಬೀತು ಮಾಡಿದ್ದಾರೆ.

ಒಂದು ವೇಳೆ ಚೀನಾದ ಜೊತೆ ಯುದ್ಧ ನಡೆದರೆ, ಅದಕ್ಕೆ ತಕ್ಕ ಪಾಠ ಕಲಿಸಲು ನಮ್ಮ ಬಳಿ ಅದಕ್ಕೆ ತಕ್ಕ ಅಸ್ತ್ರಗಳಿವೆ ಎಂದು ಚೀನಾಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕಾಲಘಟ್ಟ 1962ರ ನೆಹರು ಅವರ ಕಾಲಘಟ್ಟವಲ್ಲ ಬದಲಿಗೆ ಭಾರತ ಇಂದು ಬಲಿಷ್ಠವಾಗಿ ಬೆಳೆದು ನಿಂತಿದೆ. ಹೀಗಾಗಿ ವಿರೋಧಿಗಳಿಂದ ಹಿಡಿದು ವಿದೇಶಿ ತಜ್ಞರವರೆಗೆ ಎಲ್ಲರೂ ಮೋದಿಯವರ ಅನೇಕ ನಡೆಗಳನ್ನು ಹೊಗಳಿದ್ದಾರೆ.

ಈಗ ಮೋದಿಯವರು ಮಾಡಿದ ನಿರ್ಧಾರದಿಂದ ಚೀನಾ ಪತರುಗುಟ್ಟಿದೆ. ಆ ನಿರ್ಧಾರ ಯಾವುದು ಗೊತ್ತಾ? ಮೋದಿಯವರು 9,400ಕ್ಕೂ ಹೆಚ್ಚು ವಿವಿಧ ದೇಶಗಳ ಪೌರತ್ವ ಕಳೆದುಕೊಂಡ ಜನರ ಆಸ್ತಿಗಳ ಮೇಲೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದರಿಂದಾಗಿ ಚೀನಾಕ್ಕೆ ಆತಂಕವಾಗಿದೆ‌. ಯಾಕೆ ಗೊತ್ತಾ? ಭಾರತದಲ್ಲಿ ಚೀನಾ ತುಂಬಾ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದೆ. ಇದರಿಂದಲೇ ಚೀನಾಕ್ಕೆ ಆತಂಕವಾಗಿದೆ.

ಭಾರತದ ಜೊತೆ ಒಂದು ವೇಳೆ ಯುದ್ಧದ ಸ್ಥಿತಿ ಏರ್ಪಾಡಾದರೆ ಮೋದಿಯವರ ಸರ್ಕಾರ ತಮ್ಮ ಕಂಪನಿಗಳ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಬಹುದೆಂದು ಚೀನಾ ಪತರುಗುಟ್ಟಿದೆ. ಇದರ ಬಗ್ಗೆ ಚೀನಾದ ಪ್ರತಿಷ್ಠಿತ ಪತ್ರಿಕೆಯಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಬಂದಿದೆ.

ಭಾರತ ಈಗ ದುರ್ಬಲ ರಾಷ್ಟ್ರವಲ್ಲ. ಇದು 1962ರ ನೆಹರು ಕಾಲವಲ್ಲ. ಅಂದು ನೆಹರು ಮಾಡಿದ ತಪ್ಪೇನು ಗೊತ್ತೆ?

1962ರಲ್ಲಿ ಮೊದಲ ಪ್ರಧಾನಿ ನೆಹರೂನ ದೂರದೃಷ್ಟಿಯ ಕೊರತೆಯಿಂದ ಚೀನಾ ಕಾಲು ಕೆದರಿ ಜಗಳಕ್ಕೆ ಬಂದು ಯುದ್ಧ ಮಾಡಿದಾಗ ಆ ಯುದ್ಧದಲ್ಲಿ 3250 ಯೋಧರು ಹುತಾತ್ಮರಾದರು. ಇಲ್ಲಿ ಒಂದು ವಿಷಯ ತಿಳಿಸಲೇಬೇಕು.

ಈ ಯುದ್ಧದಲ್ಲಿ ನಾವು ಸೋತಿದ್ದಕ್ಕೆ ನೇರ ಕಾರಣ ನೆಹರು ಅವರ ದೂರದೃಷ್ಟಿಯ ಕೊರತೆ. ನಮ್ಮ ಸೈನಿಕರ ಕೈಯ್ಯಲ್ಲಿ ಸರಿಯಾದ ಬಂದೂಕು ಕೊಟ್ಟಿರಲಿಲ್ಲ, ಹಾಕಿಕೊಳ್ಳಲು ಬೂಟು ಇರಲಿಲ್ಲ. ಹಿಂದೂ-ಚೀನಿ ಭಾಯಿ ಭಾಯಿ ಎಂದು ನೆಹರೂ ಬೀಗುತ್ತಿದ್ದಾಗಲೇ ಚೀನಿಯರು ನಮ್ಮ ಮೇಲೆ ಮುಗಿಬಿದ್ದು ನಮ್ಮ ಸೈನಿಕರನ್ನು ಕೊಂದು ಹಾಕಿದ್ದರು.

ಯಾವುದೇ ಸಿದ್ಧತೆ ಇರಲಿಲ್ಲ, ಅಸಲಿಗೆ ಸೈನಿಕರಿಗೆ ಹಾಕಿಕೊಳ್ಳಲು ಬೂಟೇ ಇರಲಿಲ್ಲ. ಆದರೂ ಯುದ್ಧಕ್ಕೆ ಸಿದ್ಧ ಎಂದು ಬಾಯಿ ಚಪಲಕ್ಕೆ ನೆಹರು ಗರ್ಜಿಸಿ, ಸೈನಿಕರನ್ನು ಗಡಿಗೆ ಕಳಿಸಿಬಿಟ್ಟಿದ್ದರು.

ಅಂದು ಚೀನಾದ ಜೊತೆ ಯುದ್ಧ ಸೋತಿದ್ದರ ಪರಿಣಾಮ ಬ್ರಿಗೇಡಿಯರ್ ಜಾನ್.ಪಿ. ದಳವಿ ಅವರನ್ನು ಯುದ್ಧ ಖೈದಿಯಾಗಿ ಬಂಧಿಸಿದ್ದರು. ಆಗ ಜಾನ್.ಪಿ.ದಳವಿ ಅವರು ಬರೆದ ಹಿಮಾಲಯನ್ ಬ್ಲಂಡರ್ ಪುಸ್ತಕವನ್ನು ರವಿ ಬೆಳಗೆರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದರ ಒಂದಷ್ಟು ಸಾಲುಗಳ ಉಲ್ಲೇಖ ಮಾಡುತ್ತಿದ್ದೇನೆ.

ಅಂತಹ ನೆಹರುವನ್ನು ನಮಗೆ ‘ಚಾಚಾ ನೆಹರೂ ‘ ಎಂದೇ ಪರಿಚಯಿಸಲಾಯಿತು. ನಮ್ಮ ಮಕ್ಕಳಿಗೂ ನಾವು ಹಾಗಂತಲೇ ಪರಿಚಯಿಸಿ ಕೊಟ್ಟಿದ್ದೇವೆ.ಆದರೆ ಬ್ರಿಗೇಡಿಯರ್ ದಳವಿ ಎಂಬ ಮಹಾಯೋಧನನ್ನು ಕೇಳಿ ನೋಡಿ?

ಆ ಯುದ್ಧದಲ್ಲಿ ಸೋತಿದ್ದರ ಪರಿಣಾಮ ಆ ಮಹಾಯೋಧನನ್ನು ಚೀನಿಯರು ಬಂಧಿಸಿದ್ದರು. ಆ ಮಹಾಯೋಧನ ತನ್ನ ಕಣ್ಣೆದುರಿಗೆ ಒಂದು ಇಡೀ ತುಕಡಿಯ ಮೇಲೆ ಮಂಗೋಲಿಯನ್ ಮುಖದ ಸೈನಿಕರು ತೋಳಗಳಂತೆ ಮುಗಿಬಿದ್ದು ನರಮೇಧ ಮಾಡಿ ಮುಗಿಸುತ್ತಿದ್ದಾಗ, ಕೈಲಿದ್ದ ಬಂದೂಕನ್ನು ಎತ್ತಿ ಗುಂಡು ಹಾರಿಸಲಾಗದಂತಹ ನಿಸ್ಸಹಾಯಕ ಸ್ಥಿತಿಗೆ ನೆಹರು ತಂದಿಟ್ಟಿದ್ದ.

ಅಲ್ಲಿ ಭಾರತದ ಗಡಿಯಲ್ಲಿ ನಮ್ಮ ನಿಸ್ಸಹಾಯಕ ಯೋಧನೊಬ್ಬ ಜೇಬಿನಲ್ಲಿದ್ದ ಕಟ್ಟಕಡೆಯ ಕಾಡತೂಸನ್ನು ಶತ್ರುವೆನೆಡೆಗೆ ಫೈರ್ ಮಾಡಿ, ಆಟ ನಂತರ ಏನೇನೂ ಮಾಡಲಾಗದೆ ಹಿಮಕಾಡಿನ ಬಟಾಬಯಲಿನಲ್ಲಿ ಬೆಚ್ಚನೆಯದೊಂದು ಅಂಗಿಯೂ ಇಲ್ಲದಂತೆ ನಿಂತಿದ್ದ.

ಅವನನ್ನು ಚೀನಿ ಸೈನಿಕರು ನಾಲ್ಕೂ ಕಡೆಯಿಂದ ಸುತ್ತುವರೆದು ಪ್ರಾಣಿಯನ್ನು ಬೇಟೆಯಾಡಿದಂತೆ ಬೇಟೆಯಾಡಿ ಕೊಂದುಬಿಟ್ಟರು.
ಆ ಸೈನಿಕ “ಜೈಹಿಂದ್” ಎಂಬ ಕೊನೆಯ ಚೀತ್ಕಾರದೊಂದಿಗೆ ನೆಲಕ್ಕೆ ಬಿದ್ದಿದ್ದ.

ಹಿಮದ ಕಾಡು ಆ ಆರ್ತನಾದಕ್ಕೆ ಪ್ರತಿಧ್ವನಿಸಿ ಸುಮ್ಮನಾಯಿತು. ಮಂಜಿನ ನೆಲ ಕೆಂಪಾಗಾಯಿತು.(ಹಿಮಾಲಯನ್ ಬ್ಲಂಡರ್ – ರವಿ ಬೆಳಗೆರೆ)

ನೆಹರೂ ಅವರ ದೂರದೃಷ್ಟಿಯ ಕೊರತೆಯಿಂದ ಅಂದು ಸುಮಾರು 3250 ಯೋಧರನ್ನು ಭಾರತ ಕಳೆದುಕೊಂಡಿತು.

ಈ ಹಿಂದೆ ಭಾರತೀಯ ಸೇನೆ ಯಾವ ಮಟ್ಟದ ಪರಿಸ್ಥಿತಿಯನ್ನು ಎದುರಿಸುತ್ತಿತ್ತು ಎಂದರೆ ಯಾವುದೇ ಪರಿಸ್ಥಿತಿ ಎದುರಾದರೂ ಕೂಡ ಅಥವಾ ತಮಗೆ ದಾಳಿಯಾದರೂ ಕೂಡ ಮೌನ ಮುರಿಯುತ್ತಿದ್ದ ಸೇನೆ ಇದೀಗ ರಾಜರೋಷದಿಂದ ಯುದ್ಧಕ್ಕೆ ಆಹ್ವಾನ ನೀಡುತ್ತಿದೆ!!

ಹೌದು…. ತಮ್ಮ ಕೈಯಲ್ಲಿ ಬಂದೂಕು ಇದ್ದರೂ ಕೂಡ ಒಂದು ಬುಲೆಟ್‍ನ್ನು ಹಾರಿಸಲು ಅನುಮತಿಯನ್ನು ಪಡೆಯಬೇಕಿದ್ದ ಸೇನೆ ಇದೀಗ ಯುದ್ಧಕ್ಕೆ ನಾವು ಸಿದ್ಧ ಎನ್ನುವಷ್ಟರ ಮಟ್ಟಿಗೆ ಭಾರತೀಯ ಸೇನೆ ಬೆಳೆದಿದೆ ಎಂದರೆ ಇದರ ಅರ್ಥ ಭಾರತ ಬಲಿಷ್ಠವಾಗಿದೆ. ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ ಅಂತಲೇ ಅರ್ಥ.

ಭಾರತ ಈಗ ದುರ್ಬಲ ರಾಷ್ಟ್ರವಲ್ಲ. ಇದು 1962ರ ನೆಹರು ಕಾಲವಲ್ಲ. ಅಲ್ಲದೇ, ನಮ್ಮ ಸೇನೆಯು ದಾಳಿಗಳನ್ನು ಹಿಮ್ಮೆಟ್ಟಿಸಲು ಸಶಕ್ತವಾಗಿದೆ ಎಂಬುದು ಅನೇಕ ಸಂದರ್ಭದಲ್ಲಿ ಸಾಬೀತಾಗಿದೆ. ಡೋಕ್ಲಮ್ ಪ್ರಕರಣದಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ನಡೆದೇ ಹೋಗಬಹುದೆಂದು ಅನೇಕರು ಅಂದುಕೊಂಡಿದ್ದರು.

ಆದರೆ, ಭಾರತ ಜಾಣ್ಮೆಯಿಂದ ಸಮಸ್ಯೆಯಾಗದಂತೆ ನೋಡಿಕೊಂಡಿರುವುದು ಹೆಮ್ಮೆಯ ಸಂಗತಿ!! ಹಾಗಾಗಿ ಭಾರತ ದೇಶವು ಇದೀಗ ದುರ್ಬಲ ರಾಷ್ಟ್ರವಾಗಿಲ್ಲ ಎನ್ನುವುದು ಚೀನಾಗೂ ಗೊತ್ತಿದೆ!! ಹೀಗಾಗಿಯೇ ಇಂದು ಚೀನಾ ಪತರುಗುಟ್ಟುತ್ತಿದೆ.

– Nationalist Mahi

  •  
    16.7K
    Shares
  • 16.7K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com